Astrology Tips: ಕಾಗೆ ನಿಮ್ಮ ಮುಂದೆ ಹೀಗೆ ಮಾಡಿದ್ರೆ ಸಾವು ನಿಶ್ಚಿತ
ಕಾಗೆ ಬಗ್ಗೆ ಶಾಸ್ತ್ರದಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಕಾಗೆ ಕೂಗಿದ್ರೆ ಏನರ್ಥ, ಕಾಗೆ ನೀರು ಕುಡಿದ್ರೆ ಏನರ್ಥ ಎಂಬುದನ್ನೆಲ್ಲ ಹೇಳಲಾಗಿದೆ. ಕಾಗೆಯನ್ನು ಪೂರ್ವಜರು ಹಾಗೂ ಶನಿಗೆ ಹೋಲಿಕೆ ಮಾಡಲಾಗಿದೆ. ಮನೆಯಲ್ಲಿ ಯಾವ ತೊಂದರೆ ಬರಲಿದೆ ಎನ್ನುವುದ್ರಿಂದ ಹಿಡಿದು ಹಣದ ಆಗಮನದವರೆಗೆ ಅನೇಕ ಸೂಚನೆಯನ್ನು ಕಾಗೆ ನೀಡುತ್ತದೆ.
ಕಾಗೆ ಮನೆ ಮುಂದೆ ಬಂದು ಕೂಗಿದ್ರೆ ಇಂದು ಯಾರೋ ಮನೆಗೆ ಬರ್ತಾರೆ ಎಂದು ಹಿರಿಯರು ಹೇಳಿರೋದನ್ನು ನೀವು ಕೇಳಿರಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಗೆ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಕಾಗೆ ಶನಿ ಮತ್ತು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿಯನ್ನು ಶಾಂತಗೊಳಿಸಲು ಹಾಗೂ ಪೂರ್ವಜರು ಸದಾ ಖುಷಿಯಾಗಿರಬೇಕೆಂದ್ರೆ ಕಾಗೆಗೆ ಆಹಾರ ನೀಡ್ಬೇಕು ಎನ್ನುವ ನಂಬಿಕೆಯಿದೆ. ಶನಿ ದೋಷ ಬರಬಾರದು ಎಂದ್ರೆ ಎಂದೂ ಕಾಗೆಯನ್ನು ಹೊಡೆಯಲು ಹೋಗ್ಬೇಡಿ. ಮನೆ ಛಾಚಣಿ ಮೇಲೆ ಕಾಗೆ ನೀರು ಕುಡಿತಾ ಇದೆ ಎಂದಾದ್ರೆ ಅದನ್ನು ಓಡಿಸುವ ಪ್ರಯತ್ನ ಮಾಡ್ಬೇಡಿ ಎನ್ನುತ್ತದೆ ಶಾಸ್ತ್ರ. ಬರೀ ಮನೆಗೆ ಅತಿಥಿ ಬರ್ತಾರೆ ಎನ್ನುವುದು ಮಾತ್ರವಲ್ಲದೆ ಕಾಗೆ ಕೂಗು ಹಾಗೂ ಅದು ಮಾಡುವ ಕೆಲಸ, ಅನೇಕ ಸಂಕೇತವನ್ನು ನೀಡುತ್ತದೆ. ಅದ್ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.
ಕಾಗೆ (Crow) ಏನು ಮಾಡಿದ್ರೆ ಏನು ಅರ್ಥ? :
ಮನೆ ಅಂಗಳಕ್ಕೆ ಬಂದು ನೀರು (Water) ಕುಡಿದ್ರೆ : ಮನೆಯ ಅಂಗಳದಲ್ಲಿ ಇಟ್ಟಿರುವ ಯಾವುದೇ ನೀರು ತುಂಬಿದ ಪಾತ್ರೆಯ ಮೇಲೆ ಕಾಗೆ ಬಂದು ಕುಳಿತರೆ ಅದು ಧನ ಲಾಭವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಹೊಸ ಆದಾಯದ ಮೂಲ ನಿಮಗೆ ಸಿಗಲಿದೆ ಎಂಬ ಸೂಚನೆಯಾಗಿದೆ. ಕುಟುಂಬ (Income) ದಲ್ಲಿ ಸಂಪತ್ತು ಮನೆ ಮಾಡಲಿದೆ ಎಂಬ ಸಂಕೇತವಾಗಿದೆ.
ಆಹಾರವನ್ನು (Food) ಕಾಗೆ ಬಾಯಲ್ಲಿಟ್ಟುಕೊಂಡ್ರೆ ಏನು ಸಂಕೇತ ? : ನಿಮ್ಮ ಮನೆ ಅಂಗಳದಲ್ಲಿ ಅಥವಾ ಮೇಲ್ಛಾವಣಿ ಮೇಲೆ, ಬಾಯಲ್ಲಿ ಆಹಾರವನ್ನಿಟ್ಟುಕೊಂಡ ಕಾಗೆ ಕುಳಿತಿದ್ರೆ ನಿಮ್ಮ ಆಸೆ ಶೀಘ್ರವೇ ಈಡೇರಲಿದೆ ಎಂಬ ಸೂಚನೆಯಾಗಿದೆ.
ಕಾಗೆಯ ಮಧುರ ಧ್ವನಿ : ಕಾಗೆ ಮಧುರ ಧ್ವನಿಯಲ್ಲಿ ಕೂಗಿದ್ರೆ ನಿಮ್ಮ ಹಾಗೂ ಸಂಗಾತಿ ಮಧ್ಯೆ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂಬ ಸೂಚನೆಯಾಗಿದೆ. ಒಂದ್ವೇಳೆ ಕರ್ಕಶವಾಗಿ ಕಾಗೆ ಕೂಗ್ತಿದ್ದರೆ ಮುಂದೆ ಬರುವ ಯಾವುದೋ ತೊಂದರೆ ಸಂಕೇತವೆಂದು ನೀವು ಭಾವಿಸಬಹುದು.
ಕಾಗೆಗಳ ಮಧ್ಯೆ ಜಗಳ : ನಿಮ್ಮ ಮನೆ ಮುಂದೆ ಅಥವಾ ಅಂಗಳದಲ್ಲಿ ಬಂದು ಕಾಗೆಗಳು ಜಗಳ ಮಾಡ್ತಿದ್ದರೆ ಮನೆಯ ಯಜಮಾನನಿಗೆ ತೊಂದರೆ ಕಾದಿದೆ ಎಂಬ ಸೂಚನೆಯಾಗಿದೆ.
ರಾಹು ಕೇತು ದೋಷದಿಂದ ಮುಕ್ತರಾಗಲು Pitru Pakshaದಲ್ಲಿ ಈ ಕೆಲಸ ಮಾಡಿ..
ಕೆಂಪು ಬಣ್ಣದ ವಸ್ತು : ಒಂದ್ವೇಳೆ ಬೆಳ್ಳಂಬೆಳಿಗ್ಗೆ ಕಾಗೆ ನಿಮ್ಮ ಮುಂದೆ ಹಾರುತ್ತ ಕೆಂಪು ಬಣ್ಣದ ವಸ್ತುವನ್ನು ಕೆಳಗೆ ಹಾಕಿದ್ರೆ ನಿಮಗೆ ಸಂಕಷ್ಟವಿದೆ ಎಂಬ ಸೂಚನೆ. ನೀವು ಶೀಘ್ರವೇ ಜೈಲು ಪಾಲಾಗುವ ಸಾಧ್ಯತೆಯಿದೆ ಎಂದರ್ಥ.
ಯಾವ ರಾಶಿಯವರಿಗೆ ಯಾವ ಉದ್ಯೋಗ ಬೆಸ್ಟ್? ಇಲ್ಲಿದೆ ಲಿಸ್ಟ್
ಯಾವುದು ಶುಭ? ಯಾವುದು ಅಶುಭ? :
ಕಾಗೆಯು ಎಡಭಾಗದಿಂದ ಹಾದು ಹೋದ್ರೆ ಪ್ರಯಾಣ ಸುಗಮವಾಗಿ ಪೂರ್ಣಗೊಳ್ಳುತ್ತದೆ.
ಅದೇ ಕಾಗೆ ಹಿಂದಿನಿಂದ ಬಂದರೆ ವಲಸಿಗರಿಗೆ ಲಾಭ ಎಂಬ ಸೂಚನೆ.
ಒಂದ್ವೇಳೆ ಬಲಭಾಗದಿಂದ ಹಾರಿ ಎಡಭಾಗಕ್ಕೆ ಬಂದು ಸಂತೋಷಪಟ್ಟರೆ ನಿಮ್ಮ ಪ್ರಯಾಣದಲ್ಲಿ ಯಶಸ್ಸು ಸಿಗುತ್ತದೆ ಎಂದರ್ಥ. ಕತ್ತೆಯ ಹಿಂಭಾಗದಲ್ಲಿ ಕಾಗೆ ಕುಳಿತಿದ್ದನ್ನು ಕಂಡ್ರೆ ಶತ್ರುಗಳ ಭಯದ ಸೂಚನೆಯಾಗಿದೆ.
ಹಸುವಿನ ಬಾಲದ ಮೇಲೆ ಕಾಗೆ ಕುಳಿತರೆ ಭಯ ಕಾಡಲಿದೆ ಎಂದರ್ಥ.
ಒಣಗಿದ ಮರದ ಮೇಲೆ ಕಾಗೆ ಕುಳಿತಿರುವುದು ನಿಮ್ಮ ಕಣ್ಣಿಗೆ ಬಿದ್ರೆ ಅದು ರೋಗದ ಲಕ್ಷಣ.
ಕಾಗೆ ತನ್ನ ರೆಕ್ಕೆಗಳನ್ನು ಕೀಳ್ತಿದ್ದರೆ ಅದು ಸಾವಿನ ಸೂಚನೆಯಾಗಿದೆ.
ಕಾಗೆ ತಲೆಯ ಮೇಲೆ ಎಲುಬಿನ ತುಂಡನ್ನು ಬೀಳಿಸಿದರೆ ಆ ವ್ಯಕ್ತಿಯ ಸಾವು (Death) ಹತ್ತಿರ ಬಂದಿದೆ ಎಂಬ ಸೂಚನೆಯಾಗಿದೆ.
ಕಾರಣವಿಲ್ಲದೆ ಕಾಗೆಗಳು ಒಂದು ಜಾಗದಲ್ಲಿ ಸೇರಿ, ಕರ್ಕಶ ಶಬ್ಧ ಮಾಡ್ತಿದ್ದರೆ ಆ ಸ್ಥಳದಲ್ಲಿ ಆಹಾರ, ಧನ ನಷ್ಟವಾಗಲಿದೆ ಹಾಗೂ ಜನರಿಗೆ ಹಾನಿಯಾಗಲಿದೆ ಎಂಬ ಸೂಚನೆಯಾಗಿದೆ.