Asianet Suvarna News Asianet Suvarna News

Best Preachings: ಭೀಷ್ಮ ಪಿತಾಮಹ ಹೇಳಿದ ಜೀವನ ಪಾಠಗಳು

ಇಚ್ಚಾಮರಣಿಯಾಗಿದ್ದ ಭೀಷ್ಮರು ತಮ್ಮ ಶರಶಯ್ಯೆಯ ಮೇಲೆ ಮಲಗಿದಾಗ ಹೇಳಿದ ಜೀವನ ಪಾಠಗಳು ಸಾರ್ವಕಾಲಿಕವಾಗಿಯೂ ಸಲ್ಲುತ್ತವೆ. 

Life lessons given by Bhishma Pitamah to adopt skr
Author
Bangalore, First Published Feb 1, 2022, 1:14 PM IST | Last Updated Feb 1, 2022, 1:14 PM IST

ಮಹಾಭಾರತ(Mahabharat)ದಲ್ಲಿ ಭೀಷ್ಮರದು ಪ್ರಮುಖ ಹೆಸರು. ಕಾರಣಾಂತರಗಳಿಂದ ಕೌರವರ ಪರವಿದ್ದರೂ ಧರ್ಮದ ಪರ ಮನಸ್ಸಿಟ್ಟವರು ಭೀಷ್ಮ(Bhishma Pitamah)ರು. ಅವರು ಇಚ್ಚಾ ಮರಣಿಯಾಗಿದ್ದು ಸುಮಾರು 128 ವರ್ಷಗಳ ಕಾಲ ಬದುಕಿದ್ದರು. ಕಡೆಗೂ ಶರಶಯ್ಯೆಯಲ್ಲಿ ಮಲಗಿ, ದಕ್ಷಿಣಾಯಣ ಕಳೆದು ಉತ್ತರಾಯಣ ಬರುವವರೆಗೆ ಕಾದು, ತಾವು ಬಯಸಿದ ಸಮಯದಲ್ಲೇ ಇಹಲೋಕ ತ್ಯಜಿಸಿದರು. ಇವರ ಧೀರ್ಘಾಯುಷ್ಯದ ಗುಟ್ಟು ಹಾಗೂ ಅನುಭವ ಪಾಠಗಳನ್ನು ಈ ಶರಶಯ್ಯೆಯಲ್ಲಿ ಮಲಗಿದ್ದಾಗ ಯುಧಿಷ್ಠಿರನಿಗೆ ಹೇಳಿದರು. ಆ ಜೀವನ ಪಾಠಗಳು ಸಾರ್ವಕಾಲಿಕವಾಗಿಯೂ ಅನ್ವಯವಾಗುತ್ತವೆ. ಅವೇನು ತಿಳಿದು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳೋಣ. 

ಎಲ್ಲ ಮನುಷ್ಯರಲ್ಲಿ ಈ ಗುಣಗಳಿರಬೇಕು.

  • ಸರಳವಾಗಿರುವುದು.
  • ದೈಹಿಕವಾಗಿ, ಮಾನಸಿಕವಾಗಿ ಸಂಪೂರ್ಣ ಶುದ್ಧವಾಗಿರುವುದು.
  • ಸುಳ್ಳು(lie) ಹೇಳದೆ ಪ್ರಾಮಾಣಿಕವಾಗಿರುವುದು. 
  • ಕ್ಷಮಿಸುವುದು(forgiving)
  • ಕೋಪ(anger)ವನ್ನು ನಿಗ್ರಹಿಸಿಕೊಳ್ಳುವುದು.
  • ನೈತಿಕ ಸಂಬಂಧದಿಂದ ಮಾತ್ರ ಮಕ್ಕಳನ್ನು ಪಡೆಯುವುದು.
  • ಆಸ್ತಿಯನ್ನು ಸಮಾನವಾಗಿ ಹಂಚುವುದು. 
  • ಸೇವಕರನ್ನು ಬೆಂಬಲಿಸುವುದು. 

ಕ್ಷಮಿಸುವುದನ್ನು ಕಲಿಯುವುದು
ಕೋಪದಿಂದ ಕಳಚಿಕೊಳ್ಳಬೇಕು ಎಂದರೆ ಕ್ಷಮಿಸುವುದನ್ನು ಕಲಿಯಬೇಕು. ಮನಸ್ಸಿಗೆ ಶಾಂತಿ ಬೇಕೆಂದರೆ ಎಲ್ಲಕ್ಕಿಂತ ಮೊದಲು ಕ್ಷಮಿಸುವುದನ್ನು ಕಲಿಯಬೇಕು. 

ಕೆಲಸ ಪೂರ್ಣಗೊಳಿಸುವುದು(Work completion)
ಹಿಡಿದ ಪ್ರತಿ ಕೆಲಸವನ್ನೂ ಸಂಪೂರ್ಣಗೊಳಿಸಬೇಕು. ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬಾರದು. ಅರ್ಧಕ್ಕೆ ಬಿಟ್ಟ ಕೆಲಸವು ನಕಾರಾತ್ಮಕತೆಯನ್ನು ಸೂಚಿಸುತ್ತದೆ. 

ಈ ಗುಣ(qualities)ಗಳನ್ನು ತೋರುವ ಜನರಿಂದ ದೂರವಿರಬೇಕು.

  • ಆಕ್ರಮಣಶೀಲ(Aggressive)ರು ಯಾವುದೇ ಸಂದರ್ಭವನ್ನು ನೆಗೆಟಿವ್ ಆಗಿ ಬದಲಾಯಿಸಬಲ್ಲರು. ಶಾಂತ ವಾತಾವರಣವನ್ನು ಕದಡಿಸಬಲ್ಲರು. ಹಾಗಾಗಿ, ಆಕ್ರಮಣಶೀಲರಿಂದ ದೂರವಿರಿ.
  • ಉದಾಸೀನತೆ ಇರುವವರು, ಸೋಮಾರಿ(Laziness)ಗಳನ್ನು ಹತ್ತಿರವಿಟ್ಟರೆ ಅವರಿಂದ ಕೆಲಸಗಳು ಕೆಡುವ ಜೊತೆಗೆ, ನಮಗೂ ಸೋಮಾರಿತನ ಅಂಟುತ್ತದೆ. 
  • ಸ್ವಾರ್ಥಿಗಳಿಗೆ ತಮ್ಮ ಹೊರತಾಗಿ ಮತ್ಯಾವುದೂ ದೊಡ್ಡದಾಗಿ ಕಾಣಿಸುವುದಿಲ್ಲ. 
  • ಹೊಟ್ಟೆಕಿಚ್ಚು ಹಾಗೂ ಇತರರನ್ನು ದ್ವೇಷಿಸುವವರ ಸಹವಾಸವನ್ನು ಎಂದಿಗೂ ಮಾಡಬೇಡಿ. 

    Zodiac Traits: ರಾಶಿ ಅನುಸಾರ, ನಿಮ್ಮನ್ನು ಜನ ದ್ವೇಷಿಸೋದು ಈ ಒಂದು ಕಾರಣಕ್ಕೆ!

ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ.
ಜೀವನದಲ್ಲಿ ಬದಲಾವಣೆಯೊಂದೇ ನಿರಂತರ. ಕೇವಲ ವಸ್ತುಗಳಲ್ಲ, ಜನರೂ ಬದಲಾಗುತ್ತಾರೆ. ಹಾಗಾಗಿ, ಬದುಕಿನಲ್ಲಿ ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ. ಅದರಿಂದ ನೋವು, ಸಂಕಟ ಹೆಚ್ಚುತ್ತದೆ. 

ಪರಿಶ್ರಮವಿಲ್ಲದೆ ಯಾವುದೂ ಲಭಿಸದು(Work hard)
ಜೀವನದುದ್ದಕ್ಕೂ ನಮ್ಮನ್ನು ನಾವು ಸಾಧ್ಯವಾದಷ್ಟು ಉತ್ತಮಗೊಳಿಸಿಕೊಳ್ಳುತ್ತಲೇ ಇರಬೇಕು. ಕಲಿಕೆ ನಿರಂತರವಾಗಿರಬೇಕು. ನಮ್ಮ ಹಾಗೂ ನಮ್ಮವರ ಸಂತೋಷಕ್ಕಾಗಿ ಸದಾ ಕಷ್ಟ ಪಟ್ಟು ಕೆಲಸ ಮಾಡಬೇಕು. ಕೂಡಿಡಬೇಕು. ದಾನ ಮಾಡಬೇಕು. 

ರಕ್ಷಣೆ(Protection)
ವ್ಯಕ್ತಿಯು ತನ್ನನ್ನು, ತನ್ನ ಕುಟುಂಬವನ್ನು, ತನ್ನ ಗೆಳೆಯರನ್ನು, ಊರನ್ನು, ದೇಶವನ್ನು ಅಗತ್ಯ ಬಿದ್ದಾಗಲೆಲ್ಲ ರಕ್ಷಿಸಬೇಕು. ಅದಕ್ಕಾಗಿ ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಬೇಕು. 

ಇಂದು Purandara Dasa ಪುಣ್ಯತಿಥಿ, ಕರ್ನಾಟಕ ಸಂಗೀತ ಪಿತಾಮಹನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು

ಸಹಾನುಭೂತಿ
ಸದಾ ಮತ್ತೊಬ್ಬರ ಬಗ್ಗೆ, ಅವರ ಭಾವನೆಗಳ ಬಗ್ಗೆ, ಪ್ರಾಣಿಪಕ್ಷಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು. 

ಹಣ(money)ದ ವಿಚಾರದಲ್ಲಿ ಎಚ್ಚರ
ವ್ಯಕ್ತಿಯು ಹಣದ ವಿಚಾರದಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ತನ್ನ ಆಸ್ತಿಪಾಸ್ತಿ ಎಷ್ಟಿದೆ, ಎಲ್ಲಿದೆ ಎಂಬುದನ್ನು ಎಷ್ಟೇ ಆಪ್ತರೊಡನೆಯೂ ಬಿಟ್ಟು ಕೊಡಬಾರದು. 
 
ನಿರೀಕ್ಷೆಗಳಿರಕೂಡದು.

ಮತ್ತೊಬ್ಬರಿಂದ ಹೆಚ್ಚು ನಿರೀಕ್ಷೆ(expectation) ಇದ್ದಷ್ಟೂ ನಿರಾಸೆ, ದುಃಖವೂ ಹೆಚ್ಚುತ್ತದೆ. ಹಾಗಾಗಿ ಬದುಕಿನಲ್ಲಿ ನೆಮ್ಮದಿ ಬೇಕೆಂದರೆ ನಿರೀಕ್ಷೆಗಳಿಂದ ಮುಕ್ತರಾಗಿರಬೇಕು. 

Vastu Tips: ಮಂಚದ ಕೆಳಗೆ ಜಾಗ ಇದೆ ಅಂತ ಕಂಡಿದ್ದೆಲ್ಲ ಇಟ್ಟು ಕೈ ಸುಟ್ಕೋಬೇಡಿ

ಯಾರಿಗೂ ನೋವು ನೀಡಬಾರದು
ಕೇವಲ ದೈಹಿಕವಾಗಿಯಲ್ಲ, ಮಾನಸಿಕವಾಗಿಯೂ ಜೊತೆಗಿರುವವರನ್ನು, ಯಾರನ್ನೂ ನೋಯಿಸಬಾರದು. ಒಮ್ಮೆ ಹೃದಯ ಚೂರಾದರೆ ಅದನ್ನು ಮತ್ತೆ ಕೂಡಿಸಲು ಸಾಧ್ಯವಿಲ್ಲ. ಹಾಗಾಗಿ, ಯಾರ ಹೃದಯಕ್ಕೂ ನೋವುಂಟು ಮಾಡಬಾರದು.  

Latest Videos
Follow Us:
Download App:
  • android
  • ios