ಈ ಹೆಸರಿನ ಹೆಣ್ಮಕ್ಕಳು ವೃತ್ತಿಯಲ್ಲಿ ಸಖತ್ ದುಡ್ಡು ಮಾಡುತ್ತಾರೆ!
ಕೆಲ ಹುಡುಗಿಯರು ವೃತ್ತಿಯಲ್ಲಿ ಪುರುಷ ಸಹೋದ್ಯೋಗಿಗಳಿಗಿಂತಲೂ ಒಂದು ಕೈ ಮೇಲೆಯೇ. ಅವರ ಆತ್ಮವಿಶ್ವಾಸ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ನಾಯಕತ್ವ ಗುಣಗಳಿಂದಾಗ ಬಹು ಬೇಗ ಯಶಸ್ಸು ಪಡೆಯುತ್ತಾರೆ. ಅಂಥ ಹುಡುಗಿಯರ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಗೊತ್ತಾ?
ಇವರು ಗಟ್ಟಿಗಿತ್ತಿಯರು. ಹುಡುಗಿಯರದು ಮನೆಗೆಲಸ ಎಂಬೆಲ್ಲ ಹೇರಿಕೆಗಳನ್ನು ಮೀರಿ ಉದ್ಯೋಗದಲ್ಲಿ ಹೆಮ್ಮರವಾಗಿ ಬೆಳೆವ ಕನಸು ಕಾಣುವವರು, ದೊಡ್ಡ ಮೊತ್ತದ ಸಂಬಳ(salary)ದ ರುಚಿ ನೋಡುವ ಬಯಕೆಯವರು. ಇದಕ್ಕಾಗಿ ಎಷ್ಟೇ ಶ್ರಮ(hard work) ಹಾಕಬೇಕಾದರೂ ಹೆದರುವವರಲ್ಲ, ಕೌಶಲ್ಯ ಕಲಿಯಲೂ ಹಿಂದೆ ಬೀಳುವವರಲ್ಲ. ಎಷ್ಟೇ ಜವಾಬ್ದಾರಿಗಳು ಹೆಗಲಿಗೇರಿದರೂ ದೃಢ ಮನಸ್ಸಿನಿಂದ ವೃತ್ತಿ ಯಶಸ್ಸನ್ನು ಪಡೆಯಲು ಮುಂದಾಗುವ ಹುಡುಗಿಯರು..
ಎಲ್ಲ ಹುಡುಗಿ, ಹುಡುಗರಲ್ಲಿ ಈ ಮನೋಭಾವ ಇರುವುದಿಲ್ಲ. ಆದರೆ ಕೆಲವರಲ್ಲಿ ಮಾತ್ರ ದುಡಿಮೆಯ ಹಪಹಪಿ, ಬೆಳೆಯುವ ಬಯಕೆ ಮಹೋನ್ನತವಾಗಿರುತ್ತದೆ. ಅವರು ವೃತ್ತಿಯಲ್ಲಿ ಪುರುಷರಿಗಿಂತಲೂ ಉನ್ನತ ಹುದ್ದೆಗೆ ಹೋಗಿ ನಾಯಕತ್ವ ವಹಿಸಿಕೊಳ್ಳುತ್ತಾರೆ. ಇಂಥ ಹೆಣ್ಣುಮಕ್ಕಳು ಮೂವರು ಗಂಡುಮಕ್ಕಳಿಗೆ ಸಮ ಎಂದು ತಂದೆತಾಯಿ ಬೀಗುವಂತಿರುತ್ತಾರೆ. ಅಂಥವರ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಗೊತ್ತಾ?
ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮಗು ಹುಟ್ಟಿದ ಗಳಿಗೆಯ ಗ್ರಹ, ನಕ್ಷತ್ರಗಳ ಆಧಾರದ ಮೇಲೆ ಯಾವ ಅಕ್ಷರದಿಂದ ಹೆಸರು ಇಡಬೇಕೆಂಬುದನ್ನು ಸೂಚಿಸಲಾಗುತ್ತದೆ. ಹುಟ್ಟಿದ ಸಮಯದಿಂದ ಈ ಅಕ್ಷರ ಹೇಗೆ ಬರುತ್ತದೋ, ಈ ಅಕ್ಷರದಿಂದ ಮುಂದೆ ಅಷ್ಟೇ ಅದೃಷ್ಟವೂ ಅರಸಿ ಬರುತ್ತದೆ. ಈ ಹೆಸರು(name) ನಮ್ಮ ವೃತ್ತಿ ಜೀವನ ಮತ್ತು ಆರ್ಥಿಕ ಜೀವನದ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ಅದರಂತೆ, ಯಾವೆಲ್ಲ ಅಕ್ಷರ(letter)ದಿಂದ ಹೆಸರು ಆರಂಭವಾಗುವ ಹುಡುಗಿಯರು ವೃತ್ತಿ(proffession)ಯಲ್ಲಿ ಅಪಾರ ಯಶಸ್ಸು ಪಡೆಯುತ್ತಾರೆ ನೋಡೋಣ.
ಎ(A)
ಎ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಶ್ರಮಶೀಲರು, ಪ್ರತಿಭಾವಂತರು ಮತ್ತು ಭಾವೋದ್ರಿಕ್ತರು. ಅವರು ಒಂದು ಕೆಲಸಕ್ಕೆ ಕೈ ಹಾಕಿದರೆ ಅದು ಗುರಿ ಕಾಣುವವರೆಗೂ ಬಿಡುವವರಲ್ಲ. ಇವರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ(luck)ದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಯಶಸ್ಸಿನ ಮೆಟ್ಟಿಲುಗಳನ್ನು ಬಹಳ ಬೇಗನೆ ಏರುತ್ತಾರೆ. ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಹೆಸರನ್ನು ಹಾಗೂ ಹಣ(money)ವನ್ನು ಗಳಿಸುತ್ತಾರೆ.
ಮೋದಿ, ಗಾಂಧೀಜಿಯ ಜಾತಕದಲ್ಲಿ Gaja Kesari Yoga!
ಎಂ(M)
ಎಂ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಪ್ರಾಮಾಣಿಕ(honest)ರು ಮತ್ತು ಶ್ರಮಜೀವಿಗಳು. ಅವರು ಜೀವನದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಲು ಬಯಸುತ್ತಾರೆ. ಬಹಳ ಬುದ್ಧಿವಂತರಾದ ಇವರು, ತಮ್ಮ ಬುದ್ಧಿವಂತಿಕೆ(intelligent)ಯ ಬಲದಿಂದಲೇ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರು ಗೆಲ್ಲುವ ಪ್ರಚಂಡ ಉತ್ಸಾಹವನ್ನು ಹೊಂದಿದ್ದಾರೆ. ಈ ಅಕ್ಷರದ ಹುಡುಗಿ ತನ್ನ ಗಂಡನಿಗೆ ಕೂಡಾ ಅದೃಷ್ಟವೆಂದು ಪರಿಗಣಿಸಲಾಗಿದೆ.
ಟಿ(T)
ಟಿ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ತುಂಬಾ ಪ್ರತಿಭಾವಂತರು(talented) ಮತ್ತು ಕಠಿಣ ಪರಿಶ್ರಮಿಗಳು. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತಾರೆ. ಅವರಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಅವರು ಧೈರ್ಯಶಾಲಿಗಳು ಮತ್ತು ನಿರ್ಭೀತರು. ತಾವು ಹೇಳಬೇಕಾದ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಇವರು ತಮ್ಮ ಪತಿ ಮತ್ತು ಅತ್ತೆಗೆ ಕೂಡಾ ಅದೃಷ್ಟ ತರುತ್ತಾರೆ.
ಈ ರಾಶಿಯವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳಬೇಕೆಂದರೆ ಹೀಗಿರಲಿ ನಿಮ್ಮ ವರ್ತನೆ
ಪಿ(P)
ಪಿ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಯಶಸ್ಸ(success)ನ್ನು ಸಾಧಿಸುತ್ತಾರೆ. ಅವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಅವರು ಗೆಲ್ಲುವ ಪ್ರಚಂಡ ಉತ್ಸಾಹವನ್ನು ಹೊಂದಿದ್ದಾರೆ. ಅವರು ಮಾಡಲು ನಿರ್ಧರಿಸಿದ ಕೆಲಸದಲ್ಲಿ ಯಶಸ್ಸನ್ನು ಪಡೆದೇ ತೀರುತ್ತಾರೆ. ಮದುವೆಯ ನಂತರ ಪತಿಯ ಭವಿಷ್ಯವು ಇವರಿಂದಾಗಿ ಹೊಳೆಯುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.