ಅಂಗೈಯ ಈ 4 ರೇಖೆ ವ್ಯಕ್ತಿಯ ಆಯಸ್ಸು, ವೃತ್ತಿ, ಸಾವಿನ ಕಾರಣ ಹೇಳುತ್ತವೆ!
ಜ್ಯೋತಿಷ್ಯದಲ್ಲಿ ಹಸ್ತ ಸಾಮುದ್ರಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಸಹಾಯದಿಂದ, ವ್ಯಕ್ತಿಯ ಗುಣಲಕ್ಷಣಗಳು, ಆರೋಗ್ಯ, ಸಂಪತ್ತು, ಜ್ಞಾನ, ವೃತ್ತಿಜೀವನ, ಮದುವೆಯ ಬಗ್ಗೆ ಭವಿಷ್ಯ ನುಡಿಯಬಹುದು. ಇದರ ಬಗ್ಗೆ ಹೆಚ್ಚು ತಿಳಿಯಲು ಈ ಸ್ಟೋರಿ ಓದಿ.
ಅಂಗೈಯ ಈ 4 ರೇಖೆಗಳನ್ನು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ(Palmistry) ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ರೇಖೆಗಳು ವ್ಯಕ್ತಿಯ ಜೀವನ ಮತ್ತು ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತವೆ. ಆದ್ದರಿಂದ, ಈ ರೇಖೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಭಾಗ್ಯ ರೇಖೆ (Bhagya rekha): ಜನರ ಅಂಗೈಯ ಮಧ್ಯದಲ್ಲಿ ಭಾಗ್ಯ ರೇಖೆ ಇರುತ್ತದೆ. ಇದು ಸ್ಪಷ್ಟ ಮತ್ತು ಆಳವಾಗಿದ್ದರೆ ಮತ್ತು ಮಣಿಕಟ್ಟಿನಿಂದ ಪ್ರಾರಂಭವಾಗಿ ಶನಿ ಪರ್ವತಕ್ಕೆ ಹೋದರೆ, ವ್ಯಕ್ತಿ ತುಂಬಾ ಅದೃಷ್ಟಶಾಲಿ ಎಂದರ್ಥ. ಅಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಯಶಸ್ಸು ಮತ್ತು ಉನ್ನತ ಸ್ಥಾನ ಪಡೆಯುತ್ತಾನೆ.
ಜೀವನ ರೇಖೆ: ಈ ರೇಖೆಯು ಮಣಿಕಟ್ಟಿನಿಂದ ಅಥವಾ ಅದರ ಸಮೀಪದಿಂದ ಹುಟ್ಟಿ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಅಂಗೈಯ ಅಂಚನ್ನು ಸ್ಪರ್ಶಿಸುತ್ತೆ. ಇದು ವ್ಯಕ್ತಿಯ ವಯಸ್ಸು, ಸಾವಿಗೆ (Death) ಕಾರಣ, ಜೀವನದ ಪ್ರಮುಖ ಬಿಕ್ಕಟ್ಟು ಅಥವಾ ಅಪಘಾತದ ಬಗ್ಗೆ ಹೇಳುತ್ತದೆ.
ಮೆದುಳಿನ ರೇಖೆ: ಮೆದುಳಿನ ರೇಖೆ ಅಥವಾ ಜ್ಞಾನ ರೇಖೆಯು ಅಂಗೈಯ ಎರಡನೇ ಪ್ರಮುಖ ರೇಖೆ. ತೋರು ಬೆರಳು ಮತ್ತು ಹೆಬ್ಬೆರಳಿನ ನಡುವೆ ಪ್ರಾರಂಭವಾಗುವ ಮತ್ತು ಅಂಗೈಯ ಇನ್ನೊಂದು ಭಾಗದ ಕಡೆಗೆ ಹೋಗುವ ರೇಖೆಯನ್ನು ಮೆದುಳಿನ ರೇಖೆ ಎಂದು ಕರೆಯಲಾಗುತ್ತೆ. ಈ ರೇಖೆ ವ್ಯಕ್ತಿಯ ಬುದ್ಧಿವಂತಿಕೆ (Intelligence), ಮಾನಸಿಕ ಸ್ಥಿತಿ ಮತ್ತು ಅವನ ಆಲೋಚನೆಯ ಬಗ್ಗೆ ಹೇಳುತ್ತದೆ.
ಹೃದಯ ರೇಖೆ: ಹೃದಯ ರೇಖೆಯನ್ನು ಲವ್ ಲೈನ್ ಎಂದೂ ಕರೆಯಲಾಗುತ್ತೆ. ಈ ರೇಖೆಯು ಚಿಕ್ಕ ಬೆರಳಿನ ಕೆಳಭಾಗದಿಂದ ಪ್ರಾರಂಭವಾಗುತ್ತೆ ಮತ್ತು ತೋರುಬೆರಳಿನ ಕೆಳಗೆ ಹೋಗುತ್ತೆ. ಹೃದಯ ರೇಖೆಯು ಸಾಮಾನ್ಯವಾಗಿ ಪ್ರೀತಿಯ (Love) ಬಗ್ಗೆ ವ್ಯಕ್ತಿಯ ಮನೋಭಾವವನ್ನು ತೋರಿಸುತ್ತೆ.