ದೇಶ, ವಿದೇಶ ಸುತ್ತೋ ಡಾ.ಬ್ರೋ ಅಂಥವರ ಹಸ್ತ ರೇಖೆ ಹೇಗಿರುತ್ತದೆ!

ಹಸ್ತ ರೇಖೆ ನಮ್ಮ ಜಾತಕದಲ್ಲಿರುವಂತೆ ಭವಿಷ್ಯವನ್ನು ಹೇಳಬಲ್ಲದು. ಯಾವ ರೇಖೆ ಹೇಗಿದ್ದರೆ ವಿದೇಶಿ ಪ್ರಯಾಣ ಅಥವಾ ಹೊರ ದೇಶದಲ್ಲಿ ಕೆಲಸ ಮಾಡುವ ಯೋಗ ನಿಮ್ಮದಾಗುತ್ತದೆ? 

how people of having foriegn trip and dying away from home would have palm lines

ಈ ಡಾ. ಬ್ರೋ ಎಂಬ ಯೂಟ್ಯೂಬರ್ ಕಂಡ್ ಕಂಡ ದೇಶಕ್ಕೆ ಹೋಗಿ ವೀಡಿಯೋ ಮಾಡ್ಕೊಂಡು ಬಂದು ಯೂಟ್ಯೂಬಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಸಾಮಾನ್ಯ ಹುಟುಗ ಇಷ್ಟು ವಿದೇಶ ಪ್ರವಾಸ ಮಾಡುತ್ತಾನೆಂದರೆ ಅವರ ಹಸ್ತ ರೇಖೇ ಹೀಗಿರಬಹುದು. ಜಾತಕದಲ್ಲಿ ಗ್ರಹಗಳು, ರಾಶಿ-ನಕ್ಷತ್ರಗಳ ಜೊತೆಗೆ ನಮ್ಮ ಹಸ್ತದಲ್ಲಿರುವ ರೇಖೆಗಳೂ ನಮ್ಮ ಭವಿಷ್ಯ ಹಾಗೂ ಅದೃಷ್ಟ ಹೇಳುತ್ತದೆ. ಈಗಂತೂ ಪ್ರತಿಯೊಂದು ಮಕ್ಕಳಿಗೆ ಫಾರಿನ್‌ಗೆ ಹೋಗಿ ಓದಬೇಕು, ಅಲ್ಲಿಯೇ ಸೆಟಲ್ ಆಗಬೇಕೆಂಬ ಕನಸು ಕಾಣೋದು ಕಾಮನ್. ಅಲ್ಲದೇ ಹುಡುಗಿಯರಿಗೂ ಫಾರಿನ್ ಗಂಡನೇ ಬೇಕು ಅಂತಾರೆ. ಆದರೆ ಎಲ್ಲವೂ ನಮ್ಮ ಹಣೆಯಲ್ಲಿ ಬರೆದಿರಬೇಕಲ್ಲ? ಹೋಗಲಿ, ನಿಮ್ಮ ಹಸ್ತದಲ್ಲಿ ವಿದೇಶ ಪ್ರಯಾಣದ ಯೋಗ ಇದೇಯಾ ಅಂತ ಒಮ್ಮೆ ಏಕೆ ನೋಡಿಕೊಳ್ಳಬಾರದು? ಹಸ್ತ ರೇಖೆಗಳಿಂದಲೇ ನಮ್ಮ ಯೋಗಾಯೋಗಳೇನು ಅಂತ ತಿಳಿದುಕೊಳ್ಳಬಹುದು. ಯಾವ ರೇಖೆ ಇದ್ದರೆ, ಯಾವ ಯೋಗ ಅಂತ ನಾವು ಹೇಳುತ್ತೇವೆ ಕೇಳಿ. 

ಬರೀ ಹಸ್ತದಲ್ಲಿರೋ ರೇಖೆ ನೋಡಿ ವಿದೇಶ ಪ್ರಯಾಣ ಮಾತ್ರವಲ್ಲ, ಎಷ್ಟು ಸಾರಿ ಹೋಗಿ ಫಾರಿನ್‌ಗೆ ಹೋಗಿ ಬರುವ ಯೋಗ ನಿಮಗಿದೆ ಎನ್ನುವುದನ್ನೂ ತಿಳೀಬಹುದು. ದೂರದ ಯಾತ್ರೆಯನ್ನು ಎಷ್ಟು ಬಾರಿ ಮಾಡುತ್ತಾರೆ, ಕೆಲವು ವರ್ಷಗಳ ಕಾಲ ವಿದೇಶದಲ್ಲಿದ್ದು ಮರಳುತ್ತಾರೋ ಅಥವಾ ಅಲ್ಲಿಯೇ ಆ ವ್ಯಕ್ತಿ ಸಾಯ್ತಾನೋ ಎಂಬುದೂ ಗೊತ್ತಾಗುತ್ತೆ. ಹಸ್ತರೇಖೆ ಯೋಗ ತಿಳಿಯೋದು ಹೇಗೆ? ಈಗಲೇ ನೀವೂ ನಿಮ್ಮ ಕೈ ಚೆಕ್ ಮಾಡಿ ಕೊಳ್ಳಿ.

Palmistry: ನಿಮಗೆಷ್ಟು ಮಕ್ಕಳ ಭಾಗ್ಯ? ಅದರಲ್ಲಿ ಗಂಡೆಷ್ಟು ಹೆಣ್ಣೆಷ್ಟು ತಿಳೀಬೇಕಾ?

ಹೇಗಿರುತ್ತೆ ಹಸ್ತ ರೇಖೆ?
• ಹೃದಯ ರೇಖೆ: ಕಿರು ಬೆರಳಿನ ಕೆಳಗೆ ಆರಂಭವಾಗಿ ತೋರು ಬೆರಳೆಡೆಗೆ ಹೋಗಿರುವ ರೇಖೆಯೇ ಹೃದಯ ರೇಖೆ.
• ಜೀವನ ರೇಖೆ: ಹೆಬ್ಬೆರಳು ಹಾಗೂ ತೋರು ಬೆರಳ ಮಧ್ಯದಿಂದ ಆರಂಭವಾಗಿ ಮಣಿಕಟ್ಟಿನ ಕಡೆ ಹೋಗಿರುವ ರೇಖೆ ಜೀವನ ರೇಖೆ.
• ಮಸ್ತಿಷ್ಕ ರೇಖೆ: ಜೀವನ ರೇಖೆ ಮೇಲೆ ಇರುತ್ತೆ ಮಸ್ತಿಷ್ಕ ರೇಖೆ.
• ಭಾಗ್ಯ ರೇಖೆ: ಹಸ್ತದ ಮಧ್ಯ ಭಾಗದಲ್ಲಿ ಅಂದರೆ ಮಣಿಕಟ್ಟಿನಿಂದ ಶುರುವಾಗಿ, ಮಧ್ಯದ ಬೆರಳಿನ ಕಡೆಗೆ ಹೋದ ರೇಖೆ ಭಾಗ್ಯ ರೇಖೆ.

ವಿದೇಶ ಯೋಗ ಯಾವಾಗ?
- ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದಾದರೂ ರೇಖೆ ಚಂದ್ರ ಪರ್ವತದಿಂದ ಹೊರಟು ಭಾಗ್ಯ ರೇಖೆಯನ್ನು ತುಂಡಾಗಿಸಿ, ಜೀವನ ರೇಖೆಯನ್ನು ಮುಟ್ಟಿದರೆ ಆ ವ್ಯಕ್ತಿಗಳು ವಿವಿಧ ದೇಶಗಳ (Country) ಯಾತ್ರೆ ಮಾಡುತ್ತಾರೆ.
- ಜೀವನ ರೇಖೆಯು ಸುತ್ತಾಡಿ ಚಂದ್ರ ಪರ್ವತವನ್ನು ಮುಟ್ಟಿದರೆ ಅಂತಹ ವ್ಯಕ್ತಿಗಳು ವಿಶ್ವದ (World) ಮೂಲೆ ಮೂಲೆಗಳನ್ನು ಸುತ್ತಾಡಿ ಬರುತ್ತಾರೆ. ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗಳ ಮೃತ್ಯು ಸಹ ಜನ್ಮ ಸ್ಥಾನದಿಂದ ಬಹಳ ದೂರದಲ್ಲಿ ಆಗುತ್ತದೆ.
- ಮಣಿಬಂಧದಿಂದ ಹೊರಟು ಮಂಗಳ ಪರ್ವತದ ಕಡೆ ಯಾವುದಾದರೂ ರೇಖೆ ಬಂದರೆ, ಆ ವ್ಯಕ್ತಿಗಳು ಹಲವು ಸಮುದ್ರ ಪ್ರಯಾಣ ಮಾಡುತ್ತಾರೆ. ಇಂಥ ವ್ಯಕ್ತಿಗಳು ನೌಕಾ ಪಡೆಗಳಲ್ಲಿ (Navy) ಸೇವೆ ಸಲ್ಲಿಸಬಹುದು. 
- ಮಣಿಬಂಧಕ್ಕಿಂತ ಮೇಲೆ ಚಂದ್ರ ಪರ್ವತದವರೆಗೆ ಯಾವುದಾದರೂ ರೇಖೆ ಹಾದು ಹೋದರೆ, ಆ ವ್ಯಕ್ತಿಗಳ ಎಲ್ಲ ಪ್ರಯಾಣಗಳು ಸುಗಮವಾಗಿರುತ್ತವೆ. ಈ ರೀತಿಯ ರೇಖೆಗಳನ್ನು ಹೊಂದಿರುವವರ ಜೀವನದಲ್ಲಿ ವಿದೇಶ ಯಾತ್ರೆಯ ಅವಕಾಶ (Opportunities) ಅನಾಯಾಸವಾಗಿ ಬರುತ್ತವೆ. ಆದರೆ ಅವುಗಳ ಉಪಯೋಗ ಪಡೆಯಲು ಇವರಿಗೆ ಸಾಧ್ಯವಾಗುವುದಿಲ್ಲ.

ಅಂಗೈಯ ಈ 4 ರೇಖೆ ವ್ಯಕ್ತಿಯ ಆಯಸ್ಸು, ವೃತ್ತಿ, ಸಾವಿನ ಕಾರಣ ಹೇಳುತ್ತವೆ!

- ಪ್ರಯಾಣ ರೇಖೆ ಅರ್ಧ ತುಂಡಾಗಿದ್ದರೆ, ಅವರಿಗೆ ಪ್ರಯಾಣದ ವೇಳೆ ದುರ್ಘಟನೆಗಳು ಸಂಭವಿಸಬಹುದು. ಅದೇ ರೇಖೆ ಕ್ರಾಸ್ ಆಗಿದ್ದರೂ ಅಫಘಾತದ (Accident) ಭಯ ಇರುತ್ತದೆ. ಹಸ್ತ ರೇಖೆಗಳನ್ನು ಪರಿಶೀಲಿಸಿ ವ್ಯಕ್ತಿಯ ವಿದೇಶ ಪ್ರಯಾಣ ವಿಚಾರವನ್ನು ತಿಳಿಯಬಹುದಾಗಿದ್ದು, ಇದಕ್ಕೇನಾದರೂ ಅಡೆತಡೆಗಳಿದ್ದರೂ ಅದಕ್ಕೆ ಶಾಸ್ತ್ರದಲ್ಲಿರುವ ಪರಿಹಾರ ಕಂಡುಕೊಂಡು, ಪ್ರಯಾಣಿಸುವ ಅವಕಾಶ ಇರುತ್ತದೆ, ಎಂದು ಸಮಾಧಾನದ ಸಂಗತಿ.

Latest Videos
Follow Us:
Download App:
  • android
  • ios