ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಂಜನೇಯನ ವಿಶೇಷ ಕೃಪೆ ನಾಲ್ಕು ರಾಶಿಗಳಿಗೆ ಇರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು, ಅದೃಷ್ಟ ಹೆಚ್ಚಿಸಲು ಈ ರಾಶಿಗಳು ಮಾಡಬೇಕಾದುದೇನು ನೋಡೋಣ. 

ಆಂಜನೇಯ(Hanuman)ನು ಪುರಾಣಗಳಲ್ಲಿ ಭಕ್ತನಾಗಿ ಹೆಸರು ಮಾಡಿದ್ದರೂ, ಈಗ ಅವನೇ ಒಬ್ಬ ಬಹು ಶಕ್ತಿಶಾಲಿ ದೇವರಾಗಿದ್ದಾನೆ.. ಶಿವನ ಅವತಾರ ಎಂದೇ ಪರಿಗಣಿಸಲ್ಪಟ್ಟಿರುವ ಆಂಜನೇಯನಿಗೆ ಸೀತೆಯಿಂದ ಚಿರಂಜೀವಿ(Chiranjeevi)ಯಾಗುವ ವರ ಸಿಕ್ಕಿದ್ದು, ಆತ ಶಾಶ್ವತತೆಯನ್ನು ಪಡೆದಿದ್ದಾನೆ. ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಹನುಮ ಹುಟ್ಟಿದ್ದು. ಮಂಗಳವಾರ ಹಾಗೂ ಶನಿವಾರ(Saturday) ಆಂಜನೇಯನಿಗೆ ಶ್ರೇಷ್ಠವಾಗಿದೆ. ರಾವಣನು ಅಪಹರಿಸಿದ ಸೀತೆಯ ಹುಡುಕಾಟದಲ್ಲಿ ಆಂಜನೇಯ ಪಾತ್ರವೇ ದೊಡ್ಡದು. ರಾಮ(Lord Ram)ನ ಜಯದಲ್ಲಿ ಆಂಜನೇಯನ ಪಾತ್ರವಿದೆ. ಆಂಜನೇಯಸ್ವತಃ ಬ್ರಹ್ಮನಿಂದ ವೇದಾಭ್ಯಾಸ ಮಾಡಿದವನು, ಚಿರಂಜೀವಿ. ಅವನನ್ನ ನಂಬಿದವರನ್ನು ಎಂದಿಗೂ ಕೈ ಬಿಡನು.

Add Asianetnews Kannada as a Preferred SourcegooglePreferred

ಭಕ್ತರ ಕೋರಿಕೆಗಳಿಗೆ ಬೇಗ ಕರಗುವ ಸ್ವಭಾವ ಆಂಜನೇಯನದು. ಹನುಮನೊಲಿದರೆ ಭಯ ಎಂಬುದು ದೂರ ಓಡುತ್ತದೆ. ತಂದೆಯಂತೆ ಕಾಯುವ, ತಾಯಿಯಂತೆ ಕರುಣಾಮಯಿ ಹೃದಯ ಹೊಂದಿರುವ ಆಂಜನೇಯನಿಗೆ ನಾಲ್ಕು ರಾಶಿಗಳ ಮೇಲೆ ವಿಶೇಷ ಪ್ರೀತಿ ಎನ್ನುತ್ತದೆ ಜ್ಯೋತಿಷ್ಯ. ಅವರನ್ನು ಆಂಜನೇಯನು ಸದಾ ರಕ್ಷಿಸುತ್ತಿರುತ್ತಾನೆ. ಸದಾ ಅವರ ಕ್ಷೇಮವನ್ನು ತನ್ನ ಹೆಗಲಿಗೆ ಹಾಕಿಕೊಂಡು ಕಾಯುತ್ತಾನೆ. ಆ ಅದೃಷ್ಟಶಾಲಿ ರಾಶಿ ಚಕ್ರಗಳು (Zodiac signs) ಯಾವುವು ನೋಡೋಣ. 

ಮೇಷ ರಾಶಿ(Aries)
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮೇಷ ರಾಶಿಯ ಜನರು ಆಂಜನೇಯನ ವಿಶೇಷ ಆಶೀರ್ವಾದವನ್ನು ಹೊಂದಿದ್ದಾರೆ. ಮೇಷ ರಾಶಿಯ ಜನರು ಬಹಳ ಬಲವಾದ ಇಚ್ಛೆಯನ್ನು ಹೊಂದಿರುತ್ತಾರೆ. ಮೇಷ ರಾಶಿಯ ಜನರು ಹನುಮನ ವಿಶೇಷ ಅನುಗ್ರಹವನ್ನು ಪಡೆಯಲು ಪ್ರತಿದಿನ ಭಗವಾನ್ ಶ್ರೀರಾಮನ ನಾಮವನ್ನು ಜಪಿಸಬೇಕು. ಹನುಮನ ಕೃಪೆಯಿಂದ, ಮೇಷ ರಾಶಿಯ ಜನರ ಆರ್ಥಿಕ ಪರಿಸ್ಥಿತಿಯೂ ಬಲಗೊಳ್ಳುತ್ತದೆ. ನಿತ್ಯವೂ ಹನುಮಂತನಿಗೆ ಆರತಿ ಮಾಡುವುದರಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆ, ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ.

Vastu Tips : ದಾಂಪತ್ಯ ಸುಖ, ಆರ್ಥಿಕ ವೃದ್ಧಿ ಬಯಸಿದ್ರೆ ಇರುವೆ ಮೇಲಿರಲಿ ಪ್ರೀತಿ

ಕುಂಭ ರಾಶಿ(Aquarius)
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಂಜನೇಯನ ಕೃಪೆಯಿಂದ, ಕುಂಭ ರಾಶಿಯ ಜನರು ತಮ್ಮ ಕೆಲಸದಲ್ಲಿ ತ್ವರಿತವಾಗಿ ಯಶಸ್ಸನ್ನು ಪಡೆಯುತ್ತಾರೆ. ಹನುಮಂತನ ವಿಶೇಷ ಕೃಪೆಯು ಕುಂಭ ರಾಶಿಯ ಮೇಲೆ ಇರುತ್ತದೆ. ಕುಂಭ ರಾಶಿಯವರಿಗೆ ಹಣದ ಸುರಿಮಳೆಯಾಗದಿದ್ದರೂ ಕೊರತೆಯಂತೂ ಇರುವುದಿಲ್ಲ. ಆಂಜನೇಯನಲ್ಲಿ ಬೇಡಿಕೊಂಡರೆ ಕುಂಭ ರಾಶಿಯವರ ಕಷ್ಟಗಳು ಕ್ಷಣ ಮಾತ್ರದಲ್ಲಿ ದೂರವಾಗುತ್ತವೆ. 

ಸಿಂಹ ರಾಶಿ(Leo)
ಹನುಮಂತನ ಕೃಪೆಯಿಂದ, ಸಿಂಹ ರಾಶಿಯ ಜನರಿಂದ ತೊಂದರೆಗಳು ದೂರವಾಗುತ್ತವೆ. ಈ ರಾಶಿಯ ಜನರ ಆರ್ಥಿಕ ಸ್ಥಿತಿಯೂ ಬಲವಾಗಿರುತ್ತದೆ. ಹನುಮಂತನ ಕೃಪೆಯಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ಸಿಂಹ ರಾಶಿಯ ಜನರು ಹನುಮಂತನ ವಿಶೇಷ ಆಶೀರ್ವಾದವನ್ನು ಪಡೆಯಲು ಪ್ರತಿದಿನ ಭಜರಂಗ ಬಾಣವನ್ನು ಪಠಿಸಬೇಕು. ಈ ಸಣ್ಣ ಪರಿಹಾರವು ಎಲ್ಲಾ ವಿಪತ್ತುಗಳನ್ನು ದೂರವಿಟ್ಟು ಈ ರಾಶಿಯವರನ್ನು ಕಾಪಾಡುತ್ತದೆ.

ರೋಮ್ಯಾಂಟಿಕ್ ಸಂಗಾತಿ ಬೇಕಿದ್ರೆ ಈ ರಾಶಿಗಳು ಬೆಸ್ಟ್

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯ ಜನರಿಗೆ ಹನುಮನು ಸದಾ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಈ ರಾಶಿಯವರಿಗೆ ಕೆಲಸದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಹನುಮಂತನ ಕೃಪೆಯಿಂದ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ.ವೃಶ್ಚಿಕ ರಾಶಿಯವರು ಹನುಮಂತನ ಕೃಪೆಯಿಂದ ಅದೃಷ್ಟವಂತರಾಗಿರುತ್ತಾರೆ. ಹೆಚ್ಚು ಕಷ್ಟ ಪಡದೆಯೇ ಉನ್ನತ ಪದವಿಗೆ ಹೋಗುವ ಅವಕಾಶ ಇವರದಾಗಿರುತ್ತದೆ. ಇವರು ಹನುಮನ ಕೃಪೆ ಹೆಚ್ಚಿಸಿಕೊಳ್ಳಲು ಹನುಮಾನ್ ಚಾಲೀಸಾ ಪಠಣ ಮಾಡಬೇಕು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.