Astrology Tips: ಶನಿ ದೋಷದಿಂದ ಮುಕ್ತಿ ಪಡೆಯಲು ಈ ರತ್ನ ಧರಿಸಿ

ಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವುದರಿಂದ, ದೋಷಯುಕ್ತ ಗ್ರಹಗಳಿಂದ ವ್ಯಕ್ತಿಯ ಜೀವನದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳು ನಿಯಂತ್ರಣಕ್ಕೆ ಬರುವುದಲ್ಲದೇ, ಶುಭ ಫಲಗಳು ದೊರಕುವಂತಾಗುತ್ತದೆ. ಅಂತಹ ಗ್ರಹಗಳಲ್ಲಿ ಒಂದಾದ ಶನಿ ಗ್ರಹವು ಕರ್ಮಕ್ಕೆ ತಕ್ಕ ಫಲವನ್ನು ನೀಡುವ ದೇವನಾಗಿದ್ದಾನೆ. ಶನಿ ಗ್ರಹದ ವಕ್ರ ದೃಷ್ಠಿಗೆ ಬಿದ್ದವರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.  ನೀಲಮಣಿಯ ಧಾರಣೆಯು ಗ್ರಹದೋಷದಿಂದ ಮುಕ್ತಿ ಪಡೆಯಲು ಸಹಾಯಕವಾಗಿದೆ. ಹಾಗಾಗಿ ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ...
 

Get rid of Saturn Dosha wear this gemstone

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹೇಳುವ ಪ್ರಕಾರ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಗ್ರಹಗಳ (Planet) ಸ್ಥಾನ ಮತ್ತು ಸ್ಥಿತಿಯು ಅತ್ಯಂತ ಮುಖ್ಯವಾಗುತ್ತದೆ. ಗ್ರಹಗಳ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಅದು ವ್ಯಕ್ತಿಯ ಜೀವನದಲ್ಲಿ ಅಶುಭ ಪರಿಣಾಮಗಳನ್ನು ಉಂಟುಮಾಡುತ್ತದೆ. ಗ್ರಹಗಳ ದೋಷ ನಿವಾರಣೆಗಾಗಿ ಅದಕ್ಕೆ ಸರಿಹೊಂದುವ ರತ್ನಗಳನ್ನು ಧರಿಸುವುದು ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ. ನವಗ್ರಹಗಳ ಪ್ರತೀಕವಾಗಿ ಒಂಭತ್ತು ರತ್ನಗಳಿವೆ. ಅದರ ಜೊತೆಗೆ ಎಂಭತ್ನಾಲ್ಕು ಉಪರತ್ನಗಳಿವೆ. ಆಯಾ ಗ್ರಹಗಳ ದೋಷ (Dosha) ನಿವಾರಣೆಗೆ ಅದಕ್ಕೆ ಪ್ರತೀಕವಾಗಿರುವ ರತ್ನಗಳನ್ನು ಧರಿಸುವುದರಿಂದ ಒಳಿತಾಗುತ್ತದೆ. ಇದಕ್ಕೆ ಪರಿಹಾರಾರ್ಥವಾಗಿ ನೀಲಮಣಿಯನ್ನು ಧರಿಸಬೇಕೆಂದು ಹೇಳಲಾಗುತ್ತದೆ. ನ್ಯಾಯದೇವನಾಗಿರುವ ಶನಿ (Saturn) ಗ್ರಹದ ರತ್ನ ಇದಾಗಿದೆ. 

ನೀಲಮಣಿಯು ಅತ್ಯಂತ ಪ್ರಭಾವವುಳ್ಳ ರತ್ನವಾಗಿದ್ದು ಇದರ ಧಾರಣೆಯಿಂದ ವ್ಯಕ್ತಿಯು ಅಂದುಕೊಂಡದ್ದನ್ನು ಪಡೆಯಬಹುದಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ (Career) ಯಶಸ್ಸನ್ನು ಪಡೆಯಬಯಸಿದವರು ಶನಿ ಗ್ರಹವನ್ನು ಬಲ ಪಡಿಸಿಕೊಳ್ಳಬೇಕಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀಲಮಣಿಯನ್ನು ಧರಿಸುವುದು ಉತ್ತಮವೆಂದು ವೈದಿಕ ಜ್ಯೋತಿಷ್ಯ ಹೇಳುತ್ತದೆ. ಹಾಗಾಗಿ ನೀಲಮಣಿಯ ಧಾರಣೆ ಮತ್ತು ಯಾವ ರಾಶಿಯವರು ಧರಿಸಿದರೆ ಉತ್ತಮ, ಹೀಗೆ ನೀಲಮಣಿಯ (Sapphire) ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿಯೋಣ..

ಇದನ್ನು ಓದಿ: ಹೀಗಿರ್ತಾರೆ ಜುಲೈ ಬೇಬೀಸ್ .. ವಿಶೇಷ ಗುಣಗಳ ಬಗ್ಗೆ ತಿಳಿಯಿರಿ..

ಈ ರಾಶಿಯ ವ್ಯಕ್ತಿಗಳು ನೀಲಮಣಿಯನ್ನು ಧರಿಸಬಹುದಾಗಿದೆ..
ಜ್ಯೋತಿಷ್ಯ ಶಾಸ್ತ್ರದ ಅನುಸಾರ ವೃಷಭ, ಮಿಥುನ, ಕನ್ಯಾ, ತುಲಾ ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳು ನೀಲಮಣಿಯನ್ನು ಧರಿಸಬಹುದಾಗಿದೆ. ಜಾತಕದಲ್ಲಿ (Horoscope) ಶನಿ ಗ್ರಹವು ಉಚ್ಛ ಸ್ಥಿತಿಯಲ್ಲಿದ್ದಾಗ ಸಹ ನೀಲಮಣಿಯನ್ನು ಧರಿಸಬಹುದಾಗಿದೆ. ಶನಿದೇವರ ಶತ್ರುತ್ವವಿರುವ ರಾಶಿಯವರು ನೀಲಮಣಿಯನ್ನು ಧರಿಸಬಾರದೆಂದು ಹೇಳಲಾಗುತ್ತದೆ. ಶನಿ ಗ್ರಹವು ಪಂಚಮ, ನವಮ ಮತ್ತು ದಶಮ ಭಾವದಲ್ಲಿ ಉಚ್ಛ ಸ್ಥಿತಿಯಲ್ಲಿದ್ದರೆ ನೀಲಮಣಿಯನ್ನು ಧರಿಸಬಹುದಾಗಿದೆ.

ನೀಲಮಣಿ ಧಾರಣೆಯ ಲಾಭಗಳು (Benefits)
ದುಷ್ಟ ಶಕ್ತಿಗಳಿಂದ ಬಚಾವಾಗಲು ನೀಲಮಣಿಯು ಅದ್ಭುತ ರತ್ನವಾಗಿದೆ. ಅಷ್ಟೇ ಅಲ್ಲದೆ ಕೆಟ್ಟಶಕ್ತಿ, ತಂತ್ರ – ಮಂತ್ರಗಳು, ಮಾಟ –ಮಂತ್ರ, ಭೂತ ಪ್ರೇತಗಳು, ವಾಮಾಚಾರಗಳಿಂದ ಪಾರಾಗಬಹುದಾಗಿದೆ. ನೀಲಮಣಿಯನ್ನು ಧರಿಸುವುದರಿಂದ ಕಾರ್ಯ ಕ್ಷೇತ್ರದಲ್ಲಿ ಕ್ಷಮತೆ ಹೆಚ್ಚುವುದಲ್ಲದೇ, ಮತ್ತಷ್ಟು ಯಶಸ್ಸನ್ನು (Success) ಗಳಿಸಬಹುದಾಗಿದೆ. ವೃತ್ತಿಯಲ್ಲಿ ಪರಿಶ್ರಮದಿಂದ ಎಲ್ಲರ ಪ್ರಶಂಸೆಯು ದೊರಕುತ್ತದೆ. ಶನಿ ಸಾಡೇಸಾಥ್ ಅಥವಾ ಶನಿಯ ಅರ್ಧಾಷ್ಟಮ ನಡೆಯುತ್ತದೆ ಅಂಥವರು ನೀಲಮಣಿಯನ್ನು ಧರಿಸುವುದರಿಂದ ಲಾಭವನ್ನು ಪಡೆಯಬಹುದಾಗಿದೆ. ನೀಲಮಣಿಯನ್ನು ಧರಿಸಿದ ನಂತರ ಇದರ ಪರಿಣಾಮಗಳು (Effect) ತಕ್ಷಣಕ್ಕೆ ಗೋಚರವಾಗಲು ಪ್ರಾರಂಭವಾಗುತ್ತವೆ. ಇದರ ಪ್ರಭಾವದಿಂದ ವ್ಯಕ್ತಿಯು ಬೇಗನೇ ಒಳಿತನ್ನು ಕಾಣುತ್ತಾನೆ. ಜಾತಕವನ್ನು ಮೊದಲು ಪರಿಶೀಲಿಸಿ ಕೊಳ್ಳಬೇಕು, ನಂತರ ನೀಲಮಣಿ ಧಾರಣೆಯು ವ್ಯಕ್ತಿಗೆ ಆಗಿಬರುತ್ತದೆ ಎಂದಾದರೆ ಮಾತ್ರ ಧರಿಸಬೇಕು. ಜಾತಕದಲ್ಲಿ ಶನಿಯು ನೀಚ ಸ್ಥಿತಿಯಲ್ಲಿದ್ದರೆ ನೀಲಮಣಿಯನ್ನು ಧರಿಸಬಾರದೆಂದು ಹೇಳಲಾಗುತ್ತದೆ. ಹಾಗಾಗಿ ನೀಲಮಣಿಯನ್ನು ಧರಿಸುವ ಮೊದಲು ನುರಿತ ತಜ್ಞರಲ್ಲಿ ಈ ಬಗ್ಗೆ ಸರಿಯಾಗಿ ಕೇಳಿ ತಿಳಿದುಕೊಂಡೇ ಧರಿಸಬೇಕು. ಇಲ್ಲದಿದ್ದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ಈ ರಾಶಿಚಕ್ರದವರಿಗೆ ಹಣಕ್ಕಿಲ್ಲ ಕೊರತೆ: ನಿಮ್ಮ ರಾಶಿಯೂ ಪಟ್ಟಿಯಲ್ಲಿದೆಯೇ?

ನೀಲಮಣಿಯನ್ನು ಧರಿಸುವ ವಿಧಾನ (Procedure)
ರತ್ನಶಾಸ್ತ್ರದ ಪ್ರಕಾರ ನೀಲಮಣಿಯನ್ನು ಪಂಚಧಾತುವಿನಲ್ಲಿ ಧರಿಸಬೇಕೆಂದು ಹೇಳಲಾಗುತ್ತದೆ. ಶನಿವಾರ (Saturday) ಅಥವಾ ಶನಿಯ ನಕ್ಷತ್ರವಿದ್ದಾಗ ಸಂಧ್ಯಾ ಸಮಯದಲ್ಲಿ ಇದನ್ನು ಧರಿಸಬೇಕು. ಇದನ್ನು ಗಂಗಾಜಲ, ಹಾಲು, ಕೇಸರಿ ಮತ್ತು ಜೇನುತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀಲಮಣಿಯ ಉಂಗುರವನ್ನು (Ring) 15ರಿಂದ 20 ನಿಮಿಷದವರೆಗೆ ಇಡಬೇಕು. ಶನಿ ದೇವರನ್ನು ಆರಾಧಿಸಬೇಕು. ನಂತರ  ಉಂಗುರವನ್ನು ತೆಗೆದು ಗಂಗಾಜಲದಿಂದ ಸ್ವಚ್ಛಗೊಳಿಸಿ ಧರಿಸಬೇಕು. ಅದಾದ ಬಳಿಕ ಶನಿಗ್ರಹಕ್ಕೆ ಸಂಬಂಧಿಸಿದ ವಸ್ತುವನ್ನು ಸಜ್ಜನರಿಗೆ ದಾನವಾಗಿ (Donate) ನೀಡಬೇಕು. ಇದರಿಂದ ನೀಲಮಣಿ ಧಾರಣೆಯ ಪೂರ್ಣಫಲ ಪ್ರಾಪ್ತಿಯಾಗುತ್ತದೆ.

Latest Videos
Follow Us:
Download App:
  • android
  • ios