ಶುಕ್ರವು ಪ್ರೀತಿ, ವಿವಾಹ, ರೊಮ್ಯಾನ್ಸ್‌ಗೆ ಸಂಬಂಧಿಸಿದ ಗ್ರಹ. ಮಾರ್ಚ್ 31ರಂದು ಶುಕ್ರ ಗೋಚಾರವಾಗುತ್ತಿದೆ. ಇದರಿಂದ ಎಲ್ಲ ರಾಶಿಯವರ ಲವ್ ಲೈಫ್‌ನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ನೋಡೋಣ.
ಪ್ರೀತಿ, ವಿವಾಹ, ಸರಸ ಕಾರಕನಾದ ಶುಕ್ರ ಗ್ರಹವು ಮಾರ್ಚ್ 31ರಂದು ಕುಂಭ(Aquarius) ರಾಶಿಯನ್ನು ಪ್ರವೇಶಿಸುತ್ತಿದೆ. ಡಿಸೆಂಬರ್ 8ರಿಂದಲೂ ಶುಕ್ರನು ಮಕರದಲ್ಲೇ ಕುಳಿತಿತ್ತು. ಕಡೆಗೂ ಅದಕ್ಕೆ ಬದಲಾವಣೆ ಗಾಳಿ ಬೀಸಿದೆ. ಏಪ್ರಿಲ್ 27ರವರೆಗೂ ಶುಕ್ರ ಕುಂಭದಲ್ಲಿಯೇ ಇರಲಿದ್ದಾನೆ. ಈ ಶುಕ್ರ ಗೋಚಾರದಿಂದಾಗಿ ಎಲ್ಲ ರಾಶಿಗಳ ಪ್ರೇಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಲಾಗಲಿವೆ. ಶುಕ್ರನ ಈ ಪರಿವರ್ತನೆಯಿಂದ ಯಾವೆಲ್ಲ ರಾಶಿಗಳು ಶುಭ ಫಲ ಪಡೆಯಲಿವೆ ನೋಡೋಣ.
ಮೇಷ(Aries)
ನೀವು ವಿಶೇಷ ಸಂಬಂಧವೊಂದಕ್ಕಾಗಿ ಕಾಯುತ್ತಿದ್ದರೆ ಜೀವನದ ವಿವಿಧ ದಿಕ್ಕುಗಳಿಂದ ಬರುವ ಜನರನ್ನು ಭೇಟಿ ಮಾಡಲು ಇದು ಅತ್ಯುತ್ತಮ ಸಮಯವಾಗಿದೆ. ಇದರೊಂದಿಗೆ ನಿಮ್ಮ ಸಾಮಾಜಿಕ ವಲಯವನ್ನು ಕೂಡಾ ವಿಸ್ತರಿಸಿಕೊಳ್ಳುವತ್ತ ಗಮನ ಹರಿಸಿ. ಹೀಗೆ ಹೊಸಬರನ್ನು ಗೆಳೆಯರಾಗಿಸಿಕೊಳ್ಳಲು ಸಂವಹನ ಅತಿ ಮುಖ್ಯವಾಗಿದೆ. ಆ ಬಗ್ಗೆ ಹೆಚ್ಚಿನ ಗಮನ ವಹಿಸಿ. ಹೆಚ್ಚು ಆಖರ್ಷಕವಾಗಿಯೂ, ತಮಾಷೆಯಾಗಿಯೂ ಮಾತನಾಡಿ. ನಿಮ್ಮ ಹಾಸ್ಯಪ್ರಜ್ಞೆಗೆ ಹೆಚ್ಚಿನ ಕೆಲಸ ಕೊಡಿ.
ವೃಷಭ(Taurus)
ನೀವು ಸಾಮಾನ್ಯವಾಗಿ ಮಾಡುವುದಕ್ಕಿಂತ ಸ್ವಲ್ಪ ಹೆಚ್ಚು ಪ್ರಯೋಗ ಮಾಡಬೇಕು. ಹೊಸದನ್ನು ಪ್ರಯತ್ನಿಸಲು ನಿಮಗೆ ಅವಕಾಶವಿದ್ದರೆ, ಅದನ್ನು ದೃಢವಾಗಿ ಮಾಡಿ. ಅವಕಾಶಗಳು ಇರುವುದೇ ನೀವದರ ಲಾಭ ಪಡೆಯಲಿ ಎಂದು ಎಂಬುದನ್ನು ಈ ಶುಕ್ರ ಗೋಚಾರ ಹೇಳುತ್ತಿದೆ. ಹಳೆ ಸಂಗಾತಿ ಜೊತೆಗೆ ಮತ್ತೆ ಸಂಬಂಧವನ್ನು ಹೊಸತಾಗಿ ಚಿಗುರಿಸಿಕೊಳ್ಳಲು ಕೂಡಾ ಇದು ಉತ್ತಮ ಸಮಯವಾಗಿದೆ, ಆದರೆ ಎಚ್ಚರಿಕೆಯ ನಡೆ ಅಗತ್ಯ.
ಮಿಥುನ(Gemini)
ಈ ಸಂದರ್ಭದಲ್ಲಿ ನಿಮ್ಮ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಮೂಡಿತನ ಅನುಭವಿಸುವಿರಿ. ಹೀಗಾಗಿ, ನಿಮ್ಮ ಹಳೆ ಪ್ರೇಮಿ ಬಗ್ಗೆ ಮತ್ತೆ ಮತ್ತೆ ನೆನಪಾಗುತ್ತಿದ್ದರೆ, ಯಾವುದೇ ಕಾರಣಕ್ಕೂ ಅವರನ್ನು ಭೇಟಿಯಾಗಕೂಡದು. ನಿಮ್ಮೊಂದಿಗೆ ಡೇಟ್ ಹೋಗಲು ಸಿದ್ಧರಾಗಿರುವ ಇತರ ಮುಕ್ತ ಮನಸ್ಸಿನ ಸಿಂಗಲ್‌ಗಳನ್ನು ಹುಡುಕಿ.
ಕಟಕ(Cancer)
ನಿಮ್ಮ ಪ್ರೇಮ ಜೀವನಕ್ಕಾಗಿ ನೀವು ಬಯಸುವ ವಿಷಯಗಳನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ಸಮಯ. ನಿಮ್ಮ ಜೀವನದಲ್ಲಿ ನೀವು ಅರ್ಹವಾದ ವ್ಯಕ್ತಿಯನ್ನು ಆಕರ್ಷಿಸಲು ಸಹಾಯ ಮಾಡುವಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ಹಳೆಯ ವಿಷಯಗಳನ್ನು ಕ್ಷಮಿಸಿ ಮರೆತು ಬಿಡಿ. ವಿಷಯಗಳನ್ನು ಲಾಜಿಕಲ್ ಆಗಿ ಯೋಚಿಸಿ ಮುಂದುವರಿಯಿರಿ. ನಿಮ್ಮ ಸುತ್ತ ಹಾಕಿಕೊಂಡಿರುವ ಗೋಡೆಯಿಂದ ಹೊರಬಂದು ನಿಮಗೆ ಬೇಕಾದ ವಿಷಯಕ್ಕಾಗಿ ಸ್ಪರ್ಧೆಗೆ ನಿಲ್ಲಲು ಸಜ್ಜಾಗಿ.
ಸಿಂಹ(Leo)
ನಿಮ್ಮ ಒಲಮನಸ್ಸಿನ ಜೊತೆ ಸಂಬಂಧದಲ್ಲಿರಿ ಮತ್ತು ನಿಮ್ಮ ಪ್ರೇಮ ಜೀವನವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂಬುದನ್ನು ಯೋಚಿಸಿ. ಹೊರಗಿನ ಶಕ್ತಿಗಳನ್ನು ತೆಗೆದು ಹಾಕಿ, ನಿಮ್ಮ ಆಸೆಗಳ ಕಡೆಗೆ ಮಾತ್ರ ಗಮನವಿರಿಸಿ. ಮತ್ತೊಬ್ಬರ ಅಭಿಪ್ರಾಯ ಕೇಳುತ್ತಾ ಕೂತರೆ ನಿಮ್ಮ ನಿಜವಾದ ಪ್ರೇಮ ನಿಮಗೆ ದೊರೆಯುವುದು ಸಾಧ್ಯವಿಲ್ಲ. ನಿಮ್ಮ ಮನಸ್ಸು ಹೇಳುವ ಮಾತನ್ನೇ ಕೇಳಿ.
ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ
ಕನ್ಯಾ(Virgo)
ನಿಮ್ಮ ಫ್ಯಾಂಟಸಿಗಳನ್ನು ನಂಬಿಕಸ್ಥ ಗೆಳೆಯನ ಬಳಿ ಹೇಳಿಕೊಳ್ಳಿ. ಇದರಿಂದ ಇಬ್ಬರಿಗೂ ಲಾಭವಾಗಬಹುದು. ನಿಮ್ಮ ಈಗಿನ ನಡೆಯು ನಿಮಗೆ ಸ್ವತಂತ್ರದ ರುಚಿ ತೋರಿಸುತ್ತಿದ್ದರೆ, ಯಾರು ಏನು ಹೇಳುತ್ತಾರೆ ಎಂಬ ಬಗ್ಗೆ ಗಮನ ಹರಿಸದೆ ಮುಂದುವರಿಯಿರಿ.
ತುಲಾ(Libra)
ಹಳೆಯದನ್ನು ಹಿಂದೆ ಬಿಟ್ಟು ಭವಿಷ್ಯದತ್ತ ಗಮನ ಹರಿಸುವ ಸಮಯವಿದು. ನಿಮ್ಮ ರೊಮ್ಯಾನ್ಸ್ ಜೀವನ ಉತ್ತಮಗೊಳ್ಳುವುದು. ನಿಮ್ಮೆಲ್ಲ ಕನಸುಗಳನ್ನು ಈಡೇರಿಸಿಕೊಳ್ಳಲು ಸಂಪೂರ್ಣ ಪ್ರತ್ನ ಹಾಕಿ. ಕೇವಲ ಕನಸು ಕಂಡರೆ ಸಾಲದು, ಅದನ್ನು ನನಸು ಮಾಡಲು ಪ್ರಯತ್ನ ಬೇಕು ಎಂಬುದು ನೆನಪಿರಲಿ.
ವೃಶ್ಚಿಕ(Scorpio)
ಮಿತಿಗಳನ್ನಿ ಹಾಕಿ ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಮಿತಿಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ, ನೀವೆಷ್ಟು ಮುಂದೆ ಹೋಗುವಿರಿ ಎಂಬುದು ನಿಮಗೇ ಅಚ್ಚರಿ ತರುವುದು. ಎಲ್ಲದಕ್ಕೂ ನಿಮಯಾವಳಿ ಹಾಕಿಕೊಂಡು ಬದುಕಲು ಜೀವನ ತುಂಬಾ ಚಿಕ್ಕದ್ದು. ನಿಮ್ಮ ಪೂರ್ವಪೀಡಿತ ಯೋಚನೆಗಳನ್ನು ಬದಿಗೆ ಹಾಕಿ, ಇನ್ನೊಬ್ಬರಿಗೆ ಸೆಕೆಂಡ್ ಚಾನ್ಸ್ ನೀಡುವ ಬಗ್ಗೆ ಯೋಚಿಸಿ.
ಈ ಹೆಸರಿನ ಹೆಣ್ಮಕ್ಕಳು ವೃತ್ತಿಯಲ್ಲಿ ಸಖತ್ ದುಡ್ಡು ಮಾಡುತ್ತಾರೆ!
ಧನು(Sagittarius)
ಹಿಂದೆ ನಿಮ್ಮನ್ನು ಸರಿಯಾಗಿ ನಡೆಸಿಕೊಂಡಿರದಿದ್ದರೆ, ಹೊಸತನ್ನು ಟ್ರೈ ಮಾಡಲು ಭಯವಾಗುವುದು ಸಹಜ. ನೀವು ನಿಮ್ಮ ಪ್ರೇಮದ ಬಗ್ಗೆ ಮನೆಯಲ್ಲಿ ಮಾತಾಡಬೇಕು ಮತ್ತು ಎಲ್ಲವೂ ನಿಮ್ಮ ದಾರಿಯಲ್ಲೇ ಬರುವ ಸಂತೋಷ ಅನುಭವಿಸಬೇಕು. ನೀವು ಪ್ರೀತಿಯಲ್ಲಿ ಪಡೆಯಲು ಸಿದ್ಧರಾದಾಗ ಪ್ರೀತಿಯೇ ದಾರಿ ಕಂಡುಕೊಂಡು ನಿಮ್ಮ ಬಳಿ ಬರುತ್ತದೆ.
ಮಕರ(Capricorn)
ನೀವು ಪ್ರೇಮ ಜೀವನಕ್ಕಾಗಿ ಹಾಕುವ ಯಾವ ಪ್ರಯತ್ನವೂ ವ್ಯರ್ಥವಾಗುವುದಿಲ್ಲ. ಮತ್ತೊಬ್ಬರು ಪೂರ್ತಿ ನಿಮ್ಮ ತಾಳಕ್ಕೆ ಕುಣಿಯಬೇಕೆಂದು ನಿರೀಕ್ಷಿಸಬೇಡಿ. ಅದು ಆಗುವುದೂ ಇಲ್ಲ, ಸರಿಯೂ ಅಲ್ಲ. ಮತ್ತೊಬ್ಬರ ಅಭಿಪ್ರಾಯಗಳನ್ನು ಗೌರವಿಸಿ. ಹೊಸ ಸಂಗಾತಿ ಆಯ್ದುಕೊಳ್ಳುವಾಗ ನಿಮ್ಮ ಆರನೇ ಇಂದ್ರಿಯ ಹೇಳಿದಂತೆ ಮಾಡಿರಿ.
ಕುಂಭ(Aquarius)
ನಿಮ್ಮ ಬಹುಕಾಲದ ರೊಮ್ಯಾಂಟಿಕ್ ಬಯಕೆಗಳು ಈಡೇರುವುವು. ಅವನ್ನು ಮುಕ್ತವಾಗಿ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ನೀವಿನ್ನೂ ಒಂಟಿಯಾಗಿದ್ದರೆ ಪಾರ್ಕ್ ಅಥವಾ ಜಿಮ್‌ನಲ್ಲಿ ನಿಮಗಿಷ್ಟವಾಗುವವರು ಸಿಗಲಿದ್ದಾರೆ. ಕೊಂಚ ಹೊಂದಾಣಿಕೆಗೆ ಸಿದ್ಧರಾಗಿರಿ.
ಮೀನ(Pisces)
ನಿಮ್ಮ ಕಲ್ಪನೆಗಳಿಗೂ ನೈಜತೆಗೂ ಬಹಳ ವ್ಯತ್ಯಾಸ ಇರುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು. ಇತ್ತೀಚೆಗೆ ಪರಿಚಯವಾದವರು ಹಾಗೂ ನಿಮ್ಮ ನಡುವೆ ಕೆಮಿಸ್ಟ್ರಿ ಚೆನಾಗಿದೆ ಅನಿಸಿದರೆ ಈ ಬಗ್ಗೆ ನೀವು ಹೆಚ್ಚು ಎಕ್ಸ್‌ಪ್ಲೋರ್ ಮಾಡುವುದು ಉತ್ತಮ.
