ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ
ಏಪ್ರಿಲ್‌ನಲ್ಲಿ ಎಲ್ಲ ಗ್ರಹಗಳೂ ರಾಶಿ ಬದಲಿಸಲಿವೆ. ಗ್ರಹಗಳ ಈ ಗೋಚಾರದಿಂದಾಗಿ ಐದು ರಾಶಿಗಳು ಅತ್ಯಂತ ಶುಭ ಫಲವನ್ನು ಪಡೆಯುತ್ತಿವೆ.
ಪ್ರತಿ ತಿಂಗಳೂ ಒಂದಿಲ್ಲೊಂದು ಗ್ರಹಗಳ ರಾಶಿ ಪರಿವರ್ತನೆ(Zodiac transit) ನಡೆಯುತ್ತಿರುತ್ತದೆ. ಅದರಿಂದ ಕೆಲ ರಾಶಿಯ ಮೇಲೆ ಒಳ್ಳೆಯ ಪರಿಣಾಮಗಳಾದರೆ, ಮತ್ತೆ ಕೆಲ ರಾಶಿಗಳ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ಆದರೆ, ಏಪ್ರಿಲ್(April)ನಲ್ಲಿ ವಿಶೇಷವೊಂದಿದೆ. ಈ ತಿಂಗಳಲ್ಲಿ ಒಂಬತ್ತಕ್ಕೆ ಒಂಬತ್ತೂ ಗ್ರಹಗಳು ರಾಶಿ ಬದಲಸುತ್ತಿವೆ. ಅಷ್ಟೇ ಏಕೆ, ಗ್ರಹಣ ಕೂಡಾ ಇದೆ. ಜ್ಯೋತಿಷ್ಯ ಕ್ಷೇತ್ರದಲ್ಲಿ ಇದೊಂದು ಮಹತ್ತರ ಬದಲಾವಣೆಯಾಗಿದ್ದು, ಹಿಂದೂ ವರ್ಷ ಆರಂಭದ ಮಾಸದಲ್ಲೇ ಇಷ್ಟೊಂದು ಬದಲಾವಣೆಯಾಗುತ್ತಿರುವುದರಿಂದ ಅದರ ಪರಿಣಾಮ ಎಲ್ಲ ರಾಶಿಗಳ ಮೇಲೂ ಆಗಲಿದೆ. ಆದರೆ, ಶುಭ ಪರಿಣಾಮಗಳು ಕೆಲ ರಾಶಿಗಳ ಮೇಲಷ್ಟೇ ಆಗುತ್ತದೆ. ಅವು ಯಾವ ರಾಶಿ, ಏನು ಪರಿಣಾಮ ನೋಡೋಣ.
ಯಾವ ರಾಶಿಗೆ ಚಲನೆ?
ಏಪ್ರಿಲ್ 14ರಂದು ಸೂರ್ಯ(Sun)ನ ಮೇಷ ಸಂಕ್ರಮಣ ನಡೆಯಲಿದೆ. ಏಪ್ರಿಲ್ 7ರಂದು ಮಂಗಳ(Mars)ವು ಕುಂಭ ರಾಶಿಗೆ ಕಾಲಿಡಲಿದೆ. ಮೇ 17ರವರೆಗೂ ಇಲ್ಲಿಯೇ ಇರಲಿದೆ. ಇನ್ನು, ಬುದ್ಧಿಕಾರಕವಾದ ಬುಧ(Mercury)ವು ಏಪ್ರಿಲ್ 8ರಂದು ಮೀನ ರಾಶಿಯಿಂದ ಮೇಷಕ್ಕೆ ಪ್ರವೇಶಿಸಲಿದ್ದು, 25ನೇ ತಾರೀಖಿನವರೆಗೂ ಅಲ್ಲಿಯೇ ಇರಲಿದೆ. ಅಂದು ವೃಷಭ ರಾಶಿಗೆ ಸಂಚರಿಸುತ್ತದೆ. ಏಪ್ರಿಲ್ 12ರಂದು ರಾಹು(Rahu)ವು ಮೇಷ ರಾಶಿಯನ್ನೂ, ಕೇತು(ketu)ವು ತುಲಾ ರಾಶಿಯನ್ನೂ ಪ್ರವೇಶಿಸುತ್ತಿದ್ದಾರೆ. ಏಪ್ರಿಲ್ 13ರಂದು ಬೃಹಸ್ಪತಿ ಎನಿಸಿಕೊಂಡಿರುವ ಗುರು(Jupiter)ವು ತನ್ನ ಸ್ವರಾಶಿಯಾದ ಮೀನಕ್ಕೆ ಪ್ರವೇಶಿಸುತ್ತಿದ್ದಾನೆ. ಇನ್ನು ಶನಿ(Saturn)ಯು ಏಪ್ರಿಲ್ 29ರಂದು ಸ್ವರಾಶಿ ಕುಂಭಕ್ಕೆ ಕಾಲಿಡುತ್ತಿದ್ದಾನೆ. ಈ ಅಪಾರ ಬದಲಾವಣೆಯು ಇಡೀ ಜಗತ್ತಿನ ಆಗುಹೋಗುಗಳಲ್ಲಿಯೂ ಹಲವಾರು ಬದಲಾವಣೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲ ರಾಶಿಯವರು ಈ ನವಗ್ರಹಗಳ ಗೋಚಾರದ ಲಾಭ ಪಡೆಯುತ್ತಾರೆ ನೋಡೋಣ.
ಮೇಷ(Aries)
ಈ ನವಗ್ರಹಗಳ ಮಹಾ ಗೋಚಾರದಿಂದಾಗಿ ಮೇಷ ರಾಶಿಗೆ ಆದಾಯ ಮಾರ್ಗಗಳು ಹೆಚ್ಚುತ್ತವೆ. ಆರ್ಥಿಕವಾಗಿ ಬಹಳಷ್ಟು ಲಾಭ ಸಾಧ್ಯವಾಗುತ್ತದೆ. ವೃತ್ತಿಯ ವಿಷಯದಲ್ಲಿ ನೀವು ಬಯಸಿದ ಬದಲಾವಣೆ ಲಭಿಸುತ್ತದೆ ಜೊತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ(job) ದೊರೆತು ಮನೆಯಲ್ಲಿ ಸಂತಸ ತುಂಬುತ್ತದೆ. ವ್ಯಾಪಾರ, ಉದ್ಯಮ, ಉದ್ಯೋಗ ಯಾವುದೇ ಇರಲಿ ಗೌರವ, ಧನ, ಪ್ರತಿಷ್ಠೆ ಎಲ್ಲವೂ ಹೆಚ್ಚಲಿದೆ. ಮನೆಯ ಸದಸ್ಯರ ಸಂಪೂರ್ಣ ಬೆಂಬಲ ದೊರೆಯುತ್ತದೆ.
Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?
ಸಿಂಹ(Leo)
ಸಿಂಹಕ್ಕೆ ಇದೊಂದು ಅತ್ಯುತ್ತಮ ಕಾಲ. ಈ ನವಗ್ರಹ ಗೋಚಾರವು ನಿಮಗೆ ಅದೃಷ್ಟ ಬಲವನ್ನು ತಂದುಕೊಡಲಿದೆ. ನಿರೀಕ್ಷೆಗೂ ಮೀರಿದ ಸಂಬಳ(Salary increment) ಹೆಚ್ಚಳ ಹಾಗೂ ಹುದ್ದೆ ಬಡ್ತಿ ಅನುಭವಿಸುವಿರಿ. ಇದರಿಂದ ಆಸ್ತಿ ಖರೀದಿ ಸಂಬಂಧ ನಿಮ್ಮ ಕನಸುಗಳು ಈಡೇರಲಿವೆ. ವ್ಯಾಪಾರದಲ್ಲಿ ಅಧಿಕ ಲಾಭ ಇರಲಿದೆ. ಪಿತ್ರಾರ್ಜಿತ ಆಸ್ತಿ ಕೂಡಾ ನಿಮ್ಮ ಕೈ ಸೇರಲಿದೆ. ಏಪ್ರಿಲ್ ಕೊನೆಯಲ್ಲಿ ಸಾಕಷ್ಟು ಶುಭ ಸುದ್ದಿಗಳಿಂದ ಸಂತೋಷ ತುಂಬಿರಲಿದೆ. ಹಾಗಂಥ ಆರೋಗ್ಯದ ವಿಷಯ ಮಾತ್ರ ಕಡೆಗಣಿಸುವಂತಿಲ್ಲ.
ತುಲಾ(Libra)
ಗ್ರಹಗಳ ಕೃಪಾಕಟಾಕ್ಷ ನಿಮ್ಮ ಮೇಲಿರಲಿದೆ. ಉದ್ಯೋಗ ಸ್ಥಳದಲ್ಲಿ ಹೊಸ ಸ್ನೇಹಿತರು ಸಿಗುವ ಜೊತೆಗೆ, ಕೆಲಸವನ್ನು ಹುಮ್ಮಸ್ಸಿನಲ್ಲಿ ಮಾಡಲಿದ್ದೀರಿ. ನೀವಂದುಕೊಂಡಂತೆಯೇ ಎಲ್ಲವೂ ಆಗಿ ಸಂತಸ ಹೆಚ್ಚಲಿದೆ. ಹೊಸ ಉದ್ಯಮ ಆರಂಭಿಸಲು ಸಕಾಲವಿದಾಗಿದ್ದು, ಹೊಸ ವಾಹನ(vehicle), ಒಡವೆ ಖರೀದಿ ಸಾಧ್ಯತೆ ಇದೆ. ಭೌತಿಕ ಸುಖಕ್ಕಾಗಿ ಸಾಕಷ್ಟು ವ್ಯಯಿಸಿದರೂ ಅವೆಲ್ಲವೂ ಬದುಕನ್ನು ಸುಲಭಗೊಳಿಸುವುದರಿಂದ ಖರ್ಚು ಭಯ ಹುಟ್ಟಿಸುವುದಿಲ್ಲ. ವಿದ್ಯಾರ್ಥಿಗಳು ಕೂಡಾ ಓದಿನಲ್ಲಿ ಪ್ರಗತಿ ಪಥ ತುಳಿದು ಮನೆಯವರ ನೆಮ್ಮದಿಗೆ ಕಾರಣವಾಗುತ್ತಾರೆ.
ಮನಃಶಾಂತಿಗಾಗಿ ಮಾಡಿಕೊಳ್ಳಿ Sound Bath Therapy
ವೃಶ್ಚಿಕ(Scorpio)
9 ಗ್ರಹಗಳ ಮಹಾಬದಲಾವಣೆಯಿಂದ ವೃಶ್ಚಿಕ ರಾಶಿಯವರು ಕಳೆದೆರಡು ವರ್ಷಗಳಲ್ಲಿ ಅನುಭವಿಸಿದ ಮಾನಸಿಕ ಕಷ್ಟಕಾರ್ಪಣ್ಯಗಳನ್ನು ಮೀರಲು ಸಾಧ್ಯವಾಗಲಿದೆ. ಜೀವನದಲ್ಲಿ ಸಂತೋಷ ತುಂಬಲಿದೆ. ಸಾಕಷ್ಟು ಬದಲಾವಣೆಯ ಪರ್ವವಾಗಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಸಾಕಷ್ಟು ಸತಾಯಿಸುತ್ತಿದ್ದ ಹಣ ಕೂಡ ಸುಲಭವಾಗಿ ಕೈ ಸೇರಲಿದೆ. ಉದ್ಯೋಗದಲ್ಲಿ ಉನ್ನತಿ ಹೊಂದುವಿರಿ.
ಮೀನ (Pisces)
ಏಪ್ರಿಲ್ ಎರಡನೇ ಭಾಗದಲ್ಲಿ ಮೀನಕ್ಕೆ ಗ್ರಹ ಗೋಚಾರದ ಶುಭಫಲಗಳು ದೊರೆಯುತ್ತವೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ ದೊರಕಿ ಸಂತಸವಾಗುವುದು. ಇರುವ ಕೆಲಸ ಬದಲಿಸುವ ಯೋಚನೆ ಇದ್ದವರಿಗೂ ಅದು ಸಿದ್ಧಿಸುವುದು. ಹೊಸ ಜವಾಬ್ದಾರಿಗಳು ಹೆಗಲಿಗೇರಲಿವೆ. ಗಣ್ಯರ ಸಹಕಾರ ಬಲವಿರುತ್ತದೆ. ಕೈ ಹಾಕಿದ್ದರಲ್ಲೆಲ್ಲ ಯಶಸ್ಸು ಸಾಧಿಸುವಿರಿ.