ಚೀತಾ ಜೊತೆ ಯುವಕನ ಮಂಗನಾಟ; ವೈರಲ್ ವಿಡಿಯೋ ನೋಡಿ ಶಾಕ್ ಅದ ಜನರು!
ಸಾಕು ಚೀತಾ ಆತನ ಮಾಲೀಕನ ಮೇಲೆಯೇ ದಾಳಿ ನಡೆಸಿದೆ. ಯಾಕೆ ಚೀತಾ ದಾಳಿ ನಡೆಸಿದೆ? ವಿಡಿಯೋ ನೋಡಿದ ನೆಟ್ಟಿಗರು ನೀಡಿದ ಸಲಹೆ ಏನು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಯಾರು ಬೇಕಾದರೂ ಬೆಳಗಾಗುವಷ್ಟರಲ್ಲಿ ಸೂಪರ್ ಹೀರೋ ಆಗಬಹುದು. ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಸೋಪಾ ಮೇಲೆ ಕುಳಿತಿದ್ದ ಚೀತಾ ಜೊತೆ ಮಂಗನಾಟ ಮಾಡಲು ಹೋಗಿದ್ದ ಏಟು ತಿಂದು ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಬೆಕ್ಕು, ನಾಯಿ, ಹಸು, ಮೇಕೆ, ಕುರಿ ಸೇರಿದಂತೆ ಕೆಲ ಪ್ರಾಣಿಗಳನ್ನು ಸಾಕಬಹುದು. ಆದರೆ ವಿದೇಶಗಳಲ್ಲಿ ಅದರಲ್ಲಿಯೂ ಆಗರ್ಭ ಶ್ರೀಮಂತರು ತಮ್ಮ ಮನೆಗಳಲ್ಲಿ ಹುಲಿ, ಚಿರತೆ, ಹಾವು, ಮೊಸಳೆ, ಚೇಳು ಅಂತಹ ಅಪಾಯಕಾರಿ ಪ್ರಾಣಿಗಳನ್ನು ಸಾಕುತ್ತಾರೆ. ಇಂತಹ ಜನರು ತಮ್ಮ ಪ್ರಾಣಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಪಾಕಿಸ್ತಾನದ ನೋಮಾನ್ ಹಸನ್ ಎಂಬ ವ್ಯಕ್ತಿ ಮನೆಯಲ್ಲಿ ಹಲವು ಕಾಡುಪ್ರಾಣಿಗಳನ್ನು ಸಾಕಿದ್ದಾನೆ. ಇದೀಗ ನೋಮಾನ್ ಹಸನ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ. ವಿಡಿಯೋದಲ್ಲಿ ನೋಮಾನ್ ಹಸನ್, ಚೀತಾ ಮತ್ತು ಓರ್ವ ಯುವಕ ಕುಳಿತಿರೋದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಏನಿದೆ?
ಸೋಫಾದಲ್ಲಿ ಚೀತಾ ಜೊತೆಯಲ್ಲಿ ನೋಮಾನ್ ಮತ್ತು ಓರ್ವ ಯುವಕ ಕುಳಿತಿದ್ದಾನೆ. ನೋಮಾನ್ ಜೊತೆಯಲ್ಲಿದ್ದ ಯುವಕ ಅತ್ಯಂತ ಖುಷಿಯಿಂದ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದನು. ಫೋಟೋ ಕ್ಲಿಕ್ಕಿಸುತ್ತಿರು ವೇಳೆ ನೋಮಾನ್ ಹಸನ್ ಚೀತಾ ತಲೆ ಮೇಲೆ ಕೈ ಆಡಿಸಿದ್ದಾನೆ. ಚೀತಾಗೆ ಅದೆಲ್ಲಿಂದ ಬಂತು ಕೋಪ, ದಿಢೀರ್ ಅಂತ ತನ್ನ ಮುಂಗಾಲಿನಿಂದ ನೋಮಾನ್ ಮೇಲೆ ದಾಳಿ ನಡೆಸಿದೆ.
ಇದಕ್ಕಿದ್ದಂತೆ ಹೆಚ್ಚಾಯ್ತು ಜಲಪಾತದ ನೀರು; ಎದ್ನೋ ಬಿದ್ನೋ ಅಂತ ಓಡಿದ ಜನರು, ವಿಡಿಯೋ ನೋಡಿ
ಚೀತಾ ದಾಳಿಯಿಂದ ಗಾಬರಿಗೊಂಡ ನೋಮಾನ್ ಸೋಫಾದಿಂದ ಎದ್ದು ಬಂದಿದ್ದಾನೆ. ನಂತರ ಕ್ಯಾಮೆರಾಗೆ ತನ್ನ ಕತ್ತಿನ ಭಾಗದಲ್ಲಾದ ಗಾಯವನ್ನು ತೋರಿಸಿದ್ದಾನೆ. ಈ ವಿಡಿಯೋವನ್ನು ನೋಮಾನ್ ಹಸನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಚಿತಾ ಅಟ್ಯಾಕ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಏಳು ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿವೆ.
ಈ ವಿಡಿಯೋ ನೋಡಿದ ನೆಟ್ಟಿಗರು ಇಂತಹ ಅಪಾಯಕಾರಿ ಪ್ರಾಣಿಗಳನ್ನು ಸಾಕುವುದು ಒಳ್ಳಯದಲ್ಲ. ಅವುಗಳು ಅರಣ್ಯ ಪ್ರದೇಶದಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ. ಇಂತಹ ಪ್ರಾಣಿಗಳು ಯಾವಾಗ ದಾಳಿ ನಡೆಸುತ್ತವೆ ಎಂಬುವುದು ಗೊತ್ತಾಗಲ್ಲ. ಆದಷ್ಟು ಎಚ್ಚರಿಕೆಯಿಂದಿರಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಬುರ್ಕಾ ಬೇಕೋ, ಬೇಡ್ವೋ? ಭಾರತದಲ್ಲಿ ನಿಲ್ಲದ ಹೋರಾಟ, ಸೌದಿಯಲ್ಲಿ ಮೊಟ್ಟಮೊದಲ ಸ್ವಿಮ್ ವೇರ್ ಶೋ!
ನೋಮಾನ್‌ಗೆ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್
ನೋಮಾನ್ ಹಸನ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಹುಲಿ, ಜಿರಾಫೆ ಸೇರಿದಂತೆ ಹಲವು ಪ್ರಾಣಿಗಳ ಜೊತೆಯಲ್ಲಿ ಅನ್ಯೋನತೆಯಿಂದ ಇರೋ ಫೋಟೋ, ವಿಡಿಯೋಗಳನ್ನು ನೋಡಬಹುದು. ಇಷ್ಟು ಮಾತ್ರವಲ್ಲದೇ ನೋಮಾನ್‌ಗೆ ಯುಟ್ಯೂಬ್ ನಲ್ಲಿ 90 ಲಕ್ಷ ಸಬ್ ಸಕ್ರೈಬರ್ ಇದ್ದಾರೆ.