Chanakya Neeti: ಇಂಥ ಸಂಗಾತಿ ಇದ್ದರೆ ದುರದೃಷ್ಟವೂ ಅದೃಷ್ಟವಾಗುತ್ತೆ..
ಚಾಣಕ್ಯ ನೀತಿಯು ಬದುಕಿನ ಹಲವು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರಲಿದೆ. ಅಷ್ಟರ ಮಟ್ಟಿಗೆ ಆಚಾರ್ಯ ಚಾಣಕ್ಯ ಅದರಲ್ಲಿ ವಿವರಣೆ ನೀಡಿದ್ದಾರೆ. ಒಂದು ಸಮರ್ಥ ಆಡಳಿತ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಹೇಗಿರಬೇಕು..? ಹೇಗೆ ನಡೆದುಕೊಳ್ಳಬೇಕೆಂಬುದನ್ನು ವಿವರಿಸಿದ್ದಾರೆ. ಇನ್ನು ಅವರ ವಿವರದಂತೆ ಬಾಳ ಸಂಗಾತಿಯ ವಿಷಯದಲ್ಲಿ ಯಾವ ಗುಣವುಳ್ಳ ಮಹಿಳೆಯನ್ನು ವಿವಾಹವಾದರೆ ದುರಾದೃಷ್ಟವೂ ಅದೃಷ್ಟವಾಗಿ ಬದಲಾಗಲಿದೆ ಎಂಬುದನ್ನು ನೋಡೋಣ..
ಯಾವುದೇ ಒಂದು ಆಡಳಿತವಿರಲಿ, ವ್ಯಕ್ತಿ ಇರಲಿ, ಮನೆ ಇರಲಿ... ಅದು ಅಚ್ಚುಕಟ್ಟಾಗಿ ನಿರ್ವಹಣೆ ಆಗಬೇಕೆಂದರೆ, ಯಾವ ಜಾಗದಲ್ಲಿ ಯಾರು ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಆಚಾರ್ಯ ಚಾಣಕ್ಯ ನೀತಿ ಉತ್ತಮ ನಿದರ್ಶನವಾಗಿದೆ. ಚಾಣಕ್ಯನ ನೀತಿ ಎಂದರೆ ಹಾಗೆ, ಎಲ್ಲದಕ್ಕೂ ಮಾದರಿಯಾಗಿರುತ್ತದೆ. ಅಲ್ಲದೆ, ಅರ್ಥಶಾಸ್ತ್ರಜ್ಞ (Economist) ಆಗಿರುವ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಧನ (Money), ಸಂಪತ್ತು (Wealth), ಸ್ತ್ರೀ (Women), ಉದ್ಯೋಗ (Job) ಮತ್ತು ದಾಂಪತ್ಯ ಜೀವನಕ್ಕೆ (Married life) ಸಂಬಂಧಪಟ್ಟ ಹಲವು ವಿಚಾರಗಳನ್ನು ವಿವರಿಸಿದ್ದಾರೆ. ಎಲ್ಲಿ ಹೇಗಿರುಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಯಾವುದು ಹಿತ, ಯಾವುದು ಅಹಿತ ಎಂದು ಹೇಳಿಕೊಟ್ಟಿದ್ದಾರೆ.
ಹಿಳೆಯರ (Women) ಗುಣಗಳ ಬಗ್ಗೆಯೂ ಚಾಣಕ್ಯ (Chanakya) ವಿವರಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ (Life) ಮಹಿಳೆಯರ ಪಾತ್ರ ಬಹಳ ದೊಡ್ಡದು. ಹಾಗೇ ಮನೆ – ಮನಕ್ಕೆ ಒಪ್ಪುವ ಮಡದಿ ಇದ್ದರೆ ಸುಖ ಸಂಸಾರ ನಿಮ್ಮದಾಗುತ್ತದೆ. ಹೀಗಾಗಿ ಉತ್ತಮ ಜೀವನ ಸಂಗಾತಿ ಸಿಕ್ಕರೆ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಬಹುದು ಎಂಬ ಮಾರ್ಗವನ್ನು ಚಾಣಕ್ಯ ಹೇಳಿಕೊಟ್ಟಿದ್ದಾರೆ. ಚಾಣಕ್ಯನ ನೀತಿಯಲ್ಲಿ ಆದರ್ಶ ಪತ್ನಿಯ (Wife) ವಿಶೇಷ ಗುಣಗಳು ಯಾವುವು? ಇಂಥ ಗುಣಗಳುಲ್ಲ ಮಹಿಳೆಯರನ್ನು ವಿವಾಹವಾದರೆ ದುರದೃಷ್ಟವಿದ್ದರೂ ಸಹ ಅದೃಷ್ಟವಾಗಿ (Luck) ಹೇಗೆ ಬದಲಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ...
ಧರ್ಮದ ಹಾದಿ
ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಚಾಣಕ್ಯನ ನೀತಿಯಲ್ಲಿ ಅಳವಡಿಸಲಾಗಿದೆ. ಯಾವಾಗಲೂ ಧರ್ಮದ ಹಾದಿಯಲ್ಲಿ ನಡೆಯುವ ಮಹಿಳೆ ಎಂದಿಗೂ ಯಾರಿಗೂ ಸಹ ಹಾನಿ ಮಾಡಲಾರಳು. ಜೊತೆಗೆ ಇಂತಹ ಮಹಿಳೆಯಿಂದ ಕುಟುಂಬಕ್ಕೆ (Family) ಶ್ರೀರಕ್ಷೆ ಸಿಗಲಿದೆ. ಆಕೆ ತನ್ನ ಕುಟುಂಬದ ಬೆನ್ನಿಗೆ ನಿಲ್ಲುವುದಲ್ಲದೆ, ತನ್ನ ಪೀಳಿಗೆಗೆ ಉತ್ತಮ ಶಿಕ್ಷಣವನ್ನು (Education) ಸಹ ನೀಡುತ್ತಾಳೆ.
ಇದನ್ನು ಓದಿ: Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!
ತಾಳ್ಮೆಯೇ (Patience) ಶ್ರೀರಕ್ಷೆ
ಮಹಿಳೆಯನ್ನು ಸಹನಾಮಯಿ, ಪ್ರಕೃತಿ ಮಾತೆ ಎಂದೆಲ್ಲಾ ಹೇಳುತ್ತಾರೆ. ಹೀಗಾಗಿ ಮಹಿಳೆಗೆ ತಾಳ್ಮೆಯ ಗುಣ ಇದ್ದರೆ, ಆಕೆ ಎಂಥ ಸಂದರ್ಭವನ್ನೂ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿರುತ್ತಾಳೆ. ಯಾವುದಕ್ಕೂ ವಿಚಲಿತಳಾಗದೆ, ಧೈರ್ಯದಿಂದ (Courage) ಎದುರಿಸುತ್ತಾಳೆ. ಎಂಥದ್ದೇ ಕ್ಲಿಷ್ಟಕರ ಸಮಸ್ಯೆಗಳು ಎದುರಾದರೂ ತಾಳ್ಮೆಯಿಂದ ಯೋಚಿಸಿ, ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಆರಾಮವಾಗಿ ಪರಿಹರಿಸಿಬಿಡುವ ಗುಣವನ್ನು ಹೊಂದಿರುತ್ತಾಳೆ. ಇಂಥ ಮಹಿಳೆಯನ್ನು ವಿವಾಹವಾದರೆ (Marriage) ಅಂಥ ವ್ಯಕ್ತಿಯ ಭವಿಷ್ಯ (Future) ಉಜ್ವಲವಾಗುತ್ತದೆ. ಇಂತಹ ತಾಳ್ಮೆಯ ಗುಣವು ಮಕ್ಕಳಿಗೂ ಬರಲಿದೆ.
ಮಧುರ ಮಾತು
ಮಾತನಾಡಿದರೆ ಮುತ್ತುಗಳು ಉದುರುವಂತಿರಬೇಕು ಎನ್ನುವಂತೆ ಮಧುರವಾಗಿ ಮಾತನಾಡುವ ಮಹಿಳೆಯು ಯಾರ ಹೃದಯವನ್ನು ಬೇಕಾದರೂ ಗೆಲ್ಲಬಲ್ಲಳು. ಇಂತಹ ಮಹಿಳೆಯನ್ನು ಕುಟುಂಬದವರೆಲ್ಲರೂ ಪ್ರೀತಿಯಿಂದ (Love) ನೋಡುತ್ತಾರೆ. ಕಾರಣ, ಇವರಿಗೆ ಸದಾ ತಮ್ಮ ಕುಟುಂಬದ ಬಗ್ಗೆಯೇ ಚಿಂತೆ ಕಾಡುತ್ತಿರುತ್ತದೆ. ಎಲ್ಲರೂ ತಮ್ಮವರು ಎಂಬ ಭಾವನೆಯಲ್ಲಿ ನೋಡುವ ಗುಣವನ್ನು ಇವರು ಹೊಂದಿರುತ್ತಾರೆ. ಹೀಗಾಗಿ ಪ್ರತಿಯೊಂದು ಹಂತವನ್ನು ಸಹ ಈ ಗುಣವುಳ್ಳ ಮಹಿಳೆಯರು ಬಹಳ ಆಪ್ಯತೆಯಿಂದಲೇ ನಿಭಾಯಿಸಿಕೊಂಡು ಹೋಗುತ್ತಾಳೆ. ಸದಾ ತನ್ನ ಕುಟುಂಬದ ಘನತೆಯ ಬಗ್ಗೆ ಕಾಳಜಿ ವಹಿಸುವ ಈಕೆ ಪ್ರೀತಿಯಿಂದಲೇ ಎಲ್ಲವನ್ನೂ ಗೆಲ್ಲುತ್ತಾಳೆ.
ಇದನ್ನು ಓದಿ: ಯಾವ ರಾಶಿಯ ಸಾವು ಯಾವುದರಿಂದ ಬರುತ್ತದೆ?
ಸಹಿಷ್ಣಾಮಯಿ (Tolerance)
ಸಹಿಷ್ಣುತಾ ಗುಣವುಳ್ಳ ಮಹಿಳೆಯು ಬಹಳ ಶ್ರೇಷ್ಠ. ಯಾವುದಕ್ಕೂ ಕೋಪ (Anger) ಮಾಡಿಕೊಳ್ಳದೆ, ಸಹಿಷ್ಣುತಾ ಭಾವದಿಂದ ಇದ್ದರೆ ಬಹಳ ಉತ್ತಮ. ಸಣ್ಣ ಸಣ್ಣ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳುವವರಿದ್ದರೆ ಬಹಳವೇ ಕಷ್ಟ. ಹೀಗಾಗಿ ಸಹಿಷ್ಣುತೆವುಳ್ಳವಳಿಗೆ ಬುದ್ಧಿಮತ್ತೆಯೂ ಅಷ್ಟೇ ಚುರುಕಾಗಿ ಇರಲಿದೆ. ಇದರಿಂದ ಮನೆ ಮತ್ತು ಮನೆಯವರನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ (Capacity) ಇವರಿಗೆ ಇರಲಿದೆ. ಇದು ಮನೆಯಲ್ಲಿ ಪ್ರಶಾಂತವಾದ ವಾತಾವರಣ ನಿರ್ಮಾಣವಾಗಲೂ ಕಾರಣವಾಗುತ್ತದೆ.