ಹಸ್ತ ರೇಖೆಯಿಂದ ತಿಳಿಯಿರಿ ವಿದೇಶ ಪ್ರಯಾಣ ಯೋಗ..

ಹಸ್ತದಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಬಹುದು. ಹಸ್ತದಲ್ಲಿರುವ ವಿವಿಧ ರೀತಿಯ ರೇಖೆಗಳನ್ನು ನೋಡಿ ವ್ಯಕ್ತಿಯ ಬಗೆಗಿನ ಅದೃಷ್ಟದ ವಿಚಾರಗಳನ್ನು, ಸಂಪತ್ತು, ಧಾರ್ಮಿಕ ಆಸಕ್ತಿ ಮತ್ತು ಶ್ರದ್ಧೆ, ವೈವಾಹಿಕ ಜೀವನ, ವಿದೇಶ ಪ್ರಯಾಣ ಹೀಗೆ ಅನೇಕ ಅಂಶಗಳನ್ನು  ತಿಳಿದುಕೊಳ್ಳಬಹುದು. ಹಾಗಾಗಿ ವ್ಯಕ್ತಿಯ ಹಸ್ತರೇಖೆಯಿಂದ ವಿದೇಶ ಪ್ರಯಾಣ ಯೋಗದ ಬಗ್ಗೆ ತಿಳಿಯೋಣ..

Foreign trip chance to know by palm lines and predictions

ವ್ಯಕ್ತಿಯ ಭವಿಷ್ಯದ (Future) ಬಗ್ಗೆ ಅನೇಕ ಮಾರ್ಗಗಳಿಂದ  ತಿಳಿಕೊಳ್ಳಬಹುದು. ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜಾತಕವು ಒಂದು ಮುಖ್ಯವಾದ ವಿಧವಾದರೆ, ಇನ್ನು ಹಸ್ತಸಾಮುದ್ರಿಕ, ಸಂಖ್ಯಾಶಾಸ್ತ್ರ ಹಾಗೂ ಇನ್ನಿತರ ಸಂಕೇತಗಳು ಮತ್ತು ಶಕುನಗಳು ಸಹಾಯಕವಾಗಿರುತ್ತವೆ. ಹಸ್ತಸಾಮುದ್ರಿಕಾ ಶಾಸ್ತ್ರವು (Palmistry) ವ್ಯಕ್ತಿಯ ಬಗೆಗಿನ ಅನೇಕ ವಿಚಾರಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಹಸ್ತದ ರೇಖೆಗಳಿಂದ (Palm lines) ಭವಿಷ್ಯದ ಬಗ್ಗೆ ಅಂದರೆ ವಿದ್ಯಾಭ್ಯಾಸ, ವಿವಾಹ, ಸಂತಾನ, ವಿದೇಶ ಪ್ರಯಾಣ ಹೀಗೆ ಅನೇಕ ವಿಚಾರಗಳನ್ನು ತಿಳಿಯಬಹುದಾಗಿದೆ. 

ಹೌದು. ಹಸ್ತದಲ್ಲಿರುವ ರೇಖೆಗಳನ್ನು ಗಮನಿಸಿ ವ್ಯಕ್ತಿಗೆ ವಿದೇಶ ಪ್ರಯಾಣ (Foreign trip) ಯೋಗವಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು. ಅಷ್ಟೇ ಅಲ್ಲದೇ ವಿದೇಶಕ್ಕೆ ಎಷ್ಟು ಬಾರಿ ಹೋಗಿ ಬರುವ ಯೋಗವಿದೆ ಅಥವಾ ಹೆಚ್ಚು ದೂರದ ಯಾತ್ರೆಯನ್ನು ಎಷ್ಟು ಬಾರಿ ಮಾಡುತ್ತಾರೆ. ಕೆಲವು ವರ್ಷಗಳ ಕಾಲ ವಿದೇಶದಲ್ಲಿದ್ದು ಮರಳುತ್ತಾರೋ ಅಥವಾ ಅಲ್ಲೇ ಆ ವ್ಯಕ್ತಿಯ ಮೃತ್ಯು (Death) ಉಂಟಾಗುತ್ತದೆಯೋ ಎಂಬುದನ್ನು ಸಹ ಹಸ್ತ ರೇಖೆಯಿಂದ ತಿಳಿಯಬಹುದಾಗಿದೆ. ಹಾಗಾದರೆ ಹಸ್ತರೇಖೆಯಿಂದ ವಿದೇಶ ಪ್ರಯಾಣ ಯೋಗದ ಬಗ್ಗೆ ತಿಳಿಯೋಣ....

ಹಸ್ತದ ರೇಖೆಗಳ ಬಗ್ಗೆ ಮೊದಲು ತಿಳಿಯೋಣ
• ಹೃದಯ ರೇಖೆ: ಕಿರು ಬೆರಳ ಕೆಳಗಿನಿಂದ ಆರಂಭವಾಗಿ ತೋರು ಬೆರಳ ಕಡೆಗೆ ಹೋಗಿರುವ ರೇಖೆಯೇ ಹೃದಯ ರೇಖೆ.
• ಜೀವನ ರೇಖೆ: ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯದಿಂದ ಆರಂಭವಾಗಿ ಮಣಿಕಟ್ಟಿನ ಕಡೆಗೆ ಹೋಗಿರುವ ರೇಖೆಯೇ ಜೀವನ ರೇಖೆ.
• ಮಸ್ತಿಷ್ಕ ರೇಖೆ: ಜೀವನ ರೇಖೆಯ ಮೇಲಿರುವ ರೇಖೆಯೇ ಮಸ್ತಿಷ್ಕ ರೇಖೆ.
• ಭಾಗ್ಯ ರೇಖೆ: ಹಸ್ತದ ಮಧ್ಯ ಭಾಗದಲ್ಲಿರುವ ಅಂದರೆ ಮಣಿಕಟ್ಟಿನಿಂದ ಆರಂಭವಾಗಿ ಮಧ್ಯದ ಬೆರಳಿನ ಕಡೆಗೆ ಹೋಗಿರುವ ರೇಖೆಯೇ ಭಾಗ್ಯ ರೇಖೆ.

ಇದನ್ನು ಓದಿ: ಹೀಗಿರ್ತಾರೆ ಜುಲೈ ಬೇಬೀಸ್ .. ವಿಶೇಷ ಗುಣಗಳ ಬಗ್ಗೆ ತಿಳಿಯಿರಿ..

- ಹಸ್ತಸಾಮುದ್ರಿಕ ಶಾಸ್ತ್ರದ ಅನುಸಾರ ಯಾವುದಾದರೂ ರೇಖೆ ಚಂದ್ರ ಪರ್ವತದಿಂದ ಹೊರಟು ಭಾಗ್ಯ ರೇಖೆಯನ್ನು ತುಂಡು ಮಾಡಿ ಜೀವನ ರೇಖೆಯನ್ನು ಮುಟ್ಟಿದರೆ ಅಂತಹ ವ್ಯಕ್ತಿಗಳು ಅನೇಕ ದೇಶಗಳ (Country) ಯಾತ್ರೆಯನ್ನು ಮಾಡುತ್ತಾರೆ.

- ಜೀವನ ರೇಖೆಯು ಸುತ್ತಾಡಿ ಚಂದ್ರ ಪರ್ವತವನ್ನು ಮುಟ್ಟಿದರೆ ಅಂತಹ ವ್ಯಕ್ತಿಗಳು ವಿಶ್ವದ (World) ಮೂಲೆ ಮೂಲೆಗಳನ್ನು ಸುತ್ತಾಡಿ ಬರುತ್ತಾರೆ. ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗಳ ಮೃತ್ಯುವು ಸಹ ಜನ್ಮ ಸ್ಥಾನದಿಂದ ಬಹಳ ದೂರದಲ್ಲಿ ಆಗುತ್ತದೆ.

- ಯಾವುದಾದರೂ ರೇಖೆ ಮಣಿಬಂಧದಿಂದ ಹೊರಟು ಮಂಗಳ ಪರ್ವತದ ಕಡೆ ಬಂದರೆ ಅಂತಹ ವ್ಯಕ್ತಿಗಳು ಹಲವು ಸಮುದ್ರ ಪ್ರಯಾಣಗಳನ್ನು ಮಾಡುತ್ತಾರೆ. ಇಂಥಹ ವ್ಯಕ್ತಿಗಳು ನೌಕಾಪಡೆಗಳಲ್ಲಿ (Navy) ಸೇವೆ ಸಲ್ಲಿಸುವ ಸಾಧ್ಯತೆ ಹೆಚ್ಚಿರುತ್ತದೆ.

- ಮಣಿಬಂಧಕ್ಕೂ ಮೊದಲು ಯಾವುದಾದರೂ ರೇಖೆಯು ಮಣಿಬಂಧಕ್ಕಿಂತ ಮೇಲೆ ಚಂದ್ರ ಪರ್ವತದ ವರೆಗೆ ಹೋದರೆ, ಅಂತಹ ವ್ಯಕ್ತಿಗಳ ಎಲ್ಲ ಪ್ರಯಾಣಗಳು ಸುಗಮವಾಗಿ ಸಾಗುತ್ತವೆ. ಈ ರೀತಿಯ ರೇಖೆಗಳನ್ನು ಹೊಂದಿರುವವರ ಜೀವನದಲ್ಲಿ ವಿದೇಶ ಯಾತ್ರೆಯ ಅವಕಾಶ (Opportunities) ಬರುತ್ತವೆ ಆದರೆ ಅವುಗಳ ಉಪಯೋಗ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ: Astrology Tips: ಶನಿ ದೋಷದಿಂದ ಮುಕ್ತಿ ಪಡೆಯಲು ಈ ರತ್ನ ಧರಿಸಿ

- ಪ್ರಯಾಣ ರೇಖೆಯು ಅರ್ಧ ತುಂಡಾಗಿದ್ದರೆ ಅಂಥವರಿಗೆ ಪ್ರಯಾಣದ ಸಮಯದಲ್ಲಿ ದುರ್ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೇಖೆಯು ಕ್ರಾಸ್ ಆಗಿದ್ದರೆ ಆಗ ಸಹ ಅಫಘಾತದ (Accident) ಭಯವಿರುತ್ತದೆ. ಹಸ್ತದಲ್ಲಿರುವ ರೇಖೆಗಳನ್ನು ಪರಿಶೀಲಿಸಿ ವ್ಯಕ್ತಿಯ ವಿದೇಶ ಪ್ರಯಾಣದ ವಿಚಾರವನ್ನು ತಿಳಿಯಬಹುದಾಗಿದ್ದು, ಇದಕ್ಕೆನಾದರೂ ಅಡೆತಡೆಗಳು ಬಂದರೂ ಸಹ ಅದಕ್ಕೆ ಶಾಸ್ತ್ರದಲ್ಲಿರುವ ಪರಿಹಾರವನ್ನು ಮಾಡಿಕೊಂಡು ಪ್ರಯಾಣವನ್ನು ಮಾಡುವ ಅವಕಾಶವು ಸಹ ಇರುತ್ತದೆ.

Latest Videos
Follow Us:
Download App:
  • android
  • ios