ಈ ವರ್ಷ ಕೊನೆಯ ಆರು ರಾಶಿಯವರಿಗೆ ಲವ್ ಲೈಫ್ ಹೇಗಿರುತ್ತೆ?
ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಈ ವರ್ಷ ಲವ್ ಲೈಫ್ ಹೇಗಿರುತ್ತೆ ಎಂದು ತಿಳಿಯುವ ಆಸೆ ನಿಮಗಿದೆಯೇ?
ತುಲಾ ರಾಶಿ
ನೀವು ನಿಮ್ಮ ಪ್ರಣಯವನ್ನು ಸಾಕ್ಷಾತ್ಕರಿಸಿಕೊಳ್ಳಲು ತುಂಬಾ ಪ್ರಯತ್ನ ಪಡಬೇಕಾದೀತು. ಒಲಿದರೂ ಒಲಿದೀತು ಎನ್ನುವ ಹಾಗಿಲ್ಲ. ಮದುವೆಯಾಗಿದ್ದವರಿಗೂ ಸಂಗಾತಿಯನ್ನು ಒಲಿಸಿಕೊಳ್ಳಲು ತುಂಬಾ ಕಷ್ಟವಿದೆ. ಯಾಕೆಂದರೆ ಬಾಳಿನ ಇತರ ತಾಪತ್ರಯಗಳೂ ಜಂಜಾಟಗಳೂ ಜೊತೆಗೆ ಇದ್ದು ನಿಮ್ಮನ್ನು ಹಣಿದು ಹಾಕುವುದರಿಂದ, ಪ್ರಣಯದ ವಿಚಾರದಲ್ಲಿ ಹೆಚ್ಚಿನ ಪ್ರಯತ್ನ ಬೇಕೇ ಬೇಕು. ಬೆಡ್ ರೂಮನ್ನು ರಾಧಾ - ಕೃಷ್ಣ ಮುಂತಾದ ಶೃಂಗಾರದ ಚಿತ್ರಗಳಿಂದ ಅಲಂಕರಿಸಿ, ಸೊಗಸಾದ ಪರಿಮಳ ಯಾವಾಗಲೂ ಸೂಸುವ ಹಾಗೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ
ನಿಮ್ಮ ಪ್ರಣಯ ಸಾಹಸಗಳಿಗೆ ಇದು ಸಕಾಲ. ಮಂಗಳನ ಕೃಪೆ ಈ ವರ್ಷ ನಿಮ್ಮ ಮೇಲಿರುವುದರಿಂದ, ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಅದರೆ ಮಾನಸಿಕವಾಗಿ ಕೆಲವು ಬಾರಿ ಊಹಿಸಿದಂತೆ ಸನ್ನಿವೇಶಗಳು ನಡೆಯದೆ ಇರಬಹುದು. ಅಂಥ ಸಂದರ್ಭದಲ್ಲಿ ಧೃತಿಗೆಡದೆ ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನಂಬಿಕೆಯಿಟ್ಟು ಪ್ರಯತ್ನಿಸುತ್ತಾ ಇರಬೇಕು. ಕೆಂಪು ಹರಳಿನ ಉಂಗುರವನ್ನು ಧರಿಸಿಕೊಳ್ಳುವುದರಿಂದ ಸಂಗಾತಿಯನ್ನು ಅಥವಾ ನೀವು ಯಾರನ್ನು ಆಕರ್ಷಿಸಬೇಕು ಅಂದುಕೊಂಡಿದ್ದೀರೋ ಅವರನ್ನು ಸೆಳೆಯುವ ಯತ್ನ ಮಾಡಬಹುದು.
ಧನು ರಾಶಿ
ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನೀವು ತಗ್ಗಿ ಬಗ್ಗಿ ನಡೆಯಬೇಕಾದೀತು. ನಿಮ್ಮ ಪ್ರೇಯಸಿ ಅಥವಾ ಪ್ರಿಯಕರನ ಕೈಯೇ ಮೇಲುಗೈ ಆಗುವ ಸಾಧ್ಯತೆ ಇದೆ. ದೈಹಿಕ ಸಂಬಂಧದ ವಿಷಯಕ್ಕೆ ಬಂದಾಗ ಅವರು ಮೇಲುಗೈ ಅಥವಾ ನಿಮ್ಮ ಮೇಲಿನ ಪೊಸಿಷನ್‌ಗೆ ಬಂದರೂ ನೀವು ಅದರಲ್ಲಿ ಸುಖ ಪಟ್ಟುಕೊಳ್ಳಬೇಕು. ಡಾಮಿನೇಟಿಂಗ್ ಸ್ವಭಾವ ನಡೆಯದು. ಒಲಿಸಿಕೊಳ್ಳಲು ಯತ್ನ ಮಾಡಿ. ಒಲಿಸಿಕೊಂಡರೆ ಎಂಥಾ ಮುನಿಸೂ ಕೂಡ ಬೇಗನೆ ಕರಗುವುದು. ಕೆಲವೊಮ್ಮೆ ಹುಸಿ ಮುನಿಸು ಕೂಡ ಪ್ರೇಮಕ್ಕೆ ಸೊಗಸೇ ಆಗಿರುತ್ತದೆ. ದುಬಾರಿ ಬೇಕಿಲ್ಲ, ಸಣ್ಣಪುಟ್ಟ ಗಿಫ್ಟ್‌ಗಳೇ ಸಾಕು.
ಹೊಸ ವರ್ಷದಲ್ಲಿ ಈ ಆರು ರಾಶಿಗಳ ಪ್ರೀತಿ ಪ್ರೇಮ ಪ್ರಣಯ! ...
ಮಕರ ರಾಶಿ
ಹೊಸ ಊರುಗಳನ್ನು ಹೊಸ ತಾಣಗಳನ್ನು ಅನ್ವೇಷಿಸುವುದಕ್ಕೆ ಇದು ಸಕಾಲ. ಸಂಗಾತಿಯ ಜೊತೆ ಟೂರ್ ಹೋಗುವುದರಿಂದ ಪ್ರಣಯ ಜೀವನದಲ್ಲಿ ಹೊಸದೊಂದು ಉನ್ಮತ್ತತೆ ಉಂಟಾಗುತ್ತದೆ. ಆಗ ನೀವು ಮತ್ತು ನಿಮ್ಮ ಸಂಗಾತಿ ಮಾತ್ರ ಇರುವುದರಿಂದ ಯಾವುದೇ ಕುಟುಂಬದ ಅಡೆತಡೆ ಇಲ್ಲದೆ ಇರುವುದರಿಂದ ನೀವು ಸಲೀಸಾಗಿ ಒಬ್ಬರ ಜೊತೆ ಇನ್ನೊಬ್ಬರು ಬೆರೆತು ಇರಬಹುದು. ಹೊಸ ಸಂಗಾತಿಗಳ ಅಪೇಕ್ಷೆ ಬೇಡ. ಕಚೇರಿಯಲ್ಲಿ ಲೈಂಗಿಕ ಸಾಹಸ ಬೇಡ. ಇರುವ ಸಂಗಾತಿಯಲ್ಲಿಯೇ ಸಂತೃಪ್ತಿ ಕಾಣಲು ಪ್ರಯತ್ನ ಮಾಡಿ.
ಗಂಡ ಹೆಂಡತಿ ಬಾಂಧವ್ಯ ವೃದ್ಧಿಗೆ ಇಲ್ಲಿವೆ ಜ್ಯೋತಿಷ್ಯ ಪರಿಹಾರಗಳು ...
ಕುಂಭ ರಾಶಿ
ಪ್ರಣಯದಲ್ಲಿ ಈ ವರ್ಷ ನಿಮ್ಮನ್ನು ಹಿಡಿಯುವವರೇ ಇರುವುದಿಲ್ಲ. ಕುಜ ಹಾಗೂ ಚಂದ್ರರು ನಿಮಗೆ ಒಲಿದಿರುವುದರಿಂದ ಯಾವುದೇ ಅಡೆತಡೆ ಇಲ್ಲದೆ ಸಂಗಾತಿಗಳು ನೀವು ಹೇಳಿದಂತೆ ಒಲಿಯುತ್ತಾರೆ. ನೀವು ವಿವಾಹಿತರಾಗಿದ್ದರೆ ಇನ್ನೂ ಸೊಗಸು. ಅವಿವಾಹಿತರಾಗಿದ್ದರೆ, ಹೊಸ ಪ್ರಣಯ ಜೀವನ ತೆರೆದುಕೊಳ್ಳುವ ಕಾಲ. ವಿವಾಹಿತರಾಗಿದ್ದವರಿಗೂ, ವಿವಾಹದಾಚೆಯ ಸಂಬಂಧಗಳು ಕೈಚಾಚಿ ಕರೆಯಬಹುದು. ಆದರೆ ಇದರಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದನ್ನು ನೀವೇ ವಿವೇಚನೆಯ ಮೂಲಕ ತೀರ್ಮಾನಿಸಬೇಕು.
ಮೀನ ರಾಶಿ
ಬದುಕು ಮೀನಿನಂತೆ ಕ್ಷಣಕ್ಷಣಕ್ಕೂ ಜಾರುತ್ತ ಹೋಗುತ್ತಿದೆ. ಇರುವ ಈ ಕ್ಷಣದಲ್ಲೇ ನೀವು ಆನಂದವನ್ನು ಹೊಂದಬೇಕು. ಯಾಕೆಂದರೆ ಈ ಕ್ಷಣ ನಾಳೆ ಸಿಗುತ್ತದೋ ಇಲ್ಲವೋ ಹೇಳಬರುವಂತಿಲ್ಲ. ಪ್ರೇಮದ ವಿಚಾರದಲ್ಲೂ ಹೀಗೆಯೇ. ಇಂದು ಮನಸ್ಸು ಪ್ರಸನ್ನತೆಯಿಂದಿದ್ದರೆ, ಆ ಕ್ಷಣವನ್ನು ದಿವ್ಯವಾಗಿ ಅನುಭವಿಸುವ ಕಲೆಯೊಂದನ್ನು ದೇವರು ನಿಮಗೆ ಕರುಣಿಸಿದ್ದಾನೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಿರಿ. ನೀವುಂಟೋ ಮೂರು ಲೋಕವುಂಟೋ ಎಂಬ ಹಾಗೆ ಮೆರೆಯಬಹುದು. ಆದರೆ ಶೃಂಗಾರದದಲ್ಲಿ ಅನಾಸಕ್ತಿ ಬೇಡ.
ರಾತ್ರಿ ಮಲಗಿದವರು ಬೆಳಗ್ಗೆ ಏಳುವಾಗ ಹತ್ತು ದಿನಗಳೇ ಮಾಯವಾಗಿದ್ದವು! ...