ಇತ್ತೀಚೆಗೆ ಟ್ರೆಂಡ್‌ಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಗಣೇಶನನ್ನು ಜನ ಕೂರಿಸುತ್ತಾರೆ. ಅದೇ ರೀತಿ ಈಗ ಜಾರ್ಖಂಡ್‌ನ ಜೇಮ್‌ಶೆಡ್‌ಪುರದ ಗಣೇಶ ಪೆಂಡಾಲ್‌ವೊಂದರಲ್ಲಿ ಗಣೇಶನಿಗೆ ಆಧಾರ್‌ಕಾರ್ಡ್ ಮಾಡಲಾಗಿದೆ.

ಜೆಮ್‌ಶೆಡ್‌ಪುರ: ಆದಿವಂದ್ಯ ವಿಘ್ನ ನಿವಾರಕ ವಿಘ್ನೇಶ, ವಿನಾಯಕ, ಮೂಷಿಕವಾಹನ ಹೀಗೆ ನೂರಂದು ಹೆಸರುಗಳಿಂದ ಕರೆಯಲ್ಪಡುವ ಎಲ್ಲರ ಪ್ರೀತಿಯ ಗಣೇಶನ ಹಬ್ಬವನ್ನು ಹಲವು ದಿನಗಳ ಕಾಲ ಆಚರಿಸಲಾಗುತ್ತದೆ. ಇತ್ತೀಚೆಗೆ ಟ್ರೆಂಡ್‌ಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಗಣೇಶನನ್ನು ಜನ ಕೂರಿಸುತ್ತಾರೆ. ಅದೇ ರೀತಿ ಈಗ ಜಾರ್ಖಂಡ್‌ನ ಜೇಮ್‌ಶೆಡ್‌ಪುರದ ಗಣೇಶ ಪೆಂಡಾಲ್‌ವೊಂದರಲ್ಲಿ ಗಣೇಶನಿಗೆ ಆಧಾರ್‌ಕಾರ್ಡ್ ಮಾಡಲಾಗಿದೆ. ಅಲ್ಲದೇ ಮುದ್ದು ಗಣೇಶನಿಗೆ ಕೈಲಾಸದ ವಿಳಾಸ ನೀಡಿದ್ದು, ಜನಿಸಿದ ಕಾಲಮಾನವನ್ನು 6ನೇ ಶತಮಾನ ಎಂದು ಬರೆಯಲಾಗಿದೆ. ಪೆಂಡಾಲ್ ಪಕ್ಕದಲ್ಲಿ ಈ ಗಣೇಶನ ಆಧಾರ್‌ಕಾರ್ಡ್ ಅನ್ನು ಅಳವಡಿಸಲಾಗಿದೆ. ಅದರಲ್ಲಿ ಸ್ಕ್ಯಾನ್ ಮಾಡಬಲ್ಲ ಬಾರ್‌ ಕೋಡ್ ಕೂಡ ಇದೆ. 

ಈ ಆಧಾರ್‌ಕಾರ್ಡ್‌ನಲ್ಲಿ ಉಲ್ಲೇಖಿಸಿರುವ ವಿಳಾಸ ಈ ರೀತಿ ಇದೆ. ಗಣೇಶ, ಸನ್ ಆಫ್ ಮಹದೇವ, ಕೈಲಾಸ್ ಪ್ರಬಾತ್, ಕೊನೆಯ ಮಹಡಿ, ಮಾನಸ ಸರೋವರ ಸಮೀಪ, ಕೈಲಾಸ ಪಿನ್‌ಕೋಡ್ 000001 ಎಂದಿದೆ. ಹಾಗೂ ಜನ್ಮ ದಿನಾಂಕವನ್ನು 01/01/600 CE ಎಂದು ನಮೂದಿಸಲಾಗಿದೆ. 

ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?

ಈ ಬಗ್ಗೆ ಮಾತನಾಡಿದ ಈ ಗಣೇಶ ಪೆಂಡಾಲ್‌ನ ಸಂಘಟಕ ಶರವ್‌ ಕುಮಾರ್, ಕೋಲ್ಕತ್ತಾದ ಗಣೇಶ ಪೆಂಡಾಲ್‌ವೊಂದಕ್ಕೆ ಈ ಹಿಂದೆ ಭೇಟಿ ನೀಡಿದ್ದಾಗ ಅಲ್ಲಿ, ಫೇಸ್‌ಬುಕ್‌ (Facebook) ಥೀಮ್‌ನಲ್ಲಿ ಗಣೇಶ ಪೆಂಡಾಲ್‌ನ್ನು ನಿರ್ಮಿಸಲಾಗಿತ್ತು, ಇದರಿಂದ ಪ್ರೇರಣೆಗೊಂಡು ಈ ಆಧಾರ್‌ಕಾರ್ಡ್ ಗಣೇಶನನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲಿ ಗಣೇಶನನ್ನು ನೋಡಿದ ನಂತರ ನನಗೂ ವಿಭಿನ್ನವಾಗಿ ಗಣೇಶನನ್ನು ಕೂರಿಸಿ ಪೂಜಿಸುವ ಮನಸಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. 

ದೇವರೆ ಆಧಾರ್‌ಕಾರ್ಡ್ ಹೊಂದಿದ್ದಾರೆ ಎಂದಾದರೆ ಇದುವರೆಗೆ ಆಧಾರ್‌ಕಾರ್ಡ್ (Aadhar cards) ಮಾಡಿಸದವರು ಕ್ರಮೇಣ ಇದನ್ನೇ ಪ್ರೇರಣೆಯಾಗಿ ಪಡೆದುಕೊಂಡು ಆಧಾರ್‌ಕಾರ್ಡ್ ಮಾಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಅನೇಕ ಜನರು ಕೂಡ ಈ ವಿಭಿನ್ನ ಥೀಮ್‌ನ ಗಣೇಶನನ್ನು ನೋಡಿ ಖುಷಿಯಾಗಿದ್ದು, ಇದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರು. 

Vijayanagara; ವೀರ ಸಾವರ್ಕರ್ ಫೋಟೋ ಇಟ್ಟು ಗಣೇಶ ಪ್ರತಿಷ್ಠಾಪಿಸಿದ ಉರ್ದು ಶಾಲೆ

ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಜನ ಬಹಳ ಉತ್ಸಾಹದಿಂದ ಹಲವು ದಿನಗಳ ಕಾಲ ಆಚರಣೆ ಮಾಡುತ್ತಾರೆ. ಅನೇಕರು ಪ್ರತಿದಿನ ವಿವಿಧ ದೇಗುಲ ಹಾಗೂ ಗಣೇಶ ಪೆಂಡಾಲ್‌ಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸುಮಾರು 10 ದಿನಗಳ ಕಾಲ ನಡೆಯುವ ಈ ಹಬ್ಬ ಗಣೇಶ ಚತುರ್ಥಿಯ ದಿನದಂದು ಆರಂಭವಾಗಿ ಅನಂತ ಚತುರ್ದಶಿಯಂದು (Anantha Chaturdashi) ಕೊನೆಯಾಗುತ್ತದೆ. ಬುದ್ಧಿ ಹಾಗೂ ಅದೃಷ್ಟದ ದೇವರಾಗಿರುವ ಗಣೇಶನ (Lord Ganesh) ಜನ್ಮ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ (Shukla Paksha) ಆಯಿತು ಎಂದು ಹಿಂದೂ ಧಾರ್ಮಿಕ ಪುರಾಣದಲ್ಲಿದೆ. 

ದಟ್ಟ ಕಾನನದ ಮಧ್ಯೆ ಬೆಟ್ಟದ ತುದಿಯಲ್ಲಿ ನೆಲೆ ನಿಂತ ಗಣೇಶ
ಭಾರತ ಪ್ರಕೃತಿಯನ್ನೇ ದೇವರೆಂದು ಪೂಜಿಸುವ ಅದರಲ್ಲಿನ ಅಂಶಗಳನ್ನೇ ದೇವರೆಂದು ಕಾಣುವ ದೇಶ ಈ ಕಾರಣ ಆನೆಯ ಮುಖ ಹೊಂದಿದ್ದ ಗಣೇಶ, ಸುಬ್ರಮಣ್ಯನ ವಾಹನವಾಗಿ ನವಿಲು, ಹಾವುಗಳನ್ನು ಪೂಜೆ ಮಾಡುತ್ತಾರೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು 1,100 ವರ್ಷಗಳಷ್ಟು ಹಳೆಯದಾದ ವಿಘ್ನ ನಿವಾರಕ ವಿಘ್ನೇಶನ ಫೋಟೋವೊಂದನ್ನು ಗಣೇಶ ಚತುರ್ಥಿಯಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಕಾಡಿನ ಮಧ್ಯೆ ಪ್ರಶಾಂತ ಪರಿಸರ ಮಧ್ಯೆ ಏಕಾಂಗಿಯಾಗಿ ಗಣೇಶ ನೆಲೆಯಾಗಿದ್ದಾನೆ. ಬಿಹಾರ ರಾಜ್ಯದ ಬಸ್ತಾರ್ ಜಿಲ್ಲೆಯ ಕಾಡಿನಲ್ಲಿರುವ ಈ ಗಣೇಶನ ವಿಗ್ರಹ 1,100 ವರ್ಷಗಳಷ್ಟು ಹಿಂದಿನದ್ದು. ಆ ಕಾಳದ ನಾಗವಂಶಿ ರಾಜವಂಶದ (Nagvanshi dynasty) ಆಡಳಿತದ ವೇಳೆ ಈ ಗಣೇಶನನ್ನು ಎತ್ತರದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಡೋಲಿನ ರೂಪ ಬೆಟ್ಟದಲ್ಲಿರುವ ಈ ಗಣೇಶನನ್ನು ತಲುಪಲು ಬೃಹತ್ ಆದ ಕಾಡೊಳಗೆ 14 ಕಿಲೋ ಮೀಟರ್ ವರೆಗೆ ಸಂಚರಿಸಬೇಕು ಎಂದು ಪ್ರವೀಣ್‌ ಕಸ್ವಾನ್‌ ಈ ಫೋಟೋವನ್ನು ಪೋಸ್ಟ್ ಮಾಡಿ ಬರೆದಿದ್ದಾರೆ.