Vastu tips: ಈ ಅಭ್ಯಾಸ ಬಿಡಿ ಉದ್ಯೋಗ ಉಳಿಸಿಕೊಳ್ಳಿ

Vastu Tips in Kannada: ವಾಸ್ತು ಶಾಸ್ತ್ರದಲ್ಲಿ ಎಲ್ಲ ತೊಂದರೆಗಳಿಗೂ ಒಂದೊಂದು ಉಪಾಯವಿದೆ. ವ್ಯಾಪರದಲ್ಲಿ ಲಾಭಗಳಿಸಲು, ಮನೆಯಲ್ಲಿ ನೆಮ್ಮದಿ ಕಾಣಲು, ಉದ್ಯೋಗದಲ್ಲಿ ಸಫಲತೆಯನ್ನು ಕಾಣಲು ಸರಳ ಉಪಾಯಗಳಿವೆ. ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳ ಪಾಲನೆಯಿಂದ ಸುಖ - ಸಮೃದ್ಧಿ ಹೊಂದಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ....

Say goodbye to these habits for good job

ಹಿಂದೂ ಸಂಪ್ರದಾಯದಲ್ಲಿ ಹೇಳಿರುವ ಆಚಾರ ವಿಚಾರಗಳಿಗೆ ಅದರದ್ದೇ ಆದ ಕಾರಣಗಳಿರುತ್ತವೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅನೇಕ ಆಚರಣೆಗಳನ್ನು (Ritual), ಪಾಲಿಸಲೇ ಬೇಕಾದ ನಿಯಮಗಳನ್ನು ಹೇಳಿದ್ದಾರೆ. ಜ್ಯೋತಿಷ್ಯ ಶಾಸ್ತ್ರ (Astrology Prediction) ಮತ್ತು ವಾಸ್ತು ಶಾಸ್ತ್ರದಲ್ಲಿ (Vastu Shastra) ಹೇಳಿರುವ ನಿಯಮಗಳ ಪಾಲನೆಯಿಂದ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ಹೊಂದಬಹುದಾಗಿದೆ. 

ಕಾರ್ಯ ಕ್ಷೇತ್ರದಲ್ಲಿ ಸಫಲತೆಯನ್ನು ಮತ್ತು ಉದ್ಯೋಗದಲ್ಲಿ (Jobs and Career) ಉತ್ತಮ ಅವಕಾಶವನ್ನು ಪಡೆಯಲು ವಾಸ್ತುವಿನಲ್ಲಿ ಅನೇಕ ಉಪಾಯಗಳನ್ನು ಹೇಳಿದ್ದಾರೆ. ಪ್ರಾಚೀನ ಕಾಲದ ಶಾಸ್ತ್ರವಾಗಿರುವ ವಾಸ್ತು ಶಾಸ್ತ್ರವು ಪ್ರಕೃತಿಯ ವಿಭಿನ್ನ ತತ್ವಗಳನ್ನು ಸಂಯೋಜಿಸುವ ಮೂಲಕ ಜೀವನಕ್ಕೆ ಬೇಕಾದ ವಿಶೇಷ ವಿಷಯಗಳನ್ನು ತಿಳಿಸಿಕೊಡುತ್ತದೆ. ಇದೇ ಈ ಶಾಸ್ತ್ರದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ಷೇತ್ರ ಮತ್ತು ಉದ್ಯೋಗದಲ್ಲಿ ಬಹುಬೇಗ ಸಫಲತೆಯನ್ನು (Success) ಕಾಣಲು ವಾಸ್ತುವಿನಲ್ಲಿ ತಿಳಿಸಿರುವ ಉಪಾಯಗಳ ಬಗ್ಗೆ ತಿಳಿಯೋಣ....

- ಲ್ಯಾಪ್‌ಟಾಪ್ (Laptop) ಮತ್ತು ಸ್ಮಾರ್ಟ್‌ಫೋನ್‌ನಂಥ (Smart phone) ಎಲೆಕ್ಟ್ರಾನಿಕ್ ಉಪಕರಣಗಳನ್ನು (Electronic gadgets) ಬಳಸುವ ಸಂದರ್ಭದಲ್ಲಿ ದಿಕ್ಕುಗಳ (Direction) ಬಗ್ಗೆ ವಿಶೇಷ ಗಮನವನ್ನು ವಹಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನು ದಕ್ಷಿಣ – ಪೂರ್ವ ಅಂದರೆ ಆಗ್ನೇಯ ದಿಕ್ಕಿಗೆ (South east) ಇಟ್ಟುಕೊಂಡು ಬಳಸಬೇಕು. ಇದರಿಂದ ಕರಿಯರ್ ಗ್ರೋಥ್‌ಗೆ ಸಹಾಯಕವಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸಂಬಂಧಿಸಿದ ವಸ್ತುಗಳನ್ನು ಅವ್ಯವಸ್ಥಿತವಾಗಿ ಇಟ್ಟುಕೊಳ್ಳಬಾರದು.

- ಕೆಲಸದ ಸಮಯದಲ್ಲಿ ಕ್ರಾಸ್ ಲೆಗ್‌ನಲ್ಲಿ (Cross leg) ಕುಳಿತುಕೊಳ್ಳುವ ಅಭ್ಯಾಸವಿದ್ದರೆ (Habit) ಅದನ್ನು ಬಿಡುವುದು ಒಳ್ಳೆಯದು. ಹೀಗೆ ಕುಳಿತುಕೊಳ್ಳುವುದರಿಂದ ಉದ್ಯೋಗದಲ್ಲಿ ಸಫಲತೆಗೆ ಕುತ್ತು ಬರುತ್ತದೆ. ಕಚೇರಿಯಲ್ಲಿ (Office) ಹೈ ಬೈಕ್ ಚೇರ್‌ನಲ್ಲಿ ಕುಳಿತು ಕೆಲಸ ಮಾಡುವುದು ಒಳ್ಳೆಯದು. ವರ್ಕ್ ಫ್ರಂ ಹೋಮ್ (Work from home) ಮಾಡುವವರು ಸಹ ಇದೇ ನಿಯಮವನ್ನುಅನುಸರಿಸಿದರೆ ಒಳ್ಳೆಯದು.

- ಲಾಕ್‌ಡೌನ್ (Lock down) ಸಮಯದಿಂದ ಮನೆಯನ್ನೇ ಆಫೀಸ್ ಮಾಡಿಕೊಂಡವರು ಸಹ ವಾಸ್ತು ಸಂಬಂಧಿತ ಕೆಲವು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.  ಬೆಡ್‌ರೂಮ್ (Bed room) ಪಕ್ಕದಲ್ಲಿ ಆಫೀಸ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಕೆಲಸ ಮಾಡಲು ರೆಕ್ಟ್ಯಾಂಗಲ್ (Rectangle) ಅಥವಾ ಸ್ಕ್ವೇಯರ್ (Square) ಡೆಸ್ಕ್‌ ಅನ್ನು ಬಳಸುವುದು ಒಳ್ಳೆಯದು. ವೃತ್ತಾಕಾರದ ಮೇಜ್ (Round table) ಅಥವಾ ಸರ್ಕ್ಯೂಲರ್ ಡೆಸ್ಕ್‌ನಲ್ಲಿ ಕೆಲಸ ಮಾಡುವುದು ಒಳ್ಳೆಯದಲ್ಲ.

ಇದನ್ನು ಓದಿ: Solar Eclipse 2022: ಸೂರ್ಯಗ್ರಹಣದಂದು ಮಾಡಬೇಕಾದ್ದು, ಮಾಡಬಾರದ್ದು ಏನು?

- ಪವರ್ ಫುಲ್ ಕ್ರಿಸ್ಟ್‌ಲ್ ಅನ್ನು ಬಳಸುವುದರಿಂದ ಎನರ್ಜಿ ಲೆವೆಲ್ ಹೆಚ್ಚುತ್ತದೆ. ಕಾರ್ಯ ಕೌಶಲ್ಯ (Skill) ವೃದ್ಧಿಸುತ್ತದೆ. ಆಫೀಸ್ ಡೆಸ್ಕ್‌ ಮೇಲೆ ಕ್ವಾಟ್ಜ್ ಕ್ರಿಸ್ಟಲ್ ಇಟ್ಟುಕೊಳ್ಳುವುದರಿಂದ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಡೆಸ್ಕ್‌ನಲ್ಲಿ ಬಿದಿರಿನ (Bamboo) ಗಿಡವನ್ನುಇಟ್ಟುಕೊಳ್ಳುವುದು ಸಹ ಉದ್ಯೋಗದ ದೃಷ್ಠಿಯಿಂದ ಅತ್ಯಂತ ಉತ್ತಮವೆಂದು ಹೇಳಲಾಗುತ್ತದೆ. 

- ವಾಸ್ತು ಅನುಸಾರ ಮಲಗುವ ಸಮಯದಲ್ಲಿ ತಲೆಯನ್ನು ಪೂರ್ವ (East) ದಿಕ್ಕಿಗೆ ಹಾಕಿ ಮಲಗುವುದು ಕರಿಯರ್ ಗ್ರೋಥ್‌ಗೆ ಉತ್ತಮವೆಂದು ಹೇಳಲಾಗುತ್ತದೆ. ಇದರಿಂದ ಏಕಾಗ್ರತೆ (Concentration) ಹೆಚ್ಚುವುದಲ್ಲದೇ ಮಾನಸಿಕ ಶಕ್ತಿಯ ವಿಕಸನಕ್ಕೂ ದಾರಿಯಾಗುತ್ತದೆ. ಉತ್ತರ (North) ದಿಕ್ಕಿಗೆ ಮುಖ ಮಾಡಿ ಕೆಲಸ ಮಾಡುವುದು ಒಳ್ಳೆಯದು. ಕೆಲಸ ಮಾಡುವ ಸಮಯದಲ್ಲಿ ನಿಮ್ಮ ಹಿಂದೆ ಗೋಡೆ ಇದ್ದರೆ ಇನ್ನೂ ಉತ್ತಮ. ಆದರೆ ಆ ಗೋಡೆಗೆ ಕಿಟಕಿ ಇರಬಾರದು.

ಇದನ್ನು ಓದಿ: Solar Eclipse 2022 ಪ್ರಭಾವ ಯಾವ ರಾಶಿಗೆ ಏನು?

ವಾಸ್ತು ನಿಯಮಗಳನ್ನು ಪಾಲಿಸಿದಲ್ಲಿ ಉದ್ಯೋಗದಲ್ಲಿ ಯಶಸ್ಸು ದೊರಕುವುದಲ್ಲದೇ, ಮನೆಯಲ್ಲಿ ಸುಖ – ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯಲು ಸಹ ಇದು ದಾರಿ ಮಾಡಿಕೊಡುತ್ತದೆ.

Latest Videos
Follow Us:
Download App:
  • android
  • ios