ಪ್ರತಿ ದಿನ ಸೂರ್ಯದೇವನಿಗೆ ಅರ್ಘ್ಯ ಸಲ್ಲಿಸಿದ್ರೆ ಸಿಗೋ ಲಾಭ ಒಂದೆರಡಲ್ಲ..

ಸೂರ್ಯನಿಗೆ ನೀರನ್ನು ಅರ್ಪಿಸುವ ಸಂಪ್ರದಾಯವು ಸನಾತನ ಧರ್ಮದಲ್ಲಿ ಬಹಳ ಹಳೆಯದು. ಹೀಗೆ ಪ್ರತಿ ದಿನ ಸೂರ್ಯನಿಗೆ ಅರ್ಘ್ಯ ಸಲ್ಲಿಸುವುದರಿಂದ ಎಷ್ಟೆಲ್ಲ ಲಾಭಗಳಿವೆ ಎಂದು ಗೊತ್ತಾ?

Offering water to the Sun does wonders SKR

ಸನಾತನ ಧರ್ಮದಲ್ಲಿ ಸೂರ್ಯ(Sun God)ನಿಗೆ ತಂದೆಯ ಸ್ಥಾನವಿದೆ. ಎಲ್ಲ ಗ್ರಹಗಳ ರಾಜನಾಗಿರುವ ಸೂರ್ಯನಿಗೆ ಬಹಳ ಹಿಂದಿನಿಂದಲೂ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಕಣ್ಣಿಗೆ ಕಾಣುವ ಏಕೈಕ ದೇವರೆಂದರೆ ಸೂರ್ಯ ಎಂಬ ಮಾತೂ ಇದೆ. ಅಂಥ ಸ್ಥಾನ ಸೂರ್ಯನದು. ಇಡೀ ಭೂಮಿಯ ಸಕಲ ಚರಾಚರಗಳನ್ನು ಸಲಹುವವನು ಅವನು. ಜಗತ್ತಿಗೆ ಬೆಳಕು ಒದಗಿಸುವಾತ. ಆತನಿಗೆ ಅರೆ ದಿನ ಗ್ರಹಣ(eclipse) ಬಡಿದರೂ ಜಗತ್ತೇ ಅಲ್ಲೋಲಕಲ್ಲೋಲವಾಗುತ್ತದೆ. ಆರೋಗ್ಯ ಏರುಪೇರಾಗುತ್ತದೆ. ಮಾನವ ದೇಹವು ಸೂರ್ಯನ ಶಕ್ತಿಯೊಂದಿಗೆ ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ. ವಿಟಮಿನ್ ಡಿ(Vitamin D) ಕೊರತೆಯನ್ನು ಸೂರ್ಯನ ಕಿರಣಗಳು ನೀಗುತ್ತವೆ. ಅದನ್ನು ನೋಡಿದರೆ ತಿಳಿಯುತ್ತದೆ ಜಗತ್ತಿನ ಮೇಲೆ ಸೂರ್ಯನ ಕೃಪೆ ಎಂಥ ಅಗತ್ಯ ಮತ್ತು ಶ್ರೇಷ್ಠವೆಂಬುದು. 

ಹೀಗಾಗಿ ಮೊದಲಿನಿಂದಲೂ ಸೂರ್ಯನನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ. ಸೂರ್ಯನಿಗೆ ಅರ್ಘ್ಯ ಬಿಡುವುದು(offering water to Sun), ಸೂರ್ಯ ನಮಸ್ಕಾರ ಮಾಡುವುದು ಸೇರಿದಂತೆ ಸೂರ್ಯನನ್ನು ಪೂಜಿಸುವುದು ಬಹುತೇಕರ ದಿನಚರಿಯ ಭಾಗವಾಗಿದೆ. ಇದು ಅತ್ಯಂತ ಆರೋಗ್ಯಕರ ಅಭ್ಯಾಸ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ. ಸಾಮಾನ್ಯವಾಗಿ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದಾಗ ಆರೋಗ್ಯ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆಗ ಸೂರ್ಯನಿಗೆ ಅರ್ಘ್ಯ ಬಿಡಲು ಸಲಹೆ ನೀಡಲಾಗುತ್ತದೆ. ಇಷ್ಟಕ್ಕೂ ಈ ಅರ್ಘ್ಯ ಬಿಡುವುದೆಂದರೇನು, ಹೇಗೆ ಅದನ್ನು ಮಾಡುವುದು, ಅದರ ಪ್ರಯೋಜನಗಳೇನು ಬಲ್ಲಿರಾ?

ಅರ್ಘ್ಯ ಎಂದರೇನು?
ಸೂರ್ಯ ಭಗವಾನ್‌ಗೆ ನೀರನ್ನು ಅರ್ಪಿಸುವುದನ್ನೇ ಅರ್ಘ್ಯ ಎನ್ನುವುದು. ಸೂರ್ಯನಿಗೆ ನೀರು ನೀಡುವುದು ಬಹಳ ಶುಭವೆನಿಸಿದೆ. ಆತ ಇದರಿಂದ ಸಂಪ್ರೀತನಾಗುತ್ತಾನೆ. ಜ್ಯೋತಿಷ್ಯ ಶಾಸ್ತ್ರ(Astrology)ದ ಪ್ರಕಾರ, ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಜಾತಕ(Horoscope)ದಲ್ಲಿ ಸೂರ್ಯ ದೇವರ ದುರ್ಬಲ ಸ್ಥಾನವನ್ನು ಬಲಪಡಿಸುತ್ತದೆ. ಇದಕ್ಕಾಗಿ ಪ್ರತಿ ದಿನ ಸೂರ್ಯೋದಯದ ಸಮಯಕ್ಕೆ ಎದ್ದು ಸ್ನಾನ ಮಾಡಿ ಬಿಳಿಯ ಇಲ್ಲವೇ ಕೆಂಪು ವಸ್ತ್ರ ಧಾರಣೆ ಮಾಡಿ, ಹಿತ್ತಾಳೆ ಇಲ್ಲವೇ ಕಂಚಿನ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು. ಇದಕ್ಕೆ ಕೊಂಚ ಅಕ್ಷತೆ ಇಲ್ಲವೇ ಹೂವನ್ನು ಹಾಕಿಕೊಳ್ಳಬೇಕು. ನಂತರ ಸೂರ್ಯೋದಯವಾದ 1 ಗಂಟೆಯೊಳಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು, ಸೂರ್ಯನಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳಿಕೊಳ್ಳುತ್ತಾ, ನೀರನ್ನು ಸೂರ್ಯನಿಗೆ ಅರ್ಪಿಸಬೇಕು. 
ನದಿ ಪಾತ್ರದಲ್ಲಿ ಹೀಗೆ ಅರ್ಘ್ಯ ಅರ್ಪಿಸುವುದು ಶ್ರೇಯಸ್ಕರ. ಆದರೆ, ಇದು ಎಲ್ಲರಿಂದಲೂ ಸಾಧ್ಯವಿಲ್ಲವಾದ್ದರಿಂದ ಮನೆಯ ಬಾಲ್ಕನಿ ಇಲ್ಲವೇ ಅಂಗಳದಲ್ಲಿ ನಿಂತು ಅರ್ಘ್ಯ ಸಲ್ಲಿಸಬಹುದು. 

ಸೂರ್ಯನಿಗೆ ನೀರು ಅರ್ಪಿಸುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.
ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದರಿಂದ ವ್ಯಕ್ತಿಗೆ ವೃತ್ತಿಯಲ್ಲಿ ಯಶಸ್ಸು(success) ಸಿಗುತ್ತದೆ. ಭವಿಷ್ಯದಲ್ಲಿ ಎದುರಾಗುವ ಎಲ್ಲ ತೊಂದರೆಗಳು ದೂರವಾಗುತ್ತವೆ. ಹೀಗೆ ಮಾಡುವುದರಿಂದ ಆತ್ಮವಿಶ್ವಾಸ(confidence) ಹೆಚ್ಚುತ್ತದೆ. ಒಬ್ಬ ವ್ಯಕ್ತಿಯು ನಿಯಮಿತವಾಗಿ ಸೂರ್ಯನಿಗೆ ನೀರನ್ನು ಅರ್ಪಿಸಿದರೆ, ಅವನು ಖಂಡಿತವಾಗಿಯೂ ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾನೆ.

ದೇವರಿಗೆ ಮಹಾಮಂಗಳಾರತಿ: ಕ್ರಮ – ಫಲ ತಿಳಿಯಿರಿ

ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು(Heart problems) ದೂರವಾಗುತ್ತವೆ. ಸೂರ್ಯ ದೇವರಿಗೆ ನೀರನ್ನು ಅರ್ಪಿಸುವ ಸಮಯದಲ್ಲಿ, ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಹೃದಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮತ್ತು ಹೃದ್ರೋಗದಿಂದ ಮುಕ್ತರಾಗಬಹುದು. 

ಉದಯಿಸುತ್ತಿರುವ ಸೂರ್ಯನಿಗೆ ನಿಯಮಿತವಾಗಿ ನೀರು ನೀಡುವುದರಿಂದ ಕಣ್ಣುಗಳು(eyes) ಸಹ ಆರೋಗ್ಯಕರವಾಗಿರುತ್ತವೆ. ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ರೋಗಗಳಿಲ್ಲ. ನೀರು ಕೊಡುವಾಗ ವೀಳ್ಯದೆಲೆಯನ್ನು ಮುಂದೆ ಇಟ್ಟು, ಬೀಳುವ ನೀರಿನ ಮಧ್ಯದಲ್ಲಿ ಕಣ್ಣುಗಳನ್ನು ಕೇಂದ್ರೀಕರಿಸಿ ಸೂರ್ಯನನ್ನು ನೋಡುವುದರಿಂದ ಕಣ್ಣಿನ ದೋಷಗಳು ದೂರವಾಗುತ್ತವೆ.

ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಏಕಾಗ್ರತೆ(concentration) ಹೆಚ್ಚುತ್ತದೆ. ನೀವು ಎಚ್ಚರಿಕೆಯಿಂದ ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳು ನಿತ್ಯವೂ ಸೂರ್ಯನಿಗೆ ನೀರು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.

Vastu Tips: ಬಾಳೆ ಮರದಿಂದ ಬಾಳೇ ಬಂಗಾರವಾಗುತ್ತೆ!

ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಕೇವಲ ಸೂರ್ಯ ದೋಷವಲ್ಲ, ಆತ ಗ್ರಹಗಳ ರಾಜನಾಗಿರುವುದರಿಂದ ಇತರೆ ಗ್ರಹಗಳ ದೋಷ ಕೂಡಾ ತಗ್ಗುತ್ತದೆ. ಹೀಗೆ ಸೂರ್ಯನಿಗೆ ಅರ್ಘ್ಯ ಅರ್ಪಿಸುವವರು ತಂದೆಯನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು, ಅವರ ಮನಸ್ಸನ್ನು ನೋಯಿಸಬಾರದು. ಏಕೆಂದರೆ ಸೂರ್ಯನು ತಂದೆಯ ಅಂಶವಾಗಿದ್ದು, ತಂದೆಗೆ ನೋವಾದರೆ ಸೂರ್ಯನ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. 
 

Latest Videos
Follow Us:
Download App:
  • android
  • ios