Holi 2022: ಕಾಮ ದಹನದ ದಿನ ಈ ಒಂದು ಕೆಲ್ಸ ಮಾಡಿ ನೋಡಿ
ಹೋಳಿ ಹಬ್ಬಕ್ಕೆ ಈಗಿನಿಂದಲೇ ತಯಾರಿ ಶುರುವಾಗ್ತಿದೆ. ಹೋಳಿ ಹಬ್ಬವನ್ನು ಮನರಂಜನೆಗೆ ಮಾತ್ರ ಆಚರಿಸುವುದಿಲ್ಲ. ಅದ್ರ ಹಿಂದೆ ಕೆಲ ಕಾರಣಗಳಿವೆ. ಈ ಹಬ್ಬದಂದು ಕೆಲ ಉಪಾಯದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಭಾರತ (India)ದಲ್ಲಿ ಹೋಳಿ (Holi) ಹಬ್ಬ (Festival)ವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ. ಪರಸ್ಪರ ಬಣ್ಣ (Color) ಎರೆಚಿಕೊಂಡು ಜನರು ಬಣ್ಣದಲ್ಲಿ ಮಿಂದೇಳುತ್ತಾರೆ. ಹೋಳಿ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಹೋಳಿ ಹಿಂದಿನ ದಿನ ಹೋಳಿ ದಹನ ನಡೆಯುತ್ತದೆ. ಅದನ್ನು ಕಾಮ ದಹನ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಹೋಳಿ ದಹನವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ. ಕಾಮ ದಹನದ ಮರುದಿನ ಬಣ್ಣದ ಹೋಳಿಯಾಡಲಾಗುತ್ತದೆ. ಈ ಬಾರಿ ಮಾರ್ಚ್ 17ರಂದು ಹೋಳಿ ದಹನ ನಡೆಯಲಿದೆ. ಮಾರ್ಚ್ 18ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಹೋಳಿ ಹಬ್ಬದ ಹಿಂದಿನ ದಿನ ಅಂದ್ರೆ ಹೋಳಿ ದಹನದ ದಿನ ಕೆಲ ಉಪಾಯಗಳನ್ನು ಮಾಡಿದ್ರೆ ಜೀವನದ ಎಲ್ಲ ಸಂಕಷ್ಟ ದೂರವಾಗಲಿದೆ. ಜೀವನದಲ್ಲಿ ಸುಖ ಪ್ರಾಪ್ತಿಯಾಗಲಿದೆ. ಹಾಗಿದ್ರೆ ಕಾಮ ದಹನದ ದಿನ ಏನು ಮಾಡ್ಬೇಕು ಗೊತ್ತಾ? ಇಂದು ನಾವು ಜೀವನದಲ್ಲಿ ಶಾಂತಿ-ಸುಖಕ್ಕಾಗಿ ಕಾಮ ದಹನದ ದಿನ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಕಾಮ ದಹನದ ದಿನ ಮಾಡಿ ಈ ಕೆಲಸ
ಬಡವರಿಗೆ ದಾನ : ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು ಕಾಮ ದಹನದ ದಿನ ಬಡವರಿಗೆ,ನಿರ್ಗತಿಕರಿಗೆ,ಅವಶ್ಯಕತೆಯಿರುವವರಿಗೆ ವಸ್ತು,ಆಹಾರವನ್ನು ದಾನ ಮಾಡಿ. ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯ ಹಾಗೂ ಸಂಪತ್ತಿನ ಮೇಲೆ ಸಕಾರಾತ್ಮಕ ಪ್ರಭಾವವುಂಟಾಗಲಿದೆ. ಇದ್ರಿಂದ ಮಾನಸಿಕ ಶಾಂತಿ ಸಿಗಲಿದೆ.
ನೌಕರಿಯಲ್ಲಿ ಯಶಸ್ಸು ಕಾಣಲು ಹೀಗೆ ಮಾಡಿ : ನೌಕರಿಯಲ್ಲಿ ತೃಪ್ತಿಯಿಲ್ಲ ಅಥವಾ ಎಷ್ಟೇ ಕೆಲಸ ಮಾಡಿದ್ರೂ ಉದ್ಯೋಗದಲ್ಲಿ ನೆಮ್ಮದಿ,ಬಡ್ತಿ ಸಿಗ್ತಿಲ್ಲವೆಂದ್ರೆ ಕಾಮ ದಹನದ ದಿನ ಅಗ್ನಿಗೆ ತೆಂಗಿನ ಕಾಯಿಯನ್ನು ಹಾಕಿ. ಅಲ್ಲದೆ ಕಾಮನ ಮೂರ್ತಿಗೆ ಏಳು ಬಾರಿ ಪ್ರದಕ್ಷಣೆ ಹಾಕಿ.
ಆರ್ಥಿಕ ಸಮಸ್ಯೆಗೆ ಇಲ್ಲಿದೆ ಪರಿಹಾರ : ಹೋಳಿ ಹಬ್ಬವು ಹೋಳಿ ದಹನದಿಂದ ಶುರುವಾಗುತ್ತದೆ. ಕೆಟ್ಟದ್ದು ತೊಲಗಿ ಒಳ್ಳೆಯದು ಬರಲಿ ಎಂಬುದು ಇದ್ರ ಸಂಕೇತವಾಗಿದೆ. ಸದಾ ಮನೆಯಲ್ಲಿ ಸಂಪತ್ತು ತುಂಬಿರಬೇಕು ಅಥವಾ ಸುಖ-ಶಾಂತಿ ನೆಲೆಸಿರಬೇಕೆಂದು ಬಯಸುವವರು ಕಾಮ ದಹನದ ಪೂಜೆ ವೇಳೆ ಒಣ ಹಣ್ಣುಗಳು ಹಾಗೂ ಮಿಠಾಯಿಯನ್ನು ಅರ್ಪಿಸಿ.
ಕುಜದೋಷ ನಿವಾರಿಸುವ ತಾಮ್ರ, ಯಾರೆಲ್ಲ ಧರಿಸಬಹುದು?
ಮನಸ್ಸಿನ ಇಚ್ಛೆ ಪೂರ್ಣಗೊಳ್ಳಲು ಇದನ್ನು ಮಾಡಿ : ಕನಸುಗಳು ಈಡೇರಬೇಕೆಂಬುದು ಪ್ರತಿಯೊಬ್ಬರ ಆಸೆ. ಆದ್ರೆ ಎಲ್ಲರ ಅದೃಷ್ಟ ಸರಿಯಿರುವುದಿಲ್ಲ. ಕನಸುಗಳು ಸುಲಭವಾಗಿ ಈಡೇರುವುದಿಲ್ಲ. ಅನೇಕರು ಇದಕ್ಕೆ ಸಾಕಷ್ಟು ಪ್ರಯತ್ನಿಸಿದ್ರೂ ಫಲಿತಾಂಶ ಚೆನ್ನಾಗಿರುವುದಿಲ್ಲ. ಕನಸುಗಳು ಸಾಕಾರಗೊಳ್ಳಬೇಕೆಂದ್ರೆ ಕಾಮ ದಹನದ ಅಗ್ನಿಗೆ ವೀಳ್ಯದೆಲೆ ಹಾಗೂ ಅಡಿಕೆಯನ್ನು, ತೆಂಗಿನ ಕಾಯಿ ಜೊತೆ ಹಾಕಬೇಕು. ಹೀಗೆ ಮಾಡಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಇಚ್ಛೆ ಪೂರ್ಣಗೊಳ್ಳುತ್ತದೆ.
ಭಯದಿಂದ ದೂರವಿರಲು ಏನು ಮಾಡ್ಬೇಕು ಗೊತ್ತಾ? : ಮನಸ್ಸು ಬಹಳ ಮುಖ್ಯ. ಯಾವುದೇ ಕೆಲವನ್ನು ಮಾಡಬೇಕಾದ್ರೂ ಧೈರ್ಯ ಬೇಕಾಗುತ್ತದೆ. ಕೆಲವರ ಮನಸ್ಸಿನಲ್ಲಿ ಸಾಕಷ್ಟು ನೋವುಗಳಿರುತ್ತವೆ. ಅವರು ನಕಾರಾತ್ಮಕ ಆಲೋಚನೆ ಮಾಡ್ತಿರುತ್ತಾರೆ. ಅಂಥವರು ಹೋಳಿ ದಹನದ ದಿನ ಭಯ ಹೋಗಲಾಡಿಸಲು ಒಣ ತೆಂಗಿನಕಾಯಿ, ಕಪ್ಪು ಎಳ್ಳು ಮತ್ತು ಸಾಸಿವೆಯನ್ನು ಏಳು ಬಾರಿ ತಲೆಯಿಂದ ಕಾಲಿನವರೆಗೆ ಸುತ್ತಿ ನಂತ್ರ ಅಗ್ನಿಗೆ ಹಾಕ್ಬೇಕು.
RAHU KETU TRANSIT 2022: ಈ ಐದು ರಾಶಿಗಳಿಗೆ ಕಂಟಕಪ್ರಾಯರಾಗಲಿರುವ ರಾಹುಕೇತು
ಮನೆಯ ಸಂತೋಷಕ್ಕೆ : ಮನೆಯಲ್ಲಿ ಸದಾ ಸಂತೋಷವಿರಲಿ ಎಂದು ಎಲ್ಲರೂ ಬಯಸ್ತಾರೆ. ಕೆಲವೊಮ್ಮೆ ತಿಳಿಯದೆ ಮಾಡಿದ ತಪ್ಪಿಗೆ ಮನೆ ಸಂತೋಷ ಹಾಲಾಗಿರುತ್ತದೆ. ಹೋಳಿ ದಹನದ ಬೂದಿಯನ್ನು ಮನೆಗೆ ತಂದು, ಸಾಸಿವೆ ಕಾಳು ಮತ್ತು ಉಪ್ಪು ಸೇರಿಸಿ ಅದನ್ನು ಮನೆಯ ಶುದ್ಧ ಸ್ಥಳದಲ್ಲಿ ಇರಿಸಿ. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಓಡಿ ಹೋಗುತ್ತದೆ.