ಊಹೂಂ, ಕೆಟ್ ಕಣ್ಣು, ದೃಷ್ಟಿ ಆಗಿದೆ ಅನ್ನೋದೆಲ್ಲ ಕೇವಲ ಮೂಢನಂಬಿಕೆ, ಭಾರತದಲ್ಲಿ ಮಾತ್ರ ಇಂಥದ್ದೆಲ್ಲ ಕೇಳೋಕ್ ಸಾಧ್ಯ ಅಂತ ನೀವಂದುಕೊಂಡಿದ್ರೆ ತಪ್ಪು. ದೃಷ್ಟಿಯಾಗುವುದು, ಅದನ್ನು ನಿವಾಳಿಸುವುದು ಬಹುತೇಕ ದೇಶಗಳಲ್ಲಿದೆ. ಎಲ್ಲೆಲ್ಲಿ ಹೇಗೆ ದೃಷ್ಟಿ ತೆಗೀತಾರೆ ನೋಡೋಣ.
ಮನೆಯಲ್ಲಿ ಸಾಕುಪ್ರಾಣಿಗಳು ಆರೋಗ್ಯ ತಪ್ಪಲಾರಂಭಿಸಿದ್ರೆ ಎಲ್ಲೋ ದೃಷ್ಟಿ(Evil eye)ಯಾಗಿರಬೇಕೆಂದು ಹೇಳುವುದನ್ನು ನೀವು ಕೇಳಿರಬಹುದು. ಚಿಕ್ಕ ಮಗುವಿಗೆ ದೃಷ್ಟಿಯಾಗದಿರಲೆಂದು ಮುಖದಲ್ಲಿ ಕಪ್ಪು ಬೊಟ್ಟಿಡುವುದನ್ನು ನೋಡಿರುತ್ತೀರಿ. ಇದಲ್ಲದೇ, ವ್ಯಕ್ತಿಯ ಆರೋಗ್ಯ ಹದಗೆಟ್ಟರೆ, ವ್ಯಾಪಾರದಲ್ಲಿ ನಷ್ಟ ಹೆಚ್ಚಿದರೆ, ಚೆನ್ನಾಗಿದ್ದ ಪತಿ ಪತ್ನಿ ನಡುವೆ ಇದ್ದಕ್ಕಿದ್ದಂತೆ ಜಗಳಗಳು ಹೆಚ್ಚಾದರೆ, ಮನೆಯಲ್ಲಿ ಆಹಾರ ಬೇಗ ಕೆಡಲಾರಂಭಿಸಿದ್ದರೆ, ಹಾಲು ಪದೇ ಪದೇ ಹುಳಿಯಾಗುತ್ತಿದ್ದರೆ, ಜಾನುವಾರುಗಳ ಹಾಲು ಅಕಾಲಿಕವಾಗಿ ಬತ್ತಿದರೆ, ಬಾಣಂತಿಯಲ್ಲಿ ಹಾಲಿಲ್ಲದಿದ್ದರೆ, ಹಠಾತ್ ವಾಂತಿಯಾದರೆ, ಮನೆಯಲ್ಲಿ ಪದೇ ಪದೆ ಕಳ್ಳತನಗಳಾದರೆ, ಮಕ್ಕಳು ಕಾರಣವಿಲ್ಲದೆ ಅಳುತ್ತಿದ್ದರೆ... ಹೀಗೆ ನಮ್ಮೆಲ್ಲ ಸಾಮಾನ್ಯ ಸಮಸ್ಯೆಗಳಿಗೆ ಮೊದಲು ಕಾಣುವ ಕಾರಣವೇ ದೃಷ್ಟಿಯಾಗಿರಬಹುದೆಂದು. ಯಾವುದಕ್ಕೆ ಸರಿಯಾಗಿ ಕಾರಣ ಹುಡುಕಲಾಗುವುದಿಲ್ಲವೋ ಅದಕ್ಕೆ ದೃಷ್ಟಿಯಾಗಿದೆ ಎಂಬುದೇ ಉತ್ತರ.
ದೃಷ್ಟಿ(Evil Eye) ಎಂದರೆ ಯಾರೋ ಹೊಟ್ಟೆಕಿಚ್ಚು, ಅಸೂಯೆಯಲ್ಲಿ ಮತ್ತೊಬ್ಬರ ಬೆಳವಣಿಗೆಯನ್ನು, ಅಂದಚೆಂದವನ್ನು ನೋಡುವುದು. ಅಥವಾ ಕೇಡು ಬಯಸುವುದು. ಹಿರಿಯರ ಭಾಷೆಯಲ್ಲಿ ಇದರಿಂದಾಗುವ ಕೆಡುಕುಗಳಿಗೆ ದೃಷ್ಟಿಯ ಪರಿಣಾಮ ಎನ್ನಲಾಗುತ್ತದೆ. ಈ ಕೆಟ್ಟ ದೃಷ್ಟಿ ಅಥವಾ ದೃಷ್ಟಿಯಾಗುವುದು ಭಾರತಕ್ಕೆ ಸೀಮಿತ ಎಂದು ನೀವಂದುಕೊಂಡಿರಬಹುದು. ಆದರೆ, ಬಹಳಷ್ಟು ದೇಶಗಳಲ್ಲಿ ದೃಷ್ಟಿ ತೆಗೆಯುವ ಪರಿಪಾಠವಿದೆ.
ವಿವಿಧ ಸಂಸ್ಕೃತಿಗಳಲ್ಲಿ ವಿವಿಧ ಪರಿಹಾರಗಳು
ಚೀನಾದಲ್ಲಿ, ದುಷ್ಟ ಕಣ್ಣಿಗೆ ಪರಿಹಾರವೆಂದರೆ ಪಾ ಕುವಾ ಕನ್ನಡಿ, ಇದು ಆರು ಬದಿಯ ಕನ್ನಡಿಯಾಗಿದೆ. ಇದನ್ನು ಮುಂಭಾಗದ ಬಾಗಿಲಿನ ಮೇಲೆ ನೇತು ಹಾಕಲಾಗುತ್ತದೆ ಅಥವಾ ಕಳುಹಿಸುವವರಿಗೆ ಕೆಟ್ಟ ಶಕ್ತಿಯನ್ನು ಹಿಂತಿರುಗಿಸಲು ಮುಂಭಾಗದ ಕಿಟಕಿಯಲ್ಲಿ ಇರಿಸಲಾಗುತ್ತದೆ. ಈ ಕನ್ನಡಿಗಳಲ್ಲಿ ಕೆಲವು ಅಪೇಕ್ಷಕರ ಕೆಟ್ಟ ಬಾಣಗಳನ್ನು ಪ್ರತಿಬಿಂಬಿಸಲು ಪೀನ ಮಸೂರ ಹೊಂದಿರುತ್ತವೆ. ಆದರೆ ಇತರವುಗಳು ನಿಶ್ಚಲವಾಗಿರುವ ನೆರೆಹೊರೆಯವರ ಮೇಲೆ ನಿರ್ದಿಷ್ಟ ದಿಕ್ಕಿನಲ್ಲಿ ಶಕ್ತಿಯನ್ನು ಪ್ರತಿಬಿಂಬಿಸಲು ನಿಮ್ನ ಮಸೂರ ಆಗಿರುತ್ತವೆ.
ಟರ್ಕಿಶ್ ದುಷ್ಟ ಕಣ್ಣು(Turkish Evil Eye)
ಟರ್ಕಿಶ್ ಇವಿಲ್ ಐ ಮೋಡಿ ಪ್ರಪಂಚದಾದ್ಯಂತ ಸಾಕಷ್ಟು ಪ್ರಸಿದ್ಧವಾಗಿದೆ. ಇದು ಸೆರಾಮಿಕ್ ಪದಕವನ್ನು ತೋಳು, ಕುತ್ತಿಗೆ ಅಥವಾ ಸೊಂಟದ ಮೇಲೆ ಧರಿಸುವ ಮುಖೇನ ಅಥವಾ ಮನೆಯ ಹೊರಗೆ ನೇತುಹಾಕುವ ಮೂಲಕ ದುಷ್ಟ ಕಣ್ಣಿನಿಂದ ದೂರವಿಡಲು ಸಹಾಯ ಮಾಡುತ್ತದೆ.
ಮಂಗಳಮುಖಿಯರಿಗೆ ಈ ನಾಲ್ಕು ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ!
ಮಲ್ ದೆ ಓಜೋ
ಲ್ಯಾಟಿನ್ ದೇಶಗಳಲ್ಲಿ, ಯಾರನ್ನಾದರೂ ಒಬ್ಬರು ಹೊಗಳಿದಾಗ ಹೊಗಳಿದವರು ಅವರನ್ನು ಮುಟ್ಟುತ್ತಾರೆ. ಇದರಿಂದ ತಮ್ಮ ಹೊಗಳಿಕೆಯಿಂದ ಆಗಿರಬಹುದಾದ ದೃಷ್ಟಿ ಹೋಗುತ್ತದೆ ಎಂಬ ನಂಬಿಕೆ ಅವರದು. ಇದನ್ನೇ ಇಲ್ಲೂ ಕೆಲವರು ಹೊಗಳಿ ಟಚ್ ವುಡ್ ಎನ್ನುವುದು ನೋಡಿರಬಹುದು.
ಫೆಂಗ್ ಶೂಯಿ(Feng Shui)
ಫೆಂಗ್ ಶೂಯಿಯಲ್ಲಿ ಕೆಟ್ಟ ವಾಸ್ತುಶಿಲ್ಪ, ಟ್ರಾಫಿಕ್, ನೆರೆಹೊರೆಯವರು, ಮರಗಳು ಮತ್ತು ಬಂಡೆಗಳಂಥ ಭೌತಿಕ ಅಡೆತಡೆಗಳು ಅಥವಾ ವಾಹಕವೆಂದು ಪರಿಗಣಿಸಬಹುದಾದ ಯಾವುದಾದರೂ ವಸ್ತುಗಳಲ್ಲಿ ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಲು ಕನ್ನಡಿಗಳನ್ನು ಸಾಮಾನ್ಯವಾಗಿ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಅವರಿಗೇ ಹಿಂದಿರುಗಿಸುತ್ತವೆ ಎಂ ನಂಬಿಕೆ ಇದೆ.
ಕಣ್ಕಪ್ಪು
ಭಾರತೀಯ ಮಹಿಳೆಯರು ನವಜಾತ ಶಿಶುಗಳನ್ನಿ, ದುಷ್ಟ ಕಣ್ಣಿನಿಂದ ದೂರವಿಡಲು ಮಕ್ಕಳ ಮುಖದ ಮೇಲೆ ಕಪ್ಪು ಚುಕ್ಕೆ ಇಡುತ್ತಾರೆ. ಹಣೆ, ಕೆನ್ನೆ, ಗಲ್ಲ, ಅಂಗಾಲು, ಅಂಗೈಗೆ ಈ ಬೊಟ್ಟನ್ನು ಇಡುವ ಪರಿಪಾಠವಿದೆ.
ಭಾನುವಾರ ಈ ಕ್ರಮಗಳನ್ನು ಅನುಸರಿಸಿದ್ರೆ ಹಣದ ಸಮಸ್ಯೆ ಇರೋಲ್ಲ!
ನೀಲಿ ಮಣಿಗಳು(Blue beads)
ಭಾರತದಲ್ಲಿ, ನವಜಾತ ಶಿಶುಗಳ ಕತ್ತಿಗೆ ಇಲ್ಲವೇ ಕೈಗೆ ನೀಲಿ ಮಣಿಗಳಿಂದ ಅಲಂಕರಿಸಿದ ಕಪ್ಪು ದಾರ ಹಾಕಲಾಗುತ್ತದೆ. ದಾರ ಹರಿದು ಮಣಿಗಳು ಕಳೆದುಹೋದಾಗ, ಮಗುವು ದುಷ್ಟ ಕಣ್ಣಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಷ್ಟು ಸಾಮರ್ಥ್ಯದ ಸುತ್ತಣ ಶಕ್ತಿ ಗಳಿಸಿದೆ ಎಂಬ ನಂಬಿಕೆ ಇದೆ.
ಕೆಂಪು ದಾರ(Red cords)
ಮಣಿಕಟ್ಟು ಅಥವಾ ಕುತ್ತಿಗೆಯ ಮೇಲೆ ಧರಿಸಿರುವ ಕೆಂಪು ದಾರವು ದುಷ್ಟ ಕಣ್ಣಿನ ವಿರುದ್ಧ ಪ್ರಬಲ ಪರಿಣಾಮವನ್ನು ಬೀರುತ್ತವೆ.
