ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!

ಒಂಭತ್ತು ಗ್ರಹಗಳು ನಿರಂತರ ಚಲನೆಯಲ್ಲಿರಲಿದೆ. ನಿಶ್ಚಿತ ಸಮಯದಲ್ಲಿ ಚಲಿಸುತ್ತಲಿದ್ದು, ಇದರ ಪ್ರಭಾವಗಳು ರಾಶಿಗಳ ಮೇಲೆ ಆಗಲಿದೆ. ಶುಕ್ರ ಗ್ರಹದ ಚಲನೆಯಾಗಿದ್ದು, ಇದು ಈ ಬಾರಿ 5 ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ. ಈ ರಾಶಿಯವರ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಲಾಭವನ್ನು ತಂದುಕೊಡಲಿದ್ದು, ಅವುಗಳ ಬಗ್ಗೆ ನೋಡೋಣ...

These 5 Signs are benefits of employment, business

ಜ್ಯೋತಿಷ್ಯ ಶಾಸ್ತ್ರದ (Astrology) ಅನ್ವಯ ಪ್ರತಿಯೊಬ್ಬರ ಜೀವನದಲ್ಲಿ (Life) ಗ್ರಹಗತಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮತ್ತಿವುಗಳ ಸ್ಥಾನ ಪಲ್ಲಟಗಳಿಂದ ಹಲವಾರು ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಅದು ಶುಭ ಫಲವನ್ನೂ ನೀಡಬಹುದು, ಅಶುಭ ಫಲವನ್ನೂ ನೀಡಬಹುದು. ಕೆಲವರಿಗೆ ಅದೃಷ್ಟ (Luck) ಒಲಿದು ಬಂದರೆ, ಮತ್ತೆ ಕೆಲವರಿಗೆ ದುರಾದೃಷ್ಟ (Bad Luck) ಬೆನ್ನು ಹತ್ತುತ್ತದೆ. ಮತ್ತೆ ಕೆಲವರಿಗೆ ಆರೋಗ್ಯ (Health) ಸಮಸ್ಯೆ ಕಾಡುತ್ತದೆ. ಇನ್ನು ಹಲವರಿಗೆ ಅಂಟಿದ್ದ ಕಾಯಿಲೆಗಳು (Diseases) ವಾಸಿಯಾಗುತ್ತವೆ. ಇದಕ್ಕೆಲ್ಲ ಗ್ರಹಗಳ ಪ್ರಭಾವವೂ ಒಂದು ಕಾರಣವಾಗಿರುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವು ಸಂತೋಷ (Happiness), ಐಷಾರಾಮಿಗಳ (Luxuries) ಕಾರಕ ಗ್ರಹವಾಗಿದೆ. ಶುಕ್ರ ಗ್ರಹವು (Venus) ಗುರು ಗ್ರಹದ (Jupiter)  ರಾಶಿಯಾದ ಮೀನ ರಾಶಿಗೆ (Pisces) ಕಳೆದ ತಿಂಗಳು ಪರಿವರ್ತನೆ ಹೊಂದಿದೆ. ಮೇ 23 ರವರೆಗೆ ಮೀನ ರಾಶಿಯಲ್ಲಿಯೇ ಶುಕ್ರ ಗ್ರಹವು ಸ್ಥಿತವಾಗಿರಲಿದೆ. ಇದರೊಂದಿಗೆ ಗುರು ಕೂಡ ಮೀನ ರಾಶಿಯಲ್ಲಿಯೇ ಸ್ಥಿತವಾಗಿರಲಿದ್ದು, ಕೆಲವು ರಾಶಿಚಕ್ರದವರಿಗೆ ವಿಶೇಷ ಲಾಭವನ್ನು ತಂದುಕೊಡಲಿದೆ. ಹಾಗಾದರೆ ಆ ರಾಶಿಗಳು ಯಾವುವು..? ಅವರಿಗೆ ಯಾವ ಲಾಭ ಆಗಲಿದೆ ಎಂಬುದನ್ನು ನೋಡೋಣ...

ಮೇಷ ರಾಶಿ (Aries)
ರಾಶಿಚಕ್ರದಿಂದ ಶುಕ್ರನು 12ನೇ ಮನೆಯಲ್ಲಿ ಸಂಚರಿಸುವುದರಿಂದ ಈ ರಾಶಿಯವರಿಗೆ ಅನುಕೂಲಕರ ವಾತಾವರಣ ಉಂಟಾಗುತ್ತದೆ. ಈ ರಾಶಿಚಕ್ರದಲ್ಲಿ ಶುಕ್ರ ಗ್ರಹದ ಗೋಚಾರದಿಂದಾಗಿ ಶುಭ ಫಲಗಳನ್ನು ಪ್ರಾಪ್ತವಾಗುತ್ತವೆ. ಹೀಗಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸಲು ಮತ್ತು ಪ್ರಯಾಣ ಇತ್ಯಾದಿಗಳಿಗೆ ಹೆಚ್ಚಿನ ಹಣ ವ್ಯಯವಾಗುವ ಮೂಲಕ ಸುಖದ ಜೀವನವನ್ನು ನಡೆಸಲು ಶುಕ್ರನ ಕೃಪೆ ಸಿಗುತ್ತದೆ. ನೀವು ಮನೆ ಅಥವಾ ವಾಹನವನ್ನು (Vehicle) ಮಾರಾಟ (Sale) ಮಾಡಲು ಬಯಸಿದರೂ ಸಹ ಇದು ಅನುಕೂಲಕರವಾಗಿದ್ದು, ಗ್ರಹದ ಸಂಚಾರವು ಅನುವು ಮಾಡಿಕೊಡಲಿದೆ. 

ಮಿಥುನ ರಾಶಿ (Gemini)
ರಾಶಿಚಕ್ರದಿಂದ ಹತ್ತನೇ ಕರ್ಮ ಭಾವಕ್ಕೆ ಸಂಚರಿಸುವ ಶುಕ್ರ ಮತ್ತು ಗುರುವಿನ ಸಂಯೋಗವು ಈ ರಾಶಿಯವರ ಜೀವನದಲ್ಲಿ ಕೆಲವು ದೊಡ್ಡ ಯಶಸ್ಸನ್ನು (Success) ಸೂಚಿಸುತ್ತದೆ. ಆದ್ದರಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಯಾವುದಾದರೂ ಕೆಲಸಗಳು ಆಗಬೇಕಿದ್ದಲ್ಲಿ, ಪ್ರಯತ್ನ ಮಾಡಿದರೆ ಫಲ ಲಭಿಸಲಿದೆ. ಉದ್ಯೋಗದಲ್ಲಿ (Job) ಬಡ್ತಿ (Promotion) ಸಿಗುವುದಲ್ಲದೆ, ಗೌರವ ಪ್ರಾಪ್ತಿಯಾಗಲಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಸ್ಥಾನಮಾನದ ಘನತೆಯೂ ಸಹ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳಿದ್ದರೆ ಅವುಗಳು ಪರಿಹಾರವಾಗಲಿವೆ. ಈ ರಾಶಿಯವರು ಮನೆ (Home) ಅಥವಾ ವಾಹನ ಖರೀದಿಗೆ ಮುಂದಾದರೆ ಪ್ರಶಸ್ತವಾದ ಸಮಯ ಇದಾಗಿದೆ.

ಇದನ್ನು ಓದಿ : ತಪ್ಪು ಸಮಯದಲ್ಲಿ ಈ ಕಾರ್ಯಗಳ ಮಾಡಿದರೆ ಭಾರೀ ನಷ್ಟ!

ಕನ್ಯಾ ರಾಶಿ (Virgo)

ರಾಶಿಚಕ್ರದಿಂದ ಏಳನೇ ಮನೆಯಲ್ಲಿ ಗೋಚಾರವಾಗುವ ಶುಕ್ರನು ಎಲ್ಲ ರೀತಿಯಲ್ಲೂ ಲಾಭವಾಗುವ ಹೊಸ ಅವಕಾಶಗಳ ಸೃಷ್ಟಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಾನೆ. ಕುಟುಂಬದಲ್ಲಿ ಮಂಗಳಕರ ಕಾರ್ಯಕ್ರಮಗಳೂ ಸಹ ಈ ಸಂದರ್ಭದಲ್ಲಿ ಆಗಬಹುದಾಗಿದೆ. ವಿವಾಹಕ್ಕೆ (Marriage) ಸಂಬಂಧಿಸಿದ ಮಾತುಕತೆಗಳು ಸಹ ಈ ಸಂದರ್ಭದಲ್ಲಿ ಯಶಸ್ವಿಯಾಗಿ ನಡೆಯುತ್ತವೆ. ಅತ್ತೆ-ಮಾವನ ಕಡೆಯಿಂದ ಸಹ ಸಹಕಾರ ದೊರೆಯುತ್ತದೆ. ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಪರವಾದ ವಾತಾವರಣವೇ ಇರಲಿದ್ದು, ಪ್ರೇಮ ವಿವಾಹವನ್ನು (Love Marriage) ಬಯಸಿದವರಿಗೂ ಉತ್ತಮ ಅವಕಾಶಗಳಿವೆ. 

ಧನು ರಾಶಿ (Sagittarius)
ಶುಕ್ರ ಗ್ರಹವು ಈ ರಾಶಿಚಕ್ರದವರ ನಾಲ್ಕನೇ ಮನೆಯಲ್ಲಿ ಸ್ಥಿತನಾಗುವ ಮೂಲಕ ಅತ್ಯುತ್ತಮ ಯಶಸ್ಸನ್ನು ತರುತ್ತಾನೆ. ಹೀಗಾಗಿ ಈ ರಾಶಿಯವರು ತಾವು ಮಾಡಬೇಕೆಂದುಕೊಂಡ ಕೆಲಸವನ್ನು (Work) ಕಾರ್ಯಗತಗೊಳಿಸಲು ಇದು ಸಕಾಲ. ಇದರಲ್ಲಿ ಯಶವನ್ನೂ ಸಹ ಕಾಣಬಹುದಾಗಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಮನೆ ಅಥವಾ ವಾಹನ ಖರೀದಿಸಲು ಇಚ್ಛಿಸುವವರಿಗೆ ಇದು ಉತ್ತಮ ಸಮಯವಾಗಿದೆ. 

ಇದನ್ನು ಓದಿ : ಕೆಟ್ಟ ದೃಷ್ಟಿ ಬಿದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ..!

ಮೀನ ರಾಶಿ (Pisces)
ಶುಕ್ರ ಗ್ರಹವು ಮೀನ ರಾಶಿಯಲ್ಲಿ ಗೋಚರಿಸಿದಾಗ ಶುಕ್ರ ಗ್ರಹದ ಮಾಲ್ವ್ಯ ಯೋಗವು ಉಂಟಾಗುತ್ತದೆ. ಗುರು ಗ್ರಹದ ರಾಶಿಯಾಗಿರುವ ಮೀನ ರಾಶಿಯಲ್ಲಿ ಶುಕ್ರನು ಸ್ಥಿತನಾಗಿದ್ದಾಗ, ಈ ವ್ಯಕ್ತಿಗಳಿಗೆ ಎಂಥದ್ದೇ ಪರಿಸ್ಥಿತಿ ಎದುರಾದರೂ ಅದರಿಂದ ಹೊರಬರುವ ಮಾರ್ಗ ಸುಲಭವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ ಸಾಮಾಜಿಕವಾಗಿ ಸಾಕಷ್ಟು ಜನಮನ್ನಣೆ ಗಳಿಸಲಿದ್ದು, ಪ್ರತಿಷ್ಠೆ ಜೊತೆ ಜೊತೆಗೆ ಸ್ಥಾನಮಾನವೂ ಹೆಚ್ಚಾಗಲಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ (Government) ಇಲಾಖೆಗಳಲ್ಲಿ (Departments) ಯಾವುದಾದರೂ ಕೆಲಸ ಕಾರ್ಯಗಳು ಆಗಬೇಕಿದ್ದಲ್ಲಿ. ಅವುಗಳು ಕೈಗೂಡಲಿವೆ. ಕುಟುಂಬದಲ್ಲಿ ಮಂಗಳಕರ ಕಾರ್ಯಕ್ರಮಗಳು ನಡೆಯಲಿವೆ. 

Latest Videos
Follow Us:
Download App:
  • android
  • ios