Ganesh Visarjan 2022: ಗಣೇಶ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ಯಾವುದು?
ಗಣೇಶ ಬಂದು ಎಲ್ಲ ಮನೆಯಲ್ಲೂ ಪ್ರತಿಷ್ಠಾಪನೆಯಾಗಿದ್ದಾನೆ. ಅವನನ್ನು ವಿಸರ್ಜಿಸಲು ಇಂದೂ ಸೇರಿದಂತೆ 10 ದಿನಗಳ ಕಾಲ ಸಮಯವಿದೆ. ವಿಸರ್ಜನೆಗೆ ಯಾವ ದಿನ ಯಾವ ಮುಹೂರ್ತವಿದೆ ತಿಳಿಯಿರಿ.
ಗಣೇಶ ಚತುರ್ಥಿಯ ಹಬ್ಬ ಶುರುವಾಗಿದೆ. ಇದರೊಂದಿಗೆ ಮುಂದಿನ 10 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 9ರವರೆಗೆ ಗಣೇಶ ಉತ್ಸವ ನಡೆಯಲಿದೆ. ದೇಶ-ವಿದೇಶಗಳಲ್ಲಿ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ದಿನದಂದು ಗಣಪತಿಯು ಬಪ್ಪನನ್ನು ಬಹಳ ವಿಜೃಂಭಣೆಯಿಂದ ಮನೆಗೆ ಕರೆತಂದು ಪ್ರತಿಷ್ಠಾಪಿಸುತ್ತೇವೆ. ನಂತರ ಪೂಜಿಸಿ, ಭಕ್ತಿಯಿಂದ ಆರಾಧಿಸಿ, ಪ್ರೀತಿ ತೋರಿ ವಿಸರ್ಜನೆ ಮಾಡುತ್ತೇವೆ. ಕೆಲವರು ಗಣೇಶ ಚತುರ್ಥಿಯ ದಿನದಂದೇ ಗಣೇಶ ವಿಸರ್ಜನೆ ಮಾಡಿದರೆ ಮತ್ತೆ ಕೆಲವರು ಒಂದೂವರೆ ದಿನಗಳಲ್ಲಿ ಅಥವಾ ಮೂರು, ಐದು, ಏಳು ದಿನಗಳಲ್ಲಿ ಗಣಪತಿಯ ಧಾರ್ಮಿಕ ವಿಸರ್ಜನೆಯನ್ನು ಮಾಡುತ್ತಾರೆ. ಇನ್ನೂ ಕೆಲವರು ಅನಂತ ಚತುರ್ದಶಿಯಂದು ಅಂದರೆ 10 ದಿನದ ಬಳಿಕ ವಿಸರ್ಜಿಸುತ್ತಾರೆ. ನೀವು ಸಹ ಮನೆಯಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸಿದ್ದರೆ, ಆತನ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ತಿಳಿಯಿರಿ.
ಗಣೇಶನನ್ನು ಕರೆತಂದಷ್ಟೇ ಪ್ರೀತಿಯಿಂದ ಕಳುಹಿಸಿಕೊಡಬೇಕು. ಈ ಸಂದರ್ಭದಲ್ಲಿ ಸಕಲ ಪೂಜಾ ವಿಧಾನ ಪಾಲಿಸಿ, ಗಣೇಶ ವಿಸರ್ಜನೆ ಮಾಡಬೇಕು.
ಗಣೇಶ ವಿಸರ್ಜನೆ 2022(Ganesh Visarjan 2022) ದಿನಾಂಕಗಳ ಪ್ರಕಾರ ಶುಭ ಸಮಯ
ಅನಂತ ಚತುರ್ದಶಿಯು ಸೆಪ್ಟೆಂಬರ್ 9ರಂದು. ಅಂದು ಗಣೇಶನ ವಿಸರ್ಜನೆಗೆ ಮುಹೂರ್ತಗಳು ಇಂತಿವೆ..
ಬೆಳಗಿನ ಮುಹೂರ್ತ - 06:03ರಿಂದ 10:44ರವರೆಗೆ
ಮಧ್ಯಾಹ್ನ ಮುಹೂರ್ತ - ಮಧ್ಯಾಹ್ನ 12:18ರಿಂದ 01:52ರವರೆಗೆ
ಸಂಜೆಯ ಮುಹೂರ್ತ - ಸಂಜೆ 5ರಿಂದ 06:34ರವರೆಗೆ
ರಾತ್ರಿ ಮುಹೂರ್ತ ರಾತ್ರಿ-09:26 ನಿಮಿಷದಿಂದ 10:52 ನಿಮಿಷದವರೆಗೆ.
ಇದಲ್ಲದೆ ಸೆಪ್ಟೆಂಬರ್ 10ರಂದು ಬೆಳಿಗ್ಗೆ ಅಂದರೆ ಮಧ್ಯರಾತ್ರಿ 12.18ರಿಂದ ತಡರಾತ್ರಿ 04.37ರವರೆಗೆ ಶುಭ ಮುಹೂರ್ತವಿದೆ.
Ganesh Chaturthi 2022: ಬಪ್ಪನನ್ನು ವಿಸರ್ಜಿಸುವ ಸರಿಯಾದ ವಿಧಾನವಿದು..
ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನೆ - 31 ಆಗಸ್ಟ್ 2022, ಬುಧವಾರ
ಮಧ್ಯಾಹ್ನ ಮುಹೂರ್ತ- ಮಧ್ಯಾಹ್ನ 03:33ರಿಂದ 06:44ರವರೆಗೆ
ರಾತ್ರಿ ಮುಹೂರ್ತ- 08:08ರಿಂದ 12:21ರವರೆಗೆ
ಒಂದೂವರೆ ದಿನದ ನಂತರ ಗಣೇಶ ವಿಸರ್ಜನೆ- 1 ಸೆಪ್ಟೆಂಬರ್ 2022
ಉಷಾಕಾಲ ಮುಹೂರ್ತ- ಬೆಳಗಿನ ಜಾವ 03.10ರಿಂದ 04.35ರವರೆಗೆ
ಮಧ್ಯಾಹ್ನ ಮುಹೂರ್ತ- ಮಧ್ಯಾಹ್ನ 12.21ರಿಂದ 03.32ರವರೆಗೆ
ಸಂಜೆ ಮುಹೂರ್ತ- ಸಂಜೆ 05:07ರಿಂದ 06:43ರವರೆಗೆ
ರಾತ್ರಿ ಮುಹೂರ್ತ- 06:43 PM ರಿಂದ 09:32 PM
ಗಣೇಶ ವಿಸರ್ಜನೆ ಮೂರನೇ ದಿನ - ಸೆಪ್ಟೆಂಬರ್ 2
ಉಷಾಕಾಲ ಮುಹೂರ್ತ- ಬೆಳಿಗ್ಗೆ 03:10 ರಿಂದ 05:59 ರವರೆಗೆ
ಮಧ್ಯಾಹ್ನ 12:21ರಿಂದ 01:46ರವರೆಗೆ
ರಾತ್ರಿ ಮುಹೂರ್ತ- 09:31 ರಿಂದ 10.56 ರವರೆಗೆ
ಸೆಪ್ಟೆಂಬರ್ 3, ಮಧ್ಯರಾತ್ರಿ 12.21ರಿಂದ 04.35 ರವರೆಗೆ.
ಕಳಂಕ ಚತುರ್ಥಿ 2022: ಇಂದು ಚಂದ್ರನನ್ನು ನೋಡಿದ್ರೆ ಅಪವಾದ ತಪ್ಪಿಸೋಕೆ ಈ ಕೆಲಸ ಮಾಡಿ
ಗಣೇಶ ವಿಸರ್ಜನೆ ಐದನೇ ದಿನ - 4 ಸೆಪ್ಟೆಂಬರ್ 2022, ಭಾನುವಾರ
ಬೆಳಗಿನ ಮುಹೂರ್ತ- ಬೆಳಿಗ್ಗೆ 07:35ರಿಂದ ಮಧ್ಯಾಹ್ನ 12.20 ರವರೆಗೆ
ಮಧ್ಯಾಹ್ನ ಮುಹೂರ್ತ- 01:55 PM ರಿಂದ 03:30 PM
ಸಂಜೆ ಮುಹೂರ್ತ- ಸಂಜೆ 06:39 ರಿಂದ ರಾತ್ರಿ 10:55 ರವರೆಗೆ
ಸೆಪ್ಟೆಂಬರ್ 5 ರಂದು ಮಧ್ಯರಾತ್ರಿ 01:45 ರಿಂದ 03.11 ರವರೆಗೆ
ಉಷಾಕಾಲ ಮುಹೂರ್ತ (ಶುಭ) - ಬೆಳಿಗ್ಗೆ 04:36 ರಿಂದ 06.01 ರವರೆಗೆ.
ಗಣೇಶ ವಿಸರ್ಜನೆ ಏಳನೇ ದಿನ - 6 ಸೆಪ್ಟೆಂಬರ್ 2022
ಬೆಳಗಿನ ಮುಹೂರ್ತ- ಬೆಳಿಗ್ಗೆ 09:10ರಿಂದ ಮಧ್ಯಾಹ್ನ 01:54ರವರೆಗೆ
ಮಧ್ಯಾಹ್ನ ಮುಹೂರ್ತ - 03.28ರಿಂದ 05.03ರವರೆಗೆ
ಸಂಜೆ ಮುಹೂರ್ತ- 08:03ರಿಂದ 09.28ರವರೆಗೆ
ಸೆಪ್ಟೆಂಬರ್ 7ರಂದು ರಾತ್ರಿ 10:54 ರವರೆಗೆ ಬೆಳಿಗ್ಗೆ 03.11 ರವರೆಗೆ