Asianet Suvarna News Asianet Suvarna News

ಪೂರ್ವ ಜನ್ಮದಲ್ಲಿ ಏನಾಗಿದ್ದೀರೆಂದು ತಿಳಿಯೋದು ಹೇಗೆ?

ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ನಮಗೆಲ್ಲರಿಗೂ ಒಂದು ಪುನರ್ಜನ್ಮವಿದೆ. ಹಾಗೆಯೇ ಒಂದು ಪೂರ್ವಜನ್ಮವೂ ಇದೆ. ನಿಮ್ಮ ಪೂರ್ವಜನ್ಮ ಯಾವುದು ಅಂತ ತಿಳಿಯೋದು ಹೇಗೆ?

 

How to know about your past life as per astrology
Author
Bengaluru, First Published Sep 3, 2020, 5:47 PM IST
  • Facebook
  • Twitter
  • Whatsapp

ಅಮೆರಿಕದಲ್ಲಿ ಬ್ರಿಯಾನ್‌ ವೀಸ್‌ ಎಂಬ ಮನೋತಜ್ಞರಿದ್ದಾರೆ. ಅವರಿಗೆ ಕ್ಯಾಥರೀನ್ ಎಂಬ ಪೇಷೆಂಟ್‌ ಭೇಟಿಯಾದಳು. ಆಕೆ ತನ್ನನ್ನು ಕಾಡುತ್ತಿರುವ ದುಃಸ್ವಪ್ನಗಳ ಬಗ್ಗೆ ಹೇಳುತ್ತಾ ಹೇಳುತ್ತಾ ಹೋದಂತೆ, ಡಾಕ್ಟರ್‌ಗೆ ಅಚ್ಚರಿ ಕಾದಿತ್ತು. ಅವುಗಳೆಲ್ಲವೂ ಆಕೆಯ ಹಿಂದಿನ ಜನ್ಮದತ್ತ ಬೊಟ್ಟು ಮಾಡುತ್ತಿದ್ದವು. ಪರಿಶೀಲಿಸಿದಾಗ ಅದು ನಿಜವೂ ಆಗಿತ್ತು.
ಇಂಥ ಅನೇಕ ಘಟನೆಗಳು ನಡೆದಿವೆ. ಪ್ರತಿಯೊಬ್ಬರಿಗೂ ಒಂದು ಪುನರ್ಜನ್ಮವಿದೆ, ಹಾಗೆಯೇ ಒಂದು ಪೂರ್ವಜನ್ಮವೂ ಇರುತ್ತದೆ. ಅದನ್ನು ತಿಳಿಯುವುದು ಸುಲಭವಲ್ಲ. ಹಾಗೆ ತಿಳಿಯಬಲ್ಲವರಿಗೆ ದಿವ್ಯದೃಷ್ಟಿಯೇ ಇರಬೇಕಷ್ಟೆ. ಆದರೆ, ಕೆಲವು ಸಂಗತಿಗಳ ಮೂಲಕ ನಾವು ಪೂರ್ವಜನ್ಮದಲ್ಲಿ ಏನಾಗಿದ್ದೆವು ಎಂಬುದನ್ನು ಊಹಿಸಬಹುದು. ಅದು ಹೀಗೆ:

ಮರುಕಳಿಸುವ ಕನಸುಗಳು
ನಿಮಗೆ ಒಂದೇ ಕನಸು ಪದೇ ಪದೆ ಮರುಕಳಿಸುತ್ತದೆಯೆ? ಆ ಕನಸಿನಲ್ಲಿ ಅದೇ ಸ್ಥಳ, ಅವೇ ಮನುಷ್ಯರು ಮತ್ತೆ ಮತ್ತೆ ಬರುತ್ತಾರೆಯೆ? ಆ ಕನಸಿನಲ್ಲಿ ನೀವು ಸಾಯುವ, ಸಾವಿನಂಚಿಗೆ ಹೋಗುವ ದೃಶ್ಯಗಳು ಇರುತ್ತವೋ? ಹಾಗಿದ್ದರೆ ಅದು ನಿಮ್ಮ ಪೂರ್ವಜನ್ಮದ ಇಂಗಿತವೇ ಇರಬಹುದು. ಕನಸುಗಳು ನಮ್ಮ ಭೂತ ಭವಿಷ್ಯಗಳನ್ನು ತಿಳಿಸಲು ವಿಧಿ ನಮಗೆ ನೀಡಿದ ಒಂದು ಸಾಧನ.

How to know about your past life as per astrology

ತೀವ್ರ ಒಳನೋಟ
ನಿಮ್ಮ ಮನಸ್ಸು ಮತ್ತು ಪ್ರಜ್ಞೆ ಸದಾ ವಿಕಾಸ ಆಗ್ತಾ ಇರುತ್ತೆ. ಯೋಗ, ಧ್ಯಾ, ಆಧ್ಯಾತ್ಮಿಕ ಸಾಧನೆಗಳನ್ನು ಮಾಡ್ತಾ ಹೋದ ಹಾಗೆ ಅದು ಆಧ್ಮಾತ್ಮಿಕವಾಗಿಯೂ ಬೆಳೆಯುತ್ತಾ ಹೋಗುತ್ತೆ. ಅಂಥ ಒಂದು ಹಂತದಲ್ಲಿ ನಿಮಗೆ ನಿಮ್ಮ ಪೂರ್ವಜನ್ಮದ ಬಗ್ಗೆ ಇದ್ದಕ್ಕಿದ್ದಂತೆ ರಿವೀಲ್‌ ಆಗಬಹುದು. ಅಥವಾ ಥಟ್ಟನೆ ಏನೋ ಹೊಳೆದಂತಾಗಬಹುದು. ಆದರೆ ಇದು ಆಧ್ಯಾತ್ಮಿಕ ಸಾಧಕರಿಗೆ ಆಗುವಂಥದು.

ಮಕ್ಕಳ ನೆನಪುಗಳು
ಕೆಲವು ಮಕ್ಕಳಿಗೆ ಪೂರ್ವಜನ್ಮದ ನೆನಪುಗಳು ಬಂದದ್ದನ್ನು ಹಲವರು ದಾಖಲಿಸಿದ್ದಾರೆ. ಹುಡುಕುತ್ತ ಹೋದಾಗ, ಅವರು ಹೇಳಿದ ನೆನಪುಗಳು ವಿವರಗಳೆಲ್ಲ್ಲ ನಿಜವಾದದ್ದು ಕಂಡಿದೆ. ಮಕ್ಕಳು ಇನ್ನೂ ತಮ್ಮ ಪೂರ್ವಜನ್ಮಕ್ಕೆ ಸಮೀಪವಾಗಿ ಇರುವವರು ಆದುದರಿಂದ ಅವರಲ್ಲಿ ಅದರ ನೆನಪುಗಳು ಇದ್ದೇ ಇರುತ್ತವೆ. ದೊಡ್ಡರಾದಂತೆ ಅದೆಲ್ಲ ಮಾಸುತ್ತ ಹೋಗುತ್ತವೆ. 

ಎಲ್ಲೋ ನೋಡಿದ್ದೀನಲ್ಲಾ!
ಕೆಲವೊಮ್ಮೆ ಹಾಗಾಗುತ್ತದೆ. ಯಾರನ್ನೋ ಅಥವಾ ಯಾವುದೋ ಸ್ಥಳವನ್ನು ನೋಡಿದಾಗ ಹಿಂದೊಮ್ಮೆ ನೋಡಿದಂತೆ ಅನಿಸುವುದು, ಯಾವುದೋ ತಿಂಡಿ ತಿಂದಾಗ ಹಿಂದೆಲ್ಲೋ ತಿಂದಂತೆ ಅನಿಸುವುದು, ಇನ್ಯಾವುದೋ ಪರಿಮಳ ಮೂಗಿಗೆ ಬಂದು ಬಡಿದಾಗ ಯಾವದುಓ ನೆನಪುಗಳು ಅರಳಿದಂತೆ ಆಗುವುದು- ಹೀಗೆ, ಇವು ಪೂರ್ವಜನ್ಮದ ನೆನಪೂ ಇರಬಹುದು ಅಥವಾ ಇದೇ ಜನ್ಮದ ಹಿಂದಿನ ನೆನಪೂ ಇರಬಹುದು.

ನಿಮ್ಮ ರಾಶಿಗೆ ರಾಜಯೋಗವಿದೆಯಾ?

ಇನ್ನೊಬ್ಬರ ಸಹಾನುಭೂತಿ
ನಿಮ್ಮ ಆಪ್ತರ ಅಂತರಾಳದ ಸುಖ ದುಃಖ ನೋವು ನಲಿವುಗಳ ಜೊತೆಗೆ ನಿಮಗೆ ಸಹಾನುಭೂತಿ ಇರುವುದು ಸಹಜವೇ. ಆದರೆ ಇದೀಗ ತಾನೆ ಪರಿಚಿತರಾದವರು, ಅಥವಾ ಅಪರಿಚಿತರು. ಅಥವಾ ಗುಂಪಿನಲ್ಲಿ ಸಾಗುತ್ತಿರುವಾಗ ಯಾರೋ ನಿಮಗೆ ಸಂಬಂಧವೇ ಇಲ್ಲದ ಯಾವುದೋ ವ್ಯಕ್ತಿಯ ಅಂತರಂಗದ ನೋವುಗಳು ನಿಮಗೆ ಆ ತಕ್ಷಣ ಮನದಲ್ಲಿ ಕುಟುಕುತ್ತಿರುವಂತೆ ಫೀಲ್‌ ಆದರೆ ಆಗ ಅದು ಪೂರ್ವಜನ್ಮಗಳ ಪ್ರಭಾವ ಅನ್ನಬಹುದು.

ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸಬೇಕೆ? ಹೀಗೆ ಮಾಡಿ 

ಮಕ್ಕಳಲ್ಲ ಹಳೇ ಆತ್ಮಗಳು
ಕೆಲವು ಮಕ್ಕಳು ವಯೋಸಹಜವಾದ ಆಟಗಳನ್ನು ಆಡುತ್ತಾ ಇರುವುದಿಲ್ಲ. ಬದಲು ದೊಡ್ಡವರ ಜೊತೆ ಹೆಚ್ಚು ಗಂಭೀರವಾದ ಮಾತುಕತೆಯಲ್ಲಿ ತೊಡಗಿಕೊಳ್ಳುತ್ತವೆ. ಇವರು ಹಿಂದೆ ಬಹು ಜನ್ಮಗಳನ್ನು ಎತ್ತಿ ಬಂದಿರುವ ಆತ್ಮಗಳು ಎಂದು ತರ್ಕಿಸಬಹುದು. ಇವು ಉಳಿದವರಿಗಿಂತ ಹೆಚ್ಚು ಪ್ರೌಢ, ಮೆಚ್ಯೂರ್‌ ಆಗಿರುತ್ತವೆ. ಎಳೆಯ ಆತ್ಮಗಳು ದೊಡ್ಡವರಾಗಿದ್ದರೂ ಮಕ್ಕಳ ಹಾಗೆ ಇರುವ ಸಾಧ್ಯತೆ ಹೆಚ್ಚು.

ಹಿಸ್ಟರಿಯ ಮೇಲೆ ಆಸಕ್ತಿ
ನಿಮಗೆ ಲ್ಯಾಟಿನ್ ಅಮೆರಿಕದ ಮಯಾನ್ ಜನಾಂಗದ ಬಗ್ಗೆ ಅಥವಾ ಇಂಡೋ ತೀರದ ಆರ್ಯನ್‌ ಜನಾಂಗದ ಬಗ್ಗೆ ತುಂಬಾ ಕುತೂಹಲ ಇರಬಹುದು. ಹಾಗೆಯೇ ಯಾವುದ್ಯಾವುದೋ ಅಪರಿಚಿತ ಸಂಸ್ಕೃತಿಗಳ ಬಗ್ಗೆ ಮೊದಲ ಬಾರಿಗೆ ತಿಳಿಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ನಿಮಗೆ ತುಂಬ ಪರಿಚಿತ, ಆಪ್ತ ಅನಿಸಿದರೆ ಅದು ನಿಮ್ಮ ಹಿಂದಿನ ಜನ್ಮದ ವಾಸನೆಯೇ ಇರಬಹುದು.

ನಿಮ್ಮ ಜಾತಕದಲ್ಲೂ ಈ ದೋಷಗಳಿರಬಹುದು, ಚೆಕ್ ಮಾಡಿಕೊಳ್ಳಿ! 

ವಿವರಿಸಲಾಗದ ಫೋಬಿಯಾ
ಕೆಲವರಿಗೆ ವಿವರಿಸಲಾಗದ ಭಯಗಳು ಇರುತ್ತವೆ. ಉದಾಹರಣೆಗೆ, ಬೆಂಕಿಯಿಂದ ಸುಟ್ಟು ಹೋಗಬಹುದು ಎಂಬ ಭಯ, ನೀರಿನಲ್ಲಿ ಮುಳುಗಬಹುದು ಎಂಬ ಭಯ, ಮಹಡಿಯಿಂದ ಬಿದ್ದು ಸಾಯಬಹುದು ಎಂಬ ಭಯ ಇತ್ಯಾದಿ. ಇಂಥ ಭಯಗಳು ಅಥವಾ ಫೋಬಿಯಾಗಳು  ನಿಮ್ಮ ಹಿಂದಿನ ಜನ್ಮದ ದುರಂತ ಘಟನೆಗಳ ಪ್ರಭಾವ ಆಗಿರಬಹುದು.

ವ್ಯಕ್ತಿಯ ಗುಣಾವಗುಣ
ಕೆಲವೊಮ್ಮೆ ಯಾವುದೋ ವ್ಯಕ್ತಿಯ ಚರ್ಯೆ ಹಾವಭಾವ ಮಾತುಕತೆಗಳನ್ನು ಗಮನಿಸುತ್ತಿದ್ದಂತೆ, ಕ್ಷಣಾರ್ಧದಲ್ಲಿ ನಿಮಗೆ ಅವನ ಸ್ವಭಾವವೆಲ್ಲಾ ಗೊತ್ತಾಗಿ ಬಿಡಬಹುದು. ನೀವೇನೂ ಆತನನ್ನು ಈ ಮೊದಲು ನೋಡಿರಲಿಕ್ಕಿಲ್ಲ. ಆದರೂ ಗೊತ್ತಾಗಿಬಿಡುತ್ತದೆ. ಇದಕ್ಕೆ ಕಾರಣ, ಪೂರ್ವಜನ್ಮದಲ್ಲಿ ಇಂಥದೇ ವ್ಯಕ್ತಿಗಳ ಜೊತೆಗಿನ ಒಡನಾಟದಿಂದ ಕಲಿತದ್ದು ಆಗಿರುತ್ತೆ.

ಪಿತೃಪಕ್ಷದಲ್ಲಿ ಹೀಗೆ ಮಾಡಿ ಪಿತೃ ದೋಷದಿಂದ ಮುಕ್ತರಾಗಿ... 

Follow Us:
Download App:
  • android
  • ios