Solar Eclipse 2022: ಶನಿ ಅಮಾವಾಸ್ಯೆ ದಿನ ಈ 3 ರಾಶಿಯವರು ಅಲರ್ಟ್ ಆಗಿರಿ!
ಈ ಬಾರಿ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗದಿದ್ದರೂ ಸಹ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರಲಿದೆ. ಹಾಗಾಗಿ ಎಲ್ಲ ರಾಶಿಯವರು ಗ್ರಹಣದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿಬೇಕು. ವಿಶೇಷವಾಗಿ ಮೂರು ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ...
ಈ ಬಾರಿಯ ಸೂರ್ಯ ಗ್ರಹಣ (Solar eclipse) ಇದೇ ಏಪ್ರಿಲ್ 30ರಂದು ಶನಿವಾರ ಸಂಭವಿಸಲಿದೆ. ಈ ದಿನವೇ ಅಮಾವಾಸ್ಯೆ ಇರುವುದರಿಂದ ಶನಿ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ. ಈ ಗ್ರಹಣವು ಭಾರತಕ್ಕೆ ಗೋಚರಿಸುವುದಿಲ್ಲವಾದರೂ ರಾಶಿಚಕ್ರಗಳ (Zodiac sign) ಮೇಲೆ ಪ್ರಭಾವ ಬೀರುತ್ತದೆ. ಭಾರತದಲ್ಲಿ ಗ್ರಹಣದ ಆಚರಣೆ ಇರುವುದಿಲ್ಲ. ಪಂಚಾಂಗದ ಅನುಸಾರ 30ರಂದು ವೈಶಾಖ ಕೃಷ್ಣ ಪಕ್ಷದ ಅಮಾವಾಸ್ಯೆ ಮತ್ತು ಶನಿವಾರವಾಗಿದೆ (Saturday). ನಂತರ ಅದೇ ದಿನ ರಾತ್ರಿ 1ಗಂಟೆ 57 ನಿಮಿಷದ ವರೆಗೂ ಇರುತ್ತದೆ. ನಂತರ ವೈಶಾಖ ಶುಕ್ಲ ಪಕ್ಷದ ಪ್ರತಿಪದ ತಿಥಿ ಬರುತ್ತದೆ. ಈ ದಿನ ಸ್ನಾನ ಮಾಡಿ ಶುಚಿರ್ಭೂತರಾಗಿ ದಾನ ಮತ್ತು ಶ್ರಾದ್ಧಾದಿಗಳನ್ನು ಮಾಡುವ ಅಮಾವಾಸ್ಯೆ ಇದಾಗಿದೆ.
ಗ್ರಹಣ ಸಮಯ (Time) ಮತ್ತು ಗ್ರಹಣ ಗೋಚರ ಎಲ್ಲೆಲ್ಲಿ (Place)?
ಈ ಬಾರಿ ಸೂರ್ಯ ಗ್ರಹಣ ಏಪ್ರಿಲ್ 30ರ ಮಧ್ಯರಾತ್ರಿ 12 ಗಂಟೆ 15 ನಿಮಿಷಕ್ಕೆ ಆರಂಭವಾಗಿ ಬೆಳಗಿನ ಜಾವ (ಮೇ 1ರಂದು) 4 ಗಂಟೆ 7 ನಿಮಿಷಕ್ಕೆ ಅಂತ್ಯವಾಗಲಿದೆ. ಸೂರ್ಯ ಗ್ರಹಣವು ಭಾರತದಲ್ಲಿ (India) ಗೋಚರಿಸುವುದಿಲ್ಲ. ಇದು ಅಟ್ಲಾಂಟಿಕ, ಅಂಟಾರ್ಕಟಿಕ್, ದಕ್ಷಿಣ ಅಮೆರಿಕ, ದಕ್ಷಿಣ ಪಶ್ಚಿಮ ಭಾಗದಲ್ಲಿ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಕಾಣಿಸುತ್ತದೆ. ಆದರೆ ಗ್ರಹಣದ ಪ್ರಭಾವ ಎಲ್ಲ ರಾಶಿಗಳ ಮೇಲಾಗಲಿದೆ. ಅವುಗಳಲ್ಲಿ ಮುಖ್ಯವಾಗಿ ಮೂರು ರಾಶಿಚಕ್ರದ ವ್ಯಕ್ತಿಗಳು ಹೆಚ್ಚು ಜಾಗೃತರಾಗಿರಬೇಕು. ಹಾಗಾದರೆ ಆ ಮೂರು ರಾಶಿಗಳ ಬಗ್ಗೆ ತಿಳಿಯೋಣ...
ಮೇಷ ರಾಶಿ (Aries)
ಈ ಸೂರ್ಯ ಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸಲಿದೆ. ಹಾಗಾಗಿ ಮೇಷ ರಾಶಿಯ ವ್ಯಕ್ತಿಗಳ ಮೇಲೆ ಗ್ರಹಣದ ಪ್ರಭಾವ (Effect) ಉಂಟಾಗಲಿದೆ. ಈ ರಾಶಿಯವರು ಮಾನಸಿಕ ಒತ್ತಡವನ್ನು(Mental stress) ಎದುರಿಸಬೇಕಾಗುತ್ತದೆ. ಶತ್ರುಗಳು (Enemies) ಸಹ ನಿಮ್ಮ ಮೇಲೆ ಸವಾರಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ರಾಶಿಯವರು ವಿಶೇಷವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲವಾದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಮೇಷ ರಾಶಿಯ ವ್ಯಕ್ತಿಗಳು ಯಾವ ವಿಷಯಕ್ಕೂ ಆತುರ ಮಾಡುವುದು ಒಳಿತಲ್ಲ. ವಿಶೇಷವಾಗಿ ಗ್ರಹಣದ ಸಂದರ್ಭದಲ್ಲಿ ಪ್ರಯಾಣ (Journey) ಮಾಡುವುದು ನಿಷಿದ್ಧವಾಗಿದೆ.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಅಧಿಪತಿ ದೇವರು ಚಂದ್ರಗ್ರಹವಾಗಿದೆ (Moon). ಗ್ರಹಣದ ಸಮಯದಲ್ಲಿ ಚಂದ್ರನು ಮೇಷ ರಾಶಿಯಲ್ಲಿ ರಾಹುಗ್ರಹದ (Rahu) ಜೊತೆಯಾಗಿರಲಿದೆ. ಈ ಸ್ಥಿತಿಯಿಂದ ಕರ್ಕಾಟಕ ರಾಶಿಯವರಿಗೆ ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಭಯ ಮ್ತತು ನಕಾರಾತ್ಮಕ (Negative) ಪ್ರಭಾವಗಳು ಹೆಚ್ಚಾಗಿ ಕಾಡಲಿವೆ. ಖರ್ಚು (Cost) ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯದಲ್ಲಿ ಕರ್ಕಾಟಕ ರಾಶಿಯವರು ಧೈರ್ಯದಿಂದ ಇರಬೇಕಾಗುತ್ತದೆ.
ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳಿಗೆ ಗ್ರಹಣದ ಸಮಯದಲ್ಲಿ ಮರ್ಯಾದೆಗೆ ಕುತ್ತು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ರಾಶಿಯ ಅಧಿಪತಿ ದೇವರು ಮಂಗಳ ಗ್ರಹವಾಗಿದೆ. ಹಾಗಾಗಿ ಮಾತನಾಡುವಾಗ ಜಾಗ್ರತೆ (Careful) ವಹಿಸಬೇಕು. ತುಂಬಾ ಯೋಚಿಸಿ ಮಾತನಾಡುವುದು ಒಳ್ಳೆಯದೆಂದು ಹೇಳಲಾಗುತ್ತದೆ. ಹಾಗಾಗಿ ಯಾವುದೇ ವಾದ – ವಿವಾದಗಳಲ್ಲಿ (Disputes) ಸಿಲುಕಿ ಕೊಳ್ಳದಿರುವುದು ಉತ್ತಮ. ಶತ್ರುಗಳಿಂದ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಇರುವುದು ಉತ್ತಮ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.