Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ

ಹೋಳಿ ಬರೀ ಬಣ್ಣದ ಹಬ್ಬವಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೆ ಮಹತ್ವದ ಸ್ಥಾನವಿದೆ. ಸುಖ, ಶಾಂತಿ, ಆರ್ಥಿಕ ವೃದ್ಧಿ ಬಯಸುವವರು ಹೋಳಿ ದಿನ ಕೆಲವೊಂದು ಮಹತ್ವದ ಕೆಲಸಗಳನ್ನು ಮಾಡಿದ್ರೆ ಸಾಕು. ಇಷ್ಟಾರ್ಥಗಳು ಈಡೇರುತ್ತವೆ. 
 

Must Try These Vastu Remedies On Holi to bring luck prosperity

ಬಣ್ಣ(Colour)ಗಳ ಹಬ್ಬ (Festival ) ಹೋಳಿ (Holi )ಯನ್ನು ದೇಶಾದ್ಯಂತ (Country) ಸಡಗರದಿಂದ ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 18 ರ ಶುಕ್ರವಾರದಂದು ಹೋಳಿ ಹಬ್ಬ ಬಂದಿದೆ. ಈ ದಿನ ಜನರು ಪರಸ್ಪರ ಬಣ್ಣಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.  ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಈ ಮಂಗಳಕರ ದಿನದಂದು ಕೆಲವು ವಿಶೇಷ ವಾಸ್ತು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇದು ಸಾಲ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೋಳಿಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳು ಇಲ್ಲಿವೆ.

ಹೋಳಿ ದಿನ ವಾಸ್ತುದೋಷ ನಿವಾರಣೆ ಮಾಡಿ ಈ ಕೆಲಸ : 
ಆದಿಯಲ್ಲಿ ಮೊದಲು ಪೂಜಿಸಲ್ಪಡುವ ಗಣೇಶನ ಪೂಜೆ :
ಹೋಳಿ ದಿನದಂದು ಗಣಪತಿಗೆ ಪೂಜೆ ಮಾಡುವುದು ಬಹಳ ಮುಖ್ಯ. ಹೋಳಿ ಸಂದರ್ಭದಲ್ಲಿ ಗಣೇಶನಿಗೆ ತಣ್ಣನೆಯ ಜ್ಯೂಸ್ ಅರ್ಪಿಸಬೇಕು. ಇದು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಫೋಟೋ  : ಹೋಳಿ ಹಬ್ಬದಂದು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ಹಾಕಿ. ಇದರ ನಂತರ ರಾಧಾ-ಕೃಷ್ಣರ ಫೋಟೋಕ್ಕೆ ಬಣ್ಣಗಳು ಮತ್ತು ಹೂವುಗಳನ್ನು ಅರ್ಪಿಸಿ. ವಾಸ್ತು ಪ್ರಕಾರ, ಪತಿ ಮತ್ತು ಪತ್ನಿಯ ನಡುವಿನ ಸಂಬಂಧದಲ್ಲಿ ಪ್ರೀತಿ ಮತ್ತು ಮಾಧುರ್ಯ ಉಳಿಯುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

ಸೂರ್ಯ ದೇವನ ಆರಾಧನೆ : ಹೋಳಿ ದಿನದಂದು ಮುಖ್ಯ ದ್ವಾರದ ಹೊರಗೆ ಸೂರ್ಯನ ಚಿತ್ರವನ್ನು ಹಾಕಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ.

ಮನೆಯಲ್ಲಿ ಗಿಡ ಬೆಳೆಸಿ : ಹೋಳಿ ದಿನದಂದು ಮನೆಯಲ್ಲಿ ಮನಿ ಪ್ಲಾಂಟ್ ಮತ್ತು ತುಳಸಿ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಜಾತಕದಲ್ಲಿರುವ ಗ್ರಹದೋಷಗಳು ನಿವಾರಣೆಯಾಗಿ ಅದೃಷ್ಟ ನಿಮ್ಮದಾಗಲಿದೆ.

ಬಣ್ಣಗಳಲ್ಲೂ ಅಡಗಿದೆ ಅದೃಷ್ಟ : ಹೋಳಿ ಹಬ್ಬದ ದಿನ ಬಣ್ಣಗಳಿಗೆ ಮಹತ್ವವಿದೆ. ಕಂಡ ಕಂಡ ಬಣ್ಣದಲ್ಲಿ ಹೋಳಿ ಆಡುವ ಬದಲು ಕೆಲ ವಿಶೇಷ ಬಣ್ಣಗಳನ್ನು ಬಳಸಿ. ಕೆಂಪು, ಗುಲಾಬಿ, ಹಸಿರು, ಕಿತ್ತಳೆ, ಹಳದಿ ಮುಂತಾದ ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣಗಳನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಪ್ಪು, ಕಂದು ಮತ್ತು ಗಾಢ ಬಣ್ಣಗಳು ನಕಾರಾತ್ಮಕತೆಯನ್ನು ಹರಡುತ್ತವೆ. ಹಾಗಾಗಿ ಆ ಬಣ್ಣಗಳಲ್ಲಿ ಹೋಳಿಯನ್ನು ಆಡ್ಬೇಡಿ.

Holi 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!

ನರಸಿಂಹ ಸ್ತೋತ್ರ ಪಠಣೆ : ಪುರಾಣಗಳ ಪ್ರಕಾರ, ಶ್ರೀ ಹರಿಯು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ನರಸಿಂಹನ ಅವತಾರವನ್ನು ತೆಗೆದುಕೊಂಡನು. ಹೋಳಿ ಹಬ್ಬದಂದು ನರಸಿಂಹ ಸ್ತೋತ್ರವನ್ನು ಪಠಿಸಿದ್ರೆ ನರಸಿಂಹ ನಿಮ್ಮನ್ನೂ ರಕ್ಷಿಸುತ್ತಾನೆಂದು ನಂಬಲಾಗಿದೆ. ಅಲ್ಲದೆ ಹೋಳಿ ದಹನದ ವೇಳೆ ಆ ಅಗ್ನಿಗೆ ತೆಂಗಿನಕಾಯಿಯನ್ನು ಅರ್ಪಿಸಬೇಕು. ಇದ್ರಿಂದ ಸಾಲದ ಸಮಸ್ಯೆ ದೂರವಾಗಿ  ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. 

ಕಾಮ ದಹನದ ಭಸ್ಮದಲ್ಲಿದೆ ಪರಿಹಾರ : ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕಾಮ ದಹನದ ಭಸ್ಮವನ್ನು ರೋಗಿಯ ದೇಹ ಮತ್ತು ಹಾಸಿಗೆಯ ಮೇಲೆ ಸಿಂಪಡಿಸಿ. ಆದ್ರೆ ಮಾತ್ರೆ-ಚಿಕಿತ್ಸೆಯನ್ನು ಬಿಡದೆ ಮುಂದುವರೆಸಬೇಕು. ಹೀಗೆ ಮಾಡಿದ್ರೆ ರೋಗಿಯ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.

Friday remedies: ಶುಕ್ರವಾರ ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ..

ಶಿವಲಿಂಗಕ್ಕೆ ಗೋಮತಿ ಚಕ್ರವನ್ನು ಅರ್ಪಿಸಿ : ವ್ಯಾಪಾರದಲ್ಲಿ ಪ್ರಗತಿ ಪಡೆಯಲು ಹೋಳಿ ದಿನದಂದು ಶಿವಲಿಂಗದ ಮೇಲೆ 21 ಗೋಮತಿ ಚಕ್ರವನ್ನು ಅರ್ಪಿಸಿ. ಇದರೊಂದಿಗೆ ಹೋಳಿ ರಾತ್ರಿಯಲ್ಲಿ "ಓಂ ನಮೋ ದಂಡಾಯ ಸ್ವಾಹಾ" ಎಂಬ ಮಂತ್ರವನ್ನು ಪಠಿಸಿ. ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.

Latest Videos
Follow Us:
Download App:
  • android
  • ios