ಸೌದಿ ಅರೇಬಿಯಾ ಸರ್ಕಾರವು ಅರೇಬಿಕ್‌ ಭಾಷೆಯಲ್ಲಿ ‘ಭಗವದ್ಗೀತೆ’ಯನ್ನು ಬಿಡುಗಡೆ ಮಾಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ.

ಅದರೊಂದಿಗೆ ಶ್ರೀ ಕೃಷ್ಣ ಮತ್ತು ಅರ್ಜುನ್‌ ರಥದ ಮೇಲೆ ಕುಳಿತಿರುವ ಫೋಟೋದ ಕವರ್‌ ಪೇಜ್‌ಅನ್ನು ಶೇರ್‌ ಮಾಡಲಾಗುತ್ತಿದೆ. ಅದರ ಮೇಲೆ ಅರೇಬಿಕ್‌ ಭಾಷೆಯಲ್ಲಿ ಬರೆದ ಪದಗಳಿವೆ. ಪುಷ್ಪೇಂದ್ರ ಕುಲಶ್ರೇಷ್ಠ ಎಂಬವರು ಮೊದಲಿಗೆ ಇದನ್ನು ಟ್ವೀಟ್‌ ಮಾಡಿದ್ದು, ಅದು 1000ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ. ಇದರೊಂದಿಗೆ ‘ಹಿಂದುತ್ವ ಮೇರೆ ಶಾನ್‌’ ಎಂಬ ಫೇಸ್‌ಬುಕ್‌ ಪೇಜ್‌ ಕೂಡ ಇದನ್ನು ಪೋಸ್ಟ್‌ ಮಾಡಿದ್ದು, ಅದು 1600 ಬಾರಿ ಶೇರ್‌ ಆಗಿದೆ.

 

ಆದರೆ ನಿಜಕ್ಕೂ ಸೌದಿ ಸರ್ಕಾರ ಅರೇಬಿಕ್‌ ಭಾಷೆಯಲ್ಲಿ ‘ಭಗವದ್ಗೀತೆ’ಯನ್ನು ಪ್ರಕಟಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಗೂಗಲ್‌ನಲ್ಲಿ ‘ಸೌದಿ ಅರೇಬಿಯಾ ಭಗವದ್ಗೀತೆ ಅರೇಬಿಕ್‌’ ಎಂಬ ಕೀ ವರ್ಡ್‌ ಬಳಸಿ ಹುಡಕಿದಾಗ ಈ ಕುರಿತ ಒಂದೇ ಒಂದು ವರದಿಗಳೂ ಲಭ್ಯವಾಗಿಲ್ಲ. ಇದು ನಿಜವೇ ಆಗಿದ್ದರೆ ಎಲ್ಲ ಮುಖ್ಯವಾಹಿನಿಗಳೂ ವರದಿ ಮಾಡುತ್ತಿದ್ದವು. ಕೊನೆಗೆ ವೈರಲ್‌ ಆಗಿರುವ ಪುಸ್ತಕದ ಜಾಡು ಹಿಡಿದು ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ, ಇಸ್ಕಾನ್‌ ಭಕ್ತ ರಾವನಾರಿ ಪ್ರಭು ಅವರು ಭಗವದ್ಗೀತೆಯನ್ನು ಅರೇಬಿಕ್‌ ಭಾಷಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

- ವೈರಲ್ ಚೆಕ್