Asianet Suvarna News Asianet Suvarna News

'ನಿಮ್ಮ ಮೋದಿಗೆ ಕನ್ನಡ ಬರುತ್ತಾ ಮೊದಲು ತಿಳ್ಕೊಳ್ಳಿ..' ಟ್ರೋಲ್ ಮಾಡಿದವರಿಗೆ ಮಧು ಬಂಗಾರಪ್ಪ ತಿರುಗೇಟು

ನಿಮ್ಮ ಮೋದಿಗೆ ಕನ್ನಡ ಬರುತ್ತಾ? ಮೊದಲು ತಿಳ್ಕೊಳ್ಳಿ. ಇಲ್ಲಿ ಬಂದು ಕನ್ನಡದಲ್ಲಿ ಮಾತಾಡ್ತಾರೆ, ತಮಿಳನಾಡಿಗೆ ಹೋಗಿ ತಮಿಳು ಮಾತಾಡ್ತಾರೆ. ಅವರಿಗೆ ಯಾರೋ ಬರೆದುಕೊಟ್ಟಿರ್ತಾರೆ ಮಾತಾಡ್ತಾರೆ ಎನ್ನುವ ಮೂಲಕ 'ಸಚಿವ ಮಧು ಬಂಗಾರಪ್ಪ'ಗೆ ಕನ್ನಡ ಬರೊಲ್ಲ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದರು.

Minister Madhu bangarappa outraged against trolls at chikkamagaluru rav
Author
First Published May 18, 2024, 11:52 AM IST

ಚಿಕ್ಕಮಗಳೂರು (ಮೇ.18): ನಿಮ್ಮ ಮೋದಿಗೆ ಕನ್ನಡ ಬರುತ್ತಾ? ಮೊದಲು ತಿಳ್ಕೊಳ್ಳಿ. ಇಲ್ಲಿ ಬಂದು ಕನ್ನಡದಲ್ಲಿ ಮಾತಾಡ್ತಾರೆ, ತಮಿಳನಾಡಿಗೆ ಹೋಗಿ ತಮಿಳು ಮಾತಾಡ್ತಾರೆ. ಅವರಿಗೆ ಯಾರೋ ಬರೆದುಕೊಟ್ಟಿರ್ತಾರೆ ಮಾತಾಡ್ತಾರೆ ಎನ್ನುವ ಮೂಲಕ 'ಸಚಿವ ಮಧು ಬಂಗಾರಪ್ಪ'ಗೆ ಕನ್ನಡ ಬರೊಲ್ಲ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದರು.

ಚಿಕ್ಕಮಗಳೂರಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನನಗೆ ಓದೋದು ಸ್ವಲ್ಪ ಕಷ್ಟ. ಆದರೆ ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತಿನಿ. ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತಿವಿ ಅಂದಿದ್ದೆ, ಅನಿವಾರ್ಯವಾಗಿ ಮತ್ತೆ ಹೇಳಬೇಕಾಗುತ್ತೆ ಎಂದು ಟ್ರೋಲ್ ಮಾಡುವವರ ವಿರುದ್ಧ ಹರಿಹಾಯ್ದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ಕಾರಣ : ವೈ.ಎ.ನಾರಾಯಣಸ್ವಾಮಿ

ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯದು ಇದೆ ಅದನ್ನ ಟ್ರೋಲ್ ಮಾಡಿ. ನಾನೇನು ಕನ್ನಡ ಹೇಳಿಕೊಡಲ್ಲ, ನನ್ನ ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವುದೇ ಪೋಷಕರು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಟ್ರೋಲ್‌ನಿಂದ ಯಾವನ ಹೊಟ್ಟೆನೂ ತುಂಬೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

SSLC ಟಾಪರ್ ಅಂಕಿತಾಗೆ ಕರೆ ಮಾಡಿ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

ಇನ್ನು ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ವಕೀಲ ದೇವರಾಜೇಗೌಡ, 'ನಾನು ಜೈಲಿಂದ ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,  ಆರೋಪಿ ಯಾವ ಸಂದರ್ಭದಲ್ಲಿ ಆರೋಪಿಯಾಗಿದ್ದಾನೆ, ನೋಡಬೇಕು. ಪ್ರಕರಣದ ತನಿಖೆ ಒಳ್ಳೆಯ ರೀತಿ ಆಗಲಿ ಅಷ್ಟೆ. ಸಂತ್ರಸ್ತರನ್ನ ಕಾಪಾಡಬೇಕು, ಅವರಿಗೆ ನ್ಯಾಯ ಕೊಡಬೇಕು. ಜೈಲಿಂದ ಬಂದ ಬಳಿಕ ಅವರೇನು ಒಳ್ಳೆಯವರು ಆಗ್ತಾರಲ್ಲ, ಅದೇನು ಮಾಡ್ತಾರೋ ಮಾಡಿಕೊಳ್ಳಲಿ ನೋಡೋಣ. ನ್ಯಾಯ ಕೇಳೋದು ತಪ್ಪಲ್ಲ ಕೇಳಲಿ. ಆದರೆ ಈ ರೀತಿ ಬ್ಲ್ಯಾಕ್ ಮೇಲ್ ನಡೆಯೊಲ್ಲ ಎಂದರು.

Latest Videos
Follow Us:
Download App:
  • android
  • ios