Asianet Suvarna News Asianet Suvarna News

Gemstones: ರತ್ನಗಳ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಗಮನ

ರತ್ನಶಾಸ್ತ್ರದಲ್ಲಿ ರತ್ನ ಧಾರಣೆಗೆ ಕೆಲವು ನಿಯಮಗಳನ್ನು ತಿಳಿಸಿದ್ದಾರೆ. ಅವುಗಳ ಆಧಾರದ ಮೇಲೆ ಗ್ರಹಗಳನ್ನು ಆಧರಿಸಿ ರತ್ನಗಳ ಧಾರಣೆ ಮಾಡಬೇಕಾಗುತ್ತದೆ. ಹಾಗಾಗಿ ರತ್ನ ಧಾರಣೆಗೆ ಕೆಲವು ನಿಯಮಗಳು ಇವೆ ಅವುಗಳನ್ನು ತಪ್ಪಿದರೆ ಅಡ್ಡಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ.

Follow rules while wearing gemstones to have lucks in life
Author
Bangalore, First Published Jan 7, 2022, 8:18 PM IST

ಮನುಷ್ಯ ಎಂದ ಮೇಲೆ ಸಮಸ್ಯೆಗಳು (Problems) ಇರುವುದು ಸಹಜ. ಹಾಗೆಯೇ ಪ್ರತಿ ಸಮಸ್ಯೆಗೂ ಒಂದಲ್ಲ ಒಂದು ಪರಿಹಾರ (Solution) ಇದ್ದೇ ಇರುತ್ತದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಪ್ರತಿ ಸಮಸ್ಯೆಗಳ ಪರಿಹಾರಕ್ಕೂ ಅದರದ್ದೇ ಆದ ರೀತಿಯಲ್ಲಿ ಉಪಾಯಗಳಿವೆ. ಅದೇ ರೀತಿ ಗ್ರಹ (Planet) ಮತ್ತು ರಾಶಿಗಳ (Zodiac) ಶುಭ ಪ್ರಭಾವಕ್ಕಾಗಿ ಧರಿಸುವ ರತ್ನಗಳು (Gemstone) ಸಹ ಒಂದು ತರದ ಉಪಾಯವಾಗಿದೆ. ಆಯಾ ಗ್ರಹ ಮತ್ತು ರಾಶಿಗಳ ಬಲ ವೃದ್ಧಿಸಲು ಮತ್ತು ಕೆಲ ಸಮಸ್ಯೆಗಳ ಪರಿಹಾರಕ್ಕೆ ರತ್ನಗಳನ್ನು ಧರಿಸಲಾಗುತ್ತದೆ (Wearing). ಇದರಿಂದ ಆರೋಗ್ಯ (Health), ಸಂಪತ್ತು (Wealth), ನೆಮ್ಮದಿ ಸೇರಿದಂತೆ ಇನ್ನೂ ಅನೇಕ ಲಾಭಗಳನ್ನು (Benefit) ಪಡೆಯಬಹುದಾಗಿದೆ. ರತ್ನ ಧಾರಣೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಶಾಸ್ತ್ರ ತಿಳಿಸುತ್ತದೆ. 

ರತ್ನಗಳನ್ನು ಧರಿಸುವುದರಿಂದ ಪ್ರಯೋಜನವಿದೆ ಎಂದು ಇದನ್ನು ಎಲ್ಲರೂ ಧರಿಸಲಾಗುವುದಿಲ್ಲ. ಜ್ಯೋತಿಷ್ಯ ತಜ್ಞರ ಸಲಹೆಯ ಮೇರೆಗೆ ರತ್ನಗಳನ್ನು ಧರಿಸುವುದು ಉತ್ತಮ. ಅಷ್ಟೇ ಅಲ್ಲದೆ ಇದನ್ನು ಧರಿಸಲು ಕೆಲವು ನಿಯಮಗಳ ಪಾಲನೆ ಅತ್ಯಗತ್ಯ ಅವುಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ: January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

* ಜ್ಯೋತಿಷ್ಯ ಶಾಸ್ತ್ರದ (Astrology) ಹನ್ನೆರಡು ರಾಶಿಗಳಿಗೆ ಅದರದ್ದೇ ಆದ ರತ್ನಗಳನ್ನು ಸೂಚಿಸಲಾಗುತ್ತದೆ. ಜಾತಕದಲ್ಲಿ (Horoscope) ರಾಶಿಯ ಅಧಿಪತಿ ಗ್ರಹಗಳ ಸ್ಥಿತಿ ಮತ್ತು ಶುಭಾಶುಭ ಪ್ರಭಾವಗಳನ್ನು ಆಧರಿಸಿ ರತ್ನ ಧಾರಣೆಗೆ ಸಲಹೆ ನೀಡಲಾಗುತ್ತದೆ. 

* ಪ್ರತಿ ಗ್ರಹಗಳಿಗೂ (Planets) ಒಂದೊಂದು  ರತ್ನಗಳನ್ನು ಸಂಕೇತವಾಗಿ ಸೂಚಿಸಲಾಗುತ್ತದೆ. ಮಾಣಿಕ್ಯವು ಸೂರ್ಯನ ರತ್ನ, ಮುತ್ತು ಚಂದ್ರನ ರತ್ನ, ಪಚ್ಚೆಯು ಬುಧಗ್ರಹದ ರತ್ನ, ಹಳದಿ ನೀಲಮಣಿ ಗುರುವಿನ ರತ್ನ, ಹವಳ ಮಂಗಳ ಗ್ರಹದ ರತ್ನ, ವಜ್ರವು ಶುಕ್ರ ಗ್ರಹದ ರತ್ನ, ನೀಲಿ ನೀಲಮಣಿ ಶನಿಯ ರತ್ನ, ಗೋಮೇಧ ರಾಹುವಿನ ರತ್ನವಾಗಿದೆ ಮತ್ತು ಲಹುನಿಯಾ (ಬೆಕ್ಕಿನ ಕಣ್ಣು) ಕೇತುವಿನ ರತ್ನವಾಗಿದೆ. 

* ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಜ್ಯೋತಿಷ್ಯ ತಜ್ಞರು ಸಂಬಂಧಿಸಿದ ರತ್ನಗಳನ್ನು ಧರಿಸುವಂತೆ ಸಲಹೆ ನೀಡುತ್ತಾರೆ. 

* ರತ್ನವನ್ನು ಧರಿಸಿದಾಗ ಅದು ಶರೀರಕ್ಕೆ ತಾಕುವಂತಿದ್ದರೆ ಮಾತ್ರ ಅದರಿಂದ ಲಾಭ ಉಂಟಾಗುತ್ತದೆ.

*  ಜಾತಕದಲ್ಲಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದರೆ ಅಂತಹ ವ್ಯಕ್ತಿಗಳು ರತ್ನವನ್ನು ಧರಿಸಿದರೆ ಸಂಬಂಧಿಸಿದ ಗ್ರಹಗಳಿಗೆ ಬಲ ಬರುತ್ತದೆ.

* ಶಾಸ್ತ್ರದ ಅನುಸಾರ ರತ್ನಗಳನ್ನು ಧರಿಸುವಾಗ ಅದಕ್ಕೆ ಸರಿಹೊಂದುವ ಶರೀರದ ಭಾಗವನ್ನು ಅಥವಾ ಬೆರಳುಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು.  ಹಸ್ತದ ಪ್ರೀತಿ ಬೆರಳು ಒಂದೊಂದು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಧರಿಸುವ ಮೊದಲು ಸಲಹೆ ಪಡೆದುಕೊಳ್ಳುವುದು ಉತ್ತಮ.  

ಇದನ್ನು ಓದಿ: Personality Trait: ಬುಧವಾರ ಹುಟ್ಟಿದವರು ಹೀಗಿರ್ತಾರೆ..

ರತ್ನಗಳನ್ನು ಧರಿಸುವ ಕೆಲವು ಮುಖ್ಯವಾದ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅದರ ಪ್ರಯೋಜನಗಳು ದೊರಕುವುದಿಲ್ಲ ಮತ್ತು ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಸಹ ಇರುತ್ತದೆ. ಹಾಗಾಗಿ ಆ ನಿಯಮಗಳ ಬಗ್ಗೆ ತಿಳಿಯೋಣ. 

ಪ್ರತಿ ರತ್ನಗಳ ಆಯಾ ಗ್ರಹಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಶತ್ರು ಗ್ರಹಗಳಿಗೆ ಸಂಬಂಧಿಸಿದ ರತ್ನ ಧರಿಸಿದಾಗ ಅಡ್ಡ ಪರಿಣಾಮಗಳು ಉಂಟಾಗುತ್ತವೆ.  ಪಚ್ಚೆ ರತ್ನದ ಜತೆಗೆ ಹಳದಿ ನೀಲಮಣಿ, ಹವಳ ಅಥವಾ ಮುತ್ತನ್ನು ಧರಿಸಬಾರದು, ಇದರಿಂದ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.  ಮುತ್ತಿನ ಜೊತೆಗೆ ಪಚ್ಚೆ, ವಜ್ರ ನೀಲಮಣಿ ಮತ್ತು ಗೋಮೇಧಕವನ್ನು ಧರಿಸಬಾರದು, ಇದರಿಂದ ಮಾನಸಿಕ ಖಿನ್ನತೆ ಎದುರಾಗುವ ಸಾಧ್ಯತೆ ಇರುತ್ತದೆ.  

ಧರಿಸುವ ನಿಯಮವೇನು:
ರತ್ನ ಶಾಸ್ತ್ರದ ಅನುಸಾರ ಆಯಾ ರತ್ನಕ್ಕೆ ಸಂಬಂಧಿಸಿದ ಶುಭವಾರದಂದು ಧರಿಸಬೇಕು. ಅದಕ್ಕೂ ಮೊದಲು ಸಂಬಂಧಿಸಿದ ಗ್ರಹದ ಮಂತ್ರದಿಂದ ಅಭಿಮಂತ್ರಿಸಿ ನಂತರ ಅದನ್ನು ಗಂಗಾಜಲವನ್ನು ಚಿಮುಕಿಸಿದ ನಂತರ ಧರಿಸಬೇಕು. ಪ್ರತಿ ರತ್ನವನ್ನು ಧರಿಸಲು ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಆ ನಿಯಮಗಳನ್ನು ಪಾಲಿಸಿದ ನಂತರ ಇಷ್ಟ ದೇವರನ್ನು ಆರಾಧಿಸಿ ರತ್ನವನ್ನು ಧರಿಸಬೇಕು.

Follow Us:
Download App:
  • android
  • ios