Asianet Suvarna News Asianet Suvarna News

Aksharabhyasam: ನಿಮ್ಮ ಪುಟ್ಟ ಕಂದನಿಗೆ ಅಕ್ಷರಾಭ್ಯಾಸ ಮಾಡಿಸಿದ್ರಾ?

ಜ್ಞಾನದ ದೇವತೆ ತಾಯಿ ಸರಸ್ವತಿಯ ಆಶೀರ್ವಾದದಿಂದ ವಿದ್ಯೆ ಆರಂಭಿಸುವ ಧಾರ್ಮಿಕ ಪ್ರಕ್ರಿಯೆಯೇ ಅಕ್ಷರಾಭ್ಯಾಸ. ಇದನ್ನು ಯಾವಾಗ ಆರಂಭಿಸಬೇಕು, ಪೂಜಾ ವಿಧಿಗಳೇನು, ಅಕ್ಷರಾಭ್ಯಾಸಕ್ಕೆ ಉತ್ತಮ ದೇವಾಲಯಗಳು ಯಾವುವು ಎಂಬ ವಿವರಗಳನ್ನು ನೋಡೋಣ.

How and where to perform Aksharabhyasam skr
Author
Bangalore, First Published Feb 2, 2022, 10:20 AM IST | Last Updated Feb 2, 2022, 10:20 AM IST

ಪುಟ್ಟ ಮಗು ಜಗತ್ತಿಗೆ ಕಣ್ಬಿಟ್ಟ ಕ್ಷಣದಿಂದಲೇ ಅದರ ಕಲಿಕೆ ಆರಂಭವಾಗಿರುತ್ತದೆ. ಕಣ್ಣಾಡಿಸುವುದು, ನಗುವುದು, ಕೂರುವುದು, ನಿಲ್ಲುವುದು, ಚಪ್ಪಾಳೆ ತಟ್ಟುವುದು, ಮಾತು ಎಲ್ಲವೂ ಮಗುವಿಗೆ ಕಲಿಕೆಯೇ. ಇವೆಲ್ಲ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಯಿತು. ಇದರ ಜೊತೆಗೇ ದೊಡ್ಡವರನ್ನು ನೋಡಿ ಕ್ಷಣಕ್ಷಣವೂ ಸಾಕಷ್ಟು ಕಲಿಯುತ್ತಲೇ ಇರುತ್ತದೆ. ಇಷ್ಟೆಲ್ಲ ಆಗಿ ಜ್ಞಾನಾರ್ಜನೆಗೆ ಸಜ್ಜಾಗುವಾಗ ಎರಡ್ಮೂರು ವರ್ಷಗಳು ಕಳೆದು ಹೋಗಿರುತ್ತವೆ. ಹಾಗಾಗಿಯೇ ಮಗುವಿಗೆ 2 ವರ್ಷದ ನಂತರ 4 ವರ್ಷದೊಳಗೆ ಅಕ್ಷರಾಭ್ಯಾಸ ಮಾಡಿಸುವ ಕ್ರಮ ಇದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ವಿದ್ಯೆಯನ್ನು ಆರಂಭಿಸುವಾಗ ವಿದ್ಯಾಧಿದೇವತೆ ಸರಸ್ವತಿಯ ಆಶೀರ್ವಾದ ಪಡೆದೇ ಮುಂದುವರಿಯಬೇಕು. ಈ ವಿದ್ಯಾರಂಭವನ್ನು ಮನೆಯಲ್ಲಿಯೇ ಆದರೂ ಸರಿ, ಇಲ್ಲವೇ ದೇವಸ್ಥಾನದಲ್ಲಾದರೂ ಸರಿ ಕ್ರಮವಾಗಿ ಮಾಡಿಸಬೇಕು. 
ಅಕ್ಷರಾಭ್ಯಾಸ(Aksharabhyasam) ಪೂಜೆಯ ವಿಧಿ ವಿಧಾನಗಳೇನು, ಯಾವೆಲ್ಲ ದೇವಾಲಯ(temple)ಗಳಲ್ಲಿ ಮಾಡಬಹುದು, ಯಾವ ದಿನಗಳು ಉತ್ತಮ ಇತ್ಯಾದಿ ವಿಷಯವನ್ನು ನೋಡೋಣ. 

ಈ ದಿನಗಳು ಒಳ್ಳೆಯದು
ಅಕ್ಷರಾಭ್ಯಾಸಕ್ಕೆ ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ) ಅತ್ಯುತ್ತಮ ದಿನ. ಏಕೆಂದರೆ ಅಂದು ಸರಸ್ವತಿ(Goddess Saraswati) ಮಾತೆಯ ಜನ್ಮದಿನ. ಈ ವರ್ಷ ಇದು ಫೆಬ್ರವರಿ 6ರಂದು ಬರುತ್ತದೆ. ಇದಲ್ಲದೆ, ದಸರ ಸಂದರ್ಭದಲ್ಲಿ ಮೂಲ ನಕ್ಷತ್ರದ ದಿನ ಕೂಡಾ ವಿದ್ಯಾರಂಭಕ್ಕೆ ಅತ್ಯುತ್ತಮವಾಗಿದೆ. ಈ ಎರಡು ದಿನಗಳಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಗುವು ಅತ್ಯಂತ ಹೆಚ್ಚು ಜ್ಞಾನ ಪಡೆಯುತ್ತದೆ ಹಾಗೂ ಉದ್ಯೋಗರಂಗದಲ್ಲಿ ಬಹಳ ಎತ್ತರಕ್ಕೇರುತ್ತದೆ ಎಂಬ ನಂಬಿಕೆ ಇದೆ. ವಸಂತ ಪಂಚಮಿಯ ದಿನ ಇಡೀ ದಿನ ಅತ್ಯುತ್ತಮವಾಗಿರುತ್ತದೆ, ಸಮಯ ನೋಡುವ ಅಗತ್ಯವಿಲ್ಲ. 
ಇನ್ನು ನವರಾತ್ರಿಯ ಪಂಚಮಿ ತಿಥಿ, ಸೂರ್ಯನ ಹುಟ್ಟಿದ ದಿನವೆಂದು ಹೇಳಲಾಗುವ ರಥಸಪ್ತಮಿಯ ದಿನ (ಈ ವರ್ಷ ಫೆ.7) ಕೂಡಾ ಅಕ್ಷರಾಭ್ಯಾಸಕ್ಕೆ ಅತ್ಯುತ್ತಮವಾಗಿದೆ. 
ಉತ್ತಮ ತಿಥಿ: 2, 3, 5, 7 ಹಾಗೂ 10. 
ಉತ್ತಮ ದಿನ: ಸೋಮವಾರ(Monday), ಬುಧವಾರ(wednesday), ಗುರುವಾರ(Thursday) ಹಾಗೂ ಶುಕ್ರವಾರ(Friday)
ಉತ್ತಮ ನಕ್ಷತ್ರ: ಅಶ್ವಿನಿ, ಪುನರ್ವಸು, ಪುಶ್ಯಮಿ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧ, ಶ್ರವಣ ಹಾಗೂ ರೇವತಿ.
ಉತ್ತಮ ಲಗ್ನ: ಮೇಷ, ತುಲಾ, ಮಕರ, ಕರ್ಕಾಟಕ

ಅಕ್ಷರಾಭ್ಯಾಸಕ್ಕೆ ತಾರಾಬಲ ನೋಡುವುದು ಬಹಳ ಮುಖ್ಯವಾಗಿದೆ. ಸಂಪತ್ ತಾರಾ, ಕ್ಷೇಮ ತಾರಾ, ಸಾಧನಾ ತಾರಾ, ಮಿತ್ರ ತಾರ, ಪರಮ ಮಿತ್ರ ತಾರಾ ನಕ್ಷತ್ರ ದಿನಗಳು ಅಕ್ಷರಾಭ್ಯಾಸಕ್ಕೆ ಉತ್ತಮವಾಗಿದ್ದು, ಜನ್ಮತಾರಾದಂದು ಮಾಡಬಾರದು. ಜೊತೆಗೆ, ಶುಕ್ಲ ಪಕ್ಷದಲ್ಲಿಯೇ ಅಕ್ಷರಾಭ್ಯಾಸ ಮಾಡಬೇಕು. 

ಯಾವ ತಿಂಗಳು?
ಗಂಡು ಮಗುವಿಗೆ ಸಮ ಸಂಖ್ಯೆಯ ತಿಂಗಳಲ್ಲಿಯೂ, ಹೆಣ್ಣು ಮಗುವಿಗೆ ಬೆಸ ಸಂಖ್ಯೆಯ ತಿಂಗಳ(month)ಲ್ಲೂ ವಿದ್ಯಾರಂಭ ಮಾಡಿಸಬೇಕು. ಉತ್ತರಾಯಣದಲ್ಲೇ ಮಾಡುವುದು ಉತ್ತಮ. 

Temple Special: ಇಲ್ಲಿನ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ವಾಪಸ್ ಬರೋದು ಗ್ಯಾರಂಟಿ!

ಯಾವ ದೇವಾಲಯ?
ಪೂಜೆಯನ್ನು ಸರಸ್ವತಿ ದೇವಾಲಯ ಅಥವಾ ದಕ್ಷಿಣಾಮೂರ್ತಿ ದೇವಾಲಯ, ಹಯಗ್ರೀವ ಸ್ಮಾಮಿ ದೇವಾಲಯದಲ್ಲಿ ಮಾಡಿಸಬಹುದು. ಕರ್ನಾಟಕದಲ್ಲಿ ಶೃಂಗೇರಿ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಾಲಯ ಅಕ್ಷರಾಭ್ಯಾಸಕ್ಕೆ ಪ್ರಸಿದ್ಧಿ ಪಡೆದಿವೆ. 

Best Preachings: ಭೀಷ್ಮ ಪಿತಾಮಹ ಹೇಳಿದ ಜೀವನ ಪಾಠಗಳು

ಅಕ್ಷರಾಭ್ಯಾಸ ಪೂಜಾ ವಿಧಾನ(Pooja Procedure)
ಸ್ಲೇಟ್, ಬಳಪ, ಬಿಳಿ ಹೂವುಗಳು ಹಾಗೂ ಹಾರ, ಅಕ್ಷತೆ ರೆಡಿ ಇಟ್ಟುಕೊಳ್ಳಿ. 
ಮೊದಲು ಗಣಪತಿ ಪೂಜೆ, ನಂತರ ಸರಸ್ವತಿ ಪೂಜೆ, ವಿಷ್ಣು ಹಾಗೂ ಲಕ್ಷ್ಮೀ ಪೂಜೆ ನಡೆಸಬೇಕು. ಬಳಿಕ ಶಿವ ಹಾಗೂ ಗೌರಿಯ ಪೂಜೆ ನಡೆಸಬೇಕು. ತಂದೆಯು ಮಗುವಿನ ಕೈ ಹಿಡಿದು ಸ್ಲೇಟ್ ಮೇಲೆ ಓಂ, ಶ್ರೀ, ದೇವರ ಹೆಸರುಗಳು, ಮಂತ್ರವನ್ನು ಬರೆಸಬೇಕು. 
ನಂತರ ಗುರುವು ಪೂರ್ವಕ್ಕೆ ಮುಖ ಹಾಕಿ ಕೂರಬೇಕು. ತಟ್ಟೆಯ ಮೇಲೆ ಅಕ್ಕಿ ಹರಡಿ ಅದರ ಮೇಲೆ ಬಂಗಾರದ ಆಭರಣದಲ್ಲಿ ಅಕ್ಷರಗಳನ್ನು ಬರೆಯಬೇಕು. ಶಿಷ್ಯನು ಗುರುಗೆ ಅಭಿಮುಖವಾಗಿ ಕೂರಬೇಕು. ಅಲ್ಲಿಗೆ ಪೂಜೆ ಮುಗಿಯುತ್ತದೆ. ಅಕ್ಷರಾಭ್ಯಾಸ ಸಂದರ್ಭದಲ್ಲಿ ಎಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿರಬೇಕು. 

Latest Videos
Follow Us:
Download App:
  • android
  • ios