ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!

ರಾಶಿಚಕ್ರದಲ್ಲಿರುವ ಎಲ್ಲ ರಾಶಿಗಳಿಗೆ ಆಯಾ ಗ್ರಹಗಳು ಅಧಿಪತಿ ದೇವರುಗಳಾಗಿರುತ್ತಾರೆ. ಪ್ರತಿ ರಾಶಿಯ ಅಧಿಪತ್ಯವನ್ನು ಹೊಂದಿರುವ ಗ್ರಹಗಳು ತಮ್ಮ ರಾಶಿಯ ಮೇಲೆ ವಿಶೇಷ  ಅನುಗ್ರಹವನ್ನು ನೀಡುತ್ತವೆ. ವೃಷಭ, ತುಲಾ ಮತ್ತು ಮೀನ ರಾಶಿಯ ವ್ಯಕ್ತಿಗಳ ಮೇಲೆ ಭೌತಿಕ ಸುಖಕ್ಕೆ ಕಾರಕ ಗ್ರಹವಾದ ಶುಕ್ರ ಗ್ರಹದ ವಿಶೇಷ ಕೃಪೆ ಇರುತ್ತದೆ. ಹಾಗಾಗಿ ಈ ರಾಶಿಯವರಿಗೆ ಶುಕ್ರ ಗ್ರಹದಿಂದ ಸಿಗುವ ಅದೃಷ್ಟ ಮತ್ತು ಅನುಕೂಲಗಳ ಬಗ್ಗೆ ತಿಳಿಯೋಣ...

People born with Taurus Virgo Pisces influenced by Venus

ರಾಶಿಚಕ್ರಗಳಿಗೆ ಒಂದೊಂದು ಗ್ರಹಗಳು ಅಧಿಪತ್ಯವನ್ನು ಹೊಂದಿರುತ್ತವೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಹಾಗಾಗಿ ಚಂದ್ರ ಗ್ರಹದ ಕೃಪೆ ಈ ರಾಶಿಯವರಿಗೆ ಇರುತ್ತದೆ. ಚಂದ್ರನ ಆರಾಧನೆಯಿಂದ ಉತ್ತಮ ಫಲಗಳು ಪ್ರಾಪ್ತವಾಗುತ್ತವೆ. ಹಾಗೆಯೇ ಕೆಲವು ರಾಶಿಯವರಿಗೆ ಅಧಿಪತಿ ಗ್ರಹವನ್ನು ಹೊರತುಪಡಿಸಿ ಬೇರೆ ಕೆಲ ಗ್ರಹಗಳ ಕೃಪೆಯು ಇರುತ್ತದೆ. ಐಷಾರಾಮಿ ಜೀವನಕ್ಕೆ ಶುಕ್ರ ಗ್ರಹದ ಅನುಗ್ರಹವಿರುವುದು ಅತ್ಯವಶ್ಯಕ. ಹಾಗಾದರೆ ಶುಕ್ರ ಗ್ರಹದ ಕೃಪೆ ಹೊಂದಿರುವ ರಾಶಿಗಳ ಬಗ್ಗೆ ತಿಳಿಯೋಣ...

ಶುಕ್ರ ಗ್ರಹವು ಭೌತಿಕ ಸುಖ-ಸಮೃದ್ಧಿಯ ಕಾರಕ ಗ್ರಹವಾಗಿದೆ. ಹಾಗಾಗಿ ಶುಕ್ರ ಗ್ರಹದ ಶುಭ ಪ್ರಭಾವಕ್ಕೆ ಒಳಗಾಗುವ ರಾಶಿಯವರ ದಾಂಪತ್ಯ ಜೀವನದಲ್ಲಿ, ಪ್ರೇಮ ವಿಚಾರಗಳಲ್ಲಿ ಒಳಿತಾಗುವುದಲ್ಲದೆ ಸಂಬಂಧ ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲದೆ, ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ: ಜಾತಕದ ಅನುಸಾರ ಶುಭ ವಿವಾಹಕ್ಕೆ ಗುಣ ಲೆಕ್ಕಾಚಾರ..!

ಬುಧ ಮತ್ತು ಶನಿ ಗ್ರಹವು ಶುಕ್ರ ಗ್ರಹದ ಮಿತ್ರಗ್ರಹವಾದರೆ, ಸೂರ್ಯ ಮತ್ತು ಚಂದ್ರ  ಶುಕ್ರ ಗ್ರಹದ ಶತ್ರು ಗ್ರಹಗಳಾಗಿವೆ. ಶುಕ್ರ ಗ್ರಹದ ಗೋಚಾರ ಸಮಯವು ಸುಮಾರು 23 ದಿನಗಳ ಕಾಲವಿರುತ್ತದೆ. ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಸಂಪತ್ತು ಮತ್ತು ಲಕ್ಷ್ಮೀಯ ಕಾರಕನೆಂದು ಹೇಳಲಾಗುತ್ತದೆ. ಶುಕ್ರ ಗ್ರಹಕ್ಕೆ ಪ್ರಿಯವಾದ ಮೂರು ರಾಶಿಗಳ ಬಗ್ಗೆ ತಿಳಿಯೋಣ..

ಇದನ್ನು ಓದಿ: ಮುಖದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ನಿಮ್ಮದೇ ಅದೃಷ್ಟ...!

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಸುಂದರ ಮತ್ತು ಆಕರ್ಷಕ ರಾಶಿ ವೃಷಭವೆಂದು ಹೇಳಲಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಆಡಳಿತ ವಿಭಾಗ ಹಾಗೂ ಸೌಂದರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಸುಮಾರು 30 ವರ್ಷದ ನಂತರ ಇವರ ಯಶಸ್ಸಿನ ಹಂತಗಳು ಪ್ರಾರಂಭವಾಗಲಿದ್ದು, ಅಲ್ಲಿಂದ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನು ಹತ್ತುತ್ತಾರೆ. ಇವರ ಸಹನಶೀಲತೆಯು ತುಸು ಹೆಚ್ಚೇ ಇದ್ದು, ಯಾವುದೇ ಸಂದರ್ಭದಲ್ಲಿಯೂ ಇವರು ತಾಳ್ಮೆ ಕೆಡಲಾರರು. ವೈಭವದ ಹಾಗೂ ಐಷಾರಾಮಿ ಜೀವನವನ್ನು ನಡೆಸಬೇಕು. ಜೀವನದಲ್ಲಿ ಸಕಲ ಸಂಪತ್ತನ್ನು ಗಳಿಸಬೇಕು ಎಂದು ಸದಾ ಇಷ್ಟಪಡುತ್ತಾರೆ. ಆದರೆ, ಪರಿಶ್ರಮಿಗಳಾಗಿರುವ ಇವರು ಜೀವನದಲ್ಲಿ ಬಹಳ ಹಣವನ್ನು ಗಳಿಸುತ್ತಾರೆ. 

People born with Taurus Virgo Pisces influenced by Venus


ತುಲಾ ರಾಶಿ
ಈ ರಾಶಿಯವರು ಗ್ಲಾಮರ್ ಅನ್ನು ಹೆಚ್ಚು ಇಷ್ಟ ಪಡುತ್ತಾರೆ. ತುಲಾ ರಾಶಿಯ ವ್ಯಕ್ತಿಗಳಿಗೆ ಜೀವನದಲ್ಲಿ ಸುಖ-ಸಮೃದ್ಧಿಗೆ ಕೊರತೆ ಆಗುವುದಿಲ್ಲ. ಶುಕ್ರ ಗ್ರಹದ ಕೃಪೆಯಿಂದ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ದುಬಾರಿ ವಸ್ತುಗಳನ್ನು ಖರೀದಿಸುವ ಬಯಕೆ ಇವರಿಗಿರುತ್ತದೆ. ತುಲಾ ರಾಶಿಯವರು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಸತತ ಪರಿಶ್ರಮವನ್ನು ಪಡುತ್ತಾರೆ. ಶ್ರಮ ಪಡುವುದಕ್ಕೆ ತಕ್ಕ ಫಲವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಸದಾ ಸಿದ್ಧರಾಗಿ ಇರುವುದೆಂದರೆ ಬಹಳ ಇಷ್ಟ. ಕಾಲಕ್ಕೆ ತಕ್ಕಂತೆ ವಿವಿಧ ವಿನ್ಯಾಸಗಳ ಉಡುಪನ್ನು ಧರಿಸುತ್ತಾರೆ. ತಾವಷ್ಟೇ ಅಲ್ಲದೆ ತಮ್ಮವರು ಖುಷಿಯಿಂದ ಇರಬೇಕೆಂದು ಬಯಸುತ್ತಾರೆ. ಸ್ನೇಹಿತರಿಂದ ಸಹಕಾರವನ್ನು ಪಡೆಯುವುದಲ್ಲದೆ, ಸರ್ವರ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಾರೆ.

ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ಮೀನ ರಾಶಿ
ಶುಕ್ರ ಗ್ರಹವು ಉಚ್ಛವಾಗಿರುವ ರಾಶಿ ಮೀನ ರಾಶಿ. ಈ ರಾಶಿಯ ವ್ಯಕ್ತಿಗಳು ಕಲೆಯನ್ನು ಆರಾಧಿಸುವವರಾಗಿರುತ್ತಾರೆ. ಅಷ್ಟೇ ಅಲ್ಲದೆ ಕಲಾತ್ಮಕ ವಿಷಯಗಳಲ್ಲಿ ಉತ್ತಮ ರುಚಿ ಹೊಂದಿರುತ್ತಾರೆ. ಮೀನ ರಾಶಿಯ ವ್ಯಕ್ತಿಗಳು ಬಹುಮುಖ ಪ್ರತಿಭೆಯನ್ನು ಹೊಂದಿದವರಾಗಿರುತ್ತಾರೆ. ಎಲ್ಲ ವಿಚಾರಗಳಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ಉಳ್ಳವರಾಗಿರುತ್ತಾರೆ. ಈ ರಾಶಿಯವರಿಗೆ ಕಲೆ, ಚಿಕಿತ್ಸೆ, ಜೀವಶಾಸ್ತ್ರ ಮತ್ತು ಸಂಗೀತ ಕ್ಷೇತ್ರಗಳು ಉತ್ತಮ ಯಶಸ್ಸನ್ನು ತಂದುಕೊಡುತ್ತವೆ. ಈ ರಾಶಿಯವರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಕೈಗೆ ಬಂದ ಕೆಲಸವನ್ನು ಉದಾಸೀನ ಮಾಡದೆ ನಿಷ್ಠೆಯಿಂದ ಪೂರ್ಣಗೊಳಿಸುತ್ತಾರೆ.

Latest Videos
Follow Us:
Download App:
  • android
  • ios