Asianet Suvarna News Asianet Suvarna News

ಹೀಗಿರ್ತಾರೆ ಜುಲೈ ಬೇಬೀಸ್ .. ವಿಶೇಷ ಗುಣಗಳ ಬಗ್ಗೆ ತಿಳಿಯಿರಿ..

ಜುಲೈ ತಿಂಗಳಿನಲ್ಲಿ ಜನಿಸಿದವರು ಬುದ್ಧಿಯ ಮಾತಿಗಿಂತ, ಹೃದಯದ ಮಾತನ್ನು ಹೆಚ್ಚು ಕೇಳುತ್ತಾರೆ. ಅಷ್ಟೇ ಅಲ್ಲದೆ ಸ್ನೇಹ ಮತ್ತು ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡುವ ಈ ವ್ಯಕ್ತಿಗಳು ಷೇರು ಮಾರುಕಟ್ಟೆಯ ಬಗ್ಗೆ ಅಧಿಕ ಜ್ಞಾನ ಹೊಂದಿರುತ್ತಾರೆ. ಹಾಗಾದರೆ ಜುಲೈನಲ್ಲಿ ಜನಿಸಿದವರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಯೋಣ.

July born babies characteristics
Author
Bangalore, First Published Jul 2, 2022, 11:33 AM IST

ಪ್ರತಿ ಮಾಸಕ್ಕೂ ಒಂದೊಂದು ವಿಶೇಷವಿರುತ್ತದೆ. ಆಯಾ ಮಾಸದಲ್ಲಿ (Month) ಬೇರೆ ಬೇರೆ ದೇವರಿಗೆ ವಿಶೇಷ ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆಯೇ ಎಲ್ಲ ತಿಂಗಳಿನಲ್ಲೂ ವಿಶೇಷವಾದದ್ದು ಏನಾದರೂ ಒಂದು ಇದ್ದೇ ಇರುತ್ತದೆ. ಹಾಗೆಯೇ ಹುಟ್ಟುವ ಮಕ್ಕಳು ಸಹ ಯಾವ ತಿಂಗಳಿನಲ್ಲಿ ಹುಟ್ಟಿದಾರೆ ಎಂಬುದರ ಆಧಾರದ ಮೇಲೆ ಅವರ ವಿಶೇಷ ಗುಣಗಳ ಬಗ್ಗೆ ಅಂದಾಜಿಸಬಹುದಾಗಿದೆ. ಹುಟ್ಟಿದ ಘಳಿಗೆ, ತಾರೀಖು, ವಾರ, ರಾಶಿ, ನಕ್ಷತ್ರಗಳಿಂದ ವ್ಯಕ್ತಿಗತ ಜಾತಕವನ್ನು (Horoscope) ತಯಾರಿಸುತ್ತಾರೆ. ಅದರಲ್ಲಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿರುತ್ತದೆ. ಹಾಗೆಯೇ ಹುಟ್ಟಿದ ತಿಂಗಳಿನ ಆಧಾರದ ಮೇಲೆ ಸಹ ಭವಿಷ್ಯದ ಕೆಲವಾರು ವಿಚಾರಗಳನ್ನು ತಿಳಿಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. 

ಆಯಾ ತಿಂಗಳಿನಲ್ಲಿ ಜನಿಸಿದವರ ಗುಣ, ಲಕ್ಷಣಗಳು ಬೇರೆಯಾಗಿರುತ್ತದೆ. ಹಾಗೆಯೇ ಎಲ್ಲರಿಗೂ ಅವರು ಹುಟ್ಟಿದ ತಿಂಗಳಿನ ಮಹತ್ವವೇನು ಎನ್ನುವುದನ್ನು ತಿಳಿಯುವ ಕುತೂಹಲವಿರುತ್ತದೆ (Curiosity). ಪ್ರತಿ ವ್ಯಕ್ತಿಯ ಹಾವಭಾವ, ನಡವಳಿಕೆ, ಬದುಕನ್ನು ನೋಡುವ ರೀತಿ, ಉತ್ಸಾಹ ಮತ್ತು ಸೋಮಾರಿತನ ಹೀಗೆ ಹತ್ತು ಹಲವು ಗುಣಗಳು ಭಿನ್ನವಾಗಿರುತ್ತವೆ. ಹೀಗಾಗಿ ಈಗ ಜುಲೈನಲ್ಲಿ (July) ಜನಿಸಿದವರು (Born) ಹೇಗಿರುತ್ತಾರೆ ಅವರ ಸ್ವಭಾವಗಳ ಬಗ್ಗೆ ತಿಳಿಯೋಣ.

ಮನಸ್ಸಿನ ಮಾತಿಗೆ ಬೆಲೆ ಕೊಡುವವರು
ಈ ತಿಂಗಳಿನಲ್ಲಿ ಜನಿಸಿದವರು ಭಾವನೆಗಳಿಗೆ ಹೆಚ್ಚು ಮೌಲ್ಯವನ್ನು (Value) ನೀಡುತ್ತಾರೆ. ಯಾವುದೇ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಬುದ್ಧಿಗಿಂತ ಹೆಚ್ಚು ಹೃದಯದ ಮಾತನ್ನು ಕೇಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವಾಗ ಬೇಗ ಒಂದು ತೀರ್ಮಾನಕ್ಕೆ (Decision) ಬರದೇ ಕೊಂಚ ಸಮಯ ತೆಗೆದುಕೊಂಡು ನಿರ್ಣಯಿಸುವ ಗುಣ ಇವರದ್ದಾಗಿರುತ್ತದೆ. ಸರಳ (Simple) ಮತ್ತು ಸ್ವಚ್ಛ ವ್ಯಕ್ತಿತ್ವವನ್ನು ಹೊಂದಿರುವ ಈ ವ್ಯಕ್ತಿಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ.

ಇದನ್ನು ಓದಿ: ಈ ರಾಶಿಚಕ್ರದವರಿಗೆ ಹಣಕ್ಕಿಲ್ಲ ಕೊರತೆ: ನಿಮ್ಮ ರಾಶಿಯೂ ಪಟ್ಟಿಯಲ್ಲಿದೆಯೇ?

ಉತ್ಸಾಹದ ಚಿಲುಮೆಗಳು
ಜುಲೈನಲ್ಲಿ ಜನಿಸಿದವರು ಪ್ರತಿಯೊಂದು ಕೆಲಸದಲ್ಲೂ ಉತ್ಸಾಹವನ್ನು (Enthusiastic) ತೋರುತ್ತಾರೆ. ಯಾವುದೇ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದರೂ ಅದನ್ನು ಪೂರ್ಣ ಮುಗಿಸುವವರೆಗೂ ಇವರಿಗೆ ನೆಮ್ಮದಿ ಇರುವುದಿಲ್ಲ. ಬೇರೆ ತಿಂಗಳಿನಲ್ಲಿ ಜನಿಸಿದವರಿಗೆ ಹೋಲಿಕೆ ಮಾಡಿದರೆ ಉತ್ಸಾಹ ಮತ್ತು ಶಕ್ತಿ ಇವರಲ್ಲಿ ಅಧಿಕವಾಗಿರುತ್ತದೆ. ಅತಿ ಉತ್ಸಾಹದ ಕಾರಣದಿಂದಲೇ ಕೆಲವು ಬಾರಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.

ಆರ್ಥಿಕ ಸ್ಥಿರತೆ (Economic stability)
ಈ ತಿಂಗಳಿನಲ್ಲಿ ಜನಿಸಿದವರು ಹಣದ ವಿಚಾರಕ್ಕೆ ಹೆಚ್ಚು ಯೋಚನೆ ಮಾಡದೇ ಬೇಕಾದಂತೆ ಖರ್ಚು ಮಾಡುತ್ತಾರೆ. ಅಷ್ಟಾದರೂ ಇವರಿಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಆಹಾರದ (Food) ವಿಷಯದಲ್ಲಿ ಹೆಚ್ಚು ರುಚಿಯಾದದ್ದನ್ನು (Tasty) ತಿನ್ನಲು ಸದಾ ಬಯಸುತ್ತಾರೆ. ಉತ್ತಮ ಆಹಾರವನ್ನು ಸವಿಯುದರ ಜೊತೆಗೆ, ದೊಡ್ಡ ಬಂಗಲೆಯಲ್ಲಿರಲು ಈ ತಿಂಗಳಿನಲ್ಲಿ ಜನಿಸಿದವರು ಹೆಚ್ಚು ಬಯಸುತ್ತಾರೆ.

ಸಂಬಂಧಕ್ಕೆ ಹೆಚ್ಚಿನ ಒತ್ತು
ಜುಲೈ ತಿಂಗಳಿನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸ್ನೇಹಿತರ ಗುಂಪಿನಲ್ಲಿ ಇವರೇ ಪ್ರಮುಖರಾಗಿರುತ್ತಾರೆ. ಸ್ನೇಹ (Friendship) ಮತ್ತು ಸಂಬಂಧಗಳಿಗೆ (Relationship) ಹೆಚ್ಚು ಗೌರವಾದರಗಳನ್ನು ನೀಡುತ್ತಾರೆ. ಜೊತೆಗೆ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ವ್ಯಕ್ತಿಯು ಹೇಗೆ ಎಂಬುದನ್ನು ಬೇಗ ಗುರುತಿಸುವ ಕಲೆ ಇವರಲ್ಲಿರುತ್ತದೆ.

ಇದನ್ನು ಓದಿ: ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಉದ್ಯೋಗ, ಹಣದಲ್ಲಿ ಬಂಪರ್ ಯೋಗ!

ಷೇರು ವಹಿವಾಟಿನಲ್ಲಿ ಜ್ಞಾನ (Share business)
ಜುಲೈನಲ್ಲಿ ತಿಂಗಳಿನಲ್ಲಿ ಜನಿಸಿದವರು ಗಣಿತದಲ್ಲಿ ಸ್ವಲ್ಪ ಮಟ್ಟಿಗೆ ಬುದ್ಧಿವಂತರಾಗಿರುತ್ತಾರೆ. ಆದರೆ ಬ್ಯುಸಿನೆಸ್, ಮಾರ್ಕೆಟಿಂಗ್‌ ಮತ್ತು ಷೇರು ವಹಿವಾಟಿನಲ್ಲಿ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಹೆಚ್ಚು ಹೆಸರು ಮಾಡುತ್ತಾರೆ. ಅಷ್ಟೇ ಅಲ್ಲದೆ, ಪತ್ರಿಕಾ ವೃತ್ತಿ, ಆಟ, ಸಂಗೀತ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿಯನ್ನು (Interest) ಹೊಂದಿರುತ್ತಾರೆ.

ಮಾತು ಮಧುರ, ವಿವಾದಕ್ಕೆ ದೂರ
ಜುಲೈ ತಿಂಗಳಲ್ಲಿ ಜನಿಸಿದವರು ಸುಖಾ ಸುಮ್ಮನೆ ಯಾವ ವಿವಾದಗಳಿಗೂ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಕಾರ್ಯ ಕುಶಲತೆ (Skill) ಮತ್ತು ತಮ್ಮ ಮಧುರವಾದ ಮಾತಿನ ಪರಿಯಿಂದ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಚಾಣಕ್ಷತೆ ಇವರಿಗಿರುತ್ತದೆ.

ಸಕಾರಾತ್ಮಕತೆ ಹೆಚ್ಚು (Positivity)
ಎಲ್ಲ ಸಂದರ್ಭಗಳಲ್ಲೂ ಸಕಾರಾತ್ಮಕವಾಗಿ ಯೋಚನೆ ಮಾಡುವ ಗುಣದವರು. ಈ ವ್ಯಕ್ತಿಗಳು ಪರಿಸ್ಥಿತಿ ಯಾವುದೇ ಇದ್ದರೂ, ಅದನ್ನು ಸಮಾಧಾನದಿಂದ ಎದುರಿಸುತ್ತಾರೆ ಮತ್ತು ಎಲ್ಲರೂ ಇಷ್ಟಪಡುವಂಥ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಬದುಕಿನಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದಲ್ಲದೇ, ಅದನ್ನು ನನಸಾಗಿಸಲು ಶ್ರಮಿಸುತ್ತಾರೆ.

ಇದನ್ನೂ ಓದಿ: ಮಿಥುನ ರಾಶಿಗೆ ಬುಧನ ಎಂಟ್ರಿ; ಈ ರಾಶಿಗಳಿಗಿನ್ನು 15 ದಿನ ಅದೃಷ್ಟದ ಬಲ

ಫ್ಯಾಮಿಲಿಗೆ ಪ್ರಯಾರಿಟಿ (Family)
ಜುಲೈ ತಿಂಗಳಿನಲ್ಲಿ ಜನಿಸಿದವರು ಕುಟುಂಬಕ್ಕೆ ಮೊದಲ ಆದ್ಯತೆಯನ್ನು (Priority) ನೀಡುತ್ತಾರೆ. ಭಾವನಾ ಜೀವಿಗಳಾಗಿರುವ ಇವರಿಗೆ ಕುಟುಂಬವೇ ಎಲ್ಲ. ತಮ್ಮನ್ನು ತಾವು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳ ಬೇಕೆಂಬ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಎಂಥದ್ದೇ ವಿಷಯ ಬಂದರೂ ಉದ್ವೇಗಕ್ಕೆ (stress) ಒಳಗಾಗದೇ ಸಮಾಧಾನದಿಂದ ಬಗೆಹರಿಸುವ ಚಾಣಾಕ್ಷತನ ಇವರಿಗೆ ಜನಿಸಿದಾಗಿನಿಂದಲೇ ಬಂದಿರುತ್ತದೆ.

Follow Us:
Download App:
  • android
  • ios