Asianet Suvarna News Asianet Suvarna News

ಶನಿ ದೇವನ ಕೃಪೆ: ಈ ರಾಶಿ ಹುಡುಗಿಯರು ಸ್ವಾಭಿಮಾನಿಗಳು... ನಿಮ್ಮ ಹುಡುಗಿ ಹೇಗೆ?

ರಾಶಿಗೊಂದು ವ್ಯಕ್ತಿತ್ವ ಎಂಬಂತೆ, ಕೆಲಸಕ್ಕೆ ತಕ್ಕ ಫಲ ಬಯಸುವವರು ಮಕರ ರಾಶಿಯವರು. ಹೆಚ್ಚು ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಈ ರಾಶಿಯ ಹುಡುಗಿಯರು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಮಕರ ರಾಶಿಯ ಅಧಿಪತಿ ಶನಿ ಗ್ರಹವಾದ್ದರಿಂದ ಈ ರಾಶಿಯವರು ಪ್ರಾಮಾಣಿಕತೆಯನ್ನು ನೆಚ್ಚಿಕೊಂಡಿರುತ್ತಾರೆ. ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸಗಳನ್ನು ಮಾಡುವ ಇವರು ಹೆಚ್ಚಿನ ಫಲವನ್ನು ಬಯಸುವುದಿಲ್ಲ. ಹಾಗಾದರೆ ಮಕರ ರಾಶಿಯ ಹುಡುಗಿಯರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಯೋಣ...

Girl born with Zodiac sign Capricorn self empowered
Author
Bangalore, First Published Jul 31, 2021, 12:55 PM IST
  • Facebook
  • Twitter
  • Whatsapp

ರಾಶಿಗೊಂದು ವಿಶೇಷ ಗುಣ, ವಿಶಿಷ್ಟ ವ್ಯಕ್ತಿತ್ವ ಇದ್ದೇ ಇರುತ್ತದೆ. ಪ್ರತಿ ರಾಶಿಯ ಗುಣ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಕೆಲವು ರಾಶಿಯವರು ಸೂಕ್ಷ್ಮ ಸ್ವಭಾವದವರಾದರೆ, ಮತ್ತೆ ಕೆಲವರು ಒರಟು ಸ್ವಭಾವವನ್ನು ಹೊಂದಿರುತ್ತಾರೆ. ರಾಶಿಗೆ ತಕ್ಕಂತೆ ವ್ಯಕ್ತಿಗಳ ಸ್ವಭಾವ, ಗುಣ ಲಕ್ಷಣಗಳು ಪ್ರೇರಿತವಾಗಿರುತ್ತವೆ. ಹಾಗಾಗಿ ನಾವಿಲ್ಲಿ ಶನಿ ದೇವರ ಕೃಪೆ ಹೊಂದಿರುವ ಮಕರ ರಾಶಿಯವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ...

Girl born with Zodiac sign Capricorn self empowered


ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಶನಿ ಗ್ರಹವು ಮಕರ ರಾಶಿಯ ಅಧಿಪತಿ ಗ್ರಹವಾಗಿದೆ. ಮಕರ ರಾಶಿಯನ್ನು ತ್ಯಾಗ ಮತ್ತು ಬಲಿದಾನಗಳ ರಾಶಿ ಎಂದು ಕರೆಯಲಾಗುತ್ತದೆ. ಶನಿ ಅಧಿಪತಿಯಾಗಿರುವುದರಿಂದ ಸಾಮಾನ್ಯವಾಗಿ ಈ ರಾಶಿಯ ವ್ಯಕ್ತಿಗಳು ಶನಿ ಗ್ರಹದ ಗುಣ ಸ್ವಭಾವಗಳನ್ನು ಹೊಂದಿರುತ್ತಾರೆ. ಶನಿ ಗ್ರಹವು ಉಚ್ಛ ಸ್ಥಿತಿಯಲ್ಲಿದ್ದಾಗ ಈ ರಾಶಿಯ ವ್ಯಕ್ತಿಗಳು ಪ್ರಾಮಾಣಿಕರು ಮತ್ತು ವಿಶ್ವಾಸಕ್ಕೆ ಅರ್ಹರು ಆಗಿರುತ್ತಾರೆ. ಅದೇ ಶನಿ ಗ್ರಹವು ನೀಚ ಸ್ಥಿತಿಯಲ್ಲಿ ಇದ್ದರೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಈ ರಾಶಿಯ ಹುಡುಗಿಯರು ಸ್ವಾಭಿಮಾನಿಗಳು, ಸಹನಶೀಲ ವ್ಯಕ್ತಿತ್ವ, ಆತ್ಮಾಭಿಮಾನ ಮತ್ತು ಸಾಹಸಿಗಳು ಇವರಾಗಿರುತ್ತಾರೆ. ಅಷ್ಟೇ ಅಲ್ಲದೆ ಈ ಹುಡುಗಿಯರಿಗೆ ಮೂಗಿನ ತುದಿಯಲ್ಲಿ ಕೋಪವಿರುತ್ತದೆ. ಮಕರ ರಾಶಿಯ ಹುಡುಗಿಯರ ಬಗ್ಗೆ ಹೀಗೆ ಇನ್ನೂ ಅನೇಕ ವಿಶೇಷ ವಿಚಾರಗಳನ್ನು ತಿಳಿಯೋಣ...

ಇದನ್ನು ಓದಿ: ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಪಾಸಿಟಿವ್ ಎನರ್ಜಿ ಪಡೆಯಿರಿ..!

ವಿಚಲಿತರಾಗದವರು
ಮಕರ ರಾಶಿಯ ಹುಡುಗಿಯರ ವಿಶೇಷ ಗುಣವೆಂದರೆ ಇವರು ಎಂಥದ್ದೇ ದುಃಖ ಅಥವಾ ಕಷ್ಟದ ಸ್ಥಿತಿಯಲ್ಲಿದ್ದರೂ ವಿಚಲಿತರಾಗದೆ ಅವೆಲ್ಲವನ್ನು ಧೈರ್ಯದಿಂದ ಎದುರಿಸುತ್ತಾರೆ. ಕುಟುಂಬ ಸದಸ್ಯರೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಬಾಂಧವ್ಯವನ್ನು ಹೊಂದಿರುತ್ತಾರೆ. ಕುಟುಂಬದವರ ಅವಶ್ಯಕತೆಗಳನ್ನು ಪೂರೈಸಲು ಇಚ್ಛಿಸುತ್ತಾರೆ. ಈ ರಾಶಿಯ ಹುಡುಗಿಯರಲ್ಲಿ ಅಸೂಯೆ ಮತ್ತು ದುರಾಸೆ ಇರುವುದಿಲ್ಲ. ಇವರು ನೋಡಲು ಶಾಂತ ಸ್ವಭಾವದವರಂತೆ ಕಾಣುತ್ತಾರೆ. ಆದರೆ ಸಮಯ ಬಂದಾಗ ಎದುರಿನವರು ಮಾತನಾಡಲು ತಡಕಾಡುವಂತೆ ಮಾಡಿ ಬಿಡುತ್ತಾರೆ. ಇವರು ಬಾಸ್ ಅಥವಾ ನಾಯಕರಾದರೆ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಈ ರಾಶಿಯ ಹುಡುಗಿಯರ ವಿಶಿಷ್ಟ ಗುಣವೆಂದರೆ ಆತ್ಮ ನಿರ್ಭರತೆ. ಇವರು ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. 

ಇದನ್ನು ಓದಿ: ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

ಬುದ್ಧಿವಂತರು
ಈ ರಾಶಿಯ ಹುಡುಗಿಯರು ಎಲ್ಲ ವಿಷಯಗಳ ಜ್ಞಾನವನ್ನು ಹೊಂದಿರುತ್ತಾರೆ. ಇವರು ಬುದ್ಧಿವಂತಿಕೆಯಿಂದ ಕೆಲಸವನ್ನು ನಿರ್ವಹಿಸುತ್ತಾರೆ.  ತಮಗಾಗಿ ಸಂಗಾತಿಯನ್ನು ತುಂಬಾ ಎಚ್ಚರಿಕೆಯಿಂದ ಆರಿಸಿಕೊಳ್ಳುತ್ತಾರೆ. ಇವರು ಪ್ರೀತಿಯ ವಿಷಯದಲ್ಲಿ ಕೇವಲ ಹೃದಯದ ಮಾತನ್ನು ಕೇಳದೆ, ನಿಧಾನವಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಂಗಾತಿಯ ಆಯ್ಕೆಗೆ ಮೊದಲು ಗುಣ-ದೋಷಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಇಚ್ಚಿಸುತ್ತಾರೆ. ವಿವಾಹಿತರಾದರೆ ಅಂಥವರಿಗೆ ಪತಿ ಮತ್ತು ಮಕ್ಕಳ ಮೇಲೆ ಅತ್ಯಂತ ಪ್ರೇಮವಿರುತ್ತದೆ. ಪತಿಯ ಜೊತೆ ಜೊತೆಗೆ ಹೆಜ್ಜೆ ಹಾಕುವುದಲ್ಲದೆ, ಸಂಕಷ್ಟದ ಸ್ಥಿತಿಯಲ್ಲಿ ಸಹಕಾರವನ್ನು ನೀಡುವ ಮನೋಭಾವ ಇವರದ್ದಾಗಿರುತ್ತದೆ.

ಇದನ್ನು ಓದಿ: ಜಗತ್ತು ಗುರುತಿಸುವಂಥ ವ್ಯಕ್ತಿತ್ವ ಈ ರಾಶಿ- ನಕ್ಷತ್ರದವರದ್ದು...!!

ಕಾರ್ಯಕ್ಷೇತ್ರದಲ್ಲಿ ಈ ರಾಶಿಯ ಹುಡುಗಿಯರು
ಮಕರ ರಾಶಿಯವರು ಅತ್ಯಂತ ಶ್ರದ್ಧೆಯಿಂದ ಕೆಲಸವನ್ನು ನಿರ್ವಹಿಸುತ್ತಾರೆ. ಉತ್ತಮ ಕೆಲಸಗಾರರು ಎಂದು ಗುರುತಿಸಿಕೊಳ್ಳುತ್ತಾರೆ. ಈ ರಾಶಿಯವರು ಬಹುಮುಖ ಪ್ರತಿಭೆಯುಳ್ಳವರಾಗಿರುತ್ತಾರೆ. ಯಾವುದೇ ಕೆಲಸವನ್ನು ತೆಗೆದುಕೊಳ್ಳುವ ಮುನ್ನ ಅದರ ಫಲಿತಾಂಶ ಏನಾಗಬಹುದೆಂಬ ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ. ಕೊಟ್ಟಿರುವ ಕೆಲಸವನ್ನು ಪ್ರಾಮಾಣಿಕತೆಯಿಂದ ಪೂರೈಸುತ್ತಾರೆ. ಈ ರಾಶಿಯವರು ಅನ್ಯಾಯ ಮತ್ತು ಭೇದಭಾವ ಮಾಡುವುದನ್ನು ಸ್ವಲ್ಪವೂ ಸಹಿಸುವುದಿಲ್ಲ. ಉನ್ನತ ಹುದ್ದೆಯನ್ನು ಮಕರ ರಾಶಿಯವರು ಗಳಿಸುತ್ತಾರೆ. ಮಹತ್ವಾಕಾಂಕ್ಷೆಯುಳ್ಳ ಈ ರಾಶಿಯ ಹುಡುಗಿಯರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿರುತ್ತಾರೆ. ಅಷ್ಟೇ ಅಲ್ಲದೆ ಪರಿಶ್ರಮದಿಂದ ಕೆಲಸವನ್ನು ಮಾಡುವುದರ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ.

Follow Us:
Download App:
  • android
  • ios