ಆರೋಗ್ಯಕರ ಜೀವನ, ನೆಮ್ಮದಿಯ ನಿದ್ರೆಗೆ ವಾಸ್ತು ಮುದ್ರೆ.. !
ಉತ್ತಮ ಆರೋಗ್ಯಕ್ಕೆ ಪರಿಪೂರ್ಣ ನಿದ್ದೆ ಅವಶ್ಯಕ. ಹಾಗಾಗಿ ನೆಮ್ಮದಿಯ ನಿದ್ದೆಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕ. ಮಲಗುವ ದಿಕ್ಕು ಮತ್ತು ಕೆಲವು ಅಭ್ಯಾಸಗಳು ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಉತ್ತಮವಾದ ನಿದ್ದೆಯಿಂದ ಮಾತ್ರ ಉತ್ಸಾದ ಜೀವನ ಸಾಧ್ಯ. ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ನಿಯಮಗಳೇನು ಎಂಬುದನ್ನು ತಿಳಿಯೋಣ...
ಜೀವನದಲ್ಲಿ ಸುಖ ಮತ್ತು ನೆಮ್ಮದಿಯಿಂದ ಕಾಲ ಕಳೆಯಬೇಕೆಂದರೆ ಉತ್ತಮ ಆರೋಗ್ಯ ಅವಶ್ಯಕ. ನಿತ್ಯದ ಜೀವನದ ಒತ್ತಡಗಳ ನಡುವೆ ನೆಮ್ಮದಿಯಿಂದ ನಿದ್ರಿಸುವುದು ಕೆಲವರಿಗೆ ಕಷ್ಟ. ವಾಸ್ತು ಶಾಸ್ತ್ರದಲ್ಲಿ ಎಲ್ಲ ವಿಚಾರಗಳಿಗೆ ಪರಿಹಾರವಿರುವಂತೆ. ಈ ವಿಚಾರಕ್ಕೂ ಕೆಲವು ಟಿಪ್ಸ್ ಇದೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದಲ್ಲಿ ಆರೋಗ್ಯಕರ ಜೀವನ ಮತ್ತು ಉತ್ತಮ ನಿದ್ರೆಗೆ ಕೆಲವು ನಿಯಮಗಳ ಪಾಲನೆ ಬಗ್ಗೆ ಉಲ್ಲೇಖಿಸಿದ್ದಾರೆ.
ನಿದ್ರೆ ಉತ್ತಮ ಸ್ವಾಸ್ಥ್ಯದ ಒಂದು ಭಾಗ. ಸರಿಯಾಗಿ ನಿದ್ರಿಸಿದರೆ ಮಾತ್ರ ಮುಂದಿನ ಕೆಲಸಗಳನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ. ಸಕಾರಾತ್ಮಕ ಚಿಂತನೆ ಮತ್ತು ಶಕ್ತಿ ಹೆಚ್ಚಬೇಕೆಂದರೆ ಪರಿಪೂರ್ಣ ನಿದ್ದೆ ಅವಶ್ಯಕ. ಪ್ರತಿಯೊಬ್ಬ ವ್ಯಕ್ತಿಗೆ 8 ತಾಸಿನ ನಿದ್ದೆ ಅವಶ್ಯಕವೆಂದು ಹೇಳಲಾಗುತ್ತದೆ. ಸರಿಯಾಗಿ ನಿದ್ದೆ ಆಗದಿದ್ದರೆ ಶರೀರದಲ್ಲಿ ಆಯಾಸ ಮತ್ತು ಕೆಲಸ ಕಾರ್ಯಗಳಲ್ಲಿ ಆಲಸ್ಯ ಉಂಟಾಗುತ್ತದೆ. ಹಾಗಾಗಿ ನೆಮ್ಮದಿಯ ನಿದ್ದೆ ಪ್ರತಿಯೊಬ್ಬರಿಗೂ ಅವಶ್ಯಕ.
ಇದನ್ನು ಓದಿ: ಜಾತಕದ ಅನುಸಾರ ಶುಭ ವಿವಾಹಕ್ಕೆ ಗುಣ ಲೆಕ್ಕಾಚಾರ..!
ವಾಸ್ತು ಶಾಸ್ತ್ರದ ಸರಿಯಾಗಿ ನಿದ್ದೆ ಬರದಿರುವುದಕ್ಕೆ ನಿದ್ರಿಸುವ ದಿಕ್ಕು ಮತ್ತು ಅಭ್ಯಾಸಗಳು ಬಹುಮುಖ್ಯ ಕಾರಣವಾಗುತ್ತವೆ. ನೆಮ್ಮದಿಯ ನಿದ್ರೆಗೆ ವಾಸ್ತು ನಿಯಮಗಳ ಪಾಲನೆ ಅಗತ್ಯ. ಹಾಗಾದರೆ ಅಂಥ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ...
ನಿದ್ರಿಸುವ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ಮಲಗುವುದು ಉತ್ತಮ. ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ತಲೆ ಇಟ್ಟು ನಿದ್ರಿಸುವುದರಿಂದ ಸಕಾರಾತ್ಮಕ ಶಕ್ತಿಯ ಸಂಚಾರ ಉತ್ತಮವಾಗಿ ಆಗುತ್ತದೆ. ಇದರಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಕ್ಷಮತೆ ಹೆಚ್ಚುತ್ತದೆ. ಮುಖ್ಯವಾಗಿ ಏಕಾಗ್ರತೆ ಹೆಚ್ಚುತ್ತದೆ. ಸಕಾರಾತ್ಮಕ ಶಕ್ತಿಯು ಹೆಚ್ಚುವುದರಿಂದ ಚಿಂತನೆಗಳು ಉತ್ತಮವಾಗಿರುತ್ತವೆ. ಇದರಿಂದ ಯಶಸ್ಸನ್ನು ಪಡೆಯಲು ಸುಲಭವಾಗುತ್ತದೆ.
ವಾಸ್ತು ಶಾಸ್ತ್ರ ಹೇಳುವ ಪ್ರಕಾರ ನಿದ್ರಿಸಲು ಪಶ್ಚಿಮ ದಿಕ್ಕು ಸಹ ಉತ್ತಮವೆಂದು. ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಯಶಸ್ಸು ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಕೀರ್ತಿ ಮತ್ತು ಯಶ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುವಂತೆ ಆಗುತ್ತದೆ. ಹಾಗಾಗಿ ಉತ್ತಮ ಆರೋಗ್ಯ ಮತ್ತು ಯಶಸ್ಸಿಗೆ, ನಿದ್ರಿಸುವ ದಿಕ್ಕು ಪೂರ್ವ ಹಾಗೂ ಪಶ್ಚಿಮ ಆಗಿದ್ದರೆ ಒಳಿತು ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಮುಖದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ನಿಮ್ಮದೇ ಅದೃಷ್ಟ...!
ನಿದ್ದೆಗೆ ಈ ದಿಕ್ಕು ಸರಿಯಲ್ಲ
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದೆಂದು ಹೇಳುತ್ತಾರೆ. ಹೌದು. ವಾಸ್ತು ಶಾಸ್ತ್ರ ಸಹ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಸರಿಯಲ್ಲವೆಂದು ಹೇಳುತ್ತದೆ. ಹೀಗೆ ಮಲಗುವುದರಿಂದ ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತವೆ. ಅಷ್ಟೇ ಅಲ್ಲದೆ ಹಲವು ರೀತಿಯ ಸ್ವಾಸ್ಥ್ಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತವೆ.
ಸುಖ-ಸಮೃದ್ಧಿಗೆ ಈ ದಿಕ್ಕು
ದಕ್ಷಿಣ ದಿಕ್ಕು ನಿದ್ರಿಸಲು ಉತ್ತಮ ದಿಕ್ಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಇದು ಅಶುಭ
ಕೊಳಕಾದ ಹಾಸಿಗೆ ಮತ್ತು ಮುರಿದಿರುವ ಮಂಚದ ಮೇಲೆ ಮಲಗುವುದು ಸರ್ವಥಾ ನಿಷಿದ್ಧವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದು ಅಶುಭವೆಂದು ಹೇಳಲಾಗುತ್ತದೆ. ಕೊಳಕಾದ ಹಾಸಿಗೆ ಅನಾರೋಗ್ಯವನ್ನು ಆಹ್ವಾನಿಸುತ್ತದೆ. ಹಾಗಾಗಿ ಶುಚಿಯಾದ ಹಾಸಿಗೆ ಮತ್ತು ಹೊದಿಕೆ ಬಳಕೆ ಮಾಡಬೇಕೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ನಿರ್ವಸ್ತ್ರರಾಗಿ ಮಲಗುವುದು ಸರಿಯಲ್ಲವೆಂದು ಸಹ ವಾಸ್ತು ಶಾಸ್ತ್ರ ಹೇಳಿದೆ.
ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!
ಮಲಗುವ ಮುಂಚೆ ಹೀಗೆ ಮಾಡಿ
ನಿದ್ರಿಸುವ ಮೊದಲು ಕೈ-ಕಾಲುಗಳನ್ನು ತೊಳೆದು ಮಲಗಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಮೊದಲು ಬಾಯಿ ತೊಳೆದಿರಬೇಕು. ಎಂಜಲು ಬಾಯಿಯಲ್ಲಿ ನಿದ್ರಿಸಬಾರದೆಂದು ಹೇಳಲಾಗುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ ಮತ್ತು ಆಗಾಗ ಎಚ್ಚರವಾಗುತ್ತದೆ. ಹಾಗಾಗಿ ಉತ್ತಮ ನಿದ್ದೆಗೆ ವಾಸ್ತು ಹೇಳಿದ ಈ ನಿಯಮಗಳ ಪಾಲನೆ ಅವಶ್ಯಕ.