Asianet Suvarna News Asianet Suvarna News

Vijayanagara; ವೀರ ಸಾವರ್ಕರ್ ಫೋಟೋ ಇಟ್ಟು ಗಣೇಶ ಪ್ರತಿಷ್ಠಾಪಿಸಿದ ಉರ್ದು ಶಾಲೆ

ವಿಜಯನಗರ ಜಿಲ್ಲೆಯ ಉರ್ದು ಕಿರಿಯ ಶಾಲೆಯೊಂದರಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ, ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.  

Urdu school celebrates ganesh chaturthi in Vijayanagara gow
Author
First Published Sep 1, 2022, 11:38 AM IST

ವಿಜಯನಗರ (ಸೆ.1): ತಂಬ್ರಹಳ್ಳಿ ಸರ್ಕಾರಿ ಉರ್ದು ಕಿರಿಯ ಶಾಲೆಯಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ, ಹಿಂದೂ-ಮುಸ್ಲಿಂ ಭಾವೈಕ್ಯತೆಗೆ (Hindu Muslim Communcal Harmony)ಗೆ ಸಾಕ್ಷಿಯಾಗಿದೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನ ಹಳ್ಳಿ  ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ 1 ರಿಂದ 5 ತರಗತಿವರಿಗೂ ಇರೋ ಉರ್ದು ಶಾಲೆ. 95 ಮಕ್ಕಳ ಪೈಕಿ 84 ಮುಸ್ಲಿಂ ವಿದ್ಯಾರ್ಥಿಗಳ ವ್ಯಾಸಂಗ ಮಾಡೋ ಶಾಲೆಯಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗಿದೆ. ಶಾಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಮುಸ್ಲಿಂ ವಿದ್ಯಾರ್ಥಿಗಳಿಂದಲೇ ಗಣೇಶ ಪೂಜೆಯನ್ನು ನೆರವೇರಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳ ಓದುವ ಶಾಲೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿದ್ದು, ಭಾವೈಕ್ಯತೆ ಹೆಸರಾಗಿದೆ ಈ ತಂಬ್ರಹಳ್ಳಿ ಉರ್ದು ಶಾಲೆ. ವಿಘ್ನ ವಿನಾಶಕನಿಗೆ (Vigna Vinayaka) ವಿಶೇಷ ಪೂಜೆ ಜೊತೆಗೆ ವಿಭಿನ್ನವಾಗಿ ಹಬ್ಬವನ್ನು ಆಚರಿಸಲಾಗಿದೆ. ಗಣೇಶ ಮೂರ್ತಿ ಜೊತೆಗೆ ವೀರ್ ಸಾವರ್ಕರ್ ಭಾವಚಿತ್ರವನ್ನೂ ಇರಿಸಿದ್ದು, ಈ ಶಾಲೆಯ ಮತ್ತೊಂದು ವಿಶೇಷತೆ. ಅಷ್ಟೇ ಅಲ್ಲದೇ ದೇಶ ಕಂಡ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಗೃಹ ಸಚಿವ ಅಮಿತ್ ಶಾ,  ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್ ಭಾವಚಿತ್ರಗಳನ್ನೂ ಇರಿಸಲಾಗಿತ್ತು. 

ಗಣೇಶ ಚತುರ್ಥಿ ಜೊತೆಗೆ ಭಾರೀ ಗಮನ ಸೆಳೆದ ದಿವಂಗತ ಮಹಾನ್ ರಾಜಕಾರಣಿಗಳ ಭಾವಚಿತ್ರಗಳು. ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ, ಜಾರ್ಜ್ ಫರ್ನಾಂಡೀಸ್ ಭಾವಚಿತ್ರಕ್ಕೂ ಗಣೇಶನ ಜೊತೆಗೆ ಪೂಜೆ ನೆರವೇರಿಸಲಾಗಿದೆ. ರಾಜ್ ಗುರು, ಸುಖದೇವ್, ಬಾಲ ಗಂಗಾಧರ ತಿಲಕ್ ಹಲವು ಮಹಾನ್ ನಾಯಕರ ಫೋಟೋ ಅನಾವರಣಗೊಂಡಿವೆ. ಮಕ್ಕಳಲ್ಲಿ ದೇಶಭಕ್ತಿ ಸಂದೇಶ ಸಾರುವ‌ ನಿಟ್ಟಿನಲ್ಲಿ ದೇಶ ಭಕ್ತರ ಫೋಟೋ ಅನಾವರಣಗೊಳಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಮಹಾನ್ ವ್ಯಕ್ತಿಗಳು ಜೀವ ಬಲಿದಾನ ಮಾಡಿದ್ದಾರೆ. ಅಂತಹ ಕ್ರಾಂತಿಕಾರಿಗಳ ಇಂದಿನ ಮಕ್ಕಳಿಗೆ ತಿಳಿ ಹೇಳಬೇಕಿದೆ. ಜೀವನದಲ್ಲಿ ನಮಗೆ ಜಾತಿ- ಧರ್ಮ ಮುಖ್ಯ ಅಲ್ಲ. ನಾವೆಲ್ಲರೂ ಒಂದೇ ಅನ್ನೋ ಭಾವನೆಯಲ್ಲಿ ಹಬ್ಬ ಫ್ಲೆಕ್ಸ್ ಗಳನ್ನ ಹಾಕಿದ್ದೇವೆ ಅಂತಾರೆ ಆಯೋಜಕರು.

ವಿಜಯನಗರ ಜಿಲ್ಲೆಯಲ್ಲಿ ಕಳೆಗಟ್ಟಿರೋ ಗಣೇಶ ಚತುರ್ಥಿ: 
ಎತ್ತಿನ ಬಂಡಿಯಲ್ಲಿ ವಿಘ್ನ ವಿನಾಶಕನ ಅದ್ದೂರಿ ಮೆರವಣಿಗೆ ನಡೆಸಲಾಗಿದೆ. ಗಣೇಶ ಮೂರ್ತಿ ಜೊತೆಗೆ ಅಪ್ಪು ಮೂರ್ತಿಯೂ ಮೆರವಣಿಗೆ ಮಾಡಿದ್ದು ವಿಶೇಷ. ವಿರಾಜಮಾನನಂತೆ ಹೊಸಪೇಟೆ ಬೀದಿಗಳಲ್ಲಿ ಸಚರಿಸಿದ ಉಭಯ ಮೂರ್ತಿಗಳು. ಹೊಸಪೇಟೆ ನಗರದ ಬೀದಿಗಳಲ್ಲಿ ಅಪ್ಪು ಹಾಗೂ ಗಣೇಶ ಮೂರ್ತಿ ಸಂಚಾರ. ಪುನೀತ್ ಪುತ್ಥಳಿ ಬಳಿ ಎರಡೂ ಮೂರ್ತಿಗಳಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಲಾಗಿತ್ತು.

ಫ್ರೀ ಗಣೇಶನಿಗಾಗಿ ಮುಗಿಬಿದ್ದ ಜನ: ಮಂಡ್ಯದಲ್ಲಿ ನೂಕುನುಗ್ಗಲು..!

ಬಳಿಕ ಟೌನ್ ಹಾಲ್ ಠಾಣೆ ಮೂಲಕ ಪಾದಗಟ್ಟಿ ಆಂಜನೇಯ ದೇಗುಲ, ವಡಕರಾಯ ದೇವಸ್ಥಾನ, ಹೊಸಪೇಟೆ ತರಕಾರಿ ಮಾರ್ಕೆಟ್, ಗಾಂಧಿ ಸರ್ಕಲ್, ಸಾಯಿಬಾಬಾ ಸರ್ಕಲ್ ಸೇರಿ ಪ್ರಮುಖ ಬೀದಿಗಳಲ್ಲಿ ಉಭಯ ಮೂರ್ತಿಗಳ ಮೆರವಣಿಗೆ ನಡೆಸಲಾಗಿದೆ. ಹಾದಿಯುದ್ದಕ್ಕೂ ಮೊಳಗಿದ ಜೈ ಅಪ್ಪು, ಜೈ ಗಣೇಶ ಜಯಘೋಷ ಮೊಳಗಿತ್ತು. ರಡೂ ಮೂರ್ತಿ ಮೆರವಣಿಗೆಯಲ್ಲಿ ನೂರಾರು ಜನ ಭಾಗಿ ಆಗಿದ್ದರು.  

ಉತ್ತರಕನ್ನಡ: ಇಡಗುಂಜಿಯಲ್ಲಿ ಚೌತಿಯ ಸಂಭ್ರಮ, ವಿಘ್ನ ನಿವಾರಕನ ದರ್ಶನಕ್ಕೆ ಜನಸಾಗರ

ಇದೇ ವೇಳೆ ಅಪ್ಪು, ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ. ಭಾರೀ ಗಮನ ಸೆಳೆದ ಅಪ್ಪು ಹಾಗೂ ಗಣೇಶ ಎರಡೂ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು.

Follow Us:
Download App:
  • android
  • ios