ಗುರು ಕೃಪೆಗಾಗಿ ಗುರು ಪೂರ್ಣಿಮೆಯಂದು ಹೀಗೆ ಮಾಡಿ!
ಗುರು ಎಂದರೆ ಜ್ಞಾನ. ಜಗತ್ತಿಗೆ ವೇದಗಳ ಜ್ಞಾನವನ್ನು ನೀಡಿದ ಮಹರ್ಷಿ ವ್ಯಾಸರ ಜನ್ಮವಾದದ್ದು ಆಷಾಢ ಮಾಸದ ಪೂರ್ಣಿಮೆಯಂದು ಹಾಗಾಗಿ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಆ ಬಗ್ಗೆ ತಿಳಿಯೋಣ..
ಹಿಂದೂ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳ ಆಚರಣೆಗೆ ವಿಶೇಷ ಮಹತ್ವವಿದೆ. ಆಷಾಢ ಮಾಸದ ಹುಣ್ಣಿಮೆ ತಿಥಿಯನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಈ ದಿನವನ್ನು ಅತ್ಯಂತ ವಿಶೇಷ ದಿನವೆಂದು ಹೇಳಿದ್ದಾರೆ. ಹುಣ್ಣಿಮೆಯು ಶ್ರೀ ಮಹಾವಿಷ್ಣುವಿನ ದಿನವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆಯನ್ನು ಆಚರಿಸಿದಲ್ಲಿ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಸಹ ಇದೆ.
ಗುರುವಿಲ್ಲದೇ ಅರಿವಿಲ್ಲ ಎಂಬ ಮಾತಿನಂತೆ ಗುರು ಪೂರ್ಣಿಮೆಯಂದು ಶಿಷ್ಯರು ಗುರುವಿಗೆ ಶಕ್ತಿಗೆ ಅನುಸಾರ ಗುರುದಕ್ಷಿಣೆಯನ್ನು ನೀಡಿ, ಗುರುವಿನ ಆಶೀರ್ವಾದವನ್ನು ಪಡೆಯುವುದಾಗಿದೆ.
ಆಷಾಢ ಮಾಸದ ಪೂರ್ಣಿಮೆಯಂದೇ ಮಹಾಭಾರತವನ್ನು ರಚಿಸಿದ ಕೃಷ್ಣ ದ್ವೈಪಾಯನ ವ್ಯಾಸ ಮಹರ್ಷಿಗಳ ಜನ್ಮದಿನವೂ ಆಗಿದೆ. ನಾಲ್ಕು ವೇದಗಳನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಿದ ಮಹಾ ಜ್ಞಾನಿಗಳು ಇವರಾಗಿದ್ದಾರೆ. ಹಾಗಾಗಿ ವೇದವ್ಯಾಸ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ. ವ್ಯಾಸರನ್ನು ಮೊದಲ ಗುರುವೆಂದು ಕರೆಯುತ್ತಾರೆ. ಅಷ್ಟೇ ಅಲ್ಲದೆ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ.
ಇದನ್ನು ಓದಿ: ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!
ಗುರು ಪೂರ್ಣಿಮೆಯಂದು ಹೀಗೆ ಮಾಡಿ
ಈ ದಿನ ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿದ ನಂತರ ನಿತ್ಯದಂತೆ ಪೂಜಾವಿಧಿಗಳನ್ನು ಸಂಪನ್ನಗೊಳಿಸಬೇಕು. ಶೂಚಿರ್ಭೂತರಾಗಿ ಶುದ್ಧ ವಸ್ತ್ರವನ್ನು ಧರಿಸಿ ಗುರು ಸನ್ನಿಧಿಗೆ ತೆರಳಬೇಕು. ಉತ್ತಮಾಸನದ ಮೇಲೆ ಕುಳ್ಳಿರಿಸಿ, ಪೂಜಿಸಿ ವಸ್ತ್ರ, ಫಲ ಮತ್ತು ದಕ್ಷಿಣೆಯನ್ನು ನೀಡಿ ಗೌರವಿಸಬೇಕು.
ಶ್ರದ್ಧೆಯಿಂದ ಗುರುವನ್ನು ಆರಾಧಿಸಿದರೆ ಗುರುಗಳ ಆಶೀರ್ವಾದ ದೊರಕುತ್ತದೆ. ಗುರುವಿನ ಅನುಗ್ರಹದಿಂದ ಸರ್ವ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಅಜ್ಞಾನವನ್ನು ಅಳಿಸಿ ಜ್ಞಾನದ ಬೆಳಕನ್ನು ನೀಡುವ ಗುರುವನ್ನು ಸದಾ ಸ್ಮರಿಸುವುದರಿಂದ ಜೀವನದಲ್ಲಿ ಜ್ಞಾನವರ್ಧನೆ ಆಗುವುದಲ್ಲದೆ, ಶುಭಫಲ ಪ್ರಾಪ್ತವಾಗುತ್ತದೆ.
ಇದನ್ನು ಓದಿ: ಆರೋಗ್ಯಕರ ಜೀವನ, ನೆಮ್ಮದಿಯ ನಿದ್ರೆಗೆ ವಾಸ್ತು ಮುದ್ರೆ.. !
ಗುರು ಪೂರ್ಣಿಮೆಯಂದು ಹೀಗೆ ಮಾಡಿ
- ಗುರುವನ್ನು ಗೌರವಾದರಗಳಿಂದ ಸತ್ಕರಿಸಬೇಕು.
- ಈ ದಿನ ವಿಷ್ಣುವಿಗೆ ಪ್ರಿಯವಾದ ಹಳದಿ ಬಣ್ಣದ ವಸ್ತುಗಳು ಅಂದರೆ ವಸ್ತ್ರ, ಪುಷ್ಪ, ಫಲ ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನವಾಗಿ ನೀಡಬೇಕು. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುತ್ತದೆ.
- ಗುರು ಪೂರ್ಣಿಮೆಯಂದು ಶ್ರದ್ಧೆ ಮತ್ತು ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿವುದಲ್ಲದೆ, ಅಗತ್ಯವಿರುವವರಿಗೆ ಭೋಜನವನ್ನು ನೀಡುವುದರಿಂದ ಜಾತಕದಲ್ಲಿ ಗುರು ಗ್ರಹಕ್ಕೆ ಸಂಬಂಧಿಸಿದ ದೋಷವಿದ್ದಲ್ಲಿ ಪರಿಹಾರವಾಗುತ್ತದೆ.
- ಈ ದಿನ ಶೂಚಿರ್ಭೂತರಾಗಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಕುಂಕುಮದಿಂದ ದೇವಸ್ಥಾನದ ಎಡ ಮತ್ತು ಬಲಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ನಂತರ ಅದರ ಮೇಲೆ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಗೃಹ ಕ್ಲೇಶಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
ಈ ರೀತಿ ಮಾಡಬಾರದು:
- ಗುರು ಪೂರ್ಣಿಮೆಯಂದು ತಾಮಸ ಆಹಾರವನ್ನು ಸೇವಿಸಬಾರದು.
- ಈ ದಿನ ಮದ್ಯ ಸೇವನೆ ಮಾಡಬಾರದು. ಇದರಿಂದ ಶರೀರದ ಮೇಲಷ್ಟೇ ಅಲ್ಲದೆ ಭವಿಷ್ಯದಲ್ಲೂ ತೊಂದರೆಗಳನ್ನು ಅನೇಕ ಅನುಭವಿಸಬೇಕಾಗುತ್ತದೆ.
- ಗುರು ಪೂರ್ಣಿಮೆಯ ದಿನದಂದು ಪವಿತ್ರತೆಯಿಂದ ಇರುವುದಷ್ಟೇ ಅಲ್ಲದೆ ಅದರ ಹಿಂದಿನ ದಿನ ಮತ್ತು ಮರುದಿನವು ಸಹ ಶುಚಿರ್ಭೂತರಾಗಿರ ಬೇಕೆಂದು ಶಾಸ್ತ್ರ ಹೇಳುತ್ತದೆ.
ಇದನ್ನು ಓದಿ: ಜಾತಕದ ಅನುಸಾರ ಶುಭ ವಿವಾಹಕ್ಕೆ ಗುಣ ಲೆಕ್ಕಾಚಾರ..!
ಗುರು ಪೂರ್ಣಿಮೆಯ ಮಹತ್ವ ಇಂತಿದೆ...
ಗುರು ಪೂರ್ಣಿಮೆಯಂದು ಗುರುವನ್ನು ಸತ್ಕರಿಸಿ, ಗುರು ದಕ್ಷಿಣೆಯನ್ನು ನೀಡುವುದರ ಜೊತೆಗೆ, ಈ ದಿನ ಸತ್ಯನಾರಾಯಣ ಪೂಜೆಯನ್ನು ಮತ್ತು ವಿಷ್ಣುವಿಗೆ ವಿಶೇಷ ಪೂಜೆಯನ್ನು ಸಹ ಮಾಡುವ ರೂಢಿ ಕೆಲವು ಕಡೆಗಳಲ್ಲಿ ಇದೆ.
ಈ ದಿನ ಮನೆಯ ಪ್ರವೇಶ ದ್ವಾರವನ್ನು ಮಾವಿನ ಎಲೆಯಿಂದ ತಯಾರಿಸಿದ ತೋರಣಗಳಿಂದ ಸಿಂಗರಿಸಬೇಕು. ಅಷ್ಟೇ ಅಲ್ಲದೆ ಫಲ, ಪುಷ್ಪ ಮತ್ತು ಸಿಹಿಯಾದ ಪದಾರ್ಥಗಳನ್ನು ದೇವರಿಗೆ ಅರ್ಪಿಸಬೇಕು.