Holi 2022: ಕಾಮದಹನಕ್ಕೆ ಯಾವೆಲ್ಲ ವಸ್ತು ಹಾಕ್ತಾರೆ ಗೊತ್ತಾ? ಪೂಜೆಯ ವಿಧಿವಿಧಾನಗಳಿವು..

ಹೋಳಿ ಹಬ್ಬದ ಹಿಂದಿನ ದಿನ ಕಾಮದಹನ ನಡೆಸಲಾಗುತ್ತದೆ. ಇದಕ್ಕೆ ಹೋಲಿಕಾದಹನ ಎಂಬ ಹೆಸರೂ ಇದೆ. ಈ ಕಾಮದಹನದ ಬೆಂಕಿಗೆ ಯಾವೆಲ್ಲ ವಸ್ತುಗಳನ್ನು ಹಾಕಬೇಕು ಗೊತ್ತಾ?

Holika Dahan Puja Samagri and learn how to perform the puja skr

ಕಾಮದಹನವನ್ನು ಫಾಲ್ಗುಣ ಮಾಸದ ಪೂರ್ಣಿಮ((Full Moon night) ತಿಥಿಯಂದು ರಾತ್ರಿ ಆಚರಿಸಲಾಗುತ್ತದೆ. ಹೋಲಿಕಾ ದಹನ್ ಎಂದೂ ಕರೆಯಲ್ಪಡುವ ಈ ವಿಧಿವಿಧಾನದಿಂದ ಹಬ್ಬ ಆರಂಭವಾಗುತ್ತದೆ. ಅಕ್ಕಪಕ್ಕದ ಜನರೆಲ್ಲ ಸೇರಿ ಒಂದೆಡೆ ಬೆಂಕಿ ಹಾಕುತ್ತಾರೆ. ಆಸಕ್ತಿಕರ ವಿಷಯವೆಂದರೆ ಈ ಆಚರಣೆಗೂ ವಿಷ್ಣುವಿನ ನಾಲ್ಕನೇ ಅವತಾರವಾದ ಭಗವಾನ್ ನರಸಿಂಹ(Lord Narasimha)ನಿಗೂ ಸಂಬಂಧವಿದೆ. ಹಾಗಾಗಿ, ಹೋಳಿ ಹುಣ್ಣಿಮೆಯ ದಿನ ಜನರು ನರಸಿಂಹನನ್ನು ನೆನೆಯುತ್ತಾರೆ. ಭಕ್ತ ಪ್ರಹ್ಲಾದನ ಕತೆ ಕೇಳುತ್ತಾ ಕೆಲ ಮಂತ್ರಗಳನ್ನು ಪಠಿಸುತ್ತಾರೆ. ಜೊತೆಗೆ ಅಗ್ನಿ ಮಂತ್ರಗಳನ್ನೂ ಹೇಳುತ್ತಾ ಕಾಮದಹನ ಮಾಡುತ್ತಾರೆ. ಈ ಕಾಮದಹನ(Holika Dahan)ಕ್ಕೆ ಯಾವೆಲ್ಲ ಸಾಮಗ್ರಿಗಳನ್ನು ಬಳಸುತ್ತಾರೆ ಎಂಬುದು ಗೊತ್ತೇ?

ಕಾಮದಹನದ ಪೂಜಾ ಸಾಮಗ್ರಿ
ಸಿಪ್ಪೆಸಹಿತ ತೆಂಗಿನಕಾಯಿ(A coconut with husk)
ನೀರು ತುಂಬಿದ ಕಲಶ (ದಯವಿಟ್ಟು ಸ್ಟೀಲ್ ಕಲಶವನ್ನು ತಪ್ಪಿಸಿ. ಬದಲಾಗಿ, ನೀವು ಕಂಚು, ತಾಮ್ರ ಅಥವಾ ಬೆಳ್ಳಿಯನ್ನು ಬಳಸಬಹುದು).
ಅಕ್ಷತೆ (ಇದಕ್ಕಾಗಿ ಇಡಿಯಾದ ಅಕ್ಕಿಗೆ ನೀವೇ ಶುದ್ಧ ಅರಿಶಿನ ಬೆರೆಸಿ ಸಿದ್ಧಪಡಿಸಿ)
ಎಣ್ಣೆ ದೀಪ - ಎಳ್ಳು/ಸಾಸಿವೆ ಎಣ್ಣೆ, ಹತ್ತಿ ಬತ್ತಿ, ಮತ್ತು ಹಿತ್ತಾಳೆ ಅಥವಾ ಮಣ್ಣಿನ ದೀಪ
ಅಗರಬತ್ತಿ ಮತ್ತು ಧೂಪ(Incense sticks)
ಹತ್ತಿಯ ದಾರ 
ಅರಿಶಿನ 
ಕುಂಕುಮ
ಹಸುವಿನ ಬೆರಣಿ(Cow dung cakes) ಮತ್ತು ಹಸುವಿನ ಸಗಣಿಯಿಂದ ಮಾಡಿದ ಹೋಲಿಕಾ ಮತ್ತು ಪ್ರಹ್ಲಾದನ ಮೂರ್ತಿಗಳು
ಮರದ ದಿಮ್ಮಿಗಳು
ಹೂಗಳು
ಗುಲಾಬಿ ಬಣ್ಣ
ಹೆಸರು ಬೇಳೆ
ಸಕ್ಕರೆ ಅಚ್ಚು

Holi 2022: ಕಾಮ ದಹನದ ದಿನ ಈ ಒಂದು ಕೆಲ್ಸ ಮಾಡಿ ನೋಡಿ

ಹೋಲಿಕಾ ದಹನ ಪೂಜಾ ವಿಧಿ( Puja Vidhi)
ಮೊದಲು ಗಂಗಾಜಲ ಮತ್ತು ಹಸುವಿನ ಗೋಮೂತ್ರ ಬಳಸಿ ಕಾಮ ದಹನ ಮಾಡಲು ಆಯ್ಕೆ ಮಾಡಿಕೊಂಡ ಜಾಗ ಸ್ವಚ್ಛ ಮಾಡಿ. ಯಾವಾಗಲೂ ತೆರೆದ ಮೈದಾನದಲ್ಲಿಯೇ ಈ ಆಚರಣೆ ಮಾಡಬೇಕು. ತ್ರಿಕೋನ ಆಕಾರದಲ್ಲಿ ಮರದ ದಿಮ್ಮಿಗಳನ್ನು ಹಾಗೂ ಬೆರಣಿಯನ್ನು ಹಾಕಿ ರಾಶಿ ಮಾಡಿ.
ನಂತರ ಪೂಜೆಗೆ ಯಾವುದೇ ವಿಘ್ನಗಳು ಬರದಂತೆ ಗಣಪತಿಯನ್ನು ಪೂಜಿಸಿ ಅವನ ಆಶೀರ್ವಾದ ಪಡೆದುಕೊಳ್ಳಿ. ಈಗ ಸಗಣಿಯಿಂದ ತಯಾರಿಸಿದ ಪ್ರಹ್ಲಾದ ಮತ್ತು ಹೋಲಿಕಾ ಮೂರ್ತಿಗಳನ್ನು ಅಕ್ಕ ಪಕ್ಕದಲ್ಲಿ ಇರಿಸಿ. ಪೂಜೆಯ ಆರಂಭದಲ್ಲಿ ದೀಪ ಹಚ್ಚಿರಿಸಿ. ನಂತರ ಈ ಕೆಳಗಿನ ಮಂತ್ರವನ್ನು ಪಠಿಸುವ ಮೂಲಕ ನರಸಿಂಹ ದೇವರನ್ನು ಆವಾಹಿಸಿ. 
ದಾಯಿನೇ, ಹಿರಣ್ಯಕಶಿಪೋರ್ವಕ್ಷಃ, ಶಿಲಾ-ಟಂಕ ನಖಲಯೇ ಇತೋ ನೃಸಿಂಹಃ ಪರತೋ ನರಸಿಂಹೋ,
ಯತೋ ನೃಸಿಂಹ ತತೋನೃಸಿಂಹ ತತೋನ್ಯಮಿಹೋ, ನೃಸಿಂಹಮದಿಂ ಶರಣಂ ಪ್ರಪದ್ಯೇ

ಇದರ ಅರ್ಥ ಹೀಗಿದೆ- ಪ್ರಹ್ಲಾದನನ್ನು ದುಷ್ಟರಿಂದ ರಕ್ಷಿಸಿದ, ಕಲ್ಲುಹೃದಯದ ಹಿರಣ್ಯಕಶಪುವನ್ನು ತನ್ನ ಚೂಪಾದ ಉಗುರುಗಳಿಂದ ನಿರ್ಮೂಲನೆ ಮಾಡಿದ ನರಸಿಂಹನಿಗೆ ನಾನು ನಮಸ್ಕರಿಸುತ್ತೇನೆ. 

Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ

ನರಸಿಂಹ ದೇವರ ಆಶೀರ್ವಾದವನ್ನು ಕೋರಿದ ಬಳಿಕ, ದಹನದಿಂದ ಪ್ರಹ್ಲಾದನ ವಿಗ್ರಹವನ್ನು ಹೊರ ತೆಗೆದು ಹಾಕಿ.
ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಬೂದಿಯಾಗಿ ಸುಟ್ಟು ಹೋದಾಗ ವಿಷ್ಣುವಿನ ಆಶೀರ್ವಾದವು ಹೇಗೆ ಬೆಂಕಿಯಿಂದ ಪ್ರಹ್ಲಾದನನ್ನು ರಕ್ಷಿಸಿತು ಎಂಬುದನ್ನು ವಿವರಿಸುವ ದೃಶ್ಯವನ್ನು ಈ ಆಚರಣೆಯು ಮರು ಸೃಷ್ಟಿಸುತ್ತದೆ. 
ಹೋಲಿಕಾ ಮೂರ್ತಿ, ಹೂವುಗಳು, ಧೂಪ, ಅಗರಬತ್ತಿ, ಅಕ್ಷತೆ, ಹತ್ತಿ ದಾರ, ಹೆಸರು ಬೇಳೆ, ಸಿಹಿತಿಂಡಿಗಳು, ಅರಿಶಿನ, ಕುಂಕುಮ, ತೆಂಗಿನಕಾಯಿ, ಬಣ್ಣ ಮತ್ತು ನೀರನ್ನು ಅರ್ಪಿಸಿ ನರಸಿಂಹನನ್ನು ಪೂಜಿಸಿ. ಈಗ ಹೊತ್ತಿ ಉರಿವ ಬೆಂಕಿಯನ್ನು ಮೂರು, ಐದು ಅಥವಾ ಏಳು ಬಾರಿ ಸುತ್ತಿ, ಮನಸ್ಸಿನ ಕೆಟ್ಟ ಕಾಮನೆಗಳನ್ನೆಲ್ಲ ಸುಟ್ಟು ಬೂದಿ ಮಾಡುವಂತೆ ಕೋರಿಕೊಳ್ಳಿ. 

Latest Videos
Follow Us:
Download App:
  • android
  • ios