ಯಾವ ಸ್ಪರ್ಧೆ ಇದ್ದರೂ ಈ ರಾಶಿಯವರೇ ವಿನ್ನರ್ಸ್ !

ಪ್ರತಿಯೊಂದು ರಾಶಿಗೂ ಒಂದು ವಿಶೇಷವಾದ ಸ್ವಭಾವ (Behaviour) ಇರುತ್ತದೆ. ಕೆಲವು ರಾಶಿಯವರು ಕಲೆಯಲ್ಲಿ ಮುಂದಿದ್ದರೆ ಇನ್ನೂ ಕೆಲವು ರಾಶಿಯವರು ಓದುವುದರಲ್ಲಿ ಎತ್ತಿದ ಕೈ. ಈ ಕೆಲವು ರಾಶಿಯ ವ್ಯಕ್ತಿಗಳು ಯಾವುದೇ ಸ್ಪರ್ಧೆ (Competition)ಗೆ ಇಳಿದರು ಅವರದ್ದೇ ಜಯ (Win). ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.

Powerful And Charismatic Zodiac Sign People Are Always Winners

ಕೆಲವರು ಮುಟ್ಟಿದ್ದೆಲ್ಲವೂ ಚಿನ್ನ..ಕೈ ಇಟ್ಟ ಕ್ಷೇತ್ರದಲ್ಲೆಲ್ಲಾ ಗೆಲುವು..ಯಾವುದೇ ಸ್ಪರ್ಧೆಗೆ ಇಳಿದರೂ ಅವರ ಗೆಲುವು ಶತಃಸಿದ್ಧ ಅನ್ನೋ ಮಾತಿದೆ. ಕಾರಣ, ಇವರ ಮನೋಭಾವ. ಹುಟ್ಟಿನಿಂದಲೇ (Birth) ಇವರಿಗೆ ಆ ಆಶೀರ್ವಾದ, ವಿಶೇಷ ಆಸಕ್ತಿ (Interest), ಗುಣಗಳು ಬಂದುಬಿಟ್ಟಿರುತ್ತವೆ. ಈ ಸಾಲಿಗೆ ಸೇರಿದ ವ್ಯಕ್ತಿಗಳು ಬಾಲ್ಯದಿಂದಲೂ ಪೈಪೋಟಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಇತರರ ವಿರುದ್ಧ ಜಯ ಕಾಣುವುದರಲ್ಲೇ ಸಂತೋಷವನ್ನು (Happy) ಹಾಗೂ ತೃಪ್ತಿಯನ್ನು ಹೊಂದುತ್ತಾರೆ. ಇವರಿಗೆ ಒಂದರ್ಥದಲ್ಲಿ ಹೇಳುವುದಾದರೆ ಸ್ಪರ್ಧೆಗಳು ಇಲ್ಲವೆಂದರೇ ಜೀವನ (Life) ಬೋರಿಂಗ್ ಅನ್ನುವಷ್ಟರ ಮಟ್ಟಿಗೆ ಹುಮ್ಮಸ್ಸಿನ ವ್ಯಕ್ತಿತ್ವವನ್ನು (Personality) ಹೊಂದಿರುತ್ತಾರೆ. 

ಇಂತಹ ಮನೋಭಾವ ಹಾಗೂ ದೇವರ ಆಶೀರ್ವಾದವು ಆ ವ್ಯಕ್ತಿಗಳ ಹುಟ್ಟು, ಘಳಿಗೆಗಳನ್ನು ಆಧರಿಸಿರುತ್ತದೆ. ಅಂದರೆ ಅವರ ಜಾತಕದ (Horoscope) ಅನುಸಾರವಾಗಿ ಕೆಲವು ರಾಶಿಯವರಿಗೆ (Zodiac) ಇಂಥ ಮನೋಭಾವ ಇರುತ್ತದೆ. ಮತ್ತು ಅವರು ಪ್ರತಿ ಸ್ಪರ್ಧೆಯಲ್ಲಿಯೂ ಗೆಲುವನ್ನು ಲೀಲಾಜಾಲವಾಗಿ ಸಾಧಿಸುತ್ತಾರೆ. ಇದರ ಜೊತೆಗೆ ಇವರಿಗೆ ದೃಢನಿಶ್ಚಯ (Determination), ತಮ್ಮ ಗುರಿಗಳ (Target) ಮೇಲೆ ಹೆಚ್ಚು ಗಮನ ಹರಿಸುವುದು ಹಾಗೂ ಹಿಡಿದ ಕೆಲಸ ಆಗುವವರೆಗೂ ಬಿಡದಿರುವ ಛಲ ಮುಖ್ಯವಾಗಿರುತ್ತದೆ. ಹೀಗೆ ಎಲ್ಲ ರೀತಿಯ ಪೈಪೋಟಿಯಲ್ಲಿ ಗೆಲುವ ಕಾಣುವ 5 ರಾಶಿಯವರ ಬಗ್ಗೆ ತಿಳಿಯೋಣ.

ಇದನ್ನು ಓದಿ: ನಿಮ್ಮಿಷ್ಟದ ಉದ್ಯೋಗ ಪಡೆಯಲು ಇಲ್ಲಿವೆ Astro Tips..

ಮೇಷ ರಾಶಿ (Aries)
ಮೇಷ ರಾಶಿಯವರು ಸಖತ್ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್ (Interesting Character) ಅನ್ನು ಹೊಂದಿದವರು. ಇವರಿಗೆ ಸ್ಪರ್ಧೆ ಇಲ್ಲವೇ ಪೈಪೋಟಿ ಅಂದರೆ ತುಂಬಾ ಇಷ್ಟ. ಇವರಿಗೆ ಸೋಲನ್ನು ಒಪ್ಪಿಕೊಳ್ಳುವುದು ಬಹಳವೇ ಕಷ್ಟ. ಹಾಗಾಗಿ ತಮ್ಮ ಗೆಲುವಿಗಾಗಿ ಸಾಕಷ್ಟು ಶ್ರಮವನ್ನು ಹಾಕುತ್ತಾರೆ. ಜೊತೆಗೆ ಇವರ ಜನಬಳಕೆಯೂ ಹೆಚ್ಚಿದ್ದು, ಎಲ್ಲರಿಂದಲೂ ಪ್ರಶಂಸೆಯನ್ನು ಪಡೆಯುತ್ತಾರೆ. ಇವರು ಆತ್ಮವಿಶ್ವಾಸವನ್ನು (Confidence) ಎಂದಿಗೂ ಬಿಡುವವರಲ್ಲ. ಇವರ ಇಂಥ ನಡವಳಿಕೆಯೇ ಎಲ್ಲರಿಗೂ ಇಷ್ಟವಾಗುತ್ತದೆ. ಈ ಮೂಲಕ ಯಶಸ್ಸನ್ನೂ ಸಾಧಿಸುತ್ತಾರೆ. 

ಸಿಂಹ ರಾಶಿ (Leo)
ಸಿಂಹ ರಾಶಿಯವರು ಬಹಳ ಶ್ರಮ ಜೀವಿಗಳು. ತಮ್ಮ ಗುರಿಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರಿಗೆ, ತಮ್ಮ ಸಾಮರ್ಥ್ಯದ (Capacity) ಮೇಲೆ ಬಹಳ ಆತ್ಮಾಭಿಮಾನ ಹಾಗೂ ವಿಶ್ವಾಸವನ್ನು (Trust) ಹೊಂದಿದ್ದಾರೆ. ಇದರ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ಸಹಿಸುವವರು ಇವರಲ್ಲ. ತಮ್ಮ ನ್ಯೂನತೆಗಳ ಅರಿವು ಇವರಿಗಿದ್ದು, ಇದು ತಮ್ಮ ಯಾವ ಸಾಧನೆಗಳ ಮೇಲೋ, ಕೆಲಸಗಳ ಮೇಲೋ ಪರಿಣಾಮ ಬೀರದಂತೆ ಎಚ್ಚರ ವಹಿಸುತ್ತಾರೆ. ಹೀಗಾಗಿ ಎಲ್ಲ ಕ್ಷೇತ್ರದಲ್ಲಿಯೂ ಇವರು ಯಶಸ್ವಿಯಾಗುತ್ತಾರೆ.

ಮಕರ ರಾಶಿ (Capricorn)
ಮಕರ ರಾಶಿಯವರು ಗೆಲುವಿನ ಸರದಾರರು. ಇವರು ಸಖತ್ ಸ್ಮಾರ್ಟ್ ಆಗಿದ್ದು, ಯಾವುದೇ ಕೆಲಸ ಇರಲಿ ಅದಕ್ಕೆ ಹೆಚ್ಚಿನ ಶ್ರಮ ಹಾಕುವ ಗೋಜಿಗೆ ಹೋಗುವವರಲ್ಲ. ಇವರು ಸಲೀಸಾಗಿ ತಮ್ಮ ಕೆಲಸವನ್ನು (Work) ಸಾಧಿಸಿಬಿಡುತ್ತಾರೆ. ಹೀಗಾಗಿ ಇವರ ಯಶಸ್ಸಿನ (Success) ಓಟ ಯಾವುದೇ ತೊಡಕಿಲ್ಲದೆ ಮುಂದುವರಿಯಲಿದೆ.

ಇದನ್ನು ಓದಿ: Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

ಕುಂಭ ರಾಶಿ (Aquarius)
ಕುಂಭ ರಾಶಿಯವರು ಮಾತು ಕಡಿಮೆ, ಕೃತಿ ಜಾಸ್ತಿ ಎನ್ನುವವರ ಸಾಲಿಗೆ ಸೇರುವವರು. ಅಂತರ್ಮುಖಿ ವ್ಯಕ್ತಿತ್ವದವರಾಗಿರುವ ಇವರು, ಏನು ಮಾಡುತ್ತಾರೆ ಎಂಬುದೇ ತಿಳಿಯದಂತಹ ಪರಿಸ್ಥಿತಿ. ತಮ್ಮ ಯಶಸ್ಸಿನ ಬಗ್ಗೆ ಯಾರಿಗೂ ಸ್ವಲ್ಪ ಮಾಹಿತಿಯನ್ನೂ ಬಿಟ್ಟುಕೊಡುವವರು ಇವರಲ್ಲ. ಎಲ್ಲವೂ ರಹಸ್ಯ (Mystery) ಕಾರ್ಯಾಚರಣೆಯೇ ಆಗಿರುತ್ತದೆ. ಇವರು ತಮ್ಮ ವೈಯಕ್ತಿಕ ಬೆಳವಣಿಗೆ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಹೀಗಾಗಿ ಇವರಿಗೆ ಸ್ಪರ್ಧೆಗಳು ಕಠಿಣ ಎಂದು ಅನ್ನಿಸುವುದಿಲ್ಲ. 

ಧನು ರಾಶಿ (Sagittarius)
ಇವರು ತುಂಬಾ ಜಾಲಿ ಸ್ವಭಾವದವರು. ಮೋಜು – ಮಸ್ತಿ ಅಂದರೆ ಇವರಿಗೆ ಬಲು ಇಷ್ಟ. ಹಾಗೇ ಎಲ್ಲರೊಂದಿಗೂ ಸ್ನೇಹಭಾವದಿಂದ ಇರುವ ಇವರು, ಯಾವುದೇ ಕೆಲಸ ಕೊಟ್ಟರೂ ಸಕ್ಸಸ್ ಪಡೆಯುತ್ತಾರೆ. ಇವರು ಸದಾ ಪಾಸಿಟಿವ್ (Positive) ಆಗಿ ಚಿಂತನೆ ಮಾಡುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಹಾಯಕವಾಗಲಿದೆ. 

Latest Videos
Follow Us:
Download App:
  • android
  • ios