ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಪಾಸಿಟಿವ್ ಎನರ್ಜಿ ಪಡೆಯಿರಿ..!
ಪುರಾಣ ಕಾಲದಿಂದಲೂ ಸೂರ್ಯನಿಗೆ ಅರ್ಘ್ಯ ನೀಡುವ ಬಗ್ಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಸೂರ್ಯನ ಕೃಪೆಯಿಂದ ಸುಖ- ಸಂಪತ್ತು ಅಭಿವೃದ್ಧಿ ಹೊಂದುವುದಲ್ಲದೆ, ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಪ್ರಾತಃಕಾಲದಲ್ಲಿ ಸೂರ್ಯ ದೇವನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ಲಾಭಗಳಿವೆ ಎಂಬ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯನಿಗೆ ಅರ್ಘ್ಯಕೊಡುವ ಮುನ್ನ ಅರ್ಘ್ಯ ಪಾತ್ರೆಯಲ್ಲಿ ಯಾವೆಲ್ಲ ವಸ್ತುಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ...
ಸನಾತನ ಸಂಸ್ಕೃತಿಯಲ್ಲಿ ಅನೇಕ ಆಚರಣೆ ಮತ್ತು ನಂಬಿಕೆಗಳಿವೆ. ಅವುಗಳ ಪಾಲನೆಯಿಂದ ಸ್ವಾಸ್ಥ್ಯ ಸಂರಕ್ಷಣೆಯ ಜೊತೆಗೆ ಆಧ್ಯಾತ್ಮಿಕ ಲಾಭಗಳನ್ನು ಪಡೆಯಬಹುದಾಗಿದೆ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡುವುದು, ಪೂಜೆ, ಆಚರಣೆ ಮತ್ತು ಅನುಷ್ಠಾನಗಳ ಜೊತೆಗೆ ಸೂರ್ಯನಿಗೆ ಅರ್ಘ್ಯ ಕೊಡುವುದು ವಿಶೇಷ ಮಹತ್ವವನ್ನು ಪಡೆದಿದೆ.
ಪುರಾಣ ಕಾಲದಿಂದಲೂ ಸೂರ್ಯ ದೇವನಿಗೆ ಅರ್ಘ್ಯ ಕೊಡುವುದು ಬಹುಮುಖ್ಯ ಪ್ರಾಮುಖ್ಯತೆಯನ್ನು ಪಡೆದಿದೆ. ಗ್ರಹಗಳ ರಾಜನೆಂದು ಕರೆಯಲ್ಪಡುವ ಸೂರ್ಯಗ್ರಹವು ಗೌರವ, ತಂದೆ, ಆತ್ಮ, ಉಚ್ಛ ಪದವಿ ಹಾಗೂ ಸರ್ಕಾರಿ ಕೆಲಸಗಳಂತ ಕಾರ್ಯಗಳ ಕಾರಕನಾಗಿದ್ದಾನೆ. ಪ್ರಾತಃಕಾಲದಲ್ಲಿ ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಅನೇಕ ಪ್ರಯೋಜನಗಳಿವೆ. ರೋಗಗಳು ಶಮನವಾಗುತ್ತವೆ. ಚರ್ಮದ ಕಾಂತಿ ಹೆಚ್ಚುತ್ತದೆ, ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಹಾಗಾಗಿ ಸನಾತನ ಸಂಸ್ಕೃತಿಯಲ್ಲಿ ಸೂರ್ಯನಿಗೆ ಜಲವನ್ನು ಅರ್ಪಿಸುವ ಬಗ್ಗೆ ಉತ್ತಮ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!
ಗ್ರಹಗಳ ರಾಜನೆಂದು ಕರೆಯಲ್ಪಡುವ ಸೂರ್ಯಗ್ರಹವು ಗೌರವ, ತಂದೆ, ಆತ್ಮ, ಉಚ್ಛ ಪದವಿ ಹಾಗೂ ಸರ್ಕಾರಿ ಕೆಲಸಗಳ ಕಾರಕನಾಗಿದ್ದಾನೆ. ಸೂರ್ಯನಿಗೆ ಅರ್ಘ್ಯವನ್ನು ನೀಡುವಾಗ, ಅರ್ಘ್ಯ ಪಾತ್ರೆಗೆ ಕೆಲವು ಅಗತ್ಯ ವಸ್ತುಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಆ ವಸ್ತುಗಳ ಬಗ್ಗೆ ತಿಳಿಯೋಣ...
ಅಕ್ಷತೆ:
ಅಕ್ಷತೆಯು ದೇವರ ಪೂಜೆಗೆ ಬಳಸುವ ಪವಿತ್ರ ವಸ್ತುಗಳಲ್ಲೊಂದಾಗಿದೆ. ದೇವತಾ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಅಕ್ಷತೆಯನ್ನು ತಯಾರಿಸಿಕೊಳ್ಳುವುದು ರೂಢಿಯಲ್ಲಿರುವ ಸಂಪ್ರದಾಯ. ಹಾಗಾಗಿ ಸೂರ್ಯನಿಗೆ ಅರ್ಘ್ಯ ನೀಡುವ ಸಂದರ್ಭದಲ್ಲಿ ಅರ್ಘ್ಯ ಪಾತ್ರೆಗೆ ಅಕ್ಷತೆಯನ್ನು ಸೇರಿಸಿಕೊಳ್ಳಬೇಕು. ಈ ರೀತಿ ಮಾಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಇದರಿಂದ ಜೀವನದಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.
ಇದನ್ನು ಓದಿ: ಜಗತ್ತು ಗುರುತಿಸುವಂಥ ವ್ಯಕ್ತಿತ್ವ ಈ ರಾಶಿ- ನಕ್ಷತ್ರದವರದ್ದು...!!
ಪುಷ್ಪ:
ದೇವತಾ ಅರ್ಚನೆಗಳಲ್ಲಿ ಬಳಸುವ ಪವಿತ್ರ ವಸ್ತುಗಳಲ್ಲಿ ಪುಷ್ಪವು ಪ್ರಧಾನವಾದದ್ದು. ದೇವರ ಕೃಪೆ ಪಡೆಯಲು ವಿಧ ವಿಧವಾದ ಪುಷ್ಪಗಳನ್ನು ಅರ್ಪಿಸುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಘ್ಯ ಪಾತ್ರೆಯಲ್ಲಿ ಪುಷ್ಪವನ್ನು ಇಡಬೇಕು. ನಂತರ ಅದನ್ನು ಸೂರ್ಯನಿಗೆ ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಸೂರ್ಯದೇವನ ಆಶೀರ್ವಾದದಿಂದ ಅಂದುಕೊಂಡ ಕಾರ್ಯಗಳು ಸಫಲತೆಯನ್ನು ಕಾಣುತ್ತವೆ.
ಅರಿಶಿಣ:
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಸೂರ್ಯನಿಗೆ ಅರ್ಘ್ಯ ನೀಡುವ ಜಲಪಾತ್ರೆಯಲ್ಲಿ ಸ್ವಲ್ಪ ಅರಿಶಿಣವನ್ನು ಹಾಕಿಕೊಳ್ಳಬೇಕೆಂದು ಹೇಳಲಾಗುತ್ತದೆ. ಅರಿಶಿಣದಲ್ಲಿ ಔಷಧೀಯ ಗುಣವಿರುವ ಕಾರಣ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲದೆ ಸೂರ್ಯ ದೋಷ ನಿವಾರಣೆಯಾಗುತ್ತದೆ. ಇದರಿಂದ ಸ್ವಾಸ್ಥ್ಯ ವೃದ್ಧಿಸುವತ್ತದೆ.
ಕಲ್ಲು ಸಕ್ಕರೆ:
ದೇವರಿಗೆ ನೈವೇದ್ಯವನ್ನು ಅರ್ಪಿಸುವ ಸಂದರ್ಭದಲ್ಲಿ ಕಲ್ಲು ಸಕ್ಕರೆಯನ್ನು ಇಡಲಾಗುತ್ತದೆ. ದೇವರಿಗೆ ಕಲ್ಲು ಸಕ್ಕರೆಯನ್ನು ಅರ್ಪಿಸುವುದರಿಂದ ಭಗವಂತನ ಕೃಪೆಗೆ ಪಾತ್ರರಾಗಬಹುದಾಗಿದೆ. ಶಾಸ್ತ್ರದ ಪ್ರಕಾರ ಸೂರ್ಯನಿಗೆ ಅರ್ಘ್ಯ ನೀಡುವ ಪಾತ್ರೆಯಲ್ಲಿ ಕಲ್ಲು ಸಕ್ಕರೆಯನ್ನು ಸೇರಿಸಿಕೊಳ್ಳವುದು ಶುಭವೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಸೂರ್ಯ ದೇವನ ಕೃಪೆ ಪ್ರಾಪ್ತವಾಗುತ್ತದೆ.
ಇದನ್ನು ಓದಿ: ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!
ಅರ್ಘ್ಯ ನೀಡುವಾಗ ಈ ಮಂತ್ರವನ್ನು ಪಠಿಸಬೇಕು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಘ್ಯ ನೀಡುವ ಸಮಯದಲ್ಲಿ ಸೂರ್ಯಮಂತ್ರವನ್ನು ಜಪಿಸುವುದು ಅತ್ಯಂತ ಶುಭಪ್ರದವಾದದ್ದು ಎಂದು ಹೇಳಲಾಗುತ್ತದೆ. “ಓಂ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಅರ್ಘ್ಯ ನೀಡುವ ಸಮಯದಲ್ಲಿ ಪಠಿಸಬಹುದಾಗಿದೆ. ಅಷ್ಟೇ ಅಲ್ಲದೆ ಗಾಯತ್ರಿ ಮಂತ್ರವನ್ನು ಸಹ ಪಠಿಸಬಹುದಾಗಿದೆ. ಹೀಗೆ ಮಾಡುವುದರಿಂದ ಸೂರ್ಯನ ಅನುಗ್ರಹ ಪ್ರಾಪ್ತವಾಗುವುದಲ್ಲದೆ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ಜಾತಕದಲ್ಲಿ ಸೂರ್ಯಗ್ರಹವು ನೀಚ ಸ್ಥಿತಿಯಲ್ಲಿದ್ದಾಗ ಶಾರೀರಿಕ ಮತ್ತು ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಇದ್ದಕ್ಕೆ ಪ್ರತಿನಿತ್ಯ ಸೂರ್ಯದೇವನಿಗೆ ಅರ್ಘ್ಯ ನೀಡುವುದಲ್ಲದೆ, “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಸೂರ್ಯನಿಗೆ ಜಲವನ್ನು ಅರ್ಪಿಸಿದ ನಂತರ ಪೂರ್ವಾಭಿಮುಖವಾಗಿ ಕೆಂಪು ಆಸನದ ಮೇಲೆ ಕುಳಿತು "ಯಹಿ ಸೂರ್ಯ ಸಹಸ್ತ್ರಾಂಶೋ ತೇಜೋರಾಶೆ ಜಗತ್ಪತೆ/ ಅನುಕಂಪಯ ಮಾಂ ಭಕ್ತ್ಯಾ ಗೃಹಣಾರ್ಘ್ಯ ದಿವಾಕರ//" ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡಿದರೆ ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವು ದೂರವಾಗಿ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ.