ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪುಗಳನ್ನೆಲ್ಲಾ ಮಾಡ್ಬೇಡಿ!
ದೇಶದಾದ್ಯಂತ ಗಣಪತಿ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಮೂರ್ತಿ ಪ್ರತಿಷ್ಠಾಪಿಸಲು ಭಕ್ತರು ಕಾತುರರಾಗಿದ್ದಾರೆ. ಗಣಪತಿಯನ್ನು ಮನೆಗೆ ತಂದು ಪೂಜೆ ಮಾಡುವ ಸಮಯದಲ್ಲಿ ಕೆಲ ನಿಯಮ ಪಾಲನೆ ಮಾಡಬೇಕಾಗುತ್ತದೆ. ಅದು ಪ್ರತಿಯೊಬ್ಬ ಭಕ್ತನಿಗೂ ತಿಳಿದಿರಬೇಕು.

ಭಾರತದಲ್ಲಿ ಆಚರಣೆ ಮಾಡುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದು. ದೇಶಾದ್ಯಂತ ವಿನಾಯಕನ ಭಕ್ತರು ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಣೆ ಮಾಡ್ತಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಮುಂಬೈ, ಪುಣೆ ಹಾಗೂ ಹೈದರಾಬಾದ್ ನಗರಗಳಲ್ಲಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. 10 ದಿನಗಳ ಕಾಲ ಗಣಪತಿಯನ್ನು ಪೂಜೆ ಮಾಡಿ ನಂತ್ರ ಅದ್ಧೂರಿಯಾಗಿ ಆತನನ್ನು ಬೀಳ್ಕೊಡುವ ಪದ್ಧತಿ ಇದೆ.
ವಿಘ್ನ ವಿನಾಶಕ ಎಂದೇ ಕರೆಸಿಕೊಳ್ಳುವ ಗಣೇಶ (Ganesh) ಎಲ್ಲ ಪೂಜೆ, ಹಬ್ಬ (Festival) ಗಳಲ್ಲಿ ಮೊದಲು ಪೂಜಿಸಲ್ಪಡುವ ದೇವರು. ಈ ಬಾರಿ ಚೌತಿ ಹಬ್ಬ ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದೆ. ಸೆಪ್ಟೆಂಬರ್ 28 ರವರೆಗೆ ಸಂಭ್ರಮಾಚರಣೆ ನಡೆಯಲಿದೆ. ಗಣಪತಿ ಬಪ್ಪನನ್ನು ಮನೆಗೆ ತಂದು ಪೂಜೆ ಮಾಡುವ ಭಕ್ತರು ಕೆಲ ಸಂಗತಿಯನ್ನು ತಿಳಿದಿರಬೇಕು. ಮೂರ್ತಿಯನ್ನು ಮನೆಗೆ ತರುವಾಗ ಏನೆಲ್ಲ ಮಾಡಬೇಕು, ಏನೆಲ್ಲ ಮಾಡಬಾರದು ಎಂಬುದನ್ನು ಅರಿತಿರಬೇಕು. ನಾವಿಂದು ಗಣಪತಿಯನ್ನು ಮನೆಗೆ ತರುವಾಗ ಭಕ್ತರು ಯಾವೆಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೇವೆ.
ಬಾತ್ ರೂಂನಲ್ಲಿರುವ ಈ ವಸ್ತುಗಳ ಅಳವಡಿಕೆ ನಿಮ್ಮನ್ನು ಬಡತನಕ್ಕೆ ತಳ್ಳುತ್ತವೆ, ತಡಮಾಡದೆ ಇಂದೇ ತೆಗೆಯಿರಿ
ಗಣೇಶನನ್ನು ಮನೆಗೆ ತರುವ ಮುನ್ನ ಏನು ಮಾಡಬೇಕು? :
ಕಿರೀಟಧಾರಿ ಗಣೇಶನನ್ನೇ ಮನೆಗೆ ತನ್ನಿ . ಮಾರುಕಟ್ಟೆಯಲ್ಲಿ ಈಗಾಗಲೇ ಗೌರಿ, ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ. ನಾನಾ ತರಹದ ಮೂರ್ತಿಗಳನ್ನು ನೀವು ನೋಡಬಹುದು. ಆದ್ರೆ ನಿಮ್ಮ ಮನೆಗೆ ಗಣೇಶನ ವಿಗ್ರಹ ತರುವ ಮೊದಲು ನೀವು ಮೂರ್ತಿಗೆ ಕಿರೀಟವಿದೆಯೇ ಎಂಬುದನ್ನು ಗಮನಿಸಿ. ಕಿರೀಟವಿಲ್ಲದೆ ಗಣೇಶ ವಿಗ್ರಹ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಗಣಪತಿ ಹಬ್ಬ ಅದೃಷ್ಟ ತರಬೇಕೆಂದ್ರೆ ಒಂದು ಸುಂದರ ಕಿರೀಟ ಇರುವಂತೆ ನೋಡಿಕೊಳ್ಳಿ.
ಒಂದ್ವೇಳೆ ನೀವು ಮನೆಯಲ್ಲೇ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದರೆ ನಿಂತಿರುವ ಮೂರ್ತಿಯನ್ನು ಸಿದ್ಧಪಡಿಸಬೇಡಿ. ಯಾವಾಗ್ಲೂ ಕುಳಿತಿರುವ ಗಣಪತಿಗೆ ಪೂಜೆ ಮಾಡಬೇಕು. ಹಾಗಾಗಿ ಕುಳಿತ ಭಂಗಿಯಲ್ಲಿರುವ ಗಣಪತಿಯನ್ನು ಸಿದ್ಧಪಡಿಸಿ. ಮಾರುಕಟ್ಟೆಯಿಂದ ಮೂರ್ತಿ ಖರೀದಿ ಮಾಡುತ್ತಿದ್ದರೂ ಈ ಸಂಗತಿ ನೆನಪಿರಲಿ.
ಶನಿಯಿಂದ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ,ಹೆಜ್ಜೆ ಹೆಜ್ಜೆಗೂ ಯಶಸ್ಸು
ಗಣೇಶ ಮೂರ್ತಿ ಬಳಿ ಇಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗಣಪತಿ ವಾಹನ ಇಲಿ. ಹಾಗಾಗಿ ಆತನ ಕಾಲ ಕೆಳಗೆ ಚಿಕ್ಕದೊಂದು ಇಲಿಯ ಮೂರ್ತಿ ಇರಬೇಕು. ಅದಲ್ಲದೆ ಮೋದಕ ಪ್ರಿಯ ಗಣೇಶ. ಇದೇ ಕಾರಣಕ್ಕೆ ಮೋದಕವೂ ಅಲ್ಲಿರುವಂತೆ ನೀವು ನೋಡಿಕೊಳ್ಳಿ. ಮೋದಕ, ಇಲಿ ಹೊಂದಿರುವ ಗಣೇಶ ಮೂರ್ತಿ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ.
ಮನೆಗೆ ಗಣಪತಿ ಬರುವ ಸಂದರ್ಭದಲ್ಲಿ ಅದನ್ನು ತೆರೆದ ಸ್ಥಿತಿಯಲ್ಲಿ ತರಬಾರದು. ಮೂರ್ತಿಗೆ ಕೆಂಪು ಚುನರಿ, ಬಟ್ಟೆ ಅಥವಾ ಪೇಪರನ್ನು ಮುಚ್ಚಿ.
ಗಣೇಶನನ್ನು ಮನೆಗೆ ತಂದು ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ನೀವು ದಿಕ್ಕಿಗೆ ಗಮನ ನೀಡಬೇಕು. ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿಗೆ ನೀವು ಆತನ ಪ್ರತಿಷ್ಠಾಪನೆ ಮಾಡಬೇಕು.
ಗಣಪತಿ ಬಪ್ಪನನ್ನು ಶಂಖ, ಗಂಟೆ, ವಾದ್ಯಗಳೊಂದಿಗೆ ಹಬ್ಬದ ವಾತಾವರಣದಲ್ಲಿ ಸ್ವಾಗತಿಸಬೇಕು. ಗಣೇಶನನ್ನು ನೀವು 1, 3, 5, 7, 10 ಅಥವಾ 11 ದಿನಗಳವರೆಗೆ ಸ್ವಾಗತಿಸಬಹುದ. ನಂತರ ಪ್ರತಿಷ್ಠಾಪನೆ ಸಲ್ಲದು. ಆ ನಂತರ ವಿಸರ್ಜನೆ ಕಾರ್ಯ ನಡೆಯುತ್ತದೆ.
ಗಣೇಶ ಮೂರ್ತಿಯನ್ನು ಮನೆಗೆ ತರುವ ವೇಳೆ ಅಥವಾ ತಯಾರಿಸುವ ವೇಳೆ ಸೊಂಡಿಲು ಬಲಭಾಗದಲ್ಲಿ ಇರದಂತೆ ನೋಡಿಕೊಳ್ಳಿ. ಬಲಮುರಿ ಗಣಪ ಮೊಂಡುತನವನ್ನು ತೋರಿಸುತ್ತಾನೆ. ಕಷ್ಟದ ಸಮಯವನ್ನು ಇದು ಸೂಚಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ನೀವು ಸೊಂಡಿಲು ಎಡಭಾಗದಲ್ಲಿರುವ ಗಣಪತಿ ಮೂರ್ತಿಯನ್ನು ಖರೀದಿ ಮಾಡಿ. ಗಣೇಶನ ಪ್ರತಿಷ್ಠಾಪನೆ ನಂತ್ರ ಆ ಜಾಗದಲ್ಲಿ ಮೂರ್ತಿಯೊಂದನ್ನೇ ಬಿಡಬೇಡಿ. ಅಲ್ಲಿ ಯಾರಾದ್ರೂ ಸದಾ ಇರುವಂತೆ ನೋಡಿಕೊಳ್ಳಿ.
ಮನೆಗೆ ತಂದ ಗಣಪತಿಗೆ ಆರತಿ ಮತ್ತು ಪೂಜೆ ಮಾಡದೆ ನೀರಿನಲ್ಲಿ ಬಿಡಬೇಡಿ. ಮನೆಗೆ ಗಣೇಶ ಬಂದ ನಂತ್ರ ಸಾತ್ವಿಕ ಆಹಾರ ಸೇವನೆ ಮಾಡಿ. ಮುರಿದ, ಹಾಳಾದ, ಮಾಸಲಾದ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಡಿ. ಹಿಂದಿನ ವರ್ಷದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಡಿ.