ಭಾನುವಾರ ಸೂರ್ಯನ ದಿನ. ಈ ದಿನ ಕೆಲ ಕ್ರಮಗಳನ್ನು ಅನುಸರಿಸುವುದರಿಂದ ಜೀವನದ ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣವನ್ನು ಸೃಷ್ಟಿಸಲು, ಜ್ಯೋತಿಷ್ಯ(astrology)ದಲ್ಲಿ ವಾರದ ಪ್ರತಿ ದಿನಕ್ಕೂ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಕೆಲ ಕ್ರಮಗಳನ್ನು ಅನುಸರಿಸಲು ಹೇಳಲಾಗುತ್ತದೆ. ಅವನ್ನು ನಿಯಮಿತವಾಗಿ ಅನುಸರಿಸುವುದರಿಂದ ನಮ್ಮ ದೈನಂದಿನ ಬದುಕಿನ ಸಾಕಷ್ಟು ಸಮಸ್ಯೆಗಳು ತಗ್ಗುತ್ತವೆ. ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳು ನಮ್ಮಿಂದ ದೂರ ಉಳಿಯುತ್ತವೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೂರ್ಯ ದೇವರನ್ನು ಸಂತುಷ್ಟಗೊಳಿಸಬಹುದು. ಭಾನುವಾರ ಹೇಳಿ ಕೇಳೀ ಸೂರ್ಯ ದೇವರ ಆರಾಧನೆಗೆ ಅತ್ಯಂತ ಮಂಗಳಕರವಾದ ದಿನ. ಈ ದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ, ಆತನಿಗೆ ಸಂಬಂಧಿಸಿದ ಮಂತ್ರ ಪಠಿಸುವುದರಿಂದ, ಸೂರ್ಯ ದೇವರ(Sun God) ಅನುಗ್ರಹವು ಅವನ ಭಕ್ತರ ಮೇಲೆ ಉಳಿಯುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದನ್ನು ಮಾಡುವುದರಿಂದ ಜಾತಕದಲ್ಲಿ ಸೂರ್ಯ ಗ್ರಹವು ಬಲಗೊಳ್ಳುತ್ತದೆ ಮತ್ತು ಎಲ್ಲ ಕೆಲಸಗಳು ಹುರುಪಿನಿಂದ ಪ್ರಾರಂಭವಾಗುತ್ತವೆ. ಆದರೆ, ಭಾನುವಾರದ ಹೊರತಾಗಿ, ಪ್ರತಿದಿನವೂ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ಕೂಡಾ ಮಂಗಳಕರವಾಗಿದೆ ಎಂಬುದು ನಿಮಗೆ ತಿಳಿದಿರಲಿ.

ಪ್ರತಿದಿನ ಬೆಳಿಗ್ಗೆ ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಹೂವುಗಳು ಮತ್ತು ಅಕ್ಷತೆಗಳನ್ನು ಹಾಕಬೇಕು. ನಂತರ ಮಂತ್ರವನ್ನು ಪಠಿಸುತ್ತಾ ಸಂತೋಷದ ಮನಸ್ಸಿನಿಂದ ಸೂರ್ಯನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಸೂರ್ಯ ಪ್ರಸನ್ನನಾಗುತ್ತಾನೆ. ಭಾನುವಾರದಂದು ಇತರ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹ ಜೀವನದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ ಎನ್ನಲಾಗುತ್ತದೆ. ಈ ಪರಿಹಾರಗಳ ಬಗ್ಗೆ ತಿಳಿಯೋಣ.

'ಕನ್ನಡತಿ' ಚಿತ್ರೀಕರಣಗೊಂಡ ಕನ್ನಡ ಮಾತೆ ಭುವನೇಶ್ವರಿಯ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ?

ಈ ಪರಿಹಾರವನ್ನು ಮಾಡಿ
1. ಭಾನುವಾರ(Sunday) ಬಕೆಟ್ ನೀರಿನಲ್ಲಿ ಕೆಂಪು ಹೂವುಗಳನ್ನು ಹಾಕಿ ಅದರಿಂದ ಸ್ನಾನ ಮಾಡಿ. ನೀವು ಈ ನೀರಿನಲ್ಲಿ ಕೆಂಪು ಚಂದನ(red sandalwood), ಏಲಕ್ಕಿ, ಜೇಡಿಮಣ್ಣು ಅಥವಾ ಕುಂಕುಮವನ್ನು ಬೆರೆಸಿ ಸ್ನಾನ ಮಾಡಿದರೆ, ಸೂರ್ಯ ದೇವರು ನಿಮ್ಮ ಮೇಲೆ ವಿಶೇಷ ಅನುಗ್ರಹವನ್ನು ಹೊಂದಬಹುದು. ಜೀವನದ ದುಃಖಗಳು ಕೊನೆಗೊಳ್ಳುತ್ತವೆ ಮತ್ತು ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

2. ಕಬ್ಬಿಣದ ಹೊರತಾಗಿ ಲೋಹಗಳ ಸರಕುಗಳ ವ್ಯವಹಾರವನ್ನು ಭಾನುವಾರದಂದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ವಿಶೇಷವಾಗಿ ಈ ದಿನ ಕಬ್ಬಿಣ(iron)ದ ಖರೀದಿ ಅಥವಾ ಮಾರಾಟ ಮಾಡಬಾರದು. ಈ ದಿನ ಹೀಗೆ ಮಾಡಿದರೆ ಸೂರ್ಯದೇವನಿಗೆ ಕೋಪ ಬರುತ್ತದೆ ಎಂಬ ನಂಬಿಕೆ ಇದೆ.

3. ಈ ದಿನ ಸಂಜೆ ದೀಪವನ್ನು ಹಚ್ಚುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ, ಸೂರ್ಯಾಸ್ತದ ನಂತರ, ಅಶ್ವತ್ಥ ಮರ(peepal tree)ದ ಕೆಳಗೆ ದೀಪವನ್ನು ಬೆಳಗಿಸಿ. ಈ ರೀತಿ ಮಾಡುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಮತ್ತು ಆಕೆಯ ಆಶೀರ್ವಾದವು ಭಕ್ತರ ಮೇಲೆ ಉಳಿಯುತ್ತದೆ ಎಂದು ನಂಬಲಾಗಿದೆ. ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ಕ್ರಮಗಳನ್ನು ಅನುಸರಿಸಬೇಕು.

ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?

4. ಭಾನುವಾರ ರಾತ್ರಿ, ಒಂದು ಲೋಟ ಹಾಲು ತುಂಬಿಸಿ ಮತ್ತು ಅದನ್ನು ನಿಮ್ಮ ತಲೆಯ ಮೇಲೆ ಇರಿಸಿ. ಸೋಮವಾರ ಸೂರ್ಯೋದಯಕ್ಕೆ ಮುನ್ನವೇ ಎದ್ದು ಸ್ನಾನ ಮಾಡಿ ಆ ಹಾಲನ್ನು ಎಕ್ಕದ ಮರಕ್ಕೆ ಸುರಿಯಬೇಕು. 7 ರಿಂದ 11 ಭಾನುವಾರದವರೆಗೆ ಈ ಟ್ರಿಕ್ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿನ ಆರ್ಥಿಕ ಬಿಕ್ಕಟ್ಟು(financial crisis) ದೂರವಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.