ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಸೀರಿಯಲ್‌ ಕಥೆಗಿಂತ ಸೀತಾ ಸೀರೆನೇ ಚರ್ಚೆ ಆಗ್ತಿದೆ. ಸೀತೆ ಸೀರೆ ಆ ಪರಿ ಖರಾಬಾಗಿದ್ಯಾ? ನಿಜಕ್ಕೂ ಆಗಿದ್ದೇನು

ಸೀತಾರಾಮ ಜೀ ಕನ್ನಡದ ಸಖತ್ ಫೇಮಸ್ ಸೀರಿಯಲ್. ಜೀ ಕನ್ನಡವೇ ಈ ಸೀರಿಯಲ್‌ ನಿರ್ಮಾಣದ ಹೊಣೆಯನ್ನೂ ಹೊತ್ತಿರೋದು ವಿಶೇಷ. ಈ ಸೀರಿಯಲ್‌ನಲ್ಲೀಗ ಸೀತಾ ಮತ್ತು ರಾಮನ ಮದುವೆಗೆ ತಯಾರಿ ಶುರುವಾಗಿದೆ. ಹೆಣ್ಣು ಕೇಳುವ ಸಲುವಾಗಿ ಮಿಲಿಯನೇರ್‌ ದೇಸಾಯಿ ಕುಟುಂಬ ಮಧ್ಯಮ ವರ್ಗದ ಶಾಂತಮ್ಮನ ವಠಾರಕ್ಕೆ ಬಂದಿದೆ. ಪುಟಾಣಿ ಸಿಹಿಯ ಓಡಾಟ ಈ ಪುಟ್ಟ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದೆ. ತಾಂಬೂಲ ಬದಲಾಯಿಸುವಾಗ ಸಿಹಿ ತಾನೇ ದೇವರ ಮನೆಯಿಂದ ತಾಂಬೂಲದ ತಟ್ಟೆ ತಂದು ಸೂರಿ ತಾತ ಅಂದರೆ ಸೂರ್ಯಪ್ರಕಾಶ್‌ ದೇಸಾಯಿ ಮುಂದಿಡುತ್ತಾಳೆ. ತಾತ ಮತ್ತು ಪುಟ್ಟ ಮೊಮ್ಮಗಳ ಈ ಸೀನ್ ಅಚ್ಚುಕಟ್ಟಾಗಿ ಮೂಡಿಬಂದಿದೆ. ಆದರೆ ಎಡವಟ್ಟಾಗಿದ್ದು ಸೀತಾ ಎಪೀಯರೆನ್ಸ್‌ನಲ್ಲಿ. ನಾಚುತ್ತಾ ತಲೆ ತಗ್ಗಿಸಿ ಸಾಂಪ್ರದಾಯಿಕ ಹೆಣ್ಣಿನಂತೆ ಬರೋ ಸೀತಾಳ ಎಪೀಯರೆನ್ಸ್ ಏನೋ ವೀಕ್ಷಕರಿಗೆ ಇಷ್ಟ ಆಗಿದೆ. ಆದರೆ ಎಡವಟ್ಟಾದದ್ದು ಆಕೆ ಉಟ್ಟಿರುವ ಸೀರೆಯಲ್ಲಿ.

ಕಡುನೀಲಿ ಅಂದರೆ ಇಂಕ್‌ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್‌ ಇರುವ ಈ ಸೀರೆ ವೀಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದಕ್ಕೆ ಕಾಂಬಿನೇಶನ್‌ ಆಗಿ ಸ್ಯಾಂಡಲ್‌ ವುಡ್‌ ಕಲರ್ ಬ್ಲೌಸ್‌ ತೊಟ್ಟಿದ್ದನ್ನೂ 'ಥೂ, ಸ್ವಲ್ಪನೂ ಚೆನ್ನಾಗಿಲ್ಲ' ಅಂತ ವೀಕ್ಷಕರು ಹಿಗ್ಗಾಮಗ್ಗಾ ಝಾಡಿಸುತ್ತಿದ್ದಾರೆ. ಸೀತಾ ಸೀರೆ ಸೆಲೆಕ್ಷನ್ನೇ ಸರಿಯಾಗಿಲ್ಲ, ಬ್ಲೌಸ್ ಖರಾಬಾಗಿದೆ. ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಸೀತಾಗೆ ಸ್ವಲ್ಪನೂ ಡೆಸ್ ಸೆನ್ಸ್‌ ಇಲ್ಲ.. ಹೀಗೆ ನೂರಾರು ಕಾಮೆಂಟ್‌ಗಳು 'ಸೀತಾರಾಮ' ಸೀರಿಯಲ್‌ ಪ್ರೋಮೋದ ಕಾಮೆಂಟ್‌ ಬಾಕ್ಸ್‌ನಲ್ಲಿ ಬಂದು ಬಿದ್ದಿದೆ.
ಇನ್ನೊಂದು ಕಡೆ ದೇಸಾಯಿ ಫ್ಯಾಮಿಲಿ ಹೊಸ ಸೀರೆ ತಂದು, ಈ ಸೀರೆ ಉಟ್ಕೊಳ್ಳಿ ಅಂದಾಗ ಸೀತಾ ನಿರಾಕರಿಸುತ್ತಾಳೆ. ಅವರೆಲ್ಲ ಅನುಮಾನದಲ್ಲಿ ಸೀತಾಳ ಕಡೆ ನೋಡಿದಾಗ ಆಕೆ ಹಿಂಜರಿಯುತ್ತಾ, 'ಈ ಸೀರೆ ರಾಮನೇ ಕೊಡಿಸಿದ್ದು' ಅಂತ ಹೇಳ್ತಾಳೆ. ಸರಿಹೋಯ್ತು, ಅಲ್ಲಿಗೆ ರಾಮನ ಟೇಸ್ಟ್ ಚೆನ್ನಾಗಿಲ್ಲ ಅಂದರೆ ಸೀತಾನೂ ಚೆನ್ನಾಗಿಲ್ಲ ಅಂದಂಗಾಗುತ್ತೆ. ಇರಲಿ. ಇಷ್ಟಕ್ಕೇ ಮುಗಿದಿದ್ದರೆ ಪರವಾಗಿರಲಿಲ್ಲ. ರಾಮನ ಚಿಕ್ಕ ಚಿಕ್ಕಿ ಇದೇ ಸಮಯ ಅಂತ ರಾಮನ ಸೀರೆ ಸೆಲೆಕ್ಷನ್‌ ಅನ್ನು ಹಾಡಿ ಹೊಗಳುತ್ತಾಳೆ. ಇದು ಈ ಸೀನ್‌ನಲ್ಲಿ ಸಖತ್ ಆಭಾಸ ಸೃಷ್ಟಿಸಿದೆ.

ಹೆಚ್ಚುತ್ತಿದೆ ಸೆಕ್ಸ್‌ ಇಲ್ಲದ ಫ್ರೆಂಡ್‌ಶಿಪ್‌ ಮ್ಯಾರೀಜ್‌, ಅಮೃತಧಾರೆಯ ಗೌತಮ್-ಭೂಮಿಕಾ ಸಂಬಂಧದ ಹಾಗಾ?

ವೀಕ್ಷಕರು ಸೀರಿಯಲ್‌ನ ಕಥೆಗೆ ಕೊಡುವಷ್ಟೇ ಮಹತ್ವವನ್ನು ಕಲಾವಿದರ ಉಡುಗೆಗೂ ನೀಡುತ್ತಾರೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಈ ಹಿಂದೆ 'ಲಕ್ಷ್ಮೀ ನಿವಾಸ' ಸೀರಿಯಲ್‌ನ ಜಾನ್ವಿಗೂ ಈ ವಿಚಾರದಲ್ಲಿ ಸಖತ್ತಾಗಿ ಝಾಡಿಸಿದ್ರು. 'ನಿಂಗೆ ಬ್ಲೌಸ್‌ ಹೊಲಿಸಲಿಕ್ಕೂ ನಿರ್ಮಾಪಕರು ದುಡ್ಡು ಕೊಟ್ಟಿಲ್ವಮ್ಮಾ' ಎಂದೆಲ್ಲ ಕಾಲೆಳೆದಿದ್ದರು. ಇದೀಗ ಸೀತಾ ಸರದಿ. ಆಕೆಯ ಸೀರೆಯ ಡಿಸೈನ್‌, ಅದಕ್ಕೆ ಕಾಂಬಿನೇಶನ್‌ ಆಗಿ ತೊಟ್ಟಿರುವ ಬ್ಲೌಸ್‌ ಎಲ್ಲವೂ ವೀಕ್ಷಕರ ವಿರೋಧಕ್ಕೆ ಕಾರಣವಾಗಿದೆ. ಸೀತಾಳ ಹೇರ್‌ಸ್ಟೈಲ್‌ ಬಗೆಗೂ ಸಾಕಷ್ಟು ಕಾಮೆಂಟ್ ಹರಿದುಬರುತ್ತಿದೆ.
ಹೀಗಾಗಿ ಸೀರಿಯಲ್ ಕಲಾವಿದರು ತಮ್ಮ ಉಡುಗೆ ತೊಡುಗೆ ವಿಚಾರದಲ್ಲಿ, 'ಹೋಗ್ಲಿ ಬಿಡು, ಏನಾಗುತ್ತೆ?' ಅಂತ ನಿರ್ಲಕ್ಷ್ಯ ಮಾಡೋ ಹಾಗಿಲ್ಲ. ತಮ್ಮ ಪ್ರತೀ ಕಾಸ್ಟ್ಯೂಮ್ ಬಗ್ಗೆಯೂ ಗಮನ ಕೊಡಲೇಬೇಕು. ಇಲ್ಲಾಂದರೆ ಹೀಗೆ ಕಾದ ಸೀಸದ ಹಾಗೆ ಬರುವ ವೀಕ್ಷಕರ ಕಾಮೆಂಟ್‌ಗಳಿಗೆ ಗುರಿಯಾಗಬೇಕು.
ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಆಕೆಯ ಡ್ರೆಸ್‌ ಸೆನ್ಸ್‌ಗೆ ಈ ಹಿಂದೆ ಮೆಚ್ಚುಗೆ ಸಿಕ್ಕಿತ್ತು. ಆದರೆ ಈ ಬಾರಿ ಮಾತ್ರ ಹಿಗ್ಗಾಮಗ್ಗಾ ಬೈಗುಳದ ಚಾಟಿ ಏಟು ಸಿಕ್ತಿದೆ.

ಹನಿಮೂನೋ, ಆಫೀಸ್​ ಟೂರೋ? ಮಧುಚಂದ್ರಕ್ಕೂ ಸೂಟು ಬೂಟು ಬೇಕಾ? ಗೌತಮ್​ ಕಾಲೆಳೆದ ಫ್ಯಾನ್ಸ್​