ಶಂಖ ಊದಿದರೆ ಆರೋಗ್ಯ ವೃದ್ಧಿ! ಮನೆಯಲ್ಲಿದ್ದರೆ ಸಮೃದ್ಧಿ!

ಶಂಖ ಊದಿದರೆ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುವ ಈ ಅಭ್ಯಾಸದಿಂದ ಮತ್ತೇನು ಫಲವಿದೆ?

Health and astrological significance of blowing conch at home

ಮನೆಯ ಪೂಜಾ ಮಂದಿರದಲ್ಲಿ(Pooja Room) ಬಹುತೇಕ ಜನರು ಸಮುದ್ರದಲ್ಲಿ(Sea) ಸಿಗುವ ಶಂಖವನ್ನು(Shell) ಇಟ್ಟಿರುತ್ತಾರೆ. ಅದಿರಲಿ ದೇವಸ್ಥಾನದಲ್ಲೂ(Temple) ಶಂಖವನ್ನಿಟ್ಟು ಪೂಜಿಸುತ್ತಾರೆ. ಕೆಲವರು ಶಂಖದಿAದ ದೇವರಿಗೆ(God) ಅಭಿಷೇಕ ಮಾಡಿದರೆ ಇನ್ನು ಕೆಲವರು ಮಹಾಮಂಗಳಾರತಿ ಸಮಯದಲ್ಲಿ ಅದನ್ನು ಊದುತ್ತಾರೆ(Blow). ನಮ್ಮ ಹಿಂದೂ ಶಾಸ್ತçದಲ್ಲಿ ಶಂಖದ ಬಗ್ಗೆ ಏನು ಹೇಳಿದ್ದಾರೆ? ಅದಕ್ಕೆ ಅಷ್ಟು ಪ್ರಮುಖ್ಯತೆ ನೀಡಿರುವುದೇಕೆ ಈ ಬಗ್ಗೆ ಇಲ್ಲಿದೆ ಮಾಹಿತಿ.

ಎಲ್ಲಾದರು ಶಂಖ ಕಂಡರೆ ಅದನ್ನು ಕೊಂಡುಕೊAಡು ಶೋಕೇಸ್‌ನಲ್ಲಿ(Showcase) ಮನೆಯ ಸೌಂದರ್ಯ(Beauty) ಹೆಚ್ಚಿಸಲು ಇಡುವುದನ್ನು ನೋಡಿದ್ದೇವೆ. ಹಿಂದನ ಕಾಲದಲ್ಲಿ ಅಂದರೆ ಪುರಾಣಗಳಲ್ಲಿ(Purana) ಹೇಳಿರುವಂತೆ ಈ ಶಂಖವನ್ನು ಯುದ್ಧ(War) ಆರಂಭ ಹಾಗೂ ಮುಗಿಯುವ ಹೊತ್ತಿನಲ್ಲಿ ಶಂಖವನ್ನು ಊದುತ್ತಿದ್ದದ್ದು ಕೇಳಿದ್ದೇವೆ. ಈ ಸಣ್ಣ ವಸ್ತು ಅಷ್ಟು ಜೋರಾಗಿ ಶಬ್ಧ ಮಾಡುತ್ತದೆ ಎಂದರೆ ಆಶ್ಚರ್ಯವೂ ಹೌದು. 

ಶಂಖವನ್ನು ಮನೆಯಲ್ಲಿ ಇರಿಸುವುದರಿಂದ, ಅದನ್ನು ಪೂಜಿಸುವುದರಿಂದ(Worshipping), ಊದುವುದರಿಂದಲೂ(Blowing) ಬಹಳ ಪ್ರಯೋಜನವಿದೆ. ಆರೋಗ್ಯದ(Health) ಮೇಲೂ ಅದರ ಪ್ರಭಾವ ಹೆಚ್ಚಿದ್ದು, ವಾಸ್ತು ಶಾಸ್ತçದಲ್ಲಿ ಶಂಖದ ಮಹತ್ವದ ಬಗ್ಗೆ ತಿಳಿಸಿದ್ದಾರೆ ಕೂಡ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರತಿ ದಿನ ಸೂರ್ಯದೇವನಿಗೆ ಅರ್ಘ್ಯ ಸಲ್ಲಿಸಿದ್ರೆ ಸಿಗೋ ಲಾಭ ಒಂದೆರಡಲ್ಲ.

ಪುರಾಣಗಳಲ್ಲಿ ಶಂಖ
ಹಿAದೂ ಪುರಾಣಗಳ ಪ್ರಕಾರ ವಿಷ್ಣುವಿನ(Lord Vishnu) ಲಾಂಛನವಾಗಿದೆ(Emblem). ಇಂದಿಗೂ ಹಿಂದೂ ದೇವಸ್ಥಾನಗಳಲ್ಲಿ ತುತ್ತೂರಿಯಾಗಿ ಬಳಸಲಾಗುತ್ತಿದ್ದು, ಹಿಂದಿನ ಕಾಲದಲ್ಲಿ ಇದನ್ನು ಯುದ್ಧದ ತತ್ತೂರಿಯಾಗಿ ಬಳಸಲಾಗುತ್ತಿತ್ತು.

ವಾಸ್ತುವಿನಲ್ಲಿ ಶಂಖ
ಮನೆಯಲ್ಲಿ ಶಂಖ ಒಂದಿದ್ದರೆ ಭಯ(Fear) ಬೇಡ ಎನ್ನಲಾಗುತ್ತದೆ. ಹೌದು ಮನೆಯಲ್ಲಿ ಶಂಖವಿದ್ದರೆ ಕೆಟ್ಟ ಶಕ್ತಿಗಳು(Evil Energy) ನಿಮ್ಮ ಹತ್ತಿರ ಸುಳಿಯುವುದಿಲ್ಲ ಎನ್ನಲಾಗುತ್ತದೆ. ಪ್ರತೀ ನಿತ್ಯ ಊದುವುದರಿಂದ ಅದರಿಂದ ಹೊರ ಹೊಮ್ಮುವ ಶಬ್ಧವು ಋಣಾತ್ಮಕ ಶಕ್ತಿಗಳಿಂದ(Negative Energy) ದೂರವಿಡುವುದಲ್ಲದೆ ಮನೆಯಲ್ಲಿ ಸಂಪತ್ತು(Wealth) ಹಾಗೂ ಸಂಮೃದ್ಧಿ(Prosperity) ತುಂಬಿರುತ್ತದೆ ಎನ್ನಲಾಗಿದೆ. ಬಲಗೈ ಶಂಖವು ಮಂಗಳಕರವಾಗಿದ್ದು, ಅದೃಷ್ಟವನ್ನು ಆಕರ್ಷಿಸುವ ಶಕ್ತಿ ಅದಕ್ಕಿದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ.

Lemon Remedies 2022: ವ್ಯಾಪಾರ ಗರಿಗೆದರುತ್ತಿಲ್ಲವೇ? ನಿಂಬೆ ಹಣ್ಣಿನ ಪರಿಹಾರ ಮಾಡಿ..

ಆರೋಗ್ಯಕ್ಕೂ ಒಳ್ಳೆಯದು
ಶಂಖವನ್ನು ಊದುವುದರಿಂದ ಶ್ವಾಸಕೋಶವನ್ನು (Lungs) ಶುದ್ಧಿಕರಿಸುವ (Purify) ಗುಣಹೊಂದಿದೆ. ಶ್ವಾಸಕೋಶದಲ್ಲಿ ಅಡಗಿರುವ ಕಲ್ಮಶಗಳನ್ನು(Waste) ಹೊರಹಾಕುತ್ತದೆ ಮತ್ತು ಅದರಲ್ಲಿನ ನೀರು ರೋಗಗಳನ್ನು(Diseases) ಗುಣಪಡಿಸುವ ಶಕ್ತಿ ಹೊಂದಿದೆ. ಅಲ್ಲದೆ ಇದರ ಶಬ್ಧಕ್ಕೆ(Sound) ವಾತಾವರಣದಲ್ಲಿ ರೋಗಗಳನ್ನು ಹರಡಬಹುದಾದ ವೈರಸ್‌ಗಳು(Virus), ಸಣ್ಣ ಕೀಟಾಣುಗಳು(Insects) ನಾಶವಾಗುತ್ತವೆ ಎಂದು ವಿಜ್ಞಾನಿ ಜೆ.ಸಿ ಬೋಸ್ ಅವರು ಸಾಭೀತುಪಡಿಸಿದ್ದಾರೆ. 

ಪ್ರತೀ ದಿನ ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆ(Respiratory System), ಹೃದಯ ಸಂಬAಧಿ ಖಾಯಿಲೆಗಳು(Heart Disease) ದೂರವಾಗುತ್ತದೆ ಎನ್ನಲಾಗುತ್ತದೆ. ರಾತ್ರಿ ಶಂಖದಲ್ಲಿ ನೀರು ಹಾಕಿ ಬೆಳಗ್ಗೆ ಆ ನೀರನ್ನು ಚರ್ಮಕ್ಕೆ ಉಪಯೋಗಿಸುವುದರಿಂದ ಚರ್ಮ ಸಂಬAಧಿ ಖಾಯಿಲೆಗಳು, ರ‍್ಯಾಶಸ್, ಅಲರ್ಜಿ ಸಮಸ್ಯೆಗಳು ದೂರವಾಗುತ್ತವೆ. ಶಂಖದಲ್ಲಿ ರಾತ್ರಿ ನೀರು ಇಟ್ಟು ಬೆಳಗ್ಗೆ ಎರಡು ಸ್ಪೂನ್ ಆ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು(Stomach Pain), ಅಜೀರ್ಣ(Indigestion), ಕರುಳು ಸಂಬAಧಿಸಿದ(Intustine Problems) ಸಮಸ್ಯೆಗಳು ನಿವಾರಿಸುತ್ತದೆ ಎನ್ನಲಾಗುತ್ತದೆ. ಶಂಖದ ನೀರನ್ನು ಬಳಸಿ ಕಣ್ಣಿನ(Eye) ಕೆಳಗೆ ಐದು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡುವುದರಿಂದ ಡಾರ್ಕ್ ಸರ್ಕಲ್ಸ್(Dark Circles) ನಿವಾರಣೆಯಾಗುತ್ತದೆ. 

ಶಕ್ತಿಗಳ ಆಕರ್ಷಣೆ
ಪ್ರತೀ ದಿನ ಶಂಖವನ್ನು ಊದುವುದರಿಂದ ನಮ್ಮಲ್ಲಿ ಧನಾತ್ಮಕ ಮಾನಸಿಕ ಕಂಪನಗಳು(Positive Mental Waves) ಮೂಡುತ್ತವೆ. ಧೈರ್ಯ(Courage), ನಿರ್ಣಯ(Determination), ಭರವಸೆ(Hope), ಆಶಾವಾದ(Optimism), ಇಚ್ಛಾಶಕ್ತಿ(Willpower) ಮತ್ತು ಆನಂದ(Bliss) ಸಿಗುತ್ತದೆ. ಶಂಖವನ್ನು ಊದಿದ ತಕ್ಷಣ ವಾತಾವರಣದಲ್ಲಿನ ದೈವೀ ಶಕ್ತಿಗಳು(Divine Energy) ಆಕರ್ಷಿತವಾಗುತ್ತವೆ. ಏಕೆಂದರೆ ಅದನ್ನು ಊದಿದಾಗ ಬರುವ ಶಬ್ಧವು ಅಷ್ಟು ಪ್ರಭಲವಾಗಿದ್ದು, ಕೆಟ್ಟ ಶಕ್ತಿಗಳನ್ನು ಹೊಡೆದು ಹಾಕುತ್ತವೆ. 

ದೇವರ ಮನೆಯಲ್ಲಿ ಶಂಖ
ಬಲಗೈ(Right Hand) ಅಥವಾ ಧಕ್ಷಿಣಾವರ್ತಿ(Dhakshinamurthi) ಶಂಖವನ್ನು ದಿನವೂ ದೇವರ ಮನೆಯಲ್ಲಿಡುವುದು ಒಳ್ಳೆಯದು. ಅದನ್ನು ಉತ್ತರ(North), ಪೂರ್ವ(East) ಅಥವಾ ಈಶಾನ್ಯ(North East) ದಿಕ್ಕಿನ ಕಡೆ ಇಡುವುದು ಉತ್ತಮ. ಆದರೆ ಒಂದೇ ಸ್ಥಳದಲ್ಲಿ ಪೂಜಿಸಲು ಎರಡು ಶಂಖಗಳನ್ನು ಒಟ್ಟಿಗೆ ಇಡುವುದು ಒಳ್ಳೆಯದಲ್ಲ.

Astrology Tips: ವೀಳ್ಯದೆಲೆಯಲ್ಲಿದೆ ಮನೆ ಸಮಸ್ಯೆ ಪರಿಹರಿಸುವ ಶಕ್ತಿ

ಏನು ಮಾಡಬೇಕು ಏನು ಮಾಡಬಾರದು?
1. ಊದಲು(Blow) ಬಳಸುವ ಶಂಖವನ್ನು ದೇವರಿಗೆ ಅಥವಾ ಇತರೆ ಪೂಜಾ ಕಾರ್ಯಕ್ಕೆ ನೀರನ್ನು(Water) ಅರ್ಪಿಸಲು ಬಳಸಬಾರದು. 
2.ಶಂಖವನ್ನು ದಿನವೂ ಗಂಗಾ(Ganga) ಜಲದಿಂದ ಶುದ್ಧೀಕರಿಸಬೇಕು(Clean) ಹಾಗೂ ಅದನ್ನು ಕೆಂಪು(Red) ಅಥವಾ ಬಿಳಿ(White) ಬಟ್ಟೆಯಲ್ಲಿ ಸುತ್ತಿಡಬೇಕು(Wrap). 
3.ಶಂಖವನ್ನು ನಿಯಮಿತವಾಗಿ ಪೂಜಿಸಿ ಮತ್ತು ದಿನಕ್ಕೆ ಎರಡು ಬಾರಿಯಾದರೂ(Two times) ಅದನ್ನು ಊದಬೇಕು.
4.ಶಿವ(Lord Shiva) ಮತ್ತು ಸೂರ್ಯ(Lord Surya/ Sun) ದೇವರಿಗೆ ನೀರನ್ನು ಅರ್ಪಿಸಲು ಶಂಖವನ್ನು ಬಳಸಬಾರದು. 

Latest Videos
Follow Us:
Download App:
  • android
  • ios