Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!
ಪಾಕ ಪ್ರವೀಣರು ಎಂಬ ಮಾತನ್ನು ನಾವು ಕೇಳಿರುತ್ತೇವೆ. ಕೆಲವರು ಅಡುಗೆ ಮಾಡುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಇದು ಅವರಿಗೆ ಇಷ್ಟವೂ ಆಗಿರಬಹುದು, ಇಲ್ಲವೇ ಅನಿವಾರ್ಯವೂ ಆಗಿರಬಹುದು. ಆದರೆ, ಮತ್ತೆ ಕೆಲವರಿಗೆ ಅಡುಗೆ ಮಾಡುವುದೆಂದರೆ ಸ್ಟ್ರೆಸ್ ಬಸ್ಟರ್. ಇವರು ಅಡುಗೆಗೆ ಕೈ ಹಾಕಿದರೆ ಮನೆ ಮಂದಿಯೆಲ್ಲ ಯಾವಾಗ ತಿನ್ನುತ್ತೇವಪ್ಪಾ ಎಂದು ಕಾತರಿಸುತ್ತಿರುತ್ತಾರೆ. ಅಷ್ಟು ಸೊಗಸಾದ ರುಚಿ ಇವರ ಕೈಗೊಲಿದಿರುತ್ತದೆ. ಹೀಗೆ ರುಚಿರುಚಿಯಾದ ಅಡುಗೆ ಮಾಡುವವರು ಯಾವ ರಾಶಿಗೆ ಸೇರಿದವರು ನೋಡೋಣ.
ವ್ಯಕ್ತಿಯ ವ್ಯಕ್ತಿತ್ವ (Personality) ತಿಳಿಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹಲವಾರು ವಿಧಾನಗಳಿವೆ. ರಾಶಿ, ನಕ್ಷತ್ರ ಅಥವಾ ಜಾತಕದಿಂದ ಸ್ವಭಾವಗಳನ್ನು ತಿಳಿಯಬಹುದು. ಕೆಲ ರಾಶಿಯವರಿಗೆ ಕಲೆಯಲ್ಲಿ (Art) ಹೆಚ್ಚು ಆಸಕ್ತಿ (Interest) ಇರುತ್ತದೆ. ಅದೇ ಮತ್ತೆ ಕೆಲವು ರಾಶಿಯವರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಇರುತ್ತದೆ. ಇನ್ನು ಕೆಲವು ರಾಶಿಯವರಿಗೆ ಟೆಕ್ನಾಲಜಿಯಲ್ಲಿ (Technology) ಇಂಟ್ರೆಸ್ಟ್ ಜಾಸ್ತಿ. ಹಾಗೆಯೇ ಕೆಲವು ರಾಶಿಯವರಿಗೆ ಅಡುಗೆ ಮಾಡುವುದು ಎಂದರೆ ಬಲು ಪ್ರೀತಿ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಅಡುಗೆಯಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿಯೋಣ.
ಅಡುಗೆ ಚೆನ್ನಾಗಿ ಮಾಡುವ ವಿಚಾರ ಬಂದರೆ ಅದಕ್ಕೆ ಮಹಿಳೆ (Women) ಅಥವಾ ಪುರುಷ (Man) ಎಂಬ ಭೇದವಿಲ್ಲ. ಇಬ್ಬರಲ್ಲೂ ಅತ್ಯಂತ ರುಚಿಕಟ್ಟಾಗಿ ಅಡುಗೆ ತಯಾರಿಸುವವರಿದ್ದಾರೆ. ಗೃಹಿಣಿಯರಿಗೆ ಅಡುಗೆ (Cooking) ತಯಾರಿಸುವುದು ಅನಿವಾರ್ಯವಾಗಿರುತ್ತದೆ. ಆದರೆ, ಅಡುಗೆ ಮಾಡುವ ಆಸಕ್ತಿ ಮಹಿಳೆ ಮತ್ತು ಪುರುಷರಿಬ್ಬರಲ್ಲೂ ಇರುತ್ತದೆ. ಪಾಕ ಪ್ರವೀಣ ಎಂದು ನಳಮಹಾರಾಜನಿಗೇ ಕರೆಯುತ್ತಾರೆ. ಅಂದರೆ, ಗಂಡಸರೂ ಸಹ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೇಳುತ್ತಾರೆ. ಆದರೆ, ಈ ಅಡುಗೆ ಮಾಡುವ ಹವ್ಯಾಸವು, ಅಭಿರುಚಿಯು, ಆಸಕ್ತಿಯು ಮೂಡುವುದು ರಾಶಿ ಚಕ್ರಕ್ಕೆ ಅನುಗುಣವಾಗಿ ಬಂದಿರುತ್ತವೆ. ಕೆಲವು ರಾಶಿಯವರಿಗೆ (Zodiac) ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ಹುಟ್ಟಿನಿಂದಲೇ ಆಸಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗೆ ಅಡುಗೆ ಮಾಡುವುದನ್ನೇ ಇಷ್ಟಪಡುವ 5 ರಾಶಿಯವರು ಯಾರು ಎಂಬುದನ್ನು ನೋಡೋಣವೇ.?
ಮಿಥುನ ರಾಶಿ (Gemini)
ಮಿಥುನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ಹೊಸ ಹೊಸ ರುಚಿಗಳನ್ನು ತಯಾರಿಸುವುದು, ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸಲು ಇವರು ಬಹಳ ಇಷ್ಟಪಡುತ್ತಾರೆ. ಇವರಿಗೆ ಹೋಟೆಲ್ (Hotel) ಶೈಲಿಯ ತಿನಿಸುಗಳನ್ನು ರೆಡಿ ಮಾಡುವುದು ಎಂದರೆ ಬಲು ಇಷ್ಟ.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರಿಗೆ ಅಡುಗೆ ಮಾಡುವುದು ಎಂದರೆ ಅಚ್ಚುಮೆಚ್ಚು. ತಾವು ಇಷ್ಟಪಡುವವರಿಗೆ ವಿಶೇಷ ಅಡುಗೆ ಮಾಡಿ ಬಡಿಸಲು ಸದಾ ಮುಂದುರಿರುತ್ತಾರೆ. ರುಚಿ ಮತ್ತು ಶುಚಿಯಾದ ಅಡುಗೆಯಿಂದ ಮನೆಯವರ ಮತ್ತು ಸ್ನೇಹಿತರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂಬುದು ಇವರಿಗೆ ತಿಳಿದಿರುತ್ತದೆ. ಹಾಗಾಗಿ ವಿವಿಧ ರೀತಿಯ ವಿಶೇಷ ಖಾದ್ಯಗಳನ್ನು ತಯಾರಿಸುವುದನ್ನು ಇವರು ಇಷ್ಟಪಡುತ್ತಾರೆ.
ಇದನ್ನು ಓದಿ: Astro Remidies: ಗ್ರಹ ದೋಷ ನಿವಾರಣೆಗೆ ಸ್ನಾನದಲ್ಲಿ ಪರಿಹಾರ, ಹೇಗಂತೀರಾ?
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ಅಡುಗೆ ಮಾಡುವುದರಲ್ಲಿ ನಿಸ್ಸೀಮರು. ಆಹಾರವನ್ನು ವ್ಯರ್ಥ ಮಾಡುವುದು ಎಂದರೆ ಇವರಿಗಾಗದು. ಉಳಿದಿರುವ ಆಹಾರದಲ್ಲಿ (Food) ಹೊಸ ಮತ್ತು ರುಚಿಕಟ್ಟಾದ ಅಡುಗೆಯನ್ನು ಸಿದ್ಧಪಡಿಸುವ ಕಲೆಯನ್ನು ಹೊಂದಿದ್ದಾರೆ. ಅದರಿಂದ ರುಚಿಯಾದ ಖಾದ್ಯ ತಯಾರಿಸುತ್ತಾರೆ. ಆಹಾರವನ್ನು ಬಡಿಸುವ ಪಾತ್ರೆಯ ಬಣ್ಣದ ಆಯ್ಕೆಯ ಬಗ್ಗೆಯೂ ಇವರು ವಿಶೇಷ ಆಸಕ್ತಿ ವಹಿಸುತ್ತಾರೆ. ರುಚಿಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಾರೆ.
ತುಲಾ ರಾಶಿ (Libra)
ಈ ರಾಶಿಯವರಿಗೆ ಅಡುಗೆ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಬಗ್ಗೆ ವಿಶೇಷ ಅರಿವಿರುತ್ತದೆ. ಯಾವ ಪದಾರ್ಥವನ್ನು ಬಳಸಿದರೆ ಅಡುಗೆ ರುಚಿ ಆಗುತ್ತದೆ ಎಂಬುದರ ಬಗ್ಗೆ ವಿಶೇಷ ಅಸ್ಥೆಯಿಂದ ತಿಳಿದಿರುತ್ತಾರೆ. ಅಡುಗೆಯಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುವುದು ಇವರ ಹವ್ಯಾಸ . ಅಷ್ಟೇ ಅಲ್ಲದೆ ರುಚಿಯಾದ ಖಾದ್ಯವನ್ನು ತಯಾರಿಸುತ್ತಾರೆ.
ಇದನ್ನು ಓದಿ: Personality Traits: ಈ ರಾಶಿಯವರಿಗೆ ಬೇಜವಾಬ್ದಾರಿ ಹೆಚ್ಚು.. ನೀವಿದ್ದೀರಾ?
ಮಕರ ರಾಶಿ (Capricorn)
ಮಕರ ರಾಶಿಯವರು ಸಖತ್ ಇಂಟ್ರೆಸ್ಟಿಂಗ್. ಇವರು ಅಡುಗೆ ಮಾಡುವುದು ಎಂದರೆ ರಿಲ್ಯಾಕ್ಸ್ (Relax) ಪಡೆಯೋಕೆ ಅಂತ ಭಾವಿಸುವವರು. ನಿತ್ಯದ ಒತ್ತಡದ ಕೆಲಸ ಕಾರ್ಯಗಳಿಂದ ವಿರಾಮ ಬೇಕೆಂದರೆ ಕಿಚನ್ ಕಡೆಗೆ ಮುಖ ಮಾಡುತ್ತಾರೆ. ಹೀಗಾಗಿ ಹೊಸ ಹೊಸ ತಿನಿಸುಗಳನ್ನು ಮಾಡುವ ಮೂಲಕ ಚೈತನ್ಯದೊಂದಿಗೆ ಮುಂದೆ ಸಾಗುತ್ತಾರೆ.