ಮಂಗಳಮುಖಿಯರಿಗೆ ದಾನ ಕೊಟ್ಟು ಅವರಿಂದ ಆಶೀರ್ವಾದ ಪಡೆಯುವುದರಿಂದ ಸಾಕಷ್ಟು ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ದಾನ ಕೊಡುವಾಗ ಕೆಲ ವಿಷಯಗಳ ಬಗ್ಗೆ ಬಹಳ ಎಚ್ಚರ ವಹಿಸಬೇಕು. 

ಹಿಂದೂ ಧರ್ಮದಲ್ಲಿ, ಅದರಲ್ಲೂ ಉತ್ತರ ಭಾರತ(North India)ದಲ್ಲಿ ಯಾವುದೇ ಶುಭ ಸಂದರ್ಭವಿರಲಿ, ಅಲ್ಲಿ ಮಂಗಳಮುಖಿಯರು ಬಂದು ಆಶೀರ್ವದಿಸುವುದು, ಅವರಿಗೆ ಕೈ ತುಂಬಾ ದೇಣಿಗೆ ನೀಡುವುದು ಸಂಪ್ರದಾಯವೇ ಆಗಿದೆ. ಅವರ ಆಶೀರ್ವಾದದಿಂದ ಸರ್ವವೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕಲ್ಲವೇ ಅವರನ್ನು ಮಂಗಳಮುಖಿಯರೆನ್ನುವುದು. ಮುಖ ನೋಡುವುದೇ ಮಂಗಳಕರವಾಗುತ್ತದೆ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಮಗು ಜನಿಸಿದಾಗ ಮಂಗಳಮುಖಿಯರಿಂದ ಮಗುವಿಗೆ ಆಶೀರ್ವಾದ ಮಾಡಿಸಲಾಗಿತ್ತದೆ. ಅವರಿಗೆ ಉದಾರವಾಗಿ ದಾನ ಮಾಡಲಾಗುತ್ತದೆ. ಇದರಿಂದ ಮಗುವಿನ ಭವಿಷ್ಯ ಉಜ್ವಲವಾಗಿರುತ್ತದೆ ಎನ್ನಲಾಗುತ್ತದೆ. ಮಂಗಳಮುಖಿಯರಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಬಾರದು. ಇದರಿಂದ ದುರದೃಷ್ಟ ಅಟಕಾಯಿಸಿಕೊಳ್ಳುತ್ತದೆ. ಅಲ್ಲದೆ, ಅವರನ್ನು ಪ್ರೀತಿಯಿಂದ ಕಾಣಬೇಕು. 

ಮಂಗಳಮುಖಿಯರಿಗೆ ದಾನ ನೀಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಹಾಗಂಥ ಅವರಿಗೆ ಸಿಕ್ಕಸಿಕ್ಕದ್ದೆಲ್ಲ ದಾನ ಮಾಡಬಾರದು. ಅನ್ನ, ಧನ ದಾನ ಎಂದಿಗೂ ಶ್ರೇಷ್ಠವೇ. ಅದರ ಹೊರತಾಗಿ ಈ ನಾಲ್ಕು ವಸ್ತುಗಳನ್ನು ಅಪ್ಪಿತಪ್ಪಿಯೂ ನೀಡಬಾರದು. ಹಾಗೊಂದು ವೇಳೆ ನೀಡಿದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಮಂಗಳಮುಖಿಯರಿಗೆ ದಾನ ಮಾಡಬಾರದ ವಸ್ತುಗಳು ಯಾವೆಲ್ಲ ನೋಡೋಣ. 

ಪ್ಲಾಸ್ಟಿಕ್ ವಸ್ತುಗಳು(Plastic things)
ಒಬ್ಬ ವ್ಯಕ್ತಿಯು ಪ್ಲಾಸ್ಟಿಕ್ ವಸ್ತುಗಳನ್ನು ಯಾರಿಗೂ ದಾನ ಮಾಡಬಾರದು. ಹೀಗೆ ಮಾಡುವುದರಿಂದ ಮನೆಯ ಪ್ರಗತಿ ಮತ್ತು ಅಭಿವೃದ್ಧಿ ನಿಲ್ಲುತ್ತದೆ. ಅದರಲ್ಲೂ ಮಂಗಳಮುಖಿಯರಿಗೆ ಪ್ಲ್ಯಾಸ್ಟಿಕ್ ವಸ್ತು ದಾನ ಬೇಡ.

ಹಳೆಯ ಉಡುಪುಗಳು(old cloths)
ಮಂಗಳಮುಖಿಯರಿಗೆ ಎಂದಿಗೂ ಧರಿಸಿರುವ ಅಥವಾ ಹಳೆಯ ಬಟ್ಟೆಗಳನ್ನು ದಾನ ಮಾಡಬೇಡಿ. ಕೊಡುವುದಾದರೆ ಹೊಸ ಬಟ್ಟೆಗಳನ್ನು ಕೊಡಿ. ಎಂದಿಗೂ ಬಳಸದ ಬಟ್ಟೆಗಳನ್ನು ಕೊಡಿ. ಹಳೆಯ ಬಟ್ಟೆಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. 

ಭಾನುವಾರ ಈ ಕ್ರಮಗಳನ್ನು ಅನುಸರಿಸಿದ್ರೆ ಹಣದ ಸಮಸ್ಯೆ ಇರೋಲ್ಲ!

ಪೊರಕೆ(broom)
ಪೊರಕೆ ಕೆಟ್ಟದ್ದಲ್ಲ. ಪ್ರತಿಯೊಬ್ಬರಿಗೂ ಅದರ ಬಳಕೆ ಅಗತ್ಯ. ಎಲ್ಲರಿಗೂ ಬೇಕಾದ ವಸ್ತುವಿದು. ತಾಯಿ ಲಕ್ಷ್ಮಿ(Lakshmi)ಗೆ ಪೊರಕೆ ತುಂಬಾ ಪ್ರಿಯವಾಗಿದೆ. ಇದರಿಂದ ಇಡೀ ಮನೆಯಲ್ಲಿದ್ದ ಕೊಳಕು ನಿವಾರಣೆಯಾಗುತ್ತದೆ. ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಆದರೂ ಮಂಗಳಮುಖಿಯರಿಗೆ ಪೊರಕೆಗಳನ್ನು ದಾನ ಮಾಡಿದರೆ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಮತ್ತು ಮನೆಯಿಂದ ಹೊರ ಹೋಗುತ್ತಾಳೆ. ಇದರಿಂದ ಸಾಕಷ್ಟು ಧನ ನಷ್ಟ ಎದುರಿಸಬೇಕಾಗುತ್ತದೆ. ಕೇವಲ ಮಂಗಳಮುಖಿಯರಿಗಲ್ಲ, ಯಾರಿಗೂ ಪೊರಕೆ ನೀಡುವುದು ಅಂಥ ಶ್ರೇಯಸ್ಕರವಲ್ಲ. ಅದು ಅವರನ್ನು ಅವಮಾನಿಸಿದಂತಾಗುತ್ತದೆ. 

ತೈಲ(oil)
ಜನರು ಸಾಮಾನ್ಯವಾಗಿ ಯಾವುದೇ ಶುಭ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಹಿಟ್ಟು ಅಥವಾ ಯಾವುದೇ ಆಹಾರ ಪದಾರ್ಥ ದಾನ ಮಾಡುತ್ತಾರೆ. ಆದರೆ ಅವರಿಗೆ ಎಣ್ಣೆಯನ್ನು ದಾನ ಮಾಡದಂತೆ ವಿಶೇಷ ಕಾಳಜಿ ವಹಿಸಬೇಕು. ಎಣ್ಣೆಯನ್ನು ನೀಡುವುದರಿಂದ ಮನೆಯಲ್ಲಿ ಯಾವುದೇ ದೊಡ್ಡ ವಿಪತ್ತು ಬರಬಹುದು ಎಂದು ನಂಬಲಾಗಿದೆ.\

Vastu Tips: ಮೂರು ರೀತಿಯ ದೋಷ ನಿವಾರಿಸುತ್ತೆ ಈ ಮರ!

ಈ ವಸ್ತುಗಳನ್ನು ದಾನ ಮಾಡಿ
ಮಂಗಳಮುಖಿಯರಿಗೆ ಹಣ, ಹೊಸ ವಸ್ತ್ರಗಳು, ಧಾನ್ಯಗಳನ್ನು ದಾನ ಮಾಡಿ. ಅವರಿಗೆ ಹಣ ನೀಡಿದ ನಂತರ ಅವರಿಂದ ಒಂದೆರಡು ನಾಣ್ಯವನ್ನು ಆಶೀರ್ವಾದ ರೂಪದಲ್ಲಿ ಮರಳಿ ಪಡೆಯಲು ಮರೆಯಬೇಡಿ. ಈ ನಾಣ್ಯವನ್ನು ನಿಮ್ಮ ವ್ಯಾಲೆಟ್‌ನಲ್ಲಿಟ್ಟುಕೊಳ್ಳುವುದರಿಂದ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.