ರೋಮ್ಯಾಂಟಿಕ್ ಸಂಗಾತಿ ಬೇಕಿದ್ರೆ ಈ ರಾಶಿಗಳು ಬೆಸ್ಟ್
ಸಂಗಾತಿ ರೋಮ್ಯಾಂಟಿಕ್ ಆಗಿರಬೇಕು, ಆಪ್ತವಾದ ಸಾಂಗತ್ಯ ನೀಡಬೇಕು ಎಂದು ಬಯಸುವುದು ಸಾಮಾನ್ಯ. ಆದರೆ, ಎಲ್ಲರಿಗೂ ಅಂತಹ ಸಂಗಾತಿ ಸಿಗುವುದಿಲ್ಲ. ಈ ನಾಲ್ಕು ರಾಶಿಗಳ ಜನರು ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆದ ಆಪ್ತವಾದ ಬಾಂಧವ್ಯ ಹೊಂದಿರುತ್ತಾರೆ.
ಪತಿ-ಪತ್ನಿಯರ ಸಂಬಂಧ (Relationship) ಗಾಢವಾಗಿರಬೇಕು, ರೋಮ್ಯಾಂಟಿಕ್ (Romantic) ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಎಲ್ಲರದ್ದೂ ಅಂತಹ ರೋಮ್ಯಾಂಟಿಕ್ ಸಂಬಂಧ ಆಗಿರುವುದಿಲ್ಲ. ಎಲ್ಲರಿಗೂ ರೋಮ್ಯಾಂಟಿಕ್ ಆದ ಆಳವಾದ ಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಆದರೆ, ಕೆಲವೇ ಕೆಲವು ಜನರು ಮಾತ್ರ ತಮ್ಮ ಸಂಗಾತಿಗಳೊಂದಿಗೆ ಏನೋ ಒಂದು ಬಿಡಿಸಲಾಗದ ಅನುಬಂಧ ಹೊಂದಿರುತ್ತಾರೆ.
ಸಾಮಾನ್ಯವಾಗಿ ವಿವಾಹವಾದ ಕೆಲವು ವರ್ಷಗಳಲ್ಲಿ ಪತಿ-ಪತ್ನಿಯರ ಸಂಬಂಧ ಒಂದು ನಿಶ್ಚಲ, ನ್ಯೂಟ್ರಲ್ ಸ್ಥಿತಿಗೆ ಬಂದಿರುತ್ತದೆ. ಅಲ್ಲಿ ತುಂಬ ಔಪಚಾರಿಕವಾದ ಲೈಂಗಿಕ ಕ್ರಿಯೆ ಜರುಗುತ್ತದೆ. ಪರಸ್ಪರ ಆಕರ್ಷಣೆಗಳಿಂದ ದೂರವಾಗಿದ್ದು, ಹೆಚ್ಚಿನ ಒಲವನ್ನೇನೂ ಹೊಂದಿರುವುದಿಲ್ಲ. ಆದರೆ, ಕೆಲವೇ ಜನರ ಸಂಬಂಧ ಹಾಗಿರುವುದಿಲ್ಲ. ಅಲ್ಲಿ ರೋಮ್ಯಾನ್ಸ್ ಇರುತ್ತದೆ, ಆಕರ್ಷಣೆಯೂ ಇರುತ್ತದೆ. ಸಂಗಾತಿಯಿಂದ ಬೇರ್ಪಟ್ಟಾಗ ಅವರು ನೀರಿನಿಂದ ಮೀನು ಹೊರಬಂದಂತೆ ಚಡಪಡಿಸುತ್ತಾರೆ. ಸಂಗಾತಿ(Partner)ಯೊಂದಿಗೆ ನಲಿಯುವುದೆಂದರೆ ಅವರಿಗೆ ಭಾರೀ ಇಷ್ಟ. ಅಂತಹ ಜನರನ್ನು ನೀವು ಕೇವಲ ಈ ನಾಲ್ಕು ರಾಶಿಗಳಲ್ಲಿ (Zodiac Sign) ಮಾತ್ರ ಪಡೆಯಲು ಸಾಧ್ಯ.
ನಮ್ಮ ರಾಶಿಗೂ, ವರ್ತನೆ, ಸ್ವಭಾವಗಳಿಗೂ ನಿಕಟವಾದ ಬಾಂಧವ್ಯ. ಹಾಗೆಯೇ, ರೋಮ್ಯಾಂಟಿಕ್ ಸಂಬಂಧ ಕೂಡ ರಾಶಿಗಳನ್ನು ಅವಲಂಬಿಸಿದೆ. ಈ ನಾಲ್ಕು ರಾಶಿಗಳ ಜನ ತಮ್ಮ ಸಂಗಾತಿಯೊಂದಿಗೆ ನಿಕಟ ಸಾಂಗತ್ಯ ಹೊಂದಿರುತ್ತಾರೆ. ರೋಮ್ಯಾಂಟಿಕ್ ಆದ ಬಂಧ ಹೊಂದಲು ಇಷ್ಟಪಡುತ್ತಾರೆ.
• ಮೀನ (Pisces)
ಮೀನ ರಾಶಿಯವರು ಈ ಲಿಸ್ಟಿನಲ್ಲಿ ಮುಂದೆ. ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಹಾಗೂ ಭಾವನಾತ್ಮಕ (Emotional) ಪ್ರೀತಿ ಹೊಂದಿರುತ್ತಾರೆ. ಸಂಗಾತಿಯೊಂದಿಗೆ ಸಂಪೂರ್ಣವಾದ ರೋಮ್ಯಾಂಟಿಕ್ ಕೆಮಿಸ್ಟ್ರಿ (Chemistry) ಇವರದ್ದು. ಪ್ರೀತಿ ಬದುಕಿನ ಕುರಿತು ಕನಸು ಕಾಣುತ್ತಾರೆ. ಸೂಕ್ಷ್ಮ ಮನಸ್ಸನ್ನು ಹೊಂದಿದ್ದು, ಅಂತಃಪ್ರಜ್ಞೆ (Intution) ಹೊಂದಿರುತ್ತಾರೆ. ಮೀನ ರಾಶಿಯವರು ಪ್ರೀತಿಗೆ ಬಿದ್ದರೆ ಗಾಢ ಸಾಂಗತ್ಯ ಹೊಂದುತ್ತಾರೆ. ಸಂಗಾತಿಯನ್ನು ಖುಷಿಪಡಿಸಲು ಯತ್ನಿಸುತ್ತಾರೆ.
ಈ ರಾಶಿಯ ಜನರು ಸಿಕ್ಕಾಪಟ್ಟೆ ಹಾರ್ಡ್‌ವರ್ಕರ್ಸ್
• ಮೇಷ (Aries)
ರೋಮ್ಯಾಂಟಿಕ್ ಜೀವನ ಹೊಂದುವವರ ಪೈಕಿಯಲ್ಲಿ ಮೇಷ ರಾಶಿಯವರಿಗೆ ಎರಡನೇ ಸ್ಥಾನ. ಸಂಬಂಧದಲ್ಲಿ ಗಾಢವಾದ ರೋಮ್ಯಾಂಟಿಕ್ ಭಾವನೆ ಹಾಗೂ ತೀವ್ರ ಅನುರಾಗ (Passion) ಹೊಂದಿರುತ್ತಾರೆ. ಸಂಗಾತಿಗೆ ಪ್ರೀತಿ, ಕಾಳಜಿ (Care) ತೋರುವಲ್ಲಿ ಇವರಿಗೆ ಬೇರೆ ಯಾರೂ ಸಾಟಿಯಿಲ್ಲ. ಈ ವಿಚಾರದಲ್ಲಿ ಖಚಿತವಾದ ನಿಲುವಿನೊಂದಿಗೆ ತಮ್ಮದೇ ಪ್ರಪಂಚ ಕಟ್ಟಿಕೊಳ್ಳುತ್ತಾರೆ. ಮೇಷ ರಾಶಿಯವರು ಕೆಲಸಗಾರರು, ಹೆಚ್ಚು ಮಾತನಾಡುವುದಿಲ್ಲ(Introvert).
• ವೃಷಭ (Taurus)
ಪ್ರೀತಿ(Love)ಯಲ್ಲಿ ಖುಷಿಪಡುವ ರಾಶಿ ಇದು. ಇದು ಭೂಮಿಯ ಗುಣ ಹೊಂದಿರುತ್ತದೆ. ಕ್ಯಾಂಡಲ್ ಲೈಟ್ ಡಿನ್ನರ್ ನಿಂದ ಹಿಡಿದು ಸಂಗಾತಿ ಜತೆಗೆ ದೀರ್ಘ ನಡಿಗೆ, ಬೀಚ್ ಸುತ್ತಾಟ, ಮಸಾಜ್ ಇಂತಹ ಕ್ರಿಯೆಗಳಲ್ಲಿ ಪಾಲ್ಗೊಳ್ಳುವುದೆಂದರೆ ಭಾರೀ ಇಷ್ಟಪಡುತ್ತಾರೆ. ಗಿಫ್ಟ್, ಕಲೆ, ಆಪ್ತತೆ, ಆಹಾರ ಮುಂತಾದವುಗಳ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿಕೊಳ್ಳಲು ಯತ್ನಿಸುತ್ತಾರೆ. ವೃಷಭ ರಾಶಿಯವರು ಸಂಗಾತಿ ಮೇಲೆ ಅವಲಂಬಿತರಾಗಿರುತ್ತಾರೆ, ಹಾಗೆಯೇ ನಿಷ್ಠ(Loyal)ರಾಗಿರುತ್ತಾರೆ.
Name Astrology: ಕುಬೇರನಿಗೆ ಈ ನಾಲ್ಕು ಹೆಸರಿನವರ ಮೇಲೆ ವಿಶೇಷ ಪ್ರೀತಿ!
• ಮಿಥುನ (Gemini)
ಸೋಷಿಯಲ್ ಬಟರ್ ಫ್ಲೈ (Social Butterfly) ರಾಶಿ ಎಂದರೆ ಮಿಥುನ. ಹೊರಗೆ ಹೋಗುವುದು, ಫ್ಲರ್ಟ್ (Flirt) ಮಾಡುವುದೆಂದರೆ ಇವರಿಗೆ ಇಷ್ಟ. ಪ್ರಭಾವಶಾಲಿಗಳಾಗಿದ್ದು, ಚಾರ್ಮಿಂಗ್ ನೇಚರ್ (Charming Nature) ಹೊಂದಿರುತ್ತಾರೆ. ತಮ್ಮ ಬುದ್ಧಿವಂತಿಕೆ ಹಾಗೂ ವಿನೋದದ ಪ್ರಕೃತಿಗೆ ಹೊಂದಾಣಿಕೆಯಾಗುವವರ ಕಡೆಗೆ ಬಹುಬೇಗ ಆಕರ್ಷಿತರಾಗುತ್ತಾರೆ. ತಕ್ಷಣ ಪ್ರೀತಿಗೆ ಬಿದ್ದುಬಿಡುತ್ತಾರೆ. ಆದರೂ ತಮ್ಮ ಸಂಗಾತಿಯೊಂದಿಗೆ ಗಾಢವಾದ ಹಾಗೂ ರೋಮ್ಯಾಂಟಿಕ್ ಬಾಂಧವ್ಯ ಹೊಂದಿರುತ್ತಾರೆ. ಮಿಥುನ ರಾಶಿಯವರ ಸಂಗಾತಿಯೂ ಇವರಷ್ಟೇ ಉತ್ಸಾಹಿಯಾಗಿದ್ದರೆ ಉತ್ತಮ. ಸಂಗಾತಿಗೆ ಅಚ್ಚರಿ ನೀಡಲು ಇಷ್ಟಪಡುತ್ತಾರೆ. ರೋಮ್ಯಾನ್ಸ್ ನಲ್ಲಿ ಹೊಸತನ್ನು ಬಯಸುತ್ತಾರೆ ಹಾಗೂ ನೀಡುತ್ತಾರೆ.