ಯಾವ ರಾಶಿಯ ಸಾವು ಯಾವುದರಿಂದ ಬರುತ್ತದೆ?

ಪ್ರತಿ ರಾಶಿಯ ವ್ಯಕ್ತಿಗಳ ಸ್ವಭಾವ, ಭವಿಷ್ಯ ಎಲ್ಲವೂ ಭಿನ್ನವಾಗಿರುತ್ತದೆ. ಹಾಗೆಯೇ ವ್ಯಕ್ತಿಯ ಮರಣದಲ್ಲೂ ಭಿನ್ನತೆಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯಾ ರಾಶಿಗನುಸಾರವಾಗಿ ವ್ಯಕ್ತಿಯ ಮರಣದ ಸಂಕೇತವನ್ನು ತಿಳಿಯಬಹುದಾಗಿದೆ. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ.

Here are the reasons for death according to zodiac sign

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಜಾತಕದಿಂದ ಜೀವನದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಸರಿಯಾಗಿ ತಿಳಿಯಬಹುದಾಗಿದೆ. ಹಾಗೆಯೇ ಮೃತ್ಯುವಿನ ಬಗ್ಗೆ ಸಹ ಜಾತಕದಿಂದ ಅರಿಯಬಹುದು. ಯಾವುದೇ ವ್ಯಕ್ತಿಯ ಬಗೆಗಿನ ಸಂಪೂರ್ಣ ವಿಷಯವನ್ನು ಅಂದರೆ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಜಾತಕದಿಂದ ತಿಳಿದುಕೊಳ್ಳಬಹುದು. ಕೇವಲ ಅಷ್ಟೇ ಅಲ್ಲದೆ ವ್ಯಕ್ತಿಯ ಭೂತಕಾಲ ಮತ್ತು ವರ್ತಮಾನದ ಬಗ್ಗೆ ಎಲ್ಲ ಅಂಶಗಳನ್ನು ತಿಳಿಯಬಹುದಾಗಿದೆ. ಜೀವನದ ಹಲವು ವಿಷಯಗಳನ್ನು ಅನೇಕ ಮೂಲಗಳಿಂದ ತಿಳಿಯಬಹುದು, ಆದರೆ ಮರಣದ ಬಗ್ಗೆ ಅದು ಬರುವ ಬಗೆಯನ್ನು ಜಾತಕವನ್ನು ಹೊರತುಪಡಿಸಿ ಇತರ ಮೂಲಗಳಿಂದ ಅರಿಯುವುದು ಕಷ್ಟಕರವಾಗಿರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ರಾಶಿ ಪ್ರಕಾರ ಮೃತ್ಯುವಿಗೆ ಕಾರಣವಾಗುವ ವಿಷಯಗಳ ಬಗ್ಗೆ ತಿಳಿಯೋಣ..

ರಾಶಿಯನುಸಾರ ಕೆಲವು ಅಂಶಗಳನ್ನು ಮೃತ್ಯುವಿಗೆ ಸಂಕೇತವೆಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಅವುಗಳು ರಾಶಿಯಿಂದ ರಾಶಿಗೆ ಭಿನ್ನವಾಗಿರುತ್ತವೆ. 

ಮೇಷ ರಾಶಿ (Aries)
ಅಗ್ನಿ ತತ್ವ ರಾಶಿಯಾದ ಮೇಷರಾಶಿಯ ವ್ಯಕ್ತಿಗಳಿಗೆ ಅಗ್ನಿಯೇ ಅಪಾಯದ ಸಂಕೇತವೆಂದು ಹೇಳಲಾಗುತ್ತದೆ. ಯಾವುದೋ ಬಿಸಿಯಾದ ವಸ್ತು ಅಥವಾ ಬೆಂಕಿ ಆಗಬಹುದೆಂದು ಹೇಳಲಾಗುತ್ತದೆ. ಹಾಗಾಗಿ ಈ ರಾಶಿಯವರು ಬೆಂಕಿಯಿಂದ ದೂರವಿರುವುದು ಉತ್ತಮ.

ವೃಷಭ ರಾಶಿ (Taurus)
ಈ ರಾಶಿಯ ವ್ಯಕ್ತಿಗಳು ವಿಮಾನ ಪ್ರಯಾಣದ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಈ ವ್ಯಕ್ತಿಗಳಿಗೆ ಎತ್ತರದ ಪ್ರದೇಶಗಳು ಅಥವಾ ವಿಮಾನ ಪ್ರಯಾಣಗಳು ಮೃತ್ಯುವಿಗೆ ಕಾರಣವಾಗಬಹುದು.

ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳಿಗೆ ಲಿವರ್ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಂತರದಲ್ಲಿ ಇದೇ ಮಿಥುನ ರಾಶಿಯವರ ಮರಣಕ್ಕೆ ಕಾರಣವೂ ಆಗುತ್ತದೆ. ಹಾಗಾಗಿ ಈ ರಾಶಿಯವರು ಲಿವರ್ ಸಂಬಂಧಿತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಕರ್ಕಾಟಕ ರಾಶಿ (cancer)
ಈ ರಾಶಿಯವರಿಗೆ ತಮ್ಮವರಿಂದಲೇ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಕರ್ಕಾಟಕ ರಾಶಿಯವರಿಗೆ ತಮ್ಮವರು ಎನಿಸಿಕೊಂಡವರೇ ಮೃತ್ಯುವಿಗೆ ಕಾರಣವಾಗುತ್ತಾರೆ.

ಸಿಂಹ ರಾಶಿ (Leo)
ಈ ರಾಶಿಯವರ ಮೃತ್ಯು ಯಾವುದೋ ಇಲೆಕ್ಟ್ರಾನಿಕ್ ಉಪಕರಣಗಳಿಂದ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅವುಗಳನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರುವುದು ಉತ್ತಮ.

ಇದನ್ನು ಓದಿ: Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!

ಕನ್ಯಾ ರಾಶಿ (Virgo)
ಈ ರಾಶಿಯ ವ್ಯಕ್ತಿಗಳಿಗೆ ಕಾಡು ಪ್ರಾಣಿಗಳಿಂದ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಡು ಪ್ರಾಣಿಗಳಿರುವ ಕಡೆ ಹೆಚ್ಚು ಜಾಗ್ರತೆ ವಹಿಸಬೇಕು.

ತುಲಾ ರಾಶಿ (Libra)
ಈ ರಾಶಿಯ ವ್ಯಕ್ತಿಗಳಿಗೆ ಯಾವುದಾದರೂ ಒಂದು ಜಾಗದಲ್ಲಿ ಸಿಕ್ಕಿಕೊಳ್ಳುವುದರಿಂದ ಮೃತ್ಯು ಸಂಭವಿಸುವ ಸಂಭವವಿರುತ್ತದೆ. ಹಾಗಾಗಿ ಒಬ್ಬರೇ ಯಾವುದಾದರೂ ಪ್ರದೇಶಗಳಿಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.

ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳ ಜಾತಕದಲ್ಲಿ ಆತ್ಮಹತ್ಯೆಯ ಯೋಗವಿರುತ್ತದೆ. ಹಾಗಾಗಿ ವೃಶ್ಚಿಕ ರಾಶಿಯ ವ್ಯಕ್ತಿಗಳು ಖಿನ್ನತೆಯಿಂದ ದೂರವಿರಬೇಕು. ಖಿನ್ನತೆಯ ಲಕ್ಷಣಗಳು ಕಂಡಾಗ ಅದರ ಪರಿಹಾರದ ಬಗ್ಗೆ ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

ಧನು ರಾಶಿ (Sagittarius)
ಈ ರಾಶಿಯ ವ್ಯಕ್ತಿಗಳಿಗೆ ಔಷಧಿಯಿಂದ ಉಂಟಾಗುವ ಅಡ್ಡಪರಿಣಾಮಗಳಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಧನು ರಾಶಿಯವರು ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಮಕರ ರಾಶಿ (Capricorn)
ಈ ರಾಶಿಯವರಿಗೆ ಉಸಿರುಕಟ್ಟಿ ಮೃತ್ಯು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಜಾಗರೂಕರಾಗಿರುವುದು ಉತ್ತಮ.

ಕುಂಭ ರಾಶಿ (Aquarius)
ಈ ರಾಶಿಯ ವ್ಯಕ್ತಿಗಳಿಗೆ ಶಾಂತವಾದ ಮತ್ತು ಸುಖವಾದ ಸಾವು ಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇದನ್ನು ಓದಿ: Astro Remidies: ಗ್ರಹ ದೋಷ ನಿವಾರಣೆಗೆ ಸ್ನಾನದಲ್ಲಿ ಪರಿಹಾರ, ಹೇಗಂತೀರಾ?

ಮೀನ ರಾಶಿ (Pisces)
ಈ ರಾಶಿಯ ವ್ಯಕ್ತಿಗಳಿಗೆ ವೈದ್ಯರ ಬೇಜವಾಬ್ದಾರಿಯಿಂದ ಜೀವ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ವೈದ್ಯರ ಬಳಿ ಹೋಗುವಾಗ ಎಚ್ಚರಿಕೆಯಿಂದ ಇದ್ದು, ಸರಿಯಾದ ವೈದ್ಯರನ್ನು ಕಾಣುವುದು ಉತ್ತಮ.

Latest Videos
Follow Us:
Download App:
  • android
  • ios