Asianet Suvarna News Asianet Suvarna News

ಇಂಥ ಕನಸು ಬಿದ್ದರೆ ಶೀಘ್ರದಲ್ಲೇ ಹಣದ ಸುರಿಮಳೆಯಾಗಲಿದೆ ಎಂದರ್ಥ!

ಸ್ವಪ್ನ ಶಾಸ್ತ್ರವು ಬಹಳ ಹಿಂದಿನಿಂದಲೂ ಕನಸುಗಳ ಅರ್ಥವನ್ನು ಹುಡುಕಿಕೊಂಡು ಅದರ ಮೇಲೆ ಭವಿಷ್ಯ ಹೇಳುತ್ತದೆ. ಅದರಂತೆ, ಈ ನಾಲ್ಕು ರೀತಿಯ ಕನಸು ಬಿದ್ದರೆ ಸಧ್ಯದಲ್ಲೇ ಶ್ರೀಮಂತರಾಗುವ ಸೂಚನೆಯಾಗಿದೆ. 

Do you also see such dreams at night Know their meaning and impact on life skr
Author
Bangalore, First Published May 6, 2022, 4:00 PM IST

ಈ ಕನಸುಗಳೇ(dreams) ವಿಚಿತ್ರ, ವಿಲಕ್ಷಣ. ಅವು ಹೀಗೆಯೇ ಬೀಳುತ್ತವೆಂದು ಯಾರಿಂದಲೂ ಅಂದಾಜಿಸಲಾಗದು. ಅದರಲ್ಲಿ ಎಂದೂ ಯೋಚಿಸಿರದ ವ್ಯಕ್ತಿ ಪತಿಯಾಗಿ ಕಾಣಬಹುದು, ನೀರಿನ ಬಣ್ಣ ಕೆಂಪಾಗಬಹುದು, ಆಕಾಶವೇ ಬಂದು ಭೂಮಿ ಮೇಲೆ ಚಾಪೆಯಂತೆ ಹಾಸಿ ಕೂರಬಹುದು! ಕನಸುಗಳು ನಮ್ಮ ನಿಯಂತ್ರಣದಲ್ಲಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಎಲ್ಲೋ ಕೆಲವೊಂದು ಬೆಳಗಾದ ನಂತರವೂ ನೆನಪಿನಲ್ಲಿರುತ್ತದೆ. ಅಂಥ ವಿಶೇಷತೆಯೇನಿರುವುದಿಲ್ಲ. ಆದರೆ ಇನ್ನೂ ಕೆಲ ಕನಸುಗಳು ಬದುಕಿನ ಕುರಿತ ಯಾವುದೋ ಸೂಚನೆ ನೀಡಲೇ ಬರುತ್ತಿವೆ ಎನಿಸುತ್ತದೆ. ಅವು ಪದೇ ಪದೇ ಹಾಗೆಯೇ ಬೀಳುತ್ತವೆ, ದೇವರೇ ಬಂದು ಏನೋ ಹೇಳಿದಂತಿರುತ್ತದೆ, ನಮ್ಮನ್ನೇ ನಾವು ವಿಶೇಷವಾಗಿ ನೋಡಿಕೊಂಡಂತಿರುತ್ತದೆ, ಸತ್ತವರು ಬದುಕಿ ಬಂದು ಮಾತನಾಡುತ್ತಾರೆ..  ಸ್ವಪ್ನ ಶಾಸ್ತ್ರದಲ್ಲಿ ಹೀಗೆ ಬೀಳುವ ಕೆಲ ಕನಸುಗಳ ಅರ್ಥವೇನು, ಅವು ಬದುಕಿನ ಮೇಲೆ ಬೀರುವ ಪರಿಣಾಮವೇನು ನೋಡೋಣ.  

ಕೈಲಿ ಗುಲಾಬಿ ಹಿಡಿದಂತೆ
ಕೈಲಿ ಗುಲಾಬಿ ಹೂವು ಹಿಡಿದುಕೊಂಡು ನಿಂತಿದ್ದಂತೆ ಕನಸು ಬಿದ್ದರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ನೀವಂದುಕೊಂಡಂತೆ ಪ್ರೀತಿಗೆ ಸಂಬಂಧಿಸಿದುದಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ(Goddess Lakshmi)ಯು ಸಧ್ಯದಲ್ಲೇ ನಿಮ್ಮ ಮೇಲೆ ತನ್ನ ಕೃಪಾಶೀರ್ವಾದ ತೋರುತ್ತಾಳೆ. ನಿಮಗೆ ಎಲ್ಲಿಂದಲೋ ಅನಿರೀಕ್ಷಿತವಾಗಿ ಧನ ದೊರೆಯುತ್ತದೆ ಎಂಬುದು ಈ ಕನಸಿನ ಅರ್ಥ. 

ವರ್ಷದ ಮೊದಲ ಬ್ಲಡ್ ಮೂನ್! ಹುಣ್ಣಿಮೆಯಂದೇ ಚಂದ್ರಗ್ರಹಣವಾಗುವುದೇಕೆ?

ನಿಮ್ಮ ಕನಸಿನಲ್ಲಿ ನೀವೇ ಅಳುತ್ತಿರುವಂತೆ ಕಂಡರೆ
ಅನೇಕ ಜನರು ತಮ್ಮ ಕನಸಿನಲ್ಲಿ ಅಳುವುದನ್ನು(crying) ನೋಡಿದಾಗ ವಿಚಲಿತರಾಗುತ್ತಾರೆ. ಅದರಲ್ಲೂ ಸ್ವತಃ ತಾವೇ ಅಳುವಂತೆ ಕನಸು ಬಿದ್ದರೆ, ಬಹುಷಃ ಏನೋ ಕೆಟ್ಟದ್ದು ಕಾದಿದೆ ಎಂದು ಗಾಬರಿಯಾಗುತ್ತಾರೆ. ಆದರೆ ಚಿಂತೆ ಬೇಡ, ಅಳುವುದನ್ನು ಅಶುಭವೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ನೀವೇ ಅಳುತ್ತಿರುವಂತೆ ಕಂಡರೆ, ಅದು ಮುಂಬರುವ ಜೀವನಕ್ಕೆ ಉತ್ತಮ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಅಳುವ ವ್ಯಕ್ತಿಯು ಶೀಘ್ರದಲ್ಲೇ ಜೀವನದಲ್ಲಿ ಕೆಲವು ದೊಡ್ಡ ಸಾಧನೆಯ ಮೆಟ್ಟಿಲೇರುತ್ತಾನೆ ಎಂದು ನಂಬಲಾಗಿದೆ.

ನೀವು ಪರ್ವತ ಅಥವಾ ಮರವನ್ನು ಹತ್ತುವಂತೆ ಕಂಡರೆ
ಕನಸಿನಲ್ಲಿ ನೀವು ಪರ್ವತ ಅಥವಾ ಮರವನ್ನು ಏರುತ್ತಿರುವುದನ್ನು ನೀವು ನೋಡಿದರೆ, ಅದು ತುಂಬಾ ಮಂಗಳಕರ(Auspecious)ವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳನ್ನು ನೋಡುವುದು ಎಂದರೆ ನೀವು ಶೀಘ್ರದಲ್ಲೇ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ ಎಂದರ್ಥ. ಬದುಕಿನಲ್ಲಿ ಸೌಕರ್ಯಗಳು ಹೆಚ್ಚಲಿವೆ ಎಂಬುದರ ಸೂಚನೆ ಈ ಕನಸಾಗಿದೆ ಎನ್ನುತ್ತದೆ ಸ್ವಪ್ನ ಶಾಸ್ತ್ರ. 

Name Astrology: ಈ ಹೆಸರಿನ ಹುಡುಗರು ಪತ್ನಿಯನ್ನು ಪ್ರೀತಿಯ ಕಡಲಲ್ಲೇ ತೇಲಿಸುತ್ತಾರೆ!

ಕನಸಿನಲ್ಲಿ ನಿಮ್ಮನ್ನು ಬಡತನದ ಸ್ಥಿತಿಯಲ್ಲಿ ನೋಡುವುದು
ಕನಸಿನಲ್ಲಿ ಅನೇಕ ಬಾರಿ ನೀವು ದುರವಸ್ಥೆ ಅಥವಾ ಬಡತನ(Poverty)ದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತೀರಿ. ಅಂಥ ಕನಸು ಕಂಡಾಗ ಸಧ್ಯದಲ್ಲೇ ಏನೋ ದುರಂತ ಕಾದಿದೆ ಎಂದು ಭಯವಾಗಬಹುದು. ಆದರೆ, ಅಂಥ ಕನಸನ್ನು ನೋಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಶೀಘ್ರದಲ್ಲೇ ತಾಯಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಮೇಲೆ ಬೀಳಲಿದೆ ಮತ್ತು ಮನೆಯಲ್ಲಿ ಸಂಪತ್ತಿನ ಮಳೆಯಾಗಲಿದೆ. ಈ ರೀತಿಯ ಕನಸು ಕೆಲಸ ಮತ್ತು ವ್ಯವಹಾರದಲ್ಲಿ ಮುಂದುವರಿಯಲು ಉತ್ತಮವೆಂದು ಪರಿಗಣಿಸಲಾಗಿದೆ.
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios