Asianet Suvarna News Asianet Suvarna News

ಗುರು ಪೂರ್ಣಿಮೆ ವಿಶೇಷ: 10 ಸಾವಿರ ಅನಿವಾಸಿ ಭಾರತೀಯರಿಂದ ಟೆಕ್ಸಾಸ್‌ನಲ್ಲಿ ಭಗವದ್ಗೀತೆ ಪಠಣ

ಅಮೆರಿಕಾದ ಟೆಕ್ಸಾಸ್‌ನ ಅಲ್ಲೆನ್ ಈಸ್ಟ್ ಸೆಂಟರ್‌ನಲ್ಲಿ ಈ ಗುರುಪೂರ್ಣಿಮೆ ದಿನವೂ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು. 10 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ಜೊತೆ ಸೇರಿ ಭಗವದ್ಗೀತೆಯ ಪಠಣ ಮಾಡಿ ಇತಿಹಾಸ ಬರೆದರು. 

Guru Purnima Special Bhagavad Gita Chanted in Texas by Over 10,000 NRIs akb
Author
First Published Jul 4, 2023, 12:10 PM IST | Last Updated Jul 4, 2023, 12:15 PM IST

ಟೆಕ್ಸಾಸ್: ನಿನ್ನೆಯಷ್ಟೇ ದೇಶಾದ್ಯಂತ ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅನೇಕ ದೇಗುಲಗಳಲ್ಲಿ ಗುರು ಪೂರ್ಣಿಮೆ ಹಿನ್ನೆಲೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಅದೇ ರೀತಿ ಅನೇಕರು ತಮ್ಮ ಗುರುಗಳನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ನಮನ ಸಲ್ಲಿಸಿದರು.  ಈ ಗುರು ಪೂರ್ಣಿಮೆಯನ್ನು ವಿದೇಶದಲ್ಲೂ ಭಾರತೀಯರು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಅಮೆರಿಕಾದ ಟೆಕ್ಸಾಸ್‌ನ ಅಲ್ಲೆನ್ ಈಸ್ಟ್ ಸೆಂಟರ್‌ನಲ್ಲಿ ಈ ಗುರುಪೂರ್ಣಿಮೆ ದಿನವೂ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು. 10 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ಜೊತೆ ಸೇರಿ ಭಗವದ್ಗೀತೆಯ ಪಠಣ ಮಾಡಿ ಇತಿಹಾಸ ಬರೆದರು. 

ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು (Bhagavadgita) ಸಾವಿರಕ್ಕೂ ಹೆಚ್ಚು ಭಾರತೀಯರು ಜೊತೆಯಾಗಿ ಪಠಿಸಿದರು.  ಧಾರ್ಮಿಕ ಗುರು ಸಂತ ಪೂಜ್ಯ ಶ್ರೀ ಗಣಪತಿ ಸಚಿದಾನಂದ ಸ್ವಾಮಿ (Ganapati sachidananda swamiji) ಅವರ ಉಪಸ್ಥಿತಿಯಲ್ಲಿ ಟೆಕ್ಸಾಸ್‌ನ (Texas) ಅಲ್ಲೆನ್ ಈಸ್ಟ್ ಸೆಂಟರ್‌ನಲ್ಲಿ (Allen East center) ನಿನ್ನೆ ಈ ವಿಶೇಷ ಕಾರ್ಯಕ್ರಮ ನಡೆದಿದೆ. 10 ಸಾವಿರಕ್ಕೂ ಹೆಚ್ಚು ಜನ ಈ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಗವದ್ಗೀತೆಯ ಪಠಣ ಮಾಡಿದರು.  ಈ ಕಾರ್ಯಕ್ರಮವನ್ನು ಯೋಗ ಸಂಗೀತಾ ಹಾಗೂ ಎಸ್‌ಜಿಎಸ್ ಗೀತಾ ಫೌಂಡೇಶನ್‌ (SGS Geeta Foundation) ವತಿಯಿಂದ ಆಯೋಜಿಸಲಾಗಿತ್ತು. ಭಗವದ್ಗೀತಾ ಪರಾಯಣ ಯಜ್ಞ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

ಸಂತ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಮೈಸೂರಿನಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅವಧೂತ ದತ್ತ ಪೀಠದ ಮಠಾಧೀಶರಾಗಿದ್ದಾರೆ. 

ಕಳೆದ ವರ್ಷವೂ ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನಲ್ಲಿ ಅಮೆರಿಕದ ಡಲಾಸ್‌ ನಗರದಲ್ಲಿ ಭಗವದ್ಗೀತಾ ಪಾರಾಯಣ ಮಾಡಲಾಗಿತ್ತು. ಎರಡೂ ಸಾವಿರಕ್ಕೂ ಹೆಚ್ಚು ಮಂದಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಮಾಡಿ ವಿಶ್ವದಾಖಲೆ ಸೃಷ್ಟಿಸಿದ್ದರು. ಅಲ್ಲದೆ ಇದಕ್ಕಾಗಿ ಅತೀ ದೊಡ್ಡ ಏಕಕಾಲಿಕ ಹಿಂದೂ ಪಠ್ಯ ವಾಚನ ಎಂಬ ಗಿನ್ನೀಸ್‌ ದಾಖಲೆಯನ್ನ ಪಡೆಯಲಾಗಿತ್ತು.  ಈ ಭಗವದ್ಗೀತೆ ಪಾರಾಯಣ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೂಜ್ಯ ಸ್ವಾಮೀಜಿಯವರು ವಿದೇಶದಲ್ಲಿ ಭಾರತದ ಸಂಸ್ಕೃತಿಯನ್ನು ಪಸರಿಸುತ್ತಿರುವುದು ಶ್ಲಾಘನೀಯ ಅಂತ ಪತ್ರದ ಮೂಲಕ ಪ್ರಧಾನಿ ಅಭಿನಂದಿಸಿದ್ದರು. 

Fact Check: ಅರೇಬಿಕ್‌ ‘ಭಗವದ್ಗೀತೆ’ಯನ್ನು ಪ್ರಕಟಿಸಿತಾ ಸೌದಿ ಸರ್ಕಾರ?

ಮಹಾಭಾರತ ಯುದ್ಧರಂಗದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ತತ್ವಬೋಧೆಯೇ ಭಗವದ್ಗೀತೆ. ಇದು ಜೀವನದ ಸಾರವನ್ನು ವಿವರಿಸುತ್ತದೆ.  ಭಗವದ್ಗೀತೆ ಓದಬೇಕು ಅಂತ ಬಹುತೇಕ ಹಿಂದೂಗಳಿಗೆ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ಆದರೆ ಆ ಐದು ಅಧ್ಯಾಯಗಳಲ್ಲಿ ಏನೆನಿದೆ ಎಂಬ ಅಂಶ ಇಲ್ಲಿದೆ. 

ಅಧ್ಯಾಯ 1: ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ
ಅಧ್ಯಾಯ 2: ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ
ಅಧ್ಯಾಯ 3: ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ
ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ
ಅಧ್ಯಾಯ 5: ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು
ಅಧ್ಯಾಯ 6: ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ
ಅಧ್ಯಾಯ 7: ನೀನಾರು ಎಂದು ತಿಳಿದುಕೋ. 
ಅಧ್ಯಾಯ 8: ಪ್ರಯತ್ನ ಬಿಡಬೇಡ
ಅಧ್ಯಾಯ 9: ದೇವರ ಧ್ಯಾನದಿಂದ ನನ್ನ ಸೇರಬಹುದು
ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ
ಅಧ್ಯಾಯ 11: ವಿಶ್ವರೂಪ ದರ್ಶನ
ಅಧ್ಯಾಯ 12: ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ
ಅಧ್ಯಾಯ 13: ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು
ಅಧ್ಯಾಯ 14: ನಿನ್ನದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
ಅಧ್ಯಾಯ 15: ದೈವಿಕತ್ವಕ್ಕೆ ಬೆಲೆ ಕೊಡು
ಅಧ್ಯಾಯ 16 : ಉತ್ತಮನಾಗಿರುವುದೇ ವರ
ಅಧ್ಯಾಯ 17: ಮೇರು ಸತ್ಯ
ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ

ವೀಡಿಯೋ ಇಲ್ಲಿದೆ ನೋಡಿ:

 

 

Latest Videos
Follow Us:
Download App:
  • android
  • ios