ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು 1,100 ವರ್ಷಗಳಷ್ಟು ಹಳೆಯದಾದ ವಿಘ್ನ ನಿವಾರಕ ವಿಘ್ನೇಶನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ಪೂರ್ವಜರ ಕೆಲವೊಂದು ಸೃಷ್ಟಿಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ದೇವರ ಕೈ ಚಳಕವಿಲ್ಲದೇ ಇದು ಸಾಧ್ಯವೇ ಇಲ್ಲ ಎಂಬ ನಂಬಿಕೆಯನ್ನು ಮೂಡುವಂತೆ ಮಾಡುತ್ತವೆ. ಇದಕ್ಕೆ ಹಲವು ಘಟನೆಗಳು, ಹಲವು ಕಲಾಕೃತಿಗಳು ಸಾಕ್ಷಿಯಾಗಿವೆ. ಇಂತಹ ವೈಚಿತ್ರ್ಯಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಕಾಡಿನ ನಡುವಿನ ಬೃಹತ್ ಆದ ಬೆಟ್ಟದ ಮೇಲಿರುವ ಗಣೇಶನ ವಿಗ್ರಹ. ಇಂದು ದೇಶಾದ್ಯಂತ ಭಕ್ತಿಭಾವದಿಂದ ಜನರು ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರೆ. ಈ ಸಂದರ್ಭದಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು 1,100 ವರ್ಷಗಳಷ್ಟು ಹಳೆಯದಾದ ವಿಘ್ನ ನಿವಾರಕ ವಿಘ್ನೇಶನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಆದಿವಂದ್ಯನ ವಿಗ್ರಹವಿರುವ ಸ್ಥಳವನ್ನು ನೋಡಿದರೆ ಎಂತವರಿಗೂ ಕೆಲ ಕಾಲ ಅಚ್ಚರಿಯಾಗದೇ ಇರದು. ಏಕೆಂದರೆ ಇದು ಬೃಹತ್ ಆದ ಕಾಡಿನ ಮಧ್ಯೆ ಇರುವ ದೊಡ್ಡದಾದ ಬೆಟ್ಟದ ತುತ್ತತುದಿಯಲ್ಲಿ ಇದೆ. 

ಕಾಡಿನ ಮಧ್ಯೆ ಪ್ರಶಾಂತ ಪರಿಸರ ಮಧ್ಯೆ ಏಕಾಂಗಿಯಾಗಿ ಗಣೇಶ ನೆಲೆಯಾಗಿದ್ದಾನೆ. ಬಿಹಾರ ರಾಜ್ಯದ ಬಸ್ತಾರ್ ಜಿಲ್ಲೆಯ ಕಾಡಿನಲ್ಲಿರುವ ಈ ಗಣೇಶನ ವಿಗ್ರಹ 1,100 ವರ್ಷಗಳಷ್ಟು ಹಿಂದಿನದ್ದು. ಆ ಕಾಳದ ನಾಗವಂಶಿ ರಾಜವಂಶದ (Nagvanshi dynasty) ಆಡಳಿತದ ವೇಳೆ ಈ ಗಣೇಶನನ್ನು ಎತ್ತರದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಡೋಲಿನ ರೂಪ ಬೆಟ್ಟದಲ್ಲಿರುವ ಈ ಗಣೇಶನನ್ನು ತಲುಪಲು ಬೃಹತ್ ಆದ ಕಾಡೊಳಗೆ 14 ಕಿಲೋ ಮೀಟರ್ ವರೆಗೆ ಸಂಚರಿಸಬೇಕು ಎಂದು ಪ್ರವೀಣ್‌ ಕಸ್ವಾನ್‌ ಈ ಫೋಟೋವನ್ನು ಪೋಸ್ಟ್ ಮಾಡಿ ಬರೆದಿದ್ದಾರೆ. 

Scroll to load tweet…

ಈ ಗಣೇಶ ಪ್ರತಿಷ್ಠಾಪನೆಯಾದ ಈ ಬೆಟ್ಟದ ಹೆಸರು ಡೋಲ್ಕರ್ ಹಿಲ್‌ (Dholkar hill), ಬಸ್ತಾರ್‌ನ ದಂತೇವಾಡಾದಲ್ಲಿ (Dantewada) ಈ ಬೆಟ್ಟವಿದೆ. ಈ ಗಣೇಶನ ಶಿಲಾಮೂರ್ತಿಯನ್ನು ನಾಗವಂಶಿ ರಾಜರ ಆಳ್ವಿಕೆಯ ಕಾಲದಲ್ಲಿ ಮಾಡಲಾಗಿದೆ. ಗಣೇಶನ ಸುತ್ತಲೂ ಇರುವ ಸುಂದರ ಪರಿಸರದ ಹೊರತಾಗಿಯೂ ಈ ಗಣೇಶನ ಕತೆ ಇಲ್ಲಿ ಹೆಸರುವಾಸಿಯಾಗಿದೆ. ಸ್ಥಳೀಯ ಭೋಗಾಮಿ ಬುಡಕಟ್ಟು(Bhogami tribals)ಜನಾಂಗದವರು ಈ ಮೂಸಿಕ ವಾಹನನ್ನು ತಮ್ಮ ರಕ್ಷಕನಾಗಿ ಪೂಜಿಸುತ್ತಿದ್ದರು.ಈ ಜನಾಂಗದವರು ತಮ್ಮನ್ನು ತಾವು ಧೋಲ್ಕಲ್‌ನ ಮಹಿಳಾ ಅರ್ಚಕರ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಪುರಾಣಗಳನ್ನು ನಂಬುವುದಾದರೆ, ಈ ಬೆಟ್ಟವು ಗಣೇಶ ಮತ್ತು ಪರಶುರಾಮನ ನಡುವೆ ಯುದ್ಧ ನಡೆದ ಸ್ಥಳವಾಗಿತಂತೆ. ಯುದ್ಧದ ನಡುವೆ ಗಣೇಶನ ಹಲ್ಲು ಮುರಿದು ಬಿದ್ದಿತು ಎಂದು ಜನ ನಂಬುತ್ತಾರೆ. 

Ganesh Visarjan 2022: ಗಣೇಶ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ಯಾವುದು?

ಅಂತೂ ತಂತ್ರಜ್ಞಾನಗಳೇ ಅಷ್ಟೊಂದು ಅಭಿವೃದ್ಧಿ ಹೊಂದದ ಆ ಕಾಲದಲ್ಲಿ ಆ ದಟ್ಟ ಕಾಡಿನ ನಡುವೆ ಬೆಟ್ಟದ ತುತ್ತತುದಿಯಲ್ಲಿ ಗಣೇಶನ್ನು ಕೆತ್ತಿದವರು ಯಾರೂ ಕೂರಿಸಿದವರು ಯಾರು ಎಂಬುದು ಮಾತ್ರ ಅಚ್ಚರಿ ಮೂಡಿಸುತ್ತಿದೆ. ಗಣೇಶ ಚತುರ್ಥಿ ಹಬ್ಬವೂ ಭಾರತದಲ್ಲಿ ಆಚರಿಸಲಾಗುವ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ದೇಶಾದ್ಯಂತ ಜನ ಮನೆ ಗಲ್ಲಿ ಬೀದಿಗಳನ್ನು ಬಿಡದೇ ಎಲ್ಲೆಡೆ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಈ ಹಬ್ಬವು ಎಲ್ಲಾ ಹಿಂದೂ ಹಬ್ಬಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಮಹಾರಾಷ್ಟ್ರ, ತೆಲಂಗಾಣ, ಗೋವಾ, ಮಧ್ಯಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. 

Ganesh Chaturthi 2022: ಬಪ್ಪನನ್ನು ವಿಸರ್ಜಿಸುವ ಸರಿಯಾದ ವಿಧಾನವಿದು..

ಈ ನಡುವೆ ಮರಳು ಶಿಲ್ಪಾ ಕಲಾವಿದ ಸುದರ್ಶನ್ ಪಟ್ನಾಯಕ್ (Sudarsan Pattnaik), ಅವರು ವಿಶೇಷವಾದ ಗಣೇಶನನ್ನು ನಿರ್ಮಿಸಿದ್ದಾರೆ. 3,425 ಮರಳುಗಳ ಲಡ್ಡನ್ನು ಹಾಗೂ ಕೆಲವು ಹೂಗಳನ್ನು ಬಳಸಿ ಅವರು ಗಣೇಶನ ಪ್ರತಿಮೆಯನ್ನು ರಚಿಸಿದ್ದಾರೆ. ಇನ್ನು ಹಲವೆಡೆ ಪ್ರಾದೇಶಿಕ ಪ್ರಾಮುಖ್ಯತೆಗೆ ತಕ್ಕಂತೆ ವಿಭಿನ್ನವಾದ ಗಣೇಶನನ್ನು ಜನ ಕೂರಿಸಿದ್ದಾರೆ. ರಾಜ್ಯದಲ್ಲಿ ಅನೇಕರು ಕನ್ನಡಿಗ ಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ರೂಪದಲ್ಲಿ ಗಣೇಶನನ್ನು ಕೂರಿಸಿದ್ದಾರೆ. ಮತ್ತೆ ಕೆಲವು ಹಿಂದೂ ಸಂಘಟನೆಗಳು ಸಾರ್ವಕರ್‌ ಗಣೇಶನನ್ನು ಕೂರಿಸಲು ಮುಂದಾಗಿದ್ದಾರೆ.