Asianet Suvarna News Asianet Suvarna News

Chanakya Neeti: ಯಶಸ್ಸಿಗೆ ಪಾಲಿಸಿ ಈ ಐದು ಸೂತ್ರ

ಜೀವನದಲ್ಲಿ ಯಶಸ್ಸನ್ನು (Success) ಬಯಸುವವರು ಚಾಣಕ್ಯ ನೀತಿಯಲ್ಲಿ ತಿಳಿಸಿದ ಐದು ಸರಳ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಾಗುತ್ತದೆ.

follow these things to attain success according to Chanakya
Author
Bangalore, First Published Apr 26, 2022, 5:33 PM IST

ಚಾಣಕ್ಯರು (Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಜೀವನಕ್ಕೆ ಉಪಯುಕ್ತವಾಗುವ ಹಲವಾರು ಉಪಾಯಗಳನ್ನು ಹೇಳಿದ್ದಾರೆ. ಜೀವನದ ಪ್ರತಿಯೊಂದು ಹಂತದಲ್ಲಿಯೂ, ಸಮಸ್ಯೆಗಳು (Difficulties), ಕಷ್ಟ ಕಾರ್ಪಣ್ಯಗಳು ಎದುರಾಗುತ್ತಲೇ ಇರುತ್ತವೆ. ಆ ಎಲ್ಲ ತೊಂದರೆಗಳನ್ನು ಎದುರಿಸಲು ಆತ್ಮವಿಶ್ವಾಸ ಮತ್ತು ಸೂಕ್ತ ಸಲಹೆಗಳ ಅವಶ್ಯಕತೆ ಇರುತ್ತದೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಧರ್ಮ, ಸಮಾಜ, ರಾಜನೀತಿ, ಹಣ ಮುಂತಾದ ವಿಷಯಗಳನ್ನು ವಿವರಿಸುವ ಮೂಲಕ ಜೀವನವನ್ನು (Life) ಧೈರ್ಯವಾಗಿ ಎದುರಿಸಲು ಬೇಕಾಗುವ ಎಲ್ಲ ಮಾಹಿತಿಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. 

ಜೀವನದಲ್ಲಿ ಯಶಸ್ಸನ್ನು (Success) ಬಯಸುವವರು ಚಾಣಕ್ಯ ನೀತಿಯಲ್ಲಿ ತಿಳಿಸಿದ ಐದು ಸರಳ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಾಗುತ್ತದೆ. ಇದರಿಂದ ಯಶಸ್ಸಿನ ಮೆಟ್ಟಿಲು ಹತ್ತುವಾಗ ಎದುರಾಗುವ ಸಂಕಷ್ಟಗಳನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಹಾಗಾದರೆ ಚಾಣಕ್ಯರ ನೀತಿ ಶಾಸ್ತ್ರದಲ್ಲಿ ತಿಳಿಸಿದ ಐದು ವಿಷಯಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ...

ಕಳೆದು ಹೋದ ಸಮಯವನ್ನು ಮರೆತು ಬಿಡಿ (Forget past time)
ಚಾಣಕ್ಯ ನೀತಿಯಲ್ಲಿ ಹೇಳುವ ಪ್ರಕಾರ ಜೀವನದಲ್ಲಿ ಸುಖ - ಶಾಂತಿ ಬಯಸುವವರು ಕಳೆದ ಹೋದ ಸಮಯದಲ್ಲಿ (Time) ಘಟಿಸಿದ ವಿಷಯಗಳನ್ನು ಮರೆತು ಬಿಡಬೇಕು. ವ್ಯಕ್ತಿಯು ಹಳೆಯ ಮತ್ತು ಅನಾವಶ್ಯಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಚಿಂತಿಸುವುದರಿಂದ ಕಷ್ಟ ಸಿಗುತ್ತದೆಯೇ ಹೊರತು ಬೇರೆ ಏನೂ ಲಭ್ಯವಾಗುವುದಿಲ್ಲ. ಇದರಿಂದ ವರ್ತಮಾನದಲ್ಲಿ ಸಹ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುವುದಿಲ್ಲ.

ಕೆಟ್ಟ ಅಥವಾ ತಪ್ಪು ಮಾರ್ಗದಿಂದ ಹಣವನ್ನು ಸಂಪಾದಿಸಬಾರದು
ಜೀವನಕ್ಕೆ ಮುಖ್ಯವಾಗಿ ಬೇಕಾಗುವುದು ಹಣ (Money). ಹಣ ಸಂಪಾದಿಸಲು ಹಲವು ಮಾರ್ಗಗಳು ಸಿಗುತ್ತವೆ. ಅದರಲ್ಲಿ ಯಾವ ಮಾರ್ಗದಲ್ಲಿ ಹಣ ಸಂಪಾದಿಸಿದರೆ ಹಣ ದಕ್ಕುತ್ತದೆ ಎಂಬುದನ್ನು ಚಾಣಕ್ಯ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಚರಿತ್ರೆಗೆ ದಕ್ಕೆ ತಂದುಕೊಂಡು ಮಾಡುವ ಸಂಪಾದನೆಯಿಂದ ಜೀವನದಲ್ಲಿ ಎಂದೂ ಸಫಲತೆ ದೊರೆಯುವುದಿಲ್ಲ. ಕೆಟ್ಟ ದಾರಿಯಲ್ಲಿ ಸಂಪಾದನೆ ಮಾಡುವುದರಿಂದ ಜೀವನದಲ್ಲಿ ಕೇವಲ ನೋವನ್ನು (Pain) ಎದುರಿಸಬೇಕಾಗುತ್ತದೆ. ವ್ಯಕ್ತಿ ಒಳ್ಳೆಯ ಉದ್ದೇಶ ಮತ್ತು ಪರಿಶ್ರಮದಿಂದ ಹಣವನ್ನು ಸಂಪಾದಿಸಿದಲ್ಲಿ ಮಾತ್ರ ಆ ಹಣ ದಕ್ಕುತ್ತದೆ. ಹಣ ಸಂಪಾದಿಸಲು ಶತ್ರುವಿನ ಮನವೊಲಿಸಿಕೊಂಡು ಮಾಡುವ ಕೆಲಸ ಸಹ ಉತ್ತಮವಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ನ್ಯಾಯ ಮಾರ್ಗದಿಂದ ಸಂಪಾದಿಸುವ ಹಣ ಮಾತ್ರ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ತಂದುಕೊಡುತ್ತದೆ.

ದುಷ್ಟರಿಂದ  ದೂರವಿರಬೇಕು ಮತ್ತು ಎಚ್ಚರದಿಂದಿರಬೇಕು : ವ್ಯಕ್ತಿಯು ತನ್ನ ಜೀವನದಲ್ಲಿ ದುಷ್ಟರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಅಷ್ಟೇ ಅಲ್ಲದೆ ದುಷ್ಟರು ಎಂದು ತಿಳಿದ ಕೂಡಲೇ ಅವರಿಂದ ಅಂತರ ಕಾಯ್ದು ಕೊಳ್ಳಬೇಕು. ಇಲ್ಲವೇ ಅವರೇ ನಿಮ್ಮಿಂದ ದೂರವಿರುವಂತೆ ಮಾಡಬೇಕು. ಇಲ್ಲದಿದಲ್ಲಲ್ಲಿ ಅಂತಹವರಿಂದ ಜೀವನ ಕಷ್ಟಮಯವಾಗುತ್ತದೆ. ಹಾಗಾಗಿ ಸಜ್ಜನರ ಸಹವಾಸ ಮಾಡಿದರೆ ಜೀವನಕ್ಕೆ ಉಪಯುಕ್ತವಾದ ಮೌಲ್ಯಗಳು ದೊರೆಯುತ್ತವೆ.

ಇದನ್ನು ಓದಿ: Solar Eclipse 2022: ಶನಿ ಅಮಾವಾಸ್ಯೆ ದಿನ ಈ 3 ರಾಶಿಯವರು ಅಲರ್ಟ್ ಆಗಿರಿ!

ಇಂತಹವರಿಂದ ಲಕ್ಷ್ಮೀ ದೂರವಾಗುತ್ತಾಳೆ
ಚಾಣಕ್ಯ ನೀತಿಯ ಪ್ರಕಾರ ಹಲ್ಲುಗಳನ್ನು ಸ್ವಚ್ಛವಿಟ್ಟುಕೊಳ್ಳದವರು, ಸ್ವಚ್ಛ ಬಟ್ಟೆಗಳನ್ನು ಹಾಕಿಕೊಳ್ಳದವರು, ಒರಟಾಗಿ ಮಾತನಾಡುವವರಿಂದ ಲಕ್ಷ್ಮೀ ಸದಾ ದೂರವಿರುತ್ತಾಳೆ. ಇಂಥವರಿಗೆ ಲಕ್ಷ್ಮೀ ಒಲಿಯುವುದಿಲ್ಲ. ಅವರೇಷ್ಟೇ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರೂ ಅವರಿಗೆ ಲಕ್ಷ್ಮೀ (Goddess Laxmi) ಕೃಪೆ ದೊರಕುವುದಿಲ್ಲ.

ಇದನ್ನು ಓದಿ: Vastu tips: ಈ ಅಭ್ಯಾಸ ಬಿಡಿ ಉದ್ಯೋಗ ಉಳಿಸಿಕೊಳ್ಳಿ

ನಿಮ್ಮ ವೀಕ್‌ನೆಸ್ ಇತರರ ಎದುರು ಪ್ರದರ್ಶಿಸಬೇಡಿ: 
ಚಾಣಕ್ಯ ನೀತಿಯ ಪ್ರಕಾರ ಯಾವುದೇ ವ್ಯಕ್ತಿಯಾಗಿರಲಿ ತಮ್ಮ  ದೌರ್ಬಲ್ಯವನ್ನು ಯಾರ ಬಳಿಯೂ ತೋರಿಸಿಕೊಳ್ಳಬಾರದು. ಇದರಿಂದ ಹಲವಾರು ಸಮಸ್ಯೆಗಳು (Problem) ಎದುರಾಗುತ್ತವೆ. ಅಷ್ಟೇ ಅಲ್ಲದೆ ಹೀಗೆ ತೋರಿಸಿಕೊಳ್ಳುವುದರಿಂದ ಇತರರು ಬೇರಿ ರೀತಿಯಲ್ಲಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ದೌರ್ಬಲ್ಯವನ್ನು (Weakness)  ಪ್ರದರ್ಶಿಸಬಾರದು.
 

Follow Us:
Download App:
  • android
  • ios