ರಾತ್ರಿ ಮಲಗಿದವರು ಬೆಳಗ್ಗೆ ಏಳುವಾಗ ಹತ್ತು ದಿನಗಳೇ ಮಾಯವಾಗಿದ್ದವು!

ಇದ್ದಕ್ಕಿದ್ದಂತೆ ಹತ್ತು ದಿನಗಳು ಮಾಯವಾದ ಈ ಕತೆ ಸ್ವಾರಸ್ಯಕರವಾಗಿದೆ. ನಾವು ಈಗ ಬಳಸುತ್ತಿರುವ ಕ್ಯಾಲೆಂಡರ್ ಹುಟ್ಟಿದ ಕತೆಯೂ ಇದರಲ್ಲಿದೆ.

How 10 days slipped when new calendar adopted?

ಇನ್ನೇನು‌ ಹೊಸ ವರ್ಷ, 2021 ಆಗಮಿಸುತ್ತಿದೆ.  2020 ಎಷ್ಟೇ ಕೆಟ್ಟದಾಗಿರಲಿ, ಈ ಒಂದು ವರ್ಷ ಹೇಗೋ ದಾಟಿದೆವು ಎಂಬುದೇ ವಿಸ್ಮಯ. ಈ ವರ್ಷವೇ ನಮ್ಮ ಶತಮಾನದ ಕ್ಯಾಲೆಂಡರ್‌ನಲ್ಲಿ ಮಾಯ ಆಗುವಂತೆ ಇದ್ದಿದ್ದರೆ ಚೆನ್ನಾಗಿತ್ತು ಅಂದುಕೊಳ್ಳುವವರೂ ಇರಬಹುದು.

ಇದೇನೂ ಆಗದ ಹೋಗದ ಸಂಗತಿಯಲ್ಲ. ಹಿಂದೆ ಹಾಗೆ ಆದದ್ದುಂಟು. 1582ನೇ ಇಸವಿಯಲ್ಲಿ ಹೀಗಾಯಿತು.

ಅಂದು ಅಕ್ಟೋಬರ್ ತಿಂಗಳ 4ನೇ ತಾರಿಕಿನ ರಾತ್ರಿ ಮಲಗಿದವರು ಎದ್ದದ್ದು ಅಕ್ಟೋಬರ್ 15ನೇ ದಿನಾಂಕ ಮುಂಜಾನೆ! ಅಂದರೆ ಅವರು ಹತ್ತು ದಿನ ಮಲಗಿದ್ದರು ಅಂತಲ್ಲ. ಇದು ಆದದ್ದು ಕ್ಯಾಲೆಂಡರ್ ಪರಿವರ್ತನೆಯ ಪರಿಣಾಮವಾಗಿ. ಈ ಸ್ವಾರಸ್ಯಕರ ಸಂಗತಿ ನಡೆದದ್ಸು ಹೀಗೆ:1582ನೇ ಇಸವಿಗೂ ಮೊದಲು ಕಾಲಗಣನೆಗೆ ಜೂಲಿಯನ್ ಕ್ಯಾಲೆಂಡರ್ ಬಳಕೆ ಆಗುತ್ತಿತ್ತು. ಆದರೆ ಅದು ಅಷ್ಟೊಂದು ನಿಖರವಾಗಿರಲಿಲ್ಲ. ಈಗಿನ ಫೆಬ್ರವರಿ ಅದರ ಕೊನೆಯ ತಿಂಗಳಾಗಿತ್ತು. ಇದನ್ನು ಬಳಕೆಗೆ ತಂದವನು ಕಿಂಗ್ ಜೂಲಿಯಸ್ ಸೀಸರ್. ಆದರೆ ಇದರಲ್ಲಿ ಆದ ಏರುಪೇರುಗಳಿಂದಾಗಿ, ಕ್ರಿಷ್ಚಿಯನ್ನರ ಈಸ್ಟರ್ ಹಬ್ಬದ ಆಚರಣೆಯ ದಿನಾಂಕದಲ್ಲಿ ತಟವಟ ಉಂಟಾಗಿಬಿಟ್ಟಿತು. ಮಾರ್ಚ್ 21ಕ್ಕೆ ಬರಬೇಕಾದ ಈಸ್ಟರ್ ಹಬ್ಬ ಹತ್ತು ದಿನ ಮುಂಚಿತವಾಗಿಯೇ, ಅಂದರೆ ಮಾರ್ಚ್ ೧೧ಕ್ಕೇ ಬಂದುಬಿಟ್ಟಿತು. ಇದನ್ನೆಲ್ಲ ಗಮನಿಸಿದ ಕ್ರಿಶ್ಚಿಯನ್ ಧರ್ಮಗುರು ಪೋಪ್ ಗ್ರಿಗೊರಿ ಅವರು ಇದನ್ನು ಸರಿಪಡಿಸಲು ಮುಂದಾದರು. ಆ ಕಾಲದ ಖ್ಯಾತ ಖಗೋಳಶಾಸ್ತ್ರಜ್ಞ ಅಲೋಷಿಯಸ್ ಲಿಲಿಯಸ್ ಎಂಬವನ ಜೊತೆ ಸೇರಿಕೊಂಡು ಕ್ಯಾಲೆಂಡರ್ ಮಾರ್ಪಡಿಸಲು ಮುಂದಾದರು. ಜೂಲಿಯನ್ ಪಂಚಾಂಗದಲ್ಲಿರುವ ದೋಷಗಳನ್ನು ಗುರುತಿಸಿದರು. ಅವುಗಳನ್ನೆಲ್ಲ ನಿವಾರಿಸುವ ಸೂತ್ರಗಳನ್ನು ತಮ್ಮ ಹೊಸ ಕ್ಯಾಲೆಂಡರ್ನಲ್ಲಿ ಅಳವಡಿಸಿದರು.

ಕನಸಿನಲ್ಲಿ ಸಮಾಧಿ: ಸ್ವಪ್ನ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ಕೇಳಿ ...

ಭೂಮಿಯು ಸೂರ್ಯನ ಸುತ್ತ ಸುತ್ತೋಕೆ ಕರೆಕ್ಟಾಗಿ ತೆಗೆದುಕೊಳ್ಳೂವ ಕಾಲಮಾನ 365 ದಿನ 5 ಗಂಟೆ 45 ನಿಮಿಷ ಮತ್ತು 46 ಸೆಕೆಂಡ್. ಆದರೆ ಜೂಲಿಯನ್ ಕ್ಯಾಳೆಂಡರ್ ಪ್ರಕಾರ ಅದು ಕರೆಕ್ಟಾಗಿ 365 ದಿನ ಮತ್ತು 6 ಗಂಟೆ ಎಂದಿತ್ತು. ಹೊಸ ಕ್ಯಾಲೆಂಡರ್‌ನಲ್ಲಿ ಅದನ್ನು ಸರಿಪಡಿಸಲಾಯಿತು ಹಾಗೂ ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ ಒಂದು ದಿನವನ್ನು ಹೆಚ್ಚಿಗೆ ಸೇರಿಸುವ ಪರಿಪಾಠ ತರಲಾಯಿತು. ಅದೇ ಅಧಿಕ ವರ್ಷ.

How 10 days slipped when new calendar adopted?

ಹೀಗೆಲ್ಲ ಮಾಡಿ, ತಪ್ಪಿಹೋದ ಈಸ್ಟರ್ ಹಬ್ಬದ ದಿನವನ್ನು ಮತ್ತೆ ಮೊದಲಿನಂತೆ ಬರುವಂತೆ ಸರಿಪಡಿಸಲಾಯಿತು. ಆದರೆ ಈ ಲೆಕ್ಕಾಚಾರವನ್ನು ಜಾರಿಗೆ ತರುವಾಗ, ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಸೇರಿಸಬೇಕಿದ್ದ ಹತ್ತು ದಿನಗಳು ಎಗರಿ ಹೋಗಲಿದ್ದವು. ಹಾಗಾಗದಂತೆ, ಅಂದೇ ಹತ್ತು ದಿನಗಳನ್ನು ದಿಡೀರಾಗಿ ಸೇರಿಸುವ ಪ್ರಸ್ತಾಪ ಇಡಲಾಯಿತು. ಇದಕ್ಕೆ ಪೋಪ್ ಗ್ರೆಗೊರಿ ತಮ್ಮ ವಿಶೇಷಾಧಿಕಾರಿವನ್ನು ಬಳಸಿ ಒಪ್ಪಿಗೆ ನೀಡಿದರು. ಹಾಗೇ 1582ನೇ ಇಸವಿಯ ಅಕ್ಟೋಬರ್ 4ನ್ನು ಜೂಲಿಯನ್ ಕ್ಯಾಲೆಂಡರಿನ ಕೊನೆಯ ವರ್ಷದ ಕೊನೆಯ ದಿನ ಎಂದು ಘೋಷಿಸಲಾಯಿತು. ಮರುದಿನದಿಂದಲೇ ಗ್ರೆಗೊರಿಯನ್ ಕ್ಯಾಲೆಂಡರ್ ಜಾರಿಗೆ ಬರಲಿದೆ ಎಂದು ಘೋಷಿಸಲಾಯಿತು. ಆದರೆ ಅಂದು ಮಾತ್ರ ಅಕ್ಟೋಬರ್ 5 ಎನಿಸುವ ಬದಲು ಅಕ್ಟೋಬರ್ 15 ಎನಿಸಿಕೊಂಡಿತು.

ಮಂಗಳ ಗ್ರಹದ ರಾಶಿ ಪರಿವರ್ತನೆ ಈ ರಾಶಿಯವರಿಗೆ ಧನಲಾಭ..! ...

ಹೀಗೆ, ಅಕ್ಟೋಬರ್ 4ರ ರಾತ್ರಿ ಮಲಗಿದವರು ಮರುದಿನ ಮುಂಜಾನೆ ಏಳುವಾಗ ಅಕ್ಟೋಬರ್ 15ರ ಬೆಳಗ್ಗೆ ಆಗಿಬಿಟ್ಟಿತ್ತು. ಸೂರ್ಯ ಹುಟ್ಟದೇ ಮುಳುಗದೇ ಹತ್ತು ದಿನಗಳು ಎಲ್ಲಿ ಹೋದವೋ ಯಾರಿಗೂ ಗೊತ್ತೇ ಆಗಲಿಲ್ಲ.

ಆರಂಭದಲ್ಲಿ ಇದರ ಅಳವಡಿಕೆಗೆ ಭಾರಿ ಪ್ರತಿರೋಧ ಬಂತು. ನಷ್ಟವಾದದ್ದು ದಿನಗೂಲಿ ಮಾಡುವವರಿಗೆ, ವೇತನದಾರರಿಗೆ. ಹತ್ತು ದಿನಗಳ ಕೆಲವೂ ಇಲ್ಲದೆ ಸಂಬಳವೂ ಇಲ್ಲದೆ ತಿಂಗಳು ಕಳೆದುಬಿಟ್ಟಿದ್ದರಿಂದ ಅವರಿಗೆ ನಷ್ಟ ಸಂಭವಿಸಿತು. ಹಲವಾರು ದೇಶಗಳು ಇದನ್ನು ಬೇಗನೆ ಒಪ್ಪಿಕೊಳ್ಳಲಿಲ್ಲ. ಹಲವಾರು ವರ್ಷಗಳ ಕಳೆದ ನಂತರ ಅನಿವಾರ್ಯವಾಗಿ ಉತರ ದೇಶಗಳೂ ಈ ಕ್ಯಾಲೆಂಡರನ್ನು ಒಪ್ಪಿಕೊಂಡವು.

ಕ್ರಿಸ್ಮಸ್‌ನ ಸಂಪ್ರದಾಯಿಕ ಆಹಾರ: ಖಾದ್ಯಗಳ ಹಿಂದೆ ಇದೆ ಅಚ್ಚರಿಯ ಕಥೆ ...

 

 

Latest Videos
Follow Us:
Download App:
  • android
  • ios