Asianet Suvarna News Asianet Suvarna News

Chanakya Niti: ಈ ಆರನ್ನು ನೀವು ದಿನಾ ಹೆಂಡತಿಗೆ ಕೊಡದೇ ಇದ್ದರೆ, ಅವಳ ಜೊತೆಗೆ ಲಕ್ಷ್ಮಿಯನ್ನೂ ಕಳೆದುಕೊಳ್ತೀರಿ!

ಆಚಾರ್ಯ ಚಾಣಕ್ಯರ ಪ್ರಕಾರ, ಮನೆಯಲ್ಲಿ ಸಂಪತ್ತನ್ನು ಕಾಪಾಡಿಕೊಳ್ಳಲು ಲಕ್ಷ್ಮಿಯಂತೆ ಹೆಂಡತಿಯನ್ನು, ಹೆಂಡತಿಯಂತೆ ಲಕ್ಷ್ಮಿಯನ್ನು ನೋಡಿಕೊಳ್ಳಬೇಕು. ಈ ಆರು ಸಂಗತಿಗಳನ್ನು ಪಾಲಿಸಿದರೆ ಬಡತನ ದೂರವಾಗಿ ಶ್ರೀಮಂತಿಕೆ ಹೆಚ್ಚುತ್ತದೆ.

Give these 6 things to your wife daily to retain money, says Chanakya niti bni
Author
First Published Aug 28, 2024, 3:06 PM IST | Last Updated Aug 28, 2024, 4:46 PM IST

ಆಚಾರ್ಯ ಚಾಣಕ್ಯ ಹಲವು ವಿಷಯಗಳನ್ನು ಹೇಳಿದ್ದಾನೆ. ಅದರಲ್ಲಿಯೂ ಆತ ದಾಂಪತ್ಯದ ಬಗ್ಗೆ ಹೇಳಿರುವ ಸಂಗತಿಗಳು ಮುಖ್ಯವಾಗಿವೆ, ಜನಪ್ರಿಯವೂ ಆಗಿವೆ. ಅವುಗಳಲ್ಲಿ ಒಂದು ಎಂದರೆ, ಲಕ್ಷ್ಮಿದೇವಿಯನ್ನು  ಅರ್ಥಾತ್ ಸಂಪತ್ತನ್ನು ಮನೆಯಲ್ಲಿ ಕಾಪಾಡಿಕೊಳ್ಳುವುದು ಹೇಗೆ ಎಂಬುದು ಮುಖ್ಯವಾದುದು. ಪ್ರತಿದಿನವೂ ಹೆಂಡತಿಯಂತೆ ಲಕ್ಷ್ಮಿಯನ್ನು, ಲಕ್ಷ್ಮಿಯಂತೆ ಹೆಂಡತಿಯನ್ನು ನೋಡಿಕೊಳ್ಳಬೇಕು. ಈ ಕೆಳಗಿನ ಆರು ಸಂಗತಿಗಳನ್ನು ಆಕೆಗೆ ಕೊಡುತ್ತಾ ಇರಬೇಕು. ಹಾಗಿದ್ದರೆ ಆತ ಬಡವನಾಗುವುದಿಲ್ಲ. ಬದಲಾಗಿ ಶ್ರೀಮಂತಿಕೆ ಹೆಚ್ಚುತ್ತ ಹೋಗುತ್ತದಂತೆ.
 
1) ಶಾರೀರಿಕ ಆನಂದ (ಭೋಗಂ) (Physical Happiness): ಹೆಂಡತಿಯನ್ನು ಶಾರೀರಿಕವಾಗಿಯೂ ಸಂತೋಷವಾಗಿಡಬೇಕು. ಅವಳಿಗೆ ದೈಹಿಕ ಸುಖ ಕೊಡಬೇಕು. ಆಕೆಯನ್ನು ಪ್ರೀತಿಸಬೇಕು. ಕಷ್ಟಕರವಾದ ಕೆಲಸಗಳನ್ನು ಆಕೆಯಿಂದ ಮಾಡಿಸಬಾರದು. ಲಕ್ಷ್ಮಿ ದೇವಿಯು ತನ್ನ ಹೆಂಡತಿಯ ಬದಲು ಇನ್ನೊಬ್ಬ ಮಹಿಳೆಯನ್ನು ಪ್ರೀತಿಸುವ ಯಾವುದೇ ಪುರುಷನನ್ನು ದ್ವೇಷಿಸುತ್ತಾಳೆ. ಆತ ಗಳಿಸಿದ ಹಣ ಮತ್ತು ಗೌರವ ಅಲ್ಪಾವಧಿಗೆ ಮಾತ್ರ ಲಭ್ಯವಿರುತ್ತದೆ. ಅಂದರೆ ಅದು ತಾತ್ಕಾಲಿಕ. ಏಕೆಂದರೆ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಸಂತೋಷವಾಗಿಡುವುದು ಪುರುಷನ ಜವಾಬ್ದಾರಿ.

2) ಹಣ (ವಿತ್ತಂ) (Financial Freedom): ಪುರುಷ ಗೃಹಲಕ್ಷ್ಮಿ ಎನಿಸಿದ ಹೆಂಡತಿಗೆ ತಾನು ಗಳಿಸಿದ ಹಣವನ್ನು ಕೊಡಬೇಕು. ಆಕೆ ಅದರಲ್ಲಿ ಮನೆ ಖರ್ಚಿಗೆ ಎಷ್ಟು ಬೇಕು ಎಂದು ಅರ್ಥ ಮಾಡಿಕೊಂಡು ಬುದ್ಧಿವಂತಿಕೆಯನ್ನು ಉಪಯೋಗಿಸಿ ಅದನ್ನು ಬಳಸಿ ಉಳಿದುದನ್ನು ಉಳಿತಾಯ ಮಾಡುತ್ತಾಳೆ. ವಿವಾಹಿತ ಪುರುಷನಿಗೆ ಸೋಮಾರಿತನ ಒಳ್ಳೆಯದಲ್ಲ. ಸೋಮಾರಿತನವನ್ನು ಬಿಡಲಾಗದಿದ್ದರೆ ಅವನ ಮನೆಯಲ್ಲಿ ಸಂಪತ್ತು ಇರುವುದಿಲ್ಲ. ಲಕ್ಷ್ಮಿ ದೇವಿಯು ಆ ಮನೆಗೆ ಪ್ರವೇಶಿಸುವುದಿಲ್ಲ. ಅಂತಹ ಜನರು ಸಾಲವನ್ನು ಮಾಡುತ್ತಾರೆ ಮತ್ತು ಅವರ ಮಹಿಳೆಯರಿಗೆ ಕಷ್ಟವನ್ನು ಉಂಟುಮಾಡುತ್ತಾರೆ.

3) ಪ್ರೀತಿ (ಪ್ರೇಮಂ) (Love) : ಹೆಂಡತಿಯನ್ನು ಹೃದಯದಾಳದಿಂದ ಪ್ರೀತಿಸಬೇಕು. ಅಂಥ ಪುರುಷನಿಗಾಗಿ ಸ್ತ್ರೀ ಯಾವ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ಅವಳಿಂದಾಗಿಯೇ ಗಂಡಸು ಶೀಘ್ರವಾಗಿ ಜೀವನದಲ್ಲಿ ಮೇಲೆ ಮೇಲೆ ಸಾಗುತ್ತಾನೆ. ಪ್ರೀತಿ ಇಲ್ಲದ ಮನೆ ನಿತ್ಯ ಜಗಳದ ತವರಾಗುತ್ತದೆ. ಅಲ್ಲಿ ಸದಾ ಕಲಹ ಇರುವುದರಿಂದ ಮಕ್ಕಳು ಕ್ರೂರಿಗಳಾಗಿ, ಮಾತು ಕೇಳದ ಉದ್ಧಟರಾಗಿ, ದುಂದುವೆಚ್ಚ ಮಾಡುವವರಾಗಿ ಬೆಳೆಯುತ್ತಾರೆ. ಹೆಂಡತಿ ಅಂಥ ಗಂಡಸಿನ ಮೇಲೆ ಮುನಿಸಿಕೊಂಡು ದೂರ ಹೋಗುತ್ತಾಳೆ. 

4) ಸ್ವಾತಂತ್ರ್ಯ (Freedom) : ದುರಾಸೆಯುಳ್ಳ ಗಂಡಸರು ಹಣವನ್ನು ಹಾಗೂ ಹೆಂಡತಿಯನ್ನು ಮನೆಯೊಳಗೆ ಬಂಧಿಸಲು ಯತ್ನಿಸುತ್ತಾರೆ. ಆದರೆ ಅವರು ಅದರಲ್ಲಿ ಸಫಲರಾಗುವುದಿಲ್ಲ. ಅವರು ಯಾವಾಗಲೂ ಇತರರ ಮೇಲೆ ಕಣ್ಣಿಡುತ್ತಾರೆ. ಲಕ್ಷ್ಮಿ ದೇವಿಯು ಅವರ ಬಗ್ಗೆ ಅಸಮಾಧಾನ ಹೊಂದಿದ್ದರಿಂದ ಅಂತಹ ಪುರುಷರು ಶೀಘ್ರವಾಗಿ ಬಡವರಾಗುತ್ತಾರೆ.

5) ಒಳ್ಳೆಯ ಮಾತು (Good Words) : ತಮ್ಮ ಹೆಂಡತಿಯನ್ನು ಅವಮಾನಿಸುವ ಮತ್ತು ಕೆಟ್ಟ ಪದಗಳಿಂದ ಅವಳನ್ನು ಶಪಿಸುವ ಪುರುಷರು ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಂತಹ ಪುರುಷರು ಮನೆಯ ಮುಖ್ಯಸ್ಥರನ್ನೂ ಗೌರವಿಸುವುದಿಲ್ಲ. ಅವರು ಪಾಪದಲ್ಲಿ ಪಾಲುದಾರರಾಗುತ್ತಾರೆ. ಅವರು ಹಲವು ಸಮಸ್ಯೆಯನ್ನು ಎದುರಿಸುತ್ತಾರೆ.

ಕೇವಲ ದೇವರೆಂದು ಪೂಜಿಸಬೇಡಿ, ಪರಿಪೂರ್ಣ ಬದುಕಿಗೆ ಆದರ್ಶ ಶ್ರೀಕೃಷ್ಣ

6) ರಕ್ಷಣೆ (Security) : ಹೆಂಡತಿಯನ್ನು ಹಾಗೂ ಹಣವನ್ನು ಸದಾ ದುಷ್ಟರ ಕೈಗೆ ಸಿಗದಂತೆ ರಕ್ಷಿಸಬೇಕು. ಯಾಕೆಂದರೆ ಎರಡೂ ಕೂಡ, ಒಮ್ಮೆ ದುಷ್ಟರ ಕೈಗೆ ಸೇರಿದರೆ ಮರಳಿ ಬರುವುದೇ ಇಲ್ಲ. 'ವನಿತಾ ವಿತ್ತಂ ಪರಹಸ್ತ ಗತಂ ಗತಂ' ಎಂಬ ಮಾತನ್ನು ನೀವು ಕೇಳಿದ್ದೀರಲ್ಲವೇ? ಎಂದರೆ ಸದಾ ಪೆಟ್ಟಿಗೆಯಲ್ಲಿ ಹಾಕಿ ಇಡಬೇಕು ಎಂದಲ್ಲ. ಜಾಗರೂಕತೆಯಿಂದ ಬಳಸಬೇಕು. 

ತಿಳುವಳಿಕೆಯಿಂದ ಬದುಕುವುದು ಪ್ರತಿಯೊಬ್ಬ ಗಂಡ ಮತ್ತು ಹೆಂಡತಿ ಪಾಲಿಸಬೇಕಾದ ಪ್ರಮುಖ ತತ್ವ. ಕಲಹಗಳು ಆಗದಂತೆ ಎಚ್ಚರ ವಹಿಸುವುದರ ಜೊತೆಗೆ ಸ್ವಾರ್ಥವಿಲ್ಲದೆ ಪರಸ್ಪರ ಪ್ರೀತಿಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಚಾಣಕ್ಯ ವಿವೇಕಯುತವಾದ ಮಾತುಗಳನ್ನು ತೆರೆದಿಡುತ್ತಾನೆ. 

ಈ ರಾಶಿಯವರು ಹುಟ್ಟಿದ್ದೆ ಗೆಲ್ಲಲು, ಇವರಿಗೆ ಸೋಲೇ ಇಲ್ಲ
 

Latest Videos
Follow Us:
Download App:
  • android
  • ios